Homeಕರ್ನಾಟಕವಂದೇಭಾರತ್‌ ಮೈಸೂರು-ಬೆಂಗಳೂರು ಪ್ರಯಾಣ; 5 ನಿಮಿಷಕ್ಕಾಗಿ ₹415 ಹೆಚ್ಚುವರಿ ಪಾವತಿಸಿ!

ವಂದೇಭಾರತ್‌ ಮೈಸೂರು-ಬೆಂಗಳೂರು ಪ್ರಯಾಣ; 5 ನಿಮಿಷಕ್ಕಾಗಿ ₹415 ಹೆಚ್ಚುವರಿ ಪಾವತಿಸಿ!

- Advertisement -
- Advertisement -

ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ ವಂದೇ ಭಾರತ್‌‌ ರೈಲಿನ ಪ್ರಯಾಣ ದರ ಮತ್ತು ಪ್ರಯಾಣ ವೇಗವು ಇದೀಗ ವಿವಾದಕ್ಕೆ ಕಾರಣವಾಗಿದೆ.

ಶುಕ್ರವಾರ ಮುಂಜಾನೆ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಕೆಎಸ್‌ಆರ್‌‌ ರೈಲು ನಿಲ್ದಾಣದ ಪ್ಲಾಟ್‌ಫಾರಂ ನಂ. 7ರಲ್ಲಿ ವಂದೇಭಾರತ್‌‌ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಪ್ರಧಾನಿ ಬೆಂಗಳೂರಿನಲ್ಲಿ ಉದ್ಘಾಟಿಸಿರುವ ವಂದೇಭಾರತ್‌ ಸರಣಿಯ ಈ ರೈಲು ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಇದು ಚೆನ್ನೈ, ಬೆಂಗಳೂರು ಮತ್ತು ಮೈಸೂರಿನ ಓಡಾಡುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಇದು ಜೀವನವನ್ನು ಸುಲಭಗೊಳಿಸುತ್ತದೆ. ಈ ರೈಲಿಗೆ ಬೆಂಗಳೂರಿನಿಂದ ಹಸಿರು ನಿಶಾನೆ ತೋರಿಸಿರುವುದು ಸಂತೋಷ ನೀಡಿದೆ.” ಎಂದು ಪ್ರಧಾನಿಯವರು ಟ್ವೀಟ್‌‌ನಲ್ಲಿ ಹೇಳಿದ್ದರು.

ಆದರೆ ಸಾಮಾನ್ಯ ಜನರು ರೈಲಿನ ದರ ಮತ್ತು ವೇಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ವಂದೇಭಾರತ್‌ ರೈಲು ಸುಮಾರು 01:55 ನಿಮಿಷದಲ್ಲಿ ಪ್ರಯಾಣಿಸುತ್ತದೆ. ಈ ರೈಲಿನ ಎಸಿ ಚೆಯರ್‌ ಕಾರ್‌ (CC) ನಲ್ಲಿ ದರ 515 ರೂ. ಇದ್ದರೆ, ಎಕ್ಸ್‌ಕುಟಿವ್‌ ಎಸಿ ಚಯರ್‌ ಕಾರ್‌‌ (EC) ನಲ್ಲಿ 985 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಆದರೆ ವಿಶೇಷವೇನೆಂದರೆ ಈ ಹಿಂದೆ ಇದ್ದ ಶತಾಬ್ದಿ ರೈಲು ಕೂಡಾ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು ಅಂದಾಜು ಇದೇ ಸಮಯವನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ರೈಲಿನ ದರ ಕೂಡಾ ವಂದೇ ಭಾರತ್ ರೈಲಿಗಿಂತ ಕಡಿಮೆ ಇದೆ.

ಶತಾಬ್ದಿ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬೇಕಾದರೆ, CC ಸೀಟಿನ ದರ 315 ರೂ. ಇದ್ದರೆ, EC ಸೀಟಿನಲ್ಲಿ 905 ರೂ.ಗಳನ್ನು ಪಾವತಿಸಬೇಕಾಗಿದ್ದು, ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಲು 02:10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಅದಾಗ್ಯೂ, ಶತಾಬ್ದಿ ರೈಲು ವಂದೇ ಭಾರತ್‌ ರೈಲಿಗಿಂತ 15 ನಿಮಿಷಗಳಷ್ಟೆ ನಿಧಾನವಾಗಿ ಹೋಗುತ್ತದೆ, ಜೊತೆಗೆ ಪ್ರಯಾಣ ದರ ಕೂಡಾ ಕಡಿಮೆಯಿದೆ. CC ಸೀಟಿಗೆ ವಂದೇಭಾರತ್‌ ರೈಲಿಗಿಂತ ಶತಾಬ್ದಿ ರೈಲಿನಲ್ಲಿ 200 ರೂ. ಕಡಿಮೆ ಇದ್ದರೆ, EC ಸೀಟಿನಲ್ಲಿ 80 ರೂ. ಕಡಿಮೆ ದರವಿದೆ.

ಅಷ್ಟೆ ಅಲ್ಲದೆ, ವಂದೇ ಭಾರತ್‌ ರೈಲಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹಿಂತಿರುಗಬೇಕಾದರೆ ಕೂಡಾ ಅಜಗಜಾಂತರ ದರ ವ್ಯತ್ಯಾಸವಿದೆ. ವಂದೇಭಾರತ್ ರೈಲಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ CC ಸೀಟಿನ ದರ ದರ 720 ರೂ. ಇದ್ದರೆ, EC ಸೀಟಿನಲ್ಲಿ 1215 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಮೈಸೂರಿನಿಂದ ಬೆಂಗಳೂರಿಗೆ 01:50 ನಿಮಿಷದಲ್ಲಿ ವಂದೇಭಾರತ್ ರೈಲು ಪ್ರಯಾಣಿಸುತ್ತದೆ.

ವಂದೇ ಭಾರತ್‌ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ದರಕ್ಕಿಂತ, ವಾಪಾಸು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸಬೇಕಾದರೆ CC ಮತ್ತು CE ಸೀಟಿಗೆ ಕ್ರಮವಾಗಿ 205 ರೂ. ಮತ್ತು 230 ರೂ. ದರ ಹೆಚ್ಚು ಪಾವತಿಸಬೇಕಾಗುತ್ತದೆ.

ವಂದೇಭಾರತ್‌ ಬದಲಾಗಿ ಮೈಸೂರಿನಿಂದ ಬೆಂಗಳೂರಿಗೆ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸಿದರೆ CC ಸೀಟಿನ ದರ ದರ 315 ರೂ. ಇದ್ದರೆ, EC ಸೀಟಿನಲ್ಲಿ 800 ರೂ. ಇದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಶತಾಬ್ದಿ ರೈಲು 01:55 ನಿಮಿಷಗಳಲ್ಲಿ ಪ್ರಯಾಣಿಸುತ್ತದೆ.

ಒಟ್ಟಿನಲ್ಲಿ, ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ವಂದೇ ಭಾರತ್‌ ರೈಲಿಗಿಂತ ಶತಾಬ್ದಿ ರೈಲು ಐದು ನಿಮಿಷಗಳ ಕಾಲ ನಿಧಾನವಾಗಿ ಪ್ರಯಾಣಿಸುತ್ತದೆ. ಜೊತೆಗೆ ವಂದೇಭಾರತ್‌‌ಗಿಂತ ಶತಾಬ್ದಿ ರೈಲಿನ CC ಸೀಟಿನ ದರ 405 ರೂ. ಕಡಿಮೆಯಿದ್ದರೆ, EC ಸೀಟಿನ ದರ 415 ರೂ.ಗಳಷ್ಟು ಕಡಿಮೆ ದರವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...