Homeಮುಖಪುಟಶ್ರದ್ಧಾ ಕೊಲೆ ಸಮರ್ಥಿಸಿದ್ದು ರಾಶಿದ್ ಖಾನ್‌ ಅಲ್ಲ, ವಿಕಾಸ್‌! | ಸುಳ್ಳು ಹೆಸರಿನಲ್ಲಿ ಕೃತ್ಯ ಬೆಂಬಲಿಸಿದ್ದ...

ಶ್ರದ್ಧಾ ಕೊಲೆ ಸಮರ್ಥಿಸಿದ್ದು ರಾಶಿದ್ ಖಾನ್‌ ಅಲ್ಲ, ವಿಕಾಸ್‌! | ಸುಳ್ಳು ಹೆಸರಿನಲ್ಲಿ ಕೃತ್ಯ ಬೆಂಬಲಿಸಿದ್ದ ದುಷ್ಕರ್ಮಿಯ ಬಂಧನ

- Advertisement -
- Advertisement -

ತನ್ನ ಸಂಗಾತಿ ಶ್ರದ್ಧಾ ಅವರನ್ನು ಭೀಕರವಾಗಿ ಕೊಲೆ ಮಾಡಿದ ಅಫ್ತಾಬ್‌‌‌ನನ್ನು ಸಮರ್ಥಿಸಿಕೊಂಡಿದ್ದ ದುಷ್ಕರ್ಮಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ಮುಸ್ಲಿಂ ಎಂಬಂತೆ ಗುರುತಿಸಿಕೊಂಡಿದ್ದ ದುಷ್ಕರ್ಮಿ ಶ್ರದ್ಧಾ ಅವರನ್ನು ಹತ್ಯೆ ಮಾಡಿ ಅವರ ಶರೀರವನ್ನು ತುಂಡು ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದನು.

ಶ್ರದ್ಧಾ ಅವರ ಕೊಲೆ ಬಹಿರಂಗವಾದ ನಂತರ ಹಲವಾರು ಮಾಧ್ಯಮಗಳು ಪ್ರಕರಣವನ್ನು ವರದಿ ಮಾಡಿತ್ತು. ಇದೇ ವೇಳೆ ಯುವಕನೊಬ್ಬ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ ವಿಡಿಯೊವೊಂದು ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಂಧಿತ ವ್ಯಕ್ತಿಯನ್ನು ವಿಕಾಸ್ ಕುಮಾರ್‌ ಎಂದು ಬುಲಂದ್‌ಶಹರ್‌‌ ಪೊಲೀಸರು ಗುರುತಿಸಿದ್ದಾರೆ. ಆದರೆ ದುಷ್ಕರ್ಮಿಯು ವೈರಲ್ ವಿಡಿಯೊದಲ್ಲಿ ತನ್ನನ್ನು ಬುಲಂದ್‌ಶಹರ್‌ ನಿವಾಸಿ ರಾಶಿದ್ ಖಾನ್ ಎಂದು ಸುಳ್ಳು ಹೇಳಿಕೊಂಡಿದ್ದನು.

ಇದನ್ನೂ ಓದಿ: ಅಫ್ತಾಬ್-ಶ್ರದ್ಧಾ 2019ರಿಂದಲೂ ಜೊತೆಯಲ್ಲಿದ್ದರು; ಮುಂಬೈ ತೊರೆದು ದೆಹಲಿಗೆ ಹೋದರು: ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ…!

“ಕೋಪದ ಭರದಲ್ಲಿ ಹಲವಾರು ತುಂಡುಗಳಾಗಿ ಕತ್ತರಿಸುವುದು ತಪ್ಪೇನಲ್ಲ. ಶ್ರದ್ಧಾ ಮತ್ತು ಆಫ್ತಾಬ್ ಇಬ್ಬರೂ ತಮ್ಮ ಸಂಬಂಧದಲ್ಲಿ ತಪ್ಪು ಮಾಡಿರಬೇಕು” ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದನು.

ಬಂಧನದ ಬಗ್ಗೆ ಹೇಳಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್, “ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ದೆಹಲಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಅಫ್ತಾಬ್‌ ಕೊಲೆ ಬೆದರಿಕೆ ಹಾಕಿದ್ದಾನೆಂದು ಶ್ರದ್ಧಾ 2 ವರ್ಷಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು’

“ವಿಡಿಯೊದಲ್ಲಿ ರಶೀದ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾನೆ. ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ತಂಡವನ್ನು ಒತ್ತಾಯಿಸಲಾಗಿತ್ತು. ಇದೀಗ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತನ ಹೆಸರು ವಿಕಾಸ್” ಎಂದು ಅವರು ಹೇಳಿದ್ದಾರೆ. ವಿಕಾಸ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...