Homeಮುಖಪುಟನಾವು ನಿರುದ್ಯೋಗಿಗಳು, ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದೆ: ಸಂಸತ್ ಬಳಿ ಬಂಧಿತ ಯುವತಿ ಹೇಳಿಕೆ

ನಾವು ನಿರುದ್ಯೋಗಿಗಳು, ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದೆ: ಸಂಸತ್ ಬಳಿ ಬಂಧಿತ ಯುವತಿ ಹೇಳಿಕೆ

- Advertisement -
- Advertisement -

“ನಾವು ನಿರೋದ್ಯೋಗಿಗಳು. ಸರ್ಕಾರ ನಮ್ಮ ಅಳಲು ಕೇಳುತ್ತಿಲ್ಲ. ಅದಕ್ಕಾಗಿ ಹೀಗೆ ಮಾಡಿದೆವು” ಎಂದು ಸಂಸತ್‌ ಬಳಿ ಪ್ರತಿಭಟಿಸಿ ಬಂಧಿತರಾದ ಯುವತಿ ನೀಲಂ ಹೇಳಿದ್ದಾರೆ.

ಸಂಸತ್ ಭವನದ ಹೊರಗಡೆ ಹಳದಿ ಬಣ್ಣದ ಹೊಗೆ ಸಿಂಪಡಣೆ ಮಾಡಿ ಘೋಷಣೆ ಕೂಗಿದ ಆರೋಪದ ಮೇಲೆ ಹರಿಯಾಣ ಹಿಸ್ಸಾರ್ ಮೂಲದ ನೀಲಂ (42) ಅವರನ್ನು ಬಂಧಿಸಲಾಗಿದೆ.

ಇಂದು (ಡಿ.13) ಲೋಕಸಭೆ ಕಲಾಪದ ವೇಳೆ ಸಂಸತ್‌ ಒಳ ನುಗ್ಗಿ ಕೆಮಿಕಲ್ ಸಿಂಪಡಣೆ ಮಾಡಿದ ಇಬ್ಬರು ಯುವಕರು ಮತ್ತು ಸಂಸತ್ ಹೊರಗಡೆ ಪ್ರತಿಭಟಿಸಿದ ಓರ್ವ ಯುವಕ ಮತ್ತು ಯುವತಿ ಸೇರಿ ಒಟ್ಟು ನಾಲ್ವರ ಬಂಧನವಾಗಿದೆ.

ಈ ಪೈಕಿ ಮೂವರು ಮಾಧ್ಯಮಗಳ ಪ್ರತಿಕ್ರಿಯೆಗೆ ಸಿಕ್ಕಿಲ್ಲ. ಪೊಲೀಸರು ಬಂಧಿಸಿ ಕರೆದೊಯ್ಯುವಾಗ ಮಾತನಾಡಿದ ಯುವತಿ ನೀಲಂ, “ನಾವು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡಿಲ್ಲ. ನಾವು ವಿದ್ಯಾರ್ಥಿಗಳು, ಸಾಮಾನ್ಯ ಜನರು. ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಸರ್ಕಾರವು ರೈತರು, ಬಡವರ ಮಾತನ್ನು ಕೇಳುತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ನಡೆಯಲು ನಾವು ಬಿಡಲ್ಲ. ಸರ್ವಾಧಿಕಾರಿ ಆಡಳಿತ ನಿಲ್ಲಿಸಿ. ಭಾರತ್ ಮಾತಾ ಕೀ ಜೈ,”ಎಂದು ನೀಲಂ ಹೇಳಿದ್ದಾರೆ.

ನಾಲ್ವರ ಬಂಧನ:

ಲೋಕಸಭೆಯ ಒಳಗೆ ಕೆಮಿಕಲ್ ಹೊಗೆ ಸಿಂಪಡಣೆ ಮಾಡಿದ ಇಬ್ಬರನ್ನು ಮನೋರಂಜನ್ ಮತ್ತು ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಮೈಸೂರು ಮೂಲದವರು. ಇವರಿಗೆ ಕೊಡಗು-ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಂಸತ್ ಕಲಾಪ ಸಂದರ್ಶಕರ ಪಾಸ್ ನೀಡಿದ್ದರು ಎಂದು ತಿಳಿದು ಬಂದಿದೆ.

ಸಂಸತ್ ಹೊರಗಡೆ ಪ್ರತಿಭಟಿಸಿದ ಇಬ್ಬರಲ್ಲಿ ಯುವತಿ ನೀಲಂ ಹರಿಯಾಣದ ಹಿಸ್ಸಾರ್ ಮೂಲದವರು ಮತ್ತು ಯುವಕ ಮಹರಾಷ್ಟ್ರದ ಲಾತೂರ್ ಮೂಲದವರು ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ : ಲೋಕಸಭೆ ಭದ್ರತಾ ಲೋಪ: ಬಂಧಿತ ಮನೋರಂಜನ್ ಮೈಸೂರು ನಿವಾಸಿ! ಮಗನನ್ನು ಗುರುತಿಸಿದ ತಂದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...