HomeUncategorizedರಾಜ್ಯಗಳನ್ನು ಕೇಂದ್ರಾಡಳಿತವನ್ನಾಗಿ ಪರಿವರ್ತಿಸಿ ಸಾಧಿಸಿದ್ದಾದರೂ ಏನು; ಸೌಗತ ರಾಯ್

ರಾಜ್ಯಗಳನ್ನು ಕೇಂದ್ರಾಡಳಿತವನ್ನಾಗಿ ಪರಿವರ್ತಿಸಿ ಸಾಧಿಸಿದ್ದಾದರೂ ಏನು; ಸೌಗತ ರಾಯ್

- Advertisement -
- Advertisement -

ಈ ಹಿಂದೆ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳಾಗಿ ಪರಿವರ್ತಿಸಲಾಗಿತ್ತು. ಅಮಿತ್ ಶಾ ಅವರು ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ; ಇದರಿಂದ ನೀವು ಏನು ಸಾಧಿಸಿದ್ದೀರಿ ಎಂದು ಟಿಎಂಸಿ ಸಂಸದ ಸೌಗತ ರಾಯ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ-2023 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ (ತಿದ್ದುಪಡಿ) ಮಸೂದೆ-2023 ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಅಮಿತ್ ಶಾ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯಿಂದ ನಾನು ಮಾತು ಪ್ರಾರಂಭಿಸುತ್ತೇನೆ. 370ನೇ ವಿಧಿಯನ್ನು ರದ್ದುಪಡಿಸುವುದು, ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದು ಅವರು ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಮೊದಲನೆಯದು ಜಮ್ಮು ಮತ್ತು ಕಾಶ್ಮೀರ; ಎರಡನೆಯದು ಲಡಾಖ್. ಈ ಹಿಂದೆ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳಾಗಿ ಪರಿವರ್ತಿಸಲಾಗಿತ್ತು. ಆದರೆ, ಅಮಿತ್ ಶಾ ಅವರು ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿದ್ದಾರೆ. ಇದರಿಂದ ನೀವು ಏನು ಸಾಧಿಸಿದ್ದೀರಿ’ ಎಂದು ಪ್ರಶ್ನಿಸಿದರು.

ವಿಧಾನಸಭೆ ಅಸ್ತಿತ್ವದಲ್ಲಿ ಇಲ್ಲದಿದ್ದಾಗಲೂ ನೀವು ಕಾಯ್ದೆಗಳನ್ನು ಬದಲಾವಣೆ ಮಾಡುತ್ತಿರುವುದು ಯಾಕೆ? ಶಾಸಕಾಂಗ ಸಭೆ ನಡೆಸಿದ ನಂತರ ತೀರ್ಮಾನ ಮಾಡಿ. ಆದರೆ, ಆತುರ ಯಾಕೆಂದು ನನಗೆ ಗೊತ್ತಿಲ್ಲ; ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಈ ಆತುರ ತೋರಬೇಕು’ ಎಂದು ಹೇಳಿದರು.

‘ಬಿಜೆಪಿ ತನ್ನ ಭರವಸೆ ಈಡೇರಿಸಲು 370ನೇ ವಿಧಿಯನ್ನು ರದ್ದುಗೊಳಿಸಿದೆ. ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ (ಒಬ್ಬ ಪ್ರಧಾನಿ, ಒಂದು ಧ್ವಜ ಮತ್ತು ಒಂದು ಸಂವಿಧಾನ) ಇದು ಶ್ಯಾಮ್ ಪ್ರಸಾದ್ ಅವರ ಕಾಲದಲ್ಲಿ ಘೋಷಣೆಯಾಗಿತ್ತು. ಈ ನಿರ್ಧಾರ ಜಮ್ಮು ಮತ್ತು ಕಾಶ್ಮೀರದ ಜನರಿಗಾಗಿ ಅಲ್ಲ, ಏಕೆಂದರೆ ಇದು ರಾಜಕೀಯ ಹೇಳಿಕೆ ಮತ್ತು ಅವರ (ಬಿಜೆಪಿ) ಘೋಷಣೆಯಾಗಿತ್ತು’ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ದೇಶವೊಂದು ಇಬ್ಬರು ಪ್ರಧಾನಿಗಳು, ಎರಡು ಸಂವಿಧಾನ ಮತ್ತು ಎರಡು ಧ್ವಜಗಳನ್ನು ಹೊಂದಬಹುದೇ? ಹಿಂದೆ ಮಾಡಿದ್ದವರು ತಪ್ಪು ಮಾಡಿದರು; ಪ್ರಧಾನಿ ಮೋದಿ ಅದನ್ನು ಸರಿಪಡಿಸಿದ್ದಾರೆ. ದೇಶದಲ್ಲಿ ‘ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ’ (ಒಬ್ಬ ಪ್ರಧಾನಿ, ಒಂದು ಧ್ವಜ ಮತ್ತು ಒಂದು ಸಂವಿಧಾನ) ಇರಬೇಕು ಎಂದು 1950 ರಿಂದ ಹೇಳುತ್ತಾ ಬಂದಿದ್ದೇವೆ; ನಾವು ಅದನ್ನು ಮಾಡಿದ್ದೇವೆ’ ಎಂದರು.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ‘ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟದ ಘಟನೆಗಳು ನಡೆದಿವೆ. ಆದರೆ ಇಂದು ಅಂತಹ ಯಾವುದೇ ಘಟನೆಗಳಿಲ್ಲ. ಲಾಲ್ ಚೌಕ್‌ನಲ್ಲಿ ಮಾತ್ರವಲ್ಲ, ಕಾಶ್ಮೀರದ ಪ್ರತಿಯೊಂದು ದಾರಿಯಲ್ಲೂ ಭಾರತದ ಧ್ವಜ ಹಾರಿಸಲಾಗಿದೆ’ ಎಂದು ಹೇಳಿದರು.

‘ಜೆ-ಕೆ ತಿದ್ದುಪಡಿ ಮಸೂದೆ’ ಕುರಿತು:

ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ (ತಿದ್ದುಪಡಿ) ಮಸೂದೆ, 2023 ಅನ್ನು ಜುಲೈ 26, 2023 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ಮಸೂದೆಯು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಅನ್ನು ತಿದ್ದುಪಡಿ ಮಾಡುತ್ತದೆ. ಈ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಒಕ್ಕೂಟಕ್ಕೆ ಮರುಸಂಘಟನೆ ಮಾಡುವುದಾಗಿದೆ.

ಇದನ್ನೂ ಓದಿ; ‘ಮೈಚಾಂಗ್’ ಹೊಡೆತಕ್ಕೆ ತತ್ತರಿಸಿದ ಚೆನ್ನೈ; ಮೃತರ ಸಂಖ್ಯೆ 12ಕ್ಕೆ ಏರಿಕೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...