Homeರಾಷ್ಟ್ರೀಯಮಮತಾ ಬ್ಯಾನರ್ಜಿ ನಮಾಜ್‌ ಮಾಡುವ ಮೂಲಕ ಇಸ್ಲಾಂ ಮತ್ತು ಹಿಂದೂ ಧರ್ಮಗಳೆರಡನ್ನೂ ಭ್ರಷ್ಟಗೊಳಿಸಿದ್ದಾರೆ: ಬಿಜೆಪಿ ರಾಷ್ಟ್ರೀಯ...

ಮಮತಾ ಬ್ಯಾನರ್ಜಿ ನಮಾಜ್‌ ಮಾಡುವ ಮೂಲಕ ಇಸ್ಲಾಂ ಮತ್ತು ಹಿಂದೂ ಧರ್ಮಗಳೆರಡನ್ನೂ ಭ್ರಷ್ಟಗೊಳಿಸಿದ್ದಾರೆ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್

- Advertisement -
- Advertisement -

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬ್ರಾಹ್ಮಣರಾಗಿದ್ದುಕೊಂಡು ನಮಾಜ್ ಮಾಡುವ ಮೂಲಕ ಮತ್ತು ಇಫ್ತಾರ್ ಕೂಟಗಳಿಗೆ ಹಾಜರಾಗುವ ಮೂಲಕ ಇಸ್ಲಾಂ ಮತ್ತು ಹಿಂದೂ ಧರ್ಮ ಎರಡನ್ನೂ ಭ್ರಷ್ಟಗೊಳಿಸಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ ದಿಲೀಪ್ ಘೋಷ್ ಮಂಗಳವಾರ ಆರೋಪಿಸಿದ್ದಾರೆ.

ಇಂಡಿಯಾ ಟುಡೇ ಕಾನ್‌ಕ್ಲೇವ್ 2022 ರಲ್ಲಿ ಮಾತನಾಡುತ್ತಿದ್ದ ಅವರು, “ಮಮತಾ ಬ್ಯಾನರ್ಜಿ ಅವರು ಇಫ್ತಾರ್ ಪಾರ್ಟಿಗಳಲ್ಲಿ ಹೊಟ್ಟೆ ತುಂಬ ತಿನ್ನುತ್ತಾರೆ. ನಮಾಜ್ ಮತ್ತು ರೋಜಾ (ಉಪವಾಸ) ಆಚರಿಸುತ್ತಾರೆ. ಅವರು ಹಿಂದೂ ಬ್ರಾಹ್ಮಣ ಕುಟುಂಬದವರಾಗಿದ್ದು, ಇಸ್ಲಾಂ ಮತ್ತು ಹಿಂದೂ ಧರ್ಮಗಳೆರಡರನ್ನೂ ಭ್ರಷ್ಟಗೊಳಿಸಿದ್ದಾರೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನೂರ್‌ಪುರ್ ಶರ್ಮಾ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ನೂಪುರ್‌ ಹೇಳಿಕೆಯ ನಂತರ ಎಷ್ಟು ಜನರು ಸತ್ತರು ಎಂದು ನನಗೆ ತಿಳಿದಿಲ್ಲ” ಎಂದು ದಿಲೀಪ್ ಘೋಷ್ ಹೇಳಿದ್ದಾರೆ.

ಇದನ್ನೂ ಓದಿ: ’ಮಮತಾ ಬರ್ಮುಡಾ ಧರಿಸಲಿ’ ಎಂಬ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿಕೆಗೆ ವ್ಯಾಪಕ ಟೀಕೆ

ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಗಲಭೆಯಲ್ಲಿ ನೂರಾರು ಮಂದಿಯನ್ನು ಬಲಿತೆಗೆದುಕೊಂಡ ಹಿಂಸಾಚಾರದ ಹಿಂದಿನ ಸಿದ್ಧಾಂತದ ವಿರುದ್ಧ ಮಾತನಾಡಲು ಜಗತ್ತು ಹೆದರುತ್ತಿದೆ ಎಂದು ಅವರು ಹೇಳಿದ್ದಾರೆ. ನೂಪುರ್ ಶರ್ಮಾ ಅವರ ಹೇಳಿಕೆಗಳಲ್ಲಿ ತಪ್ಪಿದ್ದರೆ, ಕತ್ತಿಯನ್ನು ಹೊರತೆಗೆಯುವ ಬದಲು ಟಿವಿಗಳಲ್ಲಿ ತಾರ್ಕಿಕ ವಾದಗಳು ನಡೆಯಬೇಕಿತ್ತು ಎಂದು ಅವರು ಹೇಳಿದ್ದಾರೆ.

ದೇಶದಲ್ಲಿರುವ 100 ಕೋಟಿ ಹಿಂದೂಗಳಲ್ಲಿ ಹಿಂದೂ ಧರ್ಮದ ಮೇಲಿನ ನಂಬಿಕೆ ಇಂದಿಗೂ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...