Homeಮುಖಪುಟಉತ್ತರ ಪ್ರದೇಶ: ಬಾಲಕಿಗೆ ಕಿರುಕುಳ ನೀಡಿ ಮಹಡಿ ಮೇಲಿನಿಂದ ತಳ್ಳಿದ ಕಿಡಿಗೇಡಿಗಳು

ಉತ್ತರ ಪ್ರದೇಶ: ಬಾಲಕಿಗೆ ಕಿರುಕುಳ ನೀಡಿ ಮಹಡಿ ಮೇಲಿನಿಂದ ತಳ್ಳಿದ ಕಿಡಿಗೇಡಿಗಳು

- Advertisement -
- Advertisement -

ಉತ್ತರ ಪ್ರದೇಶದ ಮಥುರಾದಲ್ಲಿ ಮೂವರು ವ್ಯಕ್ತಿಗಳು ಕಿರುಕುಳ ನೀಡಿ 17 ವರ್ಷದ ಬಾಲಕಿಯನ್ನು ಮಹಡಿ ಮೇಲಿನಿಂದ ರಸ್ತೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿ ಎರಡನೇ ಮಹಡಿಯ ಮನೆಯ ಬಾಲ್ಕನಿಯಿಂದ ಕೆಳಗೆ ಬೀಳುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

25 ಸೆಕೆಂಡ್‌ಗಳ ವಿಡಿಯೋದಲ್ಲಿ ಬಾಲಕಿ ಮಹಡಿ ಮೇಲಿನಿಂದ ರಸ್ತೆಗೆ ಬೀಳುತ್ತಿರುವ ದೃಶ್ಯಗಳಿವೆ. ರಸ್ತೆಗೆ ಬಿದ್ದ ರಭಸಕ್ಕೆ ಆಕೆಯ ಕುತ್ತಿಗೆ ಮೂಳೆ ಮುರಿದಿದೆ ಎನ್ನಲಾಗಿದೆ. ದಾರಿಯಲ್ಲಿದ್ದ ಪಾದಚಾರಿಗಳು ಆಕೆಯ ಬಳಿಗೆ ಓಡಿ ಬರುವುದು ಕಾಣಿಸುತ್ತದೆ. ಮೂವರು ವ್ಯಕ್ತಿಗಳು ಕಿರುಕುಳ ನೀಡಿ ಮಹಡಿ ಮೇಲಿನಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಮೂವರು ಸಂತ್ರಸ್ತೆ ಮನೆಗೆ ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅದೃಷ್ಟವಶಾತ್‌ ಎರಡನೇ ಮಹಡಿಯಿಂದ ತಳ್ಳಲ್ಪಟ್ಟರು ಬಾಲಕಿ ಬದುಕುಳಿದಿದ್ದಾರೆ. ಆದರೆ, ಆಕೆಯ ಬೆನ್ನೆಲುಬಿಗೆ ತೀವ್ರವಾಗಿ ಹೊಡೆತ ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸಂತ್ರಸ್ತ ಬಾಲಕಿಯ ತಂದೆ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಮೂವರು ವ್ಯಕ್ತಿಗಳನ್ನು ಹೆಸರಿಸಿದ್ದಾರೆ. ಎಲ್ಲಾ ಆರೋಪಿಗಳು ಸಂತ್ರಸ್ತ ಕುಟುಂಬದ ಸ್ಥಳೀಯರೇ ಆಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ

ಸೋಮವಾರ ರಾತ್ರಿ ಒಬ್ಬ ವ್ಯಕ್ತಿ ತನ್ನ ಮಗಳೊಂದಿಗೆ ಮಾತನಾಡಬೇಕು ಎಂದು ಕರೆ ಮಾಡಿದ್ದನು. ಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಕ್ಕೆ, ಕರೆ ಮಾಡಿದ ವ್ಯಕ್ತಿ ಅವಾಚ್ಯ ಶಬ್ಧಗಳಿಂದ ನನ್ನನ್ನು ನಿಂದಿಸಲು ಪ್ರಾರಂಭಿಸಿದ್ದರು ಎಂದು ಬಾಲಕಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಕಳದೆ ರಾತ್ರಿ 8 ಗಂಟೆಯ ನಂತರ, ಮೂವರು ಪುರುಷರು ಮನೆಯೊಳಗೆ ನುಗ್ಗಿ, ಬಾಲಕಿಗೆ ಕಿರುಕುಳ ನೀಡಿದರು. ನಂತರ ಸಂತ್ರಸ್ತೆಯನ್ನು ಕರೆದೊಯ್ಯಲು ಪ್ರಯತ್ನಿಸಿದರು. ಕುಟುಂಬದ ಸದಸ್ಯರು ಕೂಗಲು ಪ್ರಾರಂಭಿಸಿದಾಗ, ಆರೋಪಿಗಳು ಆಕೆಯನ್ನು ಎರಡನೇ ಮಹಡಿಯ ಮನೆಯಿಂದ ಕೆಳಗೆ ತಳ್ಳಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಮಥುರಾ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ನಾವು ಎಫ್ಐಆರ್ ದಾಖಲಿಸಿದ್ದೇವೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಮಥುರಾದ ಹಿರಿಯ ಪೊಲೀಸ್ ಅಧಿಕಾರಿ ಶ್ರೀಶ್ ಚಂದಾ ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ ಲಸಿಕೆಯಿಂದ ‘ಬಂಜೆತನ’ ಉಂಟಾಗುವುದಿಲ್ಲ: ಒಕ್ಕೂಟ ಸರ್ಕಾರ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಗ್ನಿಪಥ ಯೋಜನೆ ಬಗ್ಗೆ ಮಾತನಾಡದಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ

0
ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ತನ್ನ ಪಕ್ಷಕ್ಕೆ ನಿರ್ದೇಶನ ನೀಡಿರುವುದು ಅತ್ಯಂತ ತಪ್ಪು, ಸರ್ಕಾರದ ನೀತಿಯನ್ನು ಟೀಕಿಸುವುದು ವಿರೋಧ ಪಕ್ಷದ ಹಕ್ಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪ್ರತಿಪಾದಿಸಿದರು. ಚುನಾವಣಾ...