Homeಮುಖಪುಟಉತ್ತರ ಪ್ರದೇಶ: ಚುನಾವಣಾ ಭರವಸೆಗಳ ಬಗ್ಗೆ ಸಚಿವರನ್ನು ಪ್ರಶ್ನಿಸಿದ ಯುಟ್ಯೂಬರ್ ಬಂಧನ

ಉತ್ತರ ಪ್ರದೇಶ: ಚುನಾವಣಾ ಭರವಸೆಗಳ ಬಗ್ಗೆ ಸಚಿವರನ್ನು ಪ್ರಶ್ನಿಸಿದ ಯುಟ್ಯೂಬರ್ ಬಂಧನ

- Advertisement -
- Advertisement -

ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳ ಬಗ್ಗೆ ರಾಜ್ಯ ಸಚಿವರನ್ನು ಪ್ರಶ್ನಿಸಿದ್ದಕ್ಕೆ ಯೂಟ್ಯೂಬರೊಬ್ಬರು ಭಾನುವಾರ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸಂಜಯ್ ರಾಣಾ ಎಂಬ ವ್ಯಕ್ತಿ ಯೂಟ್ಯೂಬ್‌ನಲ್ಲಿ ಸುದ್ದಿ ವಾಹಿನಿಯೊಂದನ್ನು ನಡೆಸುತ್ತಿದ್ದಾರೆ. ಮಾಧ್ಯಮಿಕ ಶಿಕ್ಷಣ ರಾಜ್ಯ ಸಚಿವ ಗುಲಾಬ್ ದೇವಿ ಅವರಿಗೆ ವಿಧಾನಸಭಾ ಚುನಾವಣೆಗೂ ಮುಂಚೆ ಅವರು ನೀಡಿದ ಭರವಸೆಗಳ ಸ್ಥಿತಿಗತಿಯ ಬಗ್ಗೆ ಮಾರ್ಚ್ 11ರಂದು ರಾಣಾ ಅವರು ಪ್ರಶ್ನೆ ಮಾಡಿದ್ದರು.

ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬುಧನಗರ ಖಾಂಡ್ವಾ ಗ್ರಾಮಕ್ಕೆ ಮದುವೆ ಮಂಟಪ, ರಸ್ತೆ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳ ಭರವಸೆ ನೀಡಿದ್ರಿ, ಆದರೆ ಅವೆಲ್ಲಾ ಏಕೆ ಇನ್ನೂ ಪೂರ್ಣಗೊಂಡಿಲ್ಲ ಎಂದು ದೇವಿಯವರನ್ನು ರಾಣಾ ಕೇಳಿದರು.

ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ಕ್ಯಾಮರಾದಲ್ಲಿ ಕಾಣದ ಮಹಿಳೆಯೊಬ್ಬರು, ‘ರಾಣಾ ಅವರು ಕಾಳಜಿಯನ್ನು ಮುಂದಿಡುತ್ತಿದ್ದಾರೆಯೇ ಅಥವಾ ”ಪ್ರಚಾರದಲ್ಲಿ ತೊಡಗಿದ್ದಾರೆಯೇ”’ ಎಂದು ಕೇಳುತ್ತಿದ್ದಾರೆ.

ಘಟನೆ ಬಳಿಕ ಬಿಜೆಪಿ ಯುವ ಮೋರ್ಚಾ ನಾಯಕ ಶುಭಂ ರಾಘವ್ ಎನ್ನುವವರು ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ್ದಾರೆ. ಯುಟ್ಯೂಬರ್ ರಾಣಾ ಅವರನ್ನು ಸಂಭಾಲ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಣಾ ಒಬ್ಬ “ನಕಲಿ” ಪತ್ರಕರ್ತ ಮತ್ತು ರಾಜ್ಯ ಸಚಿವರ ಕಾರ್ಯಕ್ರಮವೊಂದರಲ್ಲಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ರಾಘವ್ ಆರೋಪಿಸಿದ್ದಾರೆ.

”ಅಷ್ಟೇ ಅಲ್ಲದೇ ರಾಣಾ ನನ್ನನ್ನು ನಿಂದಿಸಿ, ಹಲ್ಲೆ ಮಾಡಿದರು ಮತ್ತು ನಂತರ ಸ್ಥಳದಿಂದ ಹೊರ ಹೋಗುವಾಗ ಬೆದರಿಕೆ ಹಾಕಿಹೋಗಿದ್ದಾರೆ ಎಂದು ಶುಭಂ ರಾಘವ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆದ ಸಾಲುಸಾಲು ಭ್ರಷ್ಟಾಚಾರದ ಹಗರಣಗಳಿವು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...