Homeರಾಷ್ಟ್ರೀಯಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪವಿಲ್ಲ, ಆದರೆ ತಮಿಳರನ್ನು ವಿಭಜಿಸಲು ಧರ್ಮ ಬಳಸಿದರೆ ವಿರೋಧಿಸುತ್ತೇವೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ....

ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪವಿಲ್ಲ, ಆದರೆ ತಮಿಳರನ್ನು ವಿಭಜಿಸಲು ಧರ್ಮ ಬಳಸಿದರೆ ವಿರೋಧಿಸುತ್ತೇವೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್

- Advertisement -
- Advertisement -

ಜನರ ಧಾರ್ಮಿಕ ನಂಬಿಕೆಗಳಲ್ಲಿ ತಮ್ಮ ಸರ್ಕಾರ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, “ಆದರೆ, ತಮಿಳರನ್ನು ವಿಭಜಿಸಲು ಧರ್ಮವನ್ನು ಒಂದು ಸಾಧನವಾಗಿ ಬಳಸುವುದನ್ನು ವಿರೋಧಿಸುತ್ತೇವೆ” ಎಂದು ಸೋಮವಾರ ಹೇಳಿದ್ದಾರೆ.

ಉತ್ತರ ಅಮೆರಿಕಾದ ತಮಿಳು ಸಂಗಮ್ಸ್ ಫೆಡರೇಶನ್ (FeTNA) ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್ ಅವರು, ವಿಭಜಕ ಶಕ್ತಿಗಳು ಹೆಚ್ಚುತ್ತಿದ್ದು, ತಮಿಳರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವಾಗ, ಅಂತಹ ಶಕ್ತಿಗಳ ವಿರುದ್ಧ ತಮಿಳರನ್ನು ಒಗ್ಗೂಡಿಸುವ ಶಕ್ತಿ ತಮಿಳು ಭಾಷೆಗೆ ಇದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಧರ್ಮದ ಸೋಗುಗಳನ್ನು ಸೋಲಿಸುವ ಶಕ್ತಿ ಭಾಷೆಗೆ ಮಾತ್ರ ಇದೆ. ನಾನು ಇಲ್ಲಿ ಧರ್ಮದ ಬಗ್ಗೆ ಹೇಳುತ್ತಿರುವುದರಿಂದ ಯಾರ ಧಾರ್ಮಿಕ ನಂಬಿಕೆಯನ್ನೂ ಉಲ್ಲೇಖಿಸುವುದಿಲ್ಲ. ಧಾರ್ಮಿಕ ನಂಬಿಕೆಯು ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆ, ಆಯ್ಕೆ ಮತ್ತು ಹಕ್ಕು. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದೇ ಸಮಯದಲ್ಲಿ, ತಮಿಳರನ್ನು ವಿಭಜಿಸುವ ಸಾಧನವಾಗಿ ಧರ್ಮವನ್ನು ಬಳಸಿದಾಗ ನಾವು ಅದನ್ನು ವಿರೋಧಿಸುತ್ತೇವೆ” ಎಂದು ಸ್ಟಾಲಿನ್‌ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಅನ್ಯಾಯ; ಮೋದಿ ಇದ್ದ ವೇದಿಕೆಯಲ್ಲೇ ಸ್ಟಾಲಿನ್‌ ಹೇಳಿಕೆ; ಅಣ್ಣಾಮಲೈಗೆ ಬೇಸರ

ಆದರೆ, ಈ ಹೇಳಿಕೆ ಜಾತಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ ಅವರು, “ಜಾತಿಯು ತಮಿಳು ಸಮುದಾಯವನ್ನು ವಿಭಜಿಸುವ ಪ್ರಾಥಮಿಕ ಅಂಶವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

‘ಎಲ್ಲರಿಗೂ ಎಲ್ಲವೂ’ ಎಂಬ ಪರಿಕಲ್ಪನೆಯನ್ನು ಒಪ್ಪಿಕೊಳ್ಳದವರು ಮಾತ್ರ ದ್ರಾವಿಡ ಚಳವಳಿಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ ಸ್ಟಾಲಿನ್, “ಅವರು ‘ದ್ರಾವಿಡಂ’ ಪದದ ಜೊತೆಜೊತೆಗೆ ಈ ಸರಕಾರವನ್ನೂ ವಿರೋಧಿಸಿದವರು” ಎಂದು ಹೇಳಿದ್ದಾರೆ.

“ಒಂದು ಕಾಲದಲ್ಲಿ ಸಮುದಾಯ ಮತ್ತು ಪ್ರಾದೇಶಿಕ ಅಭಿವ್ಯಕ್ತಿ ಮತ್ತು ಭಾಷೆಯನ್ನು ಉಲ್ಲೇಖಿಸಿದ ‘ದ್ರಾವಿಡ’ ಎಂಬ ಪದವು ನಂತರದ ಕಾಲದಲ್ಲಿ ರಾಜಕೀಯ ತತ್ತ್ವಶಾಸ್ತ್ರವಾಗಿ ಉಲ್ಲೇಖವಾಗುತ್ತಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಸರ್ಕಾರಿ ಬಸ್‌ ಹತ್ತಿ ಜನರ ಸಮಸ್ಯೆ ಆಲಿಸಿದ ತಮಿಳುನಾಡು ಸಿಎಂ ಸ್ಟಾಲಿನ್!

“ಈ ತತ್ವವೂ ‘ಎಲ್ಲರಿಗೂ ಎಲ್ಲವೂ’ ಎಂದು ಪ್ರತಿಪಾದಿಸುವ ರಾಜಕೀಯ ತತ್ತ್ವಶಾಸ್ತ್ರವನ್ನು ಉಲ್ಲೇಖಿಸುತ್ತದೆ. ಇದನ್ನು ವಿರೋಧಿಸುವವರು ‘ಎಲ್ಲರಿಗೂ ಎಲ್ಲವೂ’ ಮತ್ತು ದ್ರಾವಿಡ ಚಳವಳಿಯನ್ನು ವಿರೋಧಿಸುವವರು” ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...