Homeಅಂಕಣಗಳುವಿಕ್ರಮ ಉಡುಪಿ ಕಡೆಗೆ ಜಾರಿದನಂತಲ್ಲಾ

ವಿಕ್ರಮ ಉಡುಪಿ ಕಡೆಗೆ ಜಾರಿದನಂತಲ್ಲಾ

- Advertisement -
- Advertisement -

| ಥೂತ್ತೇರಿ ಯಾಹೂ |

“ವಿಕ್ರಮ ಚಂದ್ರನ ಮೇಲೆ ಕಾಲೂರಿದ ಆ ಕ್ಷಣಕ್ಕೆ ಜಗತ್ತು ಸಾಕ್ಷಿಯಾಯ್ತು” ಪ್ರಜಾವಾಣಿಯಲ್ಲಿ ಈ ತಲೆಬರಹ ಓದಿದ ಜನಕ್ಕೆ ದಿಗ್ಭ್ರಮೆಯಾಯ್ತಂತಲ್ಲಾ. ರಾತ್ರಿಯೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಚಂದ್ರನ ಮೇಲೆ ವಿಕ್ರಮ ಇಳಿಯುವ ದೃಶ್ಯಕ್ಕಾಗಿ ಕಾದಿದ್ದ ಜನರು, ಅದು ಉಡುಪಿ ಕಡೆ ವಾಲುತ್ತ ಕಣ್ಮರೆಯಾದ ದೃಶ್ಯದಿಂದ ದುಗುಡಗೊಂಡ ಜನ ನಿರಾಶೆಯಿಂದ ನಿದ್ರೆಗೆ ಜಾರಿದರೆ, ಈ ಪ್ರಜಾವಾಣಿಯವರಿಗೆ ಏನಾಯ್ತು ಎಂದು ಪ್ರಜೆಗಳು ಶಾನೆ ಶಾಕ್‍ಗೆ ಒಳಗಾದರಂತಲ್ಲಾ. ಬಹುಶಃ ಹೀಗಾಗಿರಬೇಕು, ಇಸ್ರೋ ಅಧ್ಯಕ್ಷ ಕೆ. ಶಿವನ್ ಅಸಾಮಾನ್ಯ ವಿಜ್ಞಾನಿಗಳನ್ನು ಒಟ್ಟುಗೂಡಿಸಿ ಬಹುನಿಷ್ಠೆಯಿಂದ ವಿಕ್ರಮನನ್ನು ತಯಾರಿಸಿದ್ದಾರೆ. ಆದರೂ ಒಂದು ಸಣ್ಣ ಅಳುಕಿಗೆ ತುತ್ತಾಗಿ ಉಡುಪಿ ಮಠದ ಮಾಧ್ವ ಜಗತ್ತಿನ ಗುರುವರ್ಯರ ಆಶೀರ್ವಾದ ಪಡೆದರೆ ಹೇಗೆ ಅನ್ನಿಸಿದೆ. ಇದಕ್ಕೆ ಅವರ ಟೀಮು ಶಿರಸಾವಹಿಸಿ ಒಪ್ಪಿದೆ. ಅದರಂತೆ ಉಡುಪಿ ದಾರಿ ಹಿಡಿದ ವಿಜ್ಞಾನಿಗಳು ಅಷ್ಟಮಠದ ಅಧಿಪತಿಯ ಆಶೀರ್ವಾದ ಪಡೆದು ಕೈ ಸಡಿಲಬಿಟ್ಟು ಭೋಜನ ಭಾರಿಸಿ ವಾಪಸಾದದು, ಮುಂದೆ ಪ್ರಧಾನಿ ಬರಲು ಒಪ್ಪಿದ್ದು, ಇದೆಲ್ಲಾ ಆದ ಮೇಲೆ ವಿಕ್ರಮ ಚಂದ್ರನ ಮೇಲಿಳಿಯದೆ ಇನ್ನೆಲ್ಲಿ ಇಳಿಯಲು ಸಾಧ್ಯ ಎಂದು ಪ್ರಜಾವಾಣಿ ಶಿಖಾಮಣಿಗಳು ಭಾವಿಸಿದ್ದೇ ಅನಾಹುತಕ್ಕೆ ಕಾರಣವಂತಲ್ಲಾ ಥೂತ್ತೇರಿ.

ವಿಕ್ರಮ ಸೌರವ್ಯೂಹ ಭೇದಿಸಿ ಚಂದ್ರನ ಸುತ್ತ ಗಿರಕಿ ಹೊಡೆದಿರಬೇಕು. ಆದ್ದರಿಂದ ಮುಂದಿನ ಕೆಲವೇ ಕ್ಷಣಗಳಲ್ಲಿ ಚಂದ್ರನ ಮೇಲೆ ವಿಕ್ರಮ ಕಾಲೂರಿ ನಿಲ್ಲುವುದು ಮೋದಿ ಮಹಾತ್ಮನಾಣೆ ನಿಜ ಎಂದುಕೊಂಡ ಸಿಬ್ಬಂದಿ ಆ ಕ್ಷಣಕ್ಕೆ ಜಗತ್ತು ಸಾಕ್ಷಿಯಾಯ್ತು ಎಂದು ತಲೆಬರಹಗಳನ್ನು ಕೊಟ್ಟು ಅವನ್ನ ಮಾತ್ರ ಪುನಃ ಪುನಃ ಓದಿಕೊಂಡು ಹೊರಟವಂತಲ್ಲಾ. ಆದರೇನು ವಿಕ್ರಮ ಚಂದ್ರನ ಮೇಲೆ ಕಾಲೂರುವುದು ಬಿಟ್ಟು ಅಷ್ಟಮಠಗಳ ದಿಕ್ಕಿಗೆ ಜಾರಿ ಕಣ್ಮರೆಯಾದಾಗ ವಿಕ್ರಮನ ವಿಜ್ಞಾನಿಗಳ ಕಣ್ಣಂಚಿನಲ್ಲಿ ನೀರಾಡಿತು. ಆಗ ಮಾರಣಹೋಮ ದುರಂತವನ್ನೂ ನಾಯಿಮರಿ ಸಾವಿನಂತೆ ಭಾವಿಸುವ ಮೋದಿಯವರು ಕ್ಯಾಮೆರಾಗಳ ಮುಂದೆ ಶಿವನ್ ಭುಜ ಸವರಿ ಸವರಿ ಕಾವೇರುವಂತೆ ಮಾಡಿ ಸಾಂತ್ವಾನಗೊಳಿಸಿದರಂತಲ್ಲಾ, ಥೂತ್ತೇರಿ.

ವಿಕ್ರಮ ಆ ಕ್ಷಣಕ್ಕೆ ಯಶಸ್ವಿಯಾಗಿ ಚಂದ್ರನ ಮೇಲಿಳಿದಿದ್ದರೆ ಏನಾಗುತ್ತಿತ್ತು ಎಂದರೆ, ಮಾತಿನ ಮಲ್ಲನ ವರಸೆ ಬದಲಾಗುತ್ತಿತ್ತು. ಆರ್ಥಿಕವಾಗಿ ದಿವಾಳಿ ಏಳುತ್ತಿರುವ ಭಾರತವನ್ನು ವಿಕ್ರಮನ ಸಾಧನೆಯಿಂದ ತುಂಬಿಕೊಳ್ಳುತ್ತಿದ್ದರು. ಅತ್ತ ವಿಜ್ಞಾನಿಗಳ ದಂಡು ಉಡುಪಿ ಕಡೆಗೆ ಬಂದು ಒಂದು ಪುಟಾಣಿ ಚಿನ್ನದ ವಿಕ್ರಮನನ್ನು ಪೇಜಾವರನ ಪದತಳದಲ್ಲಿಟ್ಟು ಎಲ್ಲ ತಮ್ಮ ಕೃಪೆ ಎನ್ನುತ್ತಿದ್ದರು. ಆಗ ಪೇಜಾವರನ ದಿಕ್ಕಿನಿಂದ ರೇಡಿಯೋ ಶಬ್ದದ ದನಿಯೊಂದು ಹೊರಬಿದ್ದು “ಎಲ್ಲ ಕೃಷ್ಣನ ಮಹಿಮೆ, ಗೋವರ್ಧನ ಗಿರಿಎತ್ತಿ ನಿಲ್ಲಿಸಿದ ಆತನ ಸಂಕಲ್ಪ ಶಕ್ತಿಯೇ ವಿಕ್ರಮನಲ್ಲಿ ಸೇರಿಕೊಂಡು ಚಂದ್ರನ ಮೇಲೆ ನೆಲೆಗೊಳ್ಳುವಂತೆ ಮಾಡಿತು. ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಜೊತೆಯಾಗೇ ಹೋಗಬೇಕು. ಯಾವತ್ತೂ ಅವು ಒಂದನ್ನೊಂದು ಅಗಲುವಂತೆ ಮಾಡಬಾರದು” ಎಂದು ಬುದ್ದಿಜೀವಿಗಳ ಬಗ್ಗೆ ಕಟಕಿಯಾಡುತ್ತಿದ್ದರು. ಅದೆಲ್ಲಾ ಇರಲಿ ಕರ್ನಾಟಕದ ಸಂತ್ರಸ್ತರ ವಿಷಯದಲ್ಲಿ ಮೋದಿ ಬರುತ್ತಾರೆಂದು ತಮಟೆಯ ಜೊತೆಗೇ ಕೂಗಾಡಿದ್ದ ಬಿಜೆಪಿಗಳು ಮೋದಿ ಮಾಡಿದ ಕೆಲಸದಿಂದ ತಲೆ ತಗ್ಗಿಸಿಕೊಂಡು ಓಡಾಡುತ್ತಿವೆಯಂತಲ್ಲಾ, ಥೂತ್ತೇರಿ.

ಚಂದ್ರನ ಮೇಲೆ ಮುಖ ಮುಂದಾಗಿಯೇ ಬಿದ್ದು, ಓರೆಯಾಗಿ ನಿಂತಿರುವ ವಿಕ್ರಮ ಗೊರಗೊರ ಸದ್ದಿನೊಂದಿಗೆ ತಾನಿಲ್ಲಿರುವುದಾಗಿ ಕಳಿಸಿದವರಿಗೆ ಮಾಹಿತಿಕೊಟ್ಟ ಕೂಡಲೇ ಅದರ ಯೋಗಕ್ಷೇಮದ ವಿಚಾರಣೆಗೆ ಪರಿಶೀಲನಾ ಸಮಿತಿಯೊಂದು ನಿರ್ಮಾಣವಾಗುತ್ತಿರುವಾಗಲೇ, ಇತ್ತ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರ ಶೆಡ್ಡುಗಳಲ್ಲಿನ ಜನರ ಕಣ್ಣುಗಳು ಮರಣದ ದಿಕ್ಕನ್ನ ದಿಟ್ಟಿಸುತ್ತಿವೆಯಂತಲ್ಲಾ. ಇವರ ಗೋಳು ಕೇಳಲು ನೋಡಲು ಇಷ್ಟಪಡದ ಬಿಜೆಪಿಗಳು ಅತ್ತ ತಲೆ ಹಾಕುವುದನ್ನೇ ಮರೆತು ಹೊಸದಾಗಿ ರಚನೆಗೊಂಡ ಸಂಘಟಿತ ಮಂತ್ರಿಗಳು ತಮಗೆ ಸೂಕ್ತವಾದ ಹೊಸ ಬಂಗಲೆಯೇ ಬೇಕು ಎಂದು ಹಟದಲ್ಲಿ ಹುಡುಕುತ್ತಿವೆಯಂತಲ್ಲಾ. ಜೊತೆಗೆ ಉಸ್ತುವಾರಿಗೆ ಸಿಗುವ ಜಿಲ್ಲೆಗಳ ಬಗ್ಗೆಯೂ ತಲೆಕೆಡಿಸಿಕೊಂಡಿವೆಯಂತಲ್ಲಾ. ಇಂತಹ ಸಮಯದಲ್ಲಿ ಅತ್ತ ಮೋದಿ ಮಹಾತ್ಮನೂ ಸಂತ್ರಸ್ತರ ವಿಷಯದಲ್ಲಿ ಮಾತನಾಡಲಿಲ್ಲ. ಕೇಂದ್ರದಿಂದ ಕಾಸೂ ಬರಲಿಲ್ಲ. ಸಂತ್ರಸ್ತರ ಶೆಡ್ಡಿನಿಂದ ಸಾವು ನೋವಿನ ಆಕ್ರಂದನ ಕೇಳುತ್ತಿದೆ. ಜೊತೆಗೆ ಸರಕಾರ ರಚನೆಯಾಗುವಂತೆ ಮಾಡಿದ ಹದಿನೇಳು ಜನ ಶಾಸಕರ ಗೋಳು ನೋಡಲಾಗುತ್ತಿಲ್ಲ. ಇಂತಹ ದುಃಖ ತುಂಬಿಕೊಂಡ ಎಡೂರಪ್ಪನನ್ನ ನೋಡಿದರೆ ಸದಾ ಆಸ್ಪತ್ರೆಕಡೆಗೆ ನಡೆಯುತ್ತಿರುವ ಶ್ರೀಮಂತ ರೋಗಿಯಂತೆ ಕಾಣುತ್ತಾರಂತಲ್ಲಾ ಥೂತ್ತೇರಿ.

ಕಬೀರ್ ಎಂಬ ಪಂಜುರ್ಲಿಯನ್ನ ಕರ್ನಾಟಕದ ಭಾರತೀಯ ಜನತಾಪಾರ್ಟಿ ಅಧ್ಯಕ್ಷನನ್ನಾಗಿ ಮಾಡಿದಾಗಲೇ ಇದರಿಂದ ಆಗುವ ಅನಾಹುತವನ್ನ ಜನ ಊಹಿಸಿದ್ದರು. ಅದರಂತೆ ಇದರ ಬಾಯಲ್ಲಿ ಬರುತ್ತಿರುವ ಮಾತುಗಳು ಬಿಜೆಪಿ ಎಂಬ ಪಾರ್ಟಿಯ ಅಧ್ಯಕ್ಷನ ಬಾಯಿಂದ ಹೊರಡುವ ತಕ್ಕ ಮಾತುಗಳಂತಿವೆಯಂತಲ್ಲಾ. ತಮ್ಮ ಸ್ಥಾನಕ್ಕೆ ರಾಜಿನಾಮೆಯಿತ್ತ ಸೆಂಥಿಲ್ ಎಂಬ ದಕ್ಷ ಅಧಿಕಾರಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ರಾಜೀನಾಮೆ ಕೊಟ್ಟರೆ, ಹಾಗಾದರೆ ನೀನು ಪಾಕಿಸ್ತಾನಕ್ಕೆ ಹೋಗು ಎನ್ನುವ ಬಿಜೆಪಿಗಳ ತಲೆಯಲ್ಲಿ ಏನಿದೆ ಎಂಬುದು ಎಲ್ಲರಿಗೂ ಮನವರಿಕೆಯಾಗುತ್ತಿದೆಯಲ್ಲಾ. ಅದೇನದರಾಗಲಿ ಸುಸಂಸ್ಕøತರ ನಾಡಾದ ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸದಂತಾಗಿದೆ. ಈ ಹಿಂದೆ ಮುದುಕರ ಶೆಟ್ಟರು ನೋವು ನುಂಗಿಕೊಂಡೇ ನಿಧನರಾದರು. ಅಣ್ಣಾಮಲೈ ಯಾರನ್ನ ದೂರದೆ ಹೊರಟುಹೋದರು. ಈಗ ಸಂಧಿಲ್ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಾರಣ ನೀಡಿ ಹೊರಟು ಹೋಗುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಏನಾಗಿರಬಹುದು ಎಂಬ ಸೂಚನೆಯಂತಿದೆ. ಕರ್ನಾಟಕದ ಜನ ಈ ನಾಡು ದ.ಕ ಆಗದಂತೆ ನೋಡಿಕೊಳ್ಳುವ ತುರ್ತು ಈಗ ಬಂದಿದೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...