Homeಅಂತರಾಷ್ಟ್ರೀಯಅಮೆರಿಕಾ ಚುನಾವಣೆ: ಸೋಲೊಪ್ಪಿಕೊಳ್ಳುವ ಸನಿಹದಲ್ಲಿ ಡೊನಾಲ್ಡ್‌ ಟ್ರಂಪ್!

ಅಮೆರಿಕಾ ಚುನಾವಣೆ: ಸೋಲೊಪ್ಪಿಕೊಳ್ಳುವ ಸನಿಹದಲ್ಲಿ ಡೊನಾಲ್ಡ್‌ ಟ್ರಂಪ್!

ಭವಿಷ್ಯದಲ್ಲಿ ಏನಾಗುತ್ತದೆಯೋ, ಯಾವ ಆಡಳಿತ ಬರುತ್ತದೋ ಎಂದು ಯಾರಿಗೆ ತಿಳಿದಿದೆ. ಸಮಯ ಎಲ್ಲವನ್ನೂ ಹೇಳುತ್ತದೆ ಎಂದು ನಾನು ಊಹಿಸುತ್ತೇನೆ ಎಂದು ಹೇಳಿದರು.

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗದ ಕುರಿತು ಇಂದು ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿನ ತಮ್ಮ ಸೋಲನ್ನು ಇನ್ನೇನು ಒಪ್ಪಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ ಮಾತು ನಿಲ್ಲಿಸಿ “ಸಮಯ ಎಲ್ಲವನ್ನೂ ಹೇಳುತ್ತದೆ” ಎಂದು ಹೇಳಿದರು.

ಮೊದಲಿನಿಂದಲೂ ತಾನು ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಟ್ರಂಪ್, “ಭವಿಷ್ಯದಲ್ಲಿ ಏನಾಗುತ್ತದೆಯೋ, ಯಾವ ಆಡಳಿತ ಬರುತ್ತದೋ ಎಂದು ಯಾರಿಗೆ ತಿಳಿದಿದೆ. ಸಮಯ ಎಲ್ಲವನ್ನೂ ಹೇಳುತ್ತದೆ ಎಂದು ನಾನು ಊಹಿಸುತ್ತೇನೆ. ಆದರೆ ಈ ಆಡಳಿತವು ಲಾಕ್‌ಡೌನ್‌ಗೆ ಹೋಗುವುದಿಲ್ಲ ಎಂದು ನಾನು ನಿಮಗೆ ಹೇಳಬಲ್ಲೆ” ಎಂದು ಹೇಳಿದರು.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಇನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್- ಸರಣಿ ಟ್ವೀಟ್!

ಅಮೆರಿಕಾದಲ್ಲಿ 243,000 ಕ್ಕೂ ಹೆಚ್ಚು ಜನರು ಕೊರೊನ ವೈರಸ್ ಸಾಂಕ್ರಾಮಿಕಕ್ಕೆ ತುತ್ತಾಗಿದ್ದು, ಇದಕ್ಕೆ ಆಡಳಿತದ ಪ್ರತಿಕ್ರಿಯೆಯನ್ನು ಕೇಳಿದ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು.

“ನೀವು ಚುನಾವಣೆಯಲ್ಲಿ ಸೋತಿದ್ದನ್ನು ಯಾವಾಗ ಒಪ್ಪುತ್ತೀರಿ, ಸರ್?” ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದ ಸುದ್ದಿಗಾರರಿಗೆ ಪ್ರತಿಕ್ರಿಯಿಸದೆ ಟ್ರಂಪ್ ಈ ಕಾರ್ಯಕ್ರಮದಿಂದ ಹೊರನಡೆದರು.

ಈ ಹಿಂದೆ, ಟ್ರಂಪ್ ಮತ್ತೊಮ್ಮೆ “ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ” ಎಂದು ಹೊಸ ಟ್ವೀಟ್‌ ಮಾಡಿದ್ದರು. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿನ ಸೋಲನ್ನು ಟ್ರಂಪ್ ಇನ್ನೂ ಒಪ್ಪಿಕೊಂಡಿಲ್ಲ. ಹಾಗಾಗಿ ತಮ್ಮ ಟ್ವೀಟ್‌ಗಳಲ್ಲಿ ತಮಗೆ “ದೊಡ್ಡ ಗೆಲುವು” ಎಂದು ಹೇಳಿಕೊಳ್ಳುತ್ತಾ, ಡೆಮೋಕ್ರಾಟ್‌ಗಳ ವಿರುದ್ಧ ವಂಚನೆಯ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಟ್ರಂಪ್ ನಿರ್ಗಮನದ ದಿನ ಎಣಿಸಲೆಂದೇ ಒಂದು ವೆಬ್‌ಸೈಟ್!

ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ವಿಜೇತರಾಗಿದ್ದಾರೆ ಎಂದು ಮಾಧ್ಯಮಗಳು ಘೋಷಿಸಿದ ನಂತರವೂ ಟ್ರಂಪ್ ಈ ರೀತಿಯ ಹಕ್ಕುಮಂಡನೆ ಮಾಡುತ್ತಿದ್ದಾರೆ.

ಟ್ರಂಪ್ ಮಂಗಳವಾರ ಮತ್ತೆ “ದೊಡ್ಡ ಗೆಲುವು” ಕುರಿತು ಟ್ವೀಟ್ ಮಾಡಿದ್ದು, ಪ್ರತಿಸ್ಪರ್ಧಿ ಬೈಡೆನ್ ಅವರ ಡೆಮಾಕ್ರಟಿಕ್ ಪಕ್ಷವು ಚುನಾವಣೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಯಾವುದೇ ಪುರಾವೆಗಳನ್ನು ಉಲ್ಲೇಖಿಸದೆ, “ನಾವು ದೊಡ್ಡವರಾಗಿದ್ದೇವೆ, ಆದರೆ ಅವರು ಚುನಾವಣೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಅದನ್ನು ಮಾಡಲು ಎಂದಿಗೂ ಬಿಡುವುದಿಲ್ಲ. ಮತದಾನ ಮುಗಿದ ನಂತರ ಮತ ಚಲಾಯಿಸಲಾಗುವುದಿಲ್ಲ!” ಎಂದು ಮತ್ತೊಂದು ಟ್ವೀಟ್ ಮಾಡಿದ್ದರು.

ಇದೇ ರೀತಿಯ ಆರೋಪಗಳನ್ನು ಮಾಡುತ್ತಾ ಟ್ರಂಪ್ ಸುಮಾರು 30 ಟ್ವೀಟ್‌ಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಸುಮಾರು 13 ಟ್ವೀಟ್‌ಗಳನ್ನು ಟ್ವಿಟ್ಟರ್‌ ಕಂಪನಿ ಈಗಾಗಲೆ ನಿರ್ಬಂಧಿಸಿದೆ.


ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು: ಟ್ರಂಪ್‌ಗೆ ವಿಚ್ಛೇಧನ ನೀಡಲಿರುವ ಮೆಲೆನಿಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...