Homeಮುಖಪುಟಲೋಕಸಭೆ ಚುನಾವಣೆ: ದೆಹಲಿ ಸಿಎಂ ಪತ್ರದಲ್ಲಿದ್ದ 6 ಗ್ಯಾರೆಂಟಿಗಳು....

ಲೋಕಸಭೆ ಚುನಾವಣೆ: ದೆಹಲಿ ಸಿಎಂ ಪತ್ರದಲ್ಲಿದ್ದ 6 ಗ್ಯಾರೆಂಟಿಗಳು….

- Advertisement -
- Advertisement -

ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಲೋಕತಂತ್ರ ಬಚಾವೋ’ ರ್ಯಾಲಿಯಲ್ಲಿ ವೇದಿಕೆಯ ಮೇಲೆ ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಭಾಗವಹಿಸಿದ್ದರು ಮತ್ತು 2024ರ ಲೋಕಸಭೆ ಚುನಾವಣೆ ಹಿನ್ನೆಲೆ ಆರು ಚುನಾವಣಾ ಭರವಸೆಗಳನ್ನು ಒಳಗೊಂಡಿರುವ ತಮ್ಮ ಪತಿಯ ಸಂದೇಶವನ್ನು ಅವರು ಓದಿದ್ದಾರೆ.

ಇಂಡಿಯಾ ಮೈತ್ರಿ ಕೂಟವು ಅಧಿಕಾರಕ್ಕೆ ಬಂದರೆ, ಉತ್ತಮ ಆಸ್ಪತ್ರೆಗಳು ಮತ್ತು ಶಿಕ್ಷಣ ಸೇರಿದಂತೆ ಆರು ಖಾತರಿಗಳನ್ನು ಪೂರೈಸುತ್ತದೆ. ನೀವು ಇಂಡಿಯಾ ಬಣಕ್ಕೆ ಅವಕಾಶ ನೀಡಿದರೆ, ನಾವು ಶ್ರೇಷ್ಠ ರಾಷ್ಟ್ರವನ್ನು ನಿರ್ಮಿಸುತ್ತೇವೆ ಎಂದು ಜೈಲಿನಲ್ಲಿರುವ ಪತಿಯ ಸಂದೇಶವನ್ನು ಓದುವಾಗ ಸುನೀತಾ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನ, ಅರವಿಂದ್ ಕೇಜ್ರಿವಾಲ್ ಬಂಧನದ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ವತಿಯಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಲೋಕತಂತ್ರ ಬಚಾವೋ’ ರ್ಯಾಲಿ ಆಯೋಜಿಸಲಾಗಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎನ್‌ಸಿಪಿ ನಾಯಕ ಶರದ್ ಪವಾರ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್,  ಎಎಪಿ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

ರ್ಯಾಲಿಯಲ್ಲಿ ಸುನೀತಾ ಕೇಜ್ರಿವಾಲ್ ಅವರು ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ನೀಡಿದ ಆರು ಚುನಾವಣಾ ಭರವಸೆಗಳನ್ನು ಓದಿದ್ದಾರೆ..

1. ದೇಶಾದ್ಯಂತ 24-ಗಂಟೆಗಳ ವಿದ್ಯುತ್ ಪೂರೈಕೆ

2. ದೇಶದ ಬಡವರಿಗೆ ಉಚಿತ ವಿದ್ಯುತ್ ಪೂರೈಕೆ

3. ಪ್ರತಿ ಗ್ರಾಮ ಮತ್ತು ಮೊಹಲ್ಲಾದಲ್ಲಿ ಉತ್ತಮ ಸರ್ಕಾರಿ ಶಾಲೆ ನಿರ್ಮಣ.

4. ಪ್ರತಿ ಗ್ರಾಮ, ಮತ್ತು ಮೊಹಲ್ಲಾದಲ್ಲಿ ಮೊಹಲ್ಲಾ ಕ್ಲಿನಿಕ್ ನಿರ್ಮಾಣ

5. ಸ್ವಾಮಿನಾಥನ್ ಸಮಿತಿ ವರದಿಯಂತೆ ರೈತರಿಗೆ MSP ಜಾರಿ

6. ದೆಹಲಿಗೆ ಪೂರ್ಣ ರಾಜ್ಯತ್ವ ಸ್ಥಾನಮಾನ

ಸಂದೇಶದಲ್ಲಿ ಏನೇನಿದೆ?

ಕಳೆದ 75 ವರ್ಷಗಳಲ್ಲಿ ದೆಹಲಿಯ ಜನರು ಅನ್ಯಾಯವನ್ನು ಎದುರಿಸಿದ್ದಾರೆ. ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ನಾವು ದೆಹಲಿಯನ್ನು ಸಂಪೂರ್ಣ ರಾಜ್ಯವನ್ನಾಗಿ ಮಾಡುತ್ತೇವೆ. ನಿಮ್ಮ ಸ್ವಂತ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ನಿಮಗಾಗಿ ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂದೇಶವನ್ನು ಓದುವ ಮೊದಲು, ನಾನು ನಿಮಗೆ ಒಂದು ವಿಷಯವನ್ನು ಕೇಳಲು ಬಯಸುತ್ತೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಗಂಡನನ್ನು ಜೈಲಿಗೆ ಹಾಕಿದ್ದು, ಪ್ರಧಾನಿ ಮಾಡಿದ್ದು ಸರಿಯೇ? ಕೇಜ್ರಿವಾಲ್ ಅವರು ನಿಜವಾದ ದೇಶಭಕ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ನೀವು ನಂಬುತ್ತೀರಾ? ಕೇಜ್ರಿವಾಲ್ ಜೈಲಿನಲ್ಲಿದ್ದಾರೆ, ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕೇ? ನಿಮ್ಮ ಕೇಜ್ರಿವಾಲ್ ಸಿಂಹ, ಅವರನ್ನು ಹೆಚ್ಚು ಕಾಲ ಜೈಲಿನಲ್ಲಿಡಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ…” ಎಂದು ಸುನೀತಾ ಕೇಜ್ರಿವಾಲ್ ಸಭೆಯಲ್ಲಿ ಹೇಳಿದರು.

ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಅವರ ಸಂದೇಶವನ್ನು ಓದಿದ ಸುನೀತಾ ಕೇಜ್ರಿವಾಲ್, “ನನ್ನ ಪ್ರೀತಿಯ ಸಹೋದ್ಯೋಗಿಗಳೇ, ನಿಮ್ಮ ಮಗ, ನಿಮ್ಮ ಸಹೋದರ ಜೈಲಿನಿಂದ ಶುಭಾಶಯಗಳನ್ನು ಸ್ವೀಕರಿಸಿ. ನಾನು ನಿಮ್ಮ ಮತವನ್ನು ಕೇಳುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ನಾನು ಗೆಲ್ಲುವ ಅಥವಾ ಸೋಲುವ ಬಗ್ಗೆ ಚರ್ಚಿಸುವುದಿಲ್ಲ. ಇಂದು ನಾನು ಈ ದೇಶದ ಎಲ್ಲಾ 1.4 ಶತಕೋಟಿ ಜನರನ್ನು ಭವ್ಯ ಭಾರತವನ್ನು ನಿರ್ಮಿಸಲು ಆಹ್ವಾನಿಸುತ್ತೇನೆ ಎಂದು ಹೇಳಿದ್ದಾರೆ.

ದೇವರು ಭಾರತಕ್ಕೆ ಎಲ್ಲವನ್ನೂ ಉಡುಗೊರೆಯಾಗಿ ನೀಡಿದ್ದಾನೆ. ಆದರೂ ನಾವೇಕೆ ಹಿಂದುಳಿದಿದ್ದೇವೆ? ನಾವೇಕೆ ಅನಕ್ಷರಸ್ಥರು? ನಾನು ಇಲ್ಲಿ ಜೈಲಿನಲ್ಲಿದ್ದೇನೆ, ಅಲ್ಲಿ ನನಗೆ ಯೋಚಿಸಲು ಸಾಕಷ್ಟು ಸಮಯವಿದೆ. ನಾನು ಭಾರತ ಮಾತೆಗಾಗಿ ಯೋಚಿಸುತ್ತೇನೆ. ಭಾರತಮಾತೆ ತುಂಬಾ ದುಃಖಿತಳಾಗಿದ್ದಾಳೆ. ಭಾರತ ಮಾತೆ ನೋವಿನಲ್ಲಿದ್ದಾರೆ, ಸಂಕಟದಿಂದ ಅಳುತ್ತಿದ್ದಾರೆ ಎಂದು ಸುನೀತಾ ಕೇಜ್ರಿವಾಲ್ ಅವರು ದೆಹಲಿ ಸಿಎಂ ಸಂದೇಶವನ್ನು ಓದಿದ್ದಾರೆ.

ಇದನ್ನು ಓದಿ: ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...