Homeಮುಖಪುಟಲಕ್ನೋ: ಯೋಗಿ ಆದಿತ್ಯನಾಥ್‌ಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿ ನಾಯಕಿ ಗೆಲುವಿನತ್ತ ದಾಪುಗಾಲು

ಲಕ್ನೋ: ಯೋಗಿ ಆದಿತ್ಯನಾಥ್‌ಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿ ನಾಯಕಿ ಗೆಲುವಿನತ್ತ ದಾಪುಗಾಲು

- Advertisement -
- Advertisement -

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿ ನಾಯಕಿ ಪೂಜಾ ಶುಕ್ಲಾ ಲಕ್ನೋ ಉತ್ತರ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿಯಿಂದ ಚುನಾವಣೆ ಎದುರಿಸುತ್ತಿದ್ದು, ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಲಕ್ನೋ ಉತ್ತರ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು,  ಬಿಜೆಪಿಯ ಹಾಲಿ ಶಾಸಕ ನೀರಜ್ ಬೋರಾಗೆ ಎಸ್‌ಪಿಯ ಪೂಜಾ ಶುಕ್ಲಾ ಪ್ರಭಲ ಪೈಪೋಟಿ ನೀಡುತ್ತಿದ್ದಾರೆ.

ಲಕ್ನೋ ಉತ್ತರವು ಲಕ್ನೋ (ಲೋಕಸಭಾ ಕ್ಷೇತ್ರ) ದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನೀರಜ್ ಬೋರಾ ಶಾಸಕರಾಗಿದ್ದಾದೆ. ಕಳೆದ 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಭಿಷೇಕ್ ಮಿಶ್ರಾ ಅವರನ್ನು 27,276 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಸಮಾಜವಾದಿ ಪಾರ್ಟಿ ವಿದ್ಯಾರ್ಥಿ ನಾಯಕಿ, ಹೋರಾಟಗಾರ್ತಿ ಪೂಜಾ ಶುಕ್ಲಾ ಅವರಿಗೆ ಟಿಕೆಟ್ ನೀಡಿತ್ತು.

ಇದನ್ನೂ ಓದಿ: ಪಂಜಾಬ್‌: ಎರಡು ಕ್ಷೇತ್ರಗಳಲ್ಲೂ ಪಂಜಾಬ್‌ ಸಿಎಂಗೆ ಸೋಲು; ಸಿಧು, ಅಮರಿಂದರ್‌ಗೂ ಸೋಲು

ಸಮಾಜವಾದಿ ಪಕ್ಷದ ಸದಸ್ಯೆಯಾಗಿರುವ ಪೂಜಾ ಶುಕ್ಲಾ, ಲಕ್ನೋ ವಿಶ್ವವಿದ್ಯಾಲಯವು ಆಯೋಜಿಸುವ ಹಿಂದುತ್ವದ ಕಾರ್ಯಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ವಿಶ್ವವಿದ್ಯಾಲಯವು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಸರ್ಕಾರವನ್ನು ಮೆಚ್ಚಿಸಲು ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತಿದೆ ಎಂದು ಆರೋಪಿಸಿದ್ದರು.

ಪೂಜಾ ಶುಕ್ಲಾ ಅವರು 2017 ರಲ್ಲಿ ಲಕ್ನೋದಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆಂಗಾವಲು ಪಡೆಗೆ ಕಪ್ಪು ಬಾವುಟವನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಆಗ, ಪೂಜಾ ಶುಕ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿರಲಿಲ್ಲ. ಅದೇ ಘಟನೆ ಹಿನ್ನೆಲೆ ಶುಕ್ಲಾ ಮತ್ತು ಇತರರು ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದರು. ಆಕೆಯ ಮೇಲೆ ಕೊಲೆ ಯತ್ನದ ಆರೋಪವನ್ನು ಕೂಡ ದಾಖಲಿಸಲಾಗಿತ್ತು.

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಉತ್ತರ ಕ್ಷೇತ್ರದಿಂದ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅರವಿಂದ್ ಶುಕ್ಲಾ, ಪಂಕಜ್ ಶರ್ಮಾ, ಸರ್ವೇಶ್ ಸಾಯಿ, ಅಜಯ್ ಕುಮಾರ್ ಶ್ರೀವಾಸ್ತವ (INC), ಡಾ. ನೀರಜ್ ಬೋರಾ (ಬಿಜೆಪಿ), ಪೂಜಾ ಶುಕ್ಲಾ (ಎಸ್‌ಪಿ), ಮೊಹಮ್ಮದ್ ಸರ್ವರ್ ಮಲಿಕ್ (ಬಿಎಸ್‌ಪಿ), ಅಮಿತ್ ಶ್ರೀವಾಸ್ತವ್ (ಎಎಪಿ), ಕೌಶಲ್ ಕಿಶೋರ್ (ಎಂಎಪಿ), ನೂರ್ ಮೊ ವರ್ಸಿ (ಜಿಪಿಪಿಎ), ಬ್ರಿಜೇಶ್ ಚಂದ್ರ ಅವಸ್ತಿ (ಎಂಎಆರ್‌ಡಿ), ರಾಣಿ ಸಿದ್ದಿಕಿ (SPI), ಸಂಜಯ್ ಸಿಂಗ್ ರಾಣಾ (BSPA) ಸ್ಪರ್ಧಿಗಳು.

ಈವರೆಗೆ ವಿದ್ಯಾರ್ಥಿ ನಾಯಕಿ ಪೂಜಾ ಶುಕ್ಲಾ 61,936 ಮತಗಳನ್ನು ಪಡೆದಿದ್ದರೇ, ಬಿಜೆಪಿಯ ಡಾ.ನೀರಜ್ ಬೋರಾ ಅವರು 49,713 ಮತಗಳನ್ನು ಪಡೆದಿದ್ದಾರೆ. ಇಬ್ಬರ ನಡುವೆ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರವಿದೆ.


ಇದನ್ನೂ ಓದಿ: Uttar Pradesh Elections Result | ಉತ್ತರ ಪ್ರದೇಶ: ರೈತ ಹೋರಾಟದ ಕೇಂದ್ರ ಲಖಿಂಪುರದ 8 ಕ್ಷೇತ್ರದಲ್ಲಿ 6 BJP ಮುನ್ನಡೆ | Live

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...