Homeಮುಖಪುಟಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ?: ವಿಶಿಷ್ಟ ಸ್ವಾತಂತ್ರ್ಯೋತ್ಸವಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ

ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ?: ವಿಶಿಷ್ಟ ಸ್ವಾತಂತ್ರ್ಯೋತ್ಸವಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿರ್ಧಾರ

- Advertisement -
- Advertisement -

ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 74ನೇ  ಸ್ವಾತಂತ್ರ್ಯೋತ್ಸವವನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಿದೆ. ಅಂದು ನಮಗೆಂದು ಭೂಮಿ? ನಮಗೆಂದು ವಸತಿ? ಭೂಮಿ ಹಕ್ಕು ವಂಚಿತರಿಗೆಲ್ಲಿ ಸ್ವಾತಂತ್ರ್ಯ? ಎಂಬ ಘೋಷಣೆಯೊಂದಿಗೆ ಶ್ರದ್ಧೆ, ಭಕ್ತಿ, ಗೌರವದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಅರಣ್ಯ ಭೂಮಿ ಹಕ್ಕಿಗಾಗಿ ಹೋರಡುತ್ತಿರುವ ಅರಣ್ಯವಾಸಿಗಳು ಆಚರಿಸಲ್ಲಿದ್ದಾರೆ.

ಈ ಹೋರಾಟದ ಮೂಲಕ ಭೂಮಿ ವಸತಿ ಹಕ್ಕು ವಂಚಿತರು ತಮ್ಮ ನೋವುಗಳನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಟಿಬೇಟಿಯನ್ ನಿರಾಶಿತರಿಗೆ ದೇಶದ 600 ಎಕರೆ ಪ್ರದೇಶದಲ್ಲಿ ನಾವು ಆಶ್ರಯ ಕೊಟ್ಟಿದ್ದೇವೆ. ಅವರನ್ನು ದೇಶದ ಪ್ರಜೆಗಳಾಗಿ ಪರಿಗಣಿಸುವ ಕಾನೂನು ಕೇಂದ್ರ ಸರಕಾರ ತಂದಿದೆ. ದುರಂತವೆಂದರೆ, ನಮ್ಮದೇ ದೇಶದ ಪ್ರಜೆಗಳನ್ನು ನಿರಾಶ್ರಿತರನ್ನಾಗಿ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರನೇ ಒಂದರಷ್ಟು ಮಂದಿಗೆ ಭೂಮಿಯಿಲ್ಲ. ಈ ಮಂದಿಯ ಜೀವ-ಜೀವನದ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯುವುದೇ ವಿಶಿಷ್ಟ ಸ್ವಾತಂತ್ರ್ಯ ದಿನದ ಉದ್ದೇಶ” ಎಂದು ಅವರು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿಯಲ್ಲಿ 85,000 ಕುಟುಂಬ, ಕಂದಾಯ ಭೂಮಿಯಲ್ಲಿ 11,000 ಕಟುಂಬ, ಹಾಡಿ ಪ್ರದೇಶದಲ್ಲಿ 4,500 ಕುಟುಂಬ, ಬೆಟ್ಟ ಪ್ರದೇಶದಲ್ಲಿ 6,500 ಕುಟುಂಬ, ಗಾಂವಠಾಣ, ಗೋಮಾಳ, ಪಾರಂಪೂಕ, ಡೊಂಗರ ಮುಂತಾದ ಜಮೀನುಗಳಲ್ಲಿ 10,000 ಕುಟುಂಬಗಳು ಸರ್ಕಾರದ ಭೂಮಿಯಲ್ಲಿ ವಸತಿ ಹಾಗು ಸಾಗುವಳಿ ಮಾಡುತ್ತಿವೆ. ಹೆಚ್ಚು ಕಮ್ಮಿ 1,25,000 ಸಾವಿರ ಕುಟುಂಬಗಳು ಸರಕಾರ ನಡೆಸುವವರ ಇಚ್ಛಾ ಶಕ್ತಿಯ ಕೊರತೆಯಿಂದ ಅತಂತ್ರತೆಯಲ್ಲಿ ದಿನ ಕಳೆಯುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಅಸಹಾಯಕ ಮಂದಿಯ ಅಳಲು ಆಳುವವರಿಗೆ ಅರ್ಥಮಾಡಿಕೊಡುವ ಉದ್ದೇಶದಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಶಿರಸಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ “ಭೂಮಿ ಹಕ್ಕು ವಂಚಿತರಿಗೆ ಸ್ವಾತಂತ್ರ್ಯ” ಎಂಬ ಘೋಷಣೆಯೊಂದಿಗೆ ಧ್ವಜಾರೋಹಣ ಮಾಡಲಾಗುವುದೆಂದು ರವಿ ನಾಯ್ಕ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು “ಭೂಮಿ ಹಕ್ಕು ವಂಚಿತರಿಗೆ ಸ್ವಾತಂತ್ರ್ಯ” ಲಾಂಛನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಉತ್ತರ ಕನ್ನಡ ಆಳುವವರ ಅಸಡ್ಡೆ; ಬೀದಿಗೆ ಬೀಳುವ ಭಯದಲ್ಲಿ ಅರಣ್ಯ ಸಾಗುವಳಿದಾರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...