ಧರ್ಮವನ್ನು ರಾಜಕೀಯದೊಂದಿಗೆ ಬೆರೆಸಿದ್ದಿದು ಮತ್ತು ಬಿಜೆಪಿಯೊಂದಿಗೆ ಸೇರಿಕೊಂಡಿದ್ದು ತಮ್ಮ ಪಕ್ಷ ಶಿವಸೇನೆ ಮಾಡಿದ ತಪ್ಪು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಇದು ಹಿಂದೂತ್ವ ಪರ ರಾಜಕಾರಣಕ್ಕೆ ಹೆಸರುವಾಸಿಯಾದ ಫೈರ್‌ಬ್ರಾಂಡ್ ಶಿವಸೇನೆಯ ಮುಖ್ಯಸ್ಥರ ಗಮನಾರ್ಹವಾದ ಹೇಳಿಕೆಯಾಗಿದ್ದು ದೇಶದ್ಯಂತ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಆಡಳಿತಾತ್ಮಕ ಪಾತ್ರವನ್ನು ವಹಿಸಿಕೊಂಡ ನಂತರ ಕಳೆದ ವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಸೇರಿಕೊಂಡ ಬಿಜೆಪಿ ಪಕ್ಷದ ಸಿದ್ಧಾಂತಕ್ಕೆ ಬೆನ್ನು ತಿರುಗಿಸಿದ್ದಕ್ಕೆ ಖಂಡಿಸಿದ ಮಾಜಿ ಮಿತ್ರ ದೇವೇಂದ್ರ ಫಡ್ನವಿಸ್‌ಗೆ ಪ್ರತಿಕ್ರಿಯಿಸುತ್ತಾ ಅವರು ಈ ಮೇಲಿನ ಮಾತುಗಳನ್ನಾಡಿದ್ದಾರೆ.

ಮಮತಾ ಬ್ಯಾನರ್ಜಿ, ರಾಮ್ ವಿಲಾಸ್ ಪಾಸ್ವಾನ್ ಮತ್ತು ಪಿಡಿಪಿಯಂತಹ ವಿರುದ್ಧವಾದ ಸಿದ್ಧಾಂತಗಳ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದನ್ನು ನೆನಪಿಸುತ್ತಾ, ಉದ್ಧವ್ ಠಾಕ್ರೆ ಅವರು ಧರ್ಮ ಮತ್ತು ರಾಜಕೀಯವನ್ನು ಬೆರೆಸಿ ಬಿಜೆಪಿಯೊಂದಿಗೆ ಉಳಿಯುವುದು ತಪ್ಪು ಎಂದು ಹೇಳಿದ್ದರು.

“ನೀವು (ದೇವೇಂದ್ರ ಫಡ್ನವೀಸ್) ಜನರ ಆದೇಶದ ಬಗ್ಗೆ ಮಾತನಾಡಿದ್ದೀರಿ. ಆದರೆ ಇದು ರಾಜಕೀಯ. ನಾವು ರಾಜಕೀಯ ಮತ್ತು ಧರ್ಮವನ್ನು ಬೆರೆಸಿ ಬಹುಶಃ ತಪ್ಪು ಮಾಡಿದ್ದೇವೆ. ಆದರೆ ಆ ಸಮಯದಲ್ಲಿ ನಾವು ‘ಧರ್ಮ’ದ ಅನುಯಾಯಿಗಳು ಸಹ ಜೂಜಿನಲ್ಲಿ ಸೋತಿದ್ದೇವೆ ಎಂಬುದನ್ನು ಮರೆತಿದ್ದೇವೆ (ಉಲ್ಲೇಖ ಮಹಾಭಾರತಕ್ಕೆ). ರಾಜಕೀಯವು ಒಂದು ಜೂಜು. ನೀವು ಧರ್ಮವನ್ನು ಸರಿಯಾದ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ನಾವು ಇದನ್ನು ಮರೆತಿದ್ದೇವೆ. ನಾವು ಧರ್ಮ ಮತ್ತು ರಾಜಕೀಯವನ್ನು ಬೆರೆಸಲು ಪ್ರಾರಂಭಿಸಿದ್ದೇವೆ ಮತ್ತು ಅದಕ್ಕಾಗಿ ನಾವು ಯಶಸ್ವಿಯಾಗಿದ್ದೇವೆ. ನಾವು 25 ವರ್ಷಗಳ ಕಾಲ ಒಟ್ಟಿಗೆ ಇದ್ದೆವು ಮತ್ತು ನಾವು ಹಿಂದುತ್ವದ ಕಾರಣದಿಂದಾಗಿ ಉಳಿದಿದ್ದೇವೆ. ನಾವು ಧರ್ಮವನ್ನು ಬದಲಾಯಿಸಿಲ್ಲ. ನಾವು ನಿನ್ನೆ, ಇಂದು ಮತ್ತು ನಾಳೆ ಹಿಂದೂಗಳಾಗಿದ್ದೆವು. ಆದರೆ ನಿಮ್ಮ ಬಗ್ಗೆ ಏನು? ಮಮತಾ ಬ್ಯಾನರ್ಜಿ, ರಾಮ್‌ವಿಲಾಸ್ ಪಾಸ್ವಾನ್ ಮತ್ತು ಪಿಡಿಪಿಯಂತಹ ವಿರುದ್ಧ ಸಿದ್ಧಾಂತಗಳಿಂದ ನೀವು ಎಲ್ಲರೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ.” ಎಂದು ಉದ್ಧವ್‌ ಹೇಳಿದ್ದರು.

“ಧರ್ಮದ ಬಗ್ಗೆ ಕೇವಲ ಮಾತನಾಡುವುದು ಮಾತ್ರವಲ್ಲ, ಅದನ್ನು ಅನುಸರಿಸಬೇಕು. ಧರ್ಮವು ಪುಸ್ತಕಗಳಲ್ಲಿ ಮಾತ್ರವಲ್ಲ, ಅದು ನಿಜ ಜೀವನದಲ್ಲಿ ಉಳಿಯಬೇಕು” ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುನರುಚ್ಚರಿಸಿದರು.

ನಂತರ ಅವರು “ದೇವೇಂದ್ರಜಿ, ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸುವುದಿಲ್ಲ ಎಂದು ನಾನು ಬಾಳಾಸಾಹೇಬರಿಗೆ ಭರವಸೆ ನೀಡಿದ್ದೇ ಎಂದು ನೀವು ಹೇಳುತ್ತಿದ್ದೀರಿ. ಇಲ್ಲ ನಾನು ಅಂತಹ ಭರವಸೆ ನೀಡಿರಲಿಲ್ಲ. ಆದರೆ ನೀವು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುತ್ತೀರಾ? ನಾನು ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ ಮತ್ತು ನಾವು ನೀಡುವ ಯಾವುದೇ ಭರವಸೆಗಳನ್ನು ನಾವು ಉಳಿಸಿಕೊಳ್ಳುತ್ತೇವೆ” ಎಂದಿದ್ದಾರೆ.

“ನಮ್ಮ ಸರ್ಕಾರ ರಿಕ್ಷಾದಲ್ಲಿ ಪ್ರಯಾಣಿಸುವವರಿಗಾಗಿರುತ್ತದೆ ಹೊರತು ಬುಲೆಟ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಅಲ್ಲ” ಎಂದು ಅವರು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ.

ಇಂದೂ ಕೂಡ ಉದ್ಧವ್‌ ಠಾಕ್ರೆ ಎನ್‌ಆರ್‌ಸಿಯನ್ನು ಮಹಾರಾಷ್ಟ್ರದಲ್ಲಿ ಯಾವುದೇ ಕಾರಣಕ್ಕೂ ಜಾರಿಗೊಳಿಸುವುದಿಲ್ಲ ಮತ್ತು ಯಾವುದೇ ಬಂಧನ ಕೇಂದ್ರಗಳನ್ನು ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here