Homeಅಂತರಾಷ್ಟ್ರೀಯಅಗ್ರೆಸ್ಸಿವ್ ಅಪೀಲ್ ಕೊಹ್ಲಿಗೆ ದಂಡ: ವಿರಾಟ್ ಹೀಗೇಕೆ ಮಾಡಿದರು?

ಅಗ್ರೆಸ್ಸಿವ್ ಅಪೀಲ್ ಕೊಹ್ಲಿಗೆ ದಂಡ: ವಿರಾಟ್ ಹೀಗೇಕೆ ಮಾಡಿದರು?

- Advertisement -
- Advertisement -

| ನಾನುಗೌರಿ ಡೆಸ್ಕ್ |

ಶನಿವಾರ ನಡೆದ ಆಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ 29 ಒವರ್ ನಲ್ಲಿ ಜಸ್ಪ್ರಿತ್ ಬೂಮ್ರ ಎಸೆದ ಬಾಲ್ ಆಫ್ಘನ್‍ನ ಬ್ಯಾಟ್ಸ್‍ಮನ್ ರಹಮತ್ ಶಾ ಅವರ ಪ್ಯಾಡ್‍ಗೆ ಬಡಿದಿತ್ತು. ಔಟ್‍ಗೆ ಮನವಿ ಮಾಡಿದಾಗ ಅಂಪೈಲ್ ಅಲಿಮ್‍ದರ್ ಔಟ್ ನೀಡಲಿಲ್ಲ. ಇದರಿಂದ ಕುಪಿತನಾದ ಭಾರತದ ಕ್ಯಾಪ್ಟನ್ ಕೊಹ್ಲಿ ಅಂಪೈರ್‍ರತ್ತ ಧಾವಿಸಿದ್ದಲ್ಲದೇ ಮತ್ತಷ್ಟು ಆಕ್ರೋಶದಿಂದ ಡಿ.ಆರ್.ಎಸ್ ಅಪೀಲ್ ಮಾಡಿದರು.

ಪಂದ್ಯದ ನಂತರ ಕೊಹ್ಲಿಗೆ ಐಸಿಸಿ ಪಂದ್ಯದ ಶೇ.25ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದಲ್ಲದೇ ಅವರಿಗೆ ಒಂದು ಅನರ್ಹತಾ ಅಂಕ ನೀಡಲಾಗಿದೆ. 18 ತಿಂಗಳ ಅವಧಿಯಲ್ಲಿ ಇದು ಅವರು ಪಡೆಯುತ್ತಿರುವ ಎರಡನೇ ಅನರ್ಹತಾ ಅಂಕವಾಗಿದೆ. ಎರಡು ವರ್ಷದ ಅವಧಿಯಲ್ಲಿ ನಾಲ್ಕು ಅನರ್ಹತಾ ಅಂಕಗಳು ಬಂದರೆ ಒಂದು ಅಮಾನತು ಅಂಕ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಎರಡು ಅಮಾನತು ಅಂಕ ಪಡೆದಲ್ಲಿ ಅವರು 2 ಏಕದಿನ ಅಥವಾ ಒಂದು ಟೆಸ್ಟ್ ಪಂದ್ಯದಿಂದ ಅಮಾನತ್ತಾಗುವ ಅಪಾಯವಿರುತ್ತದೆ.

ಕಳೆದ ವರ್ಷ ಜನವರಿ 16ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಳೆ ಮತ್ತು ಮಂದಬೆಳಕಿನ ಕಾರಣದಿಂದ ಪಂದ್ಯವನ್ನು ಸ್ಥಗಿತಗೊಳಿಸಲು ಅಂಪೈಲ್ ಮುಂದಾದರು. ಆಗ ಕೊಹ್ಲಿ ಬೇಸರದಿಂದ ತನ್ನ ಕೈಲಿದ್ದ ಬಾಲ್ ಅನ್ನು ನೆಲಕ್ಕೆ ಜೋರಾಗಿ ಎಸೆದಿದ್ದಲ್ಲದೇ ಅಂಪೈರ್ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರು. ಆಗ ಐಸಿಸಿ ಪಂದ್ಯದ ಶೇ.25ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದರು.

ತಂಡದ ಕ್ಯಾಪ್ಟನ್ ಆಗಿ ಗೆಲುವಿಗಾಗಿ ಹಂಬಲಿಸುವ ವೇಳೆ ಅವರಿಗೆ ಸಾಕಷ್ಟು ಒತ್ತಡ ಇರುತ್ತದೆ. ಹಾಗಾಗಿ ಈ ರೀತಿಯಾಗಿ ಕೊಹ್ಲಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಆರ್‍ಎಸ್ ಬಗ್ಗೆ ನಿಮಗೆ ಗೊತ್ತೆ?
ಡಿಆರ್‍ಎಸ್ ಡಿಸಿಷನ್ ರಿವ್ಯೂ ಸಿಸ್ಟಮ್ ಅನ್ನು ಕ್ರಿಕೆಟ್‍ನಲ್ಲಿ ಪರಿಚಯಿಸಲಾಗಿದೆ. ಪ್ರತಿ ತಂಡಕ್ಕೆ ಬ್ಯಾಟಿಂಗ್‍ನಲ್ಲೊಂದು ಮತ್ತು ಬೌಲಂಗ್ ವಿಭಾಗದಲ್ಲೊಂದು ರಿವ್ಯೂ ಕೇಳಲು ಅವಕಾಶ ಡಿಆರ್‍ಎಸ್ ನಲ್ಲಿ ಅವಕಾಶವಿದೆ. ಆ ರಿವ್ಯೂ ಯಶಸ್ವಿಯಾದಲ್ಲಿ ರಿವ್ಯೂ ಉಳಿದುಕೊಂಡಿರುತ್ತದೆ. ಒಂದು ವೇಳೆ ರಿವ್ಯೂ ವಿಫಲವಾದಲ್ಲಿ ಆ ತಂಡ ರಿವ್ಯೂ ಕಳೆದುಕೊಳ್ಳಲ್ಲಿದ್ದು ನಂತರ ಅಂಪೈರ್ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಎಲ್.ಬಿ.ಡಬ್ಲೂ, ಕ್ಯಾಚ್ ಮುಂತಾದವುಗಳಿಗೆ ಅಂಪೈರ್ ಔಟ್ ನೀಡಿದೀಗ ಬ್ಯಾಟ್ಸ್‍ಮನ್ ಗಳ ಕಡೆಯಿಂದಲೂ, ಒಂದು ವೇಳೆ ನಾಟೌಟ್ ನೀಡಿದರೆ ಬೌಲರ್‍ಗಳ ಕಡೆಯಿಂದಲೂ ಡಿ.ಆರ್.ಎಸ್ ಕೇಳಬಹುದಾಗಿದೆ.

ಮೊನ್ನೆಯ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ಬಾರಿ ಡಿಆರ್‍ಎಸ್ ಕೇಳಿ ಯಶಸ್ವಿಯಾಗಿದೆ. ಕೆಲವೊಂದು ತಂಡಗಳು ಮೊದಲ ಪ್ರಯತ್ನದಲ್ಲಿಯೇ ವಿಫಲವಾಗಿ ಡಿಆರ್‍ಎಸ್ ಕಳೆದುಕೊಂಡ ಉದಾಹರಣೆಗಳು ಇವೆ. ಬೌಲ್ ಆದ 15 ಸೆಕೆಂಡ್ ಒಳಗೆ ರಿವ್ಯೂ ಕೇಳಲು ಅವಕಾಸವಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...