ಸಾಕ್ಷಿಯಿಲ್ಲದೆ ಯಾರ ಮೇಲೂ ಒತ್ತಡದಿಂದ ಕ್ರಮ ಕೈಗೊಳ್ಳುವುದಿಲ್ಲ-ಯೋಗಿ ಆದಿತ್ಯನಾಥ್
PC : The Indian Express

ಉತ್ತರ ಪ್ರದೇಶ ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಡಲು ಹೊಸ ಕಠಿಣ ನಿಯಮಗಳ ಭಾಗವಾಗಿ ಮಾಸ್ಕ್ ಇಲ್ಲದೇ ಮೊದಲ ಸಲ ಸಿಕ್ಕಿಬಿದ್ದ ಜನರಿಗೆ ಒಂದು ಸಾವಿರ ರೂ ಮತ್ತು ಎರಡನೇ ಸಲವೂ ಆ ತಪ್ಪು ಮಾಡಿದರೆ 10 ಸಾವಿರ ರೂ ದಂಡ ದಂಡ ವಿಧಿಸಲಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.

ಭಾರತದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶದಲ್ಲಿ ವಾರಕ್ಕೊಮ್ಮೆ (ಭಾನುವಾರ) ಲಾಕ್ ಡೌನ್ ಮಾಡಲು ಆದೇಶಿಸಿರುವ ಅವರು, ಅಗತ್ಯ ಸೇವೆಗಳು ಮತ್ತು ಚಟುವಟಿಕೆಗಳಿಗೆ ಮಾತ್ರ ಅಂದು ವಿನಾಯಿತಿ ನೀಡಿದ್ದಾರೆ. ಇದು ಸಾಪ್ತಾಹಿಕ ವೈಶಿಷ್ಟ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾಜ್ಯ ಸರ್ಕಾರವು ಮೇ 15 ರವರೆಗೆ ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿತು. ರಾಜ್ಯದಲ್ಲಿ ಏಕದಿನದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾದ ಪರಿಣಾಮ ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷೆಗಳನ್ನು ಮುಂದೂಡಿದೆ.

ಉತ್ತರಪ್ರದೇಶದಲ್ಲಿ ಗುರುವಾರ 104 ಸಾವುಗಳು ಮತ್ತು 22,439 ಹೊಸ ಪ್ರಕರಣಗಳು ವರದಿಯಾಗಿವೆ. ಬುಧವಾರ 20,510 ಪ್ರಕರಣಗಳ ನಂತರ ಸತತ ಎರಡನೇ ದಿನವೂ ದಾಖಲೆಯ ಹೆಚ್ಚಳವಾಗಿದೆ.

10 ಜಿಲ್ಲೆಗಳಲ್ಲಿ ರಾತ್ರಿ 8 ರಿಂದ ಬೆಳಗಿನ 7ರವರೆಗೆ ರಾತ್ರಿಯ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಲಖನೌ, ಪ್ರಯಾಗರಾಜ್, ವಾರಣಾಸಿ, ಕಾನ್ಪುರ ನಗರ, ಗೌತಮ್ ಬುದ್ಧ ನಗರ, ಘಾಜಿಯಾಬಾದ್, ಮೀರತ್, ಗೋರಖ್‌ಪುರ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಎಲ್ಲಾ 10 ಜಿಲ್ಲೆಗಳಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ ಎಂದು ಯೋಗಿ ಆದಿತ್ಯನಾಥ್ ಗುರುವಾರ ಟ್ವೀಟ್ ಮಾಡಿದ್ದಾರೆ.

ಲಕ್ನೋ, ವಾರಣಾಸಿ ಮತ್ತು ಪ್ರಯಾಗರಾಜ್ ಮುಂತಾದ ನಗರಗಳು ರಾಜ್ಯದಲ್ಲಿ ಹೆಚ್ಚು ಪ್ರಕರಣಗಳನ್ನು ಕಾಣುತ್ತಿವೆ.

ವಾರಣಾಸಿ ಆಡಳಿತವು ನಗರಕ್ಕೆ ಯೋಜಿಸಿರುವ ಪ್ರವಾಸವನ್ನು ಮುಂದೂಡಬೇಕೆಂದು ಸಂದರ್ಶಕರಿಗೆ ಮನವಿ ಮಾಡಿತು ಮತ್ತು ಅದರ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುವವರು ಮೂರು ದಿನಗಳಿಗಿಂತ ಹಳೆಯದಾದ ಋಣಾತ್ಮಕ (ನೆಗೆಟಿವ್) ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ಪಡೆಯುವುದು ಅತ್ಯಗತ್ಯವಾಗಿದೆ ಎಂದು ಗುರುವಾರ ತಿಳಿಸಿದೆ.

ಸೀಮಿತ ಆಸ್ಪತ್ರೆ ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆ ಪ್ರಮಾಣಗಳೊಂದಿಗೆ ಹೋರಾಡುತ್ತಿರುವ ವಿವಿಧ ರಾಜ್ಯಗಳು, ಎರಡನೇ ಅಲೆಯ ಕೊರೊನಾ ಹರಡುವುದನ್ನು ನಿಧಾನಗೊಳಿಸಲು ಕಟ್ಟುನಿಟ್ಟಿನ ನಿರ್ಬಂಧಗಳನ್ನು ತರುತ್ತಿವೆ.


ಇದನ್ನೂ ಓದಿ: ರಾತ್ರಿ ಕರ್ಫ್ಯೂ ಮುಂದುವರಿಕೆ, ಏ.20ರಂದು ಮುಂದಿನ ಸಭೆ: ಬಿ.ಎಸ್ ಯಡಿಯೂರಪ್ಪ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here