Homeಮುಖಪುಟ"ನಮ್ಮ ದೇಶಕ್ಕೆ ಮಾಡಿರುವುದು ದೇಶದ್ರೋಹ, ಯಾರನ್ನೂ ಬಿಡುವುದಿಲ್ಲ": ಮೋದಿ, ಶಾ, ಮೋಹನ್‌ ಭಾಗವತ್ ಹಾಗೂ ಗ್ಯಾನೇಶ್...

“ನಮ್ಮ ದೇಶಕ್ಕೆ ಮಾಡಿರುವುದು ದೇಶದ್ರೋಹ, ಯಾರನ್ನೂ ಬಿಡುವುದಿಲ್ಲ”: ಮೋದಿ, ಶಾ, ಮೋಹನ್‌ ಭಾಗವತ್ ಹಾಗೂ ಗ್ಯಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ಗುಡುಗು!

- Advertisement -
- Advertisement -

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ‘ವೋಟ್ ಚೋರಿ’ ವಿವಾದದ ವಿರುದ್ಧ ಇಂಡಿಯಾ ಒಕ್ಕೂಟ ನಡೆಸಿದ ಐತಿಹಾಸಿಕ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ ಸಾಗಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆಡಳಿತರೂಢ ಸರ್ಕಾರದ ಉನ್ನತ ನಾಯಕರು ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹೈಜಾಕ್ ಮಾಡಲಾಗಿದ್ದು, ಇದು ದೇಶಕ್ಕೆ ಎಸಗಿರುವ ಶುದ್ಧ ದೇಶದ್ರೋಹ ಎಂದು ಅವರು ಕಿಡಿಕಾರಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಕಗ್ಗೊಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ದೇಶಕ್ಕೆ ಮಾಡಿರುವುದು ದೇಶದ್ರೋಹ. ಅದು ನರೇಂದ್ರ ಮೋದಿ ಆಗಿರಲಿ, ಅಮಿತ್ ಶಾ ಆಗಿರಲಿ, ಜ್ಞಾನೇಶ್ ಕುಮಾರ್ ಆಗಿರಲಿ ಅಥವಾ ಮೋಹನ್ ಭಾಗವತ್ ಆಗಿರಲಿ – ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ನೋಡುತ್ತಿರಿ, ಈ ನಾಲ್ವರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳಲಾಗುತ್ತದೆ. ಯಾರನ್ನೂ ಬಿಡುವುದಿಲ್ಲ” ಎಂದು ಅವರು ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ಆಯೋಗ ಹಾಗೂ ಆಡಳಿತ ವ್ಯವಸ್ಥೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ದೇಶದ ಮೂರು ನೂರಕ್ಕೂ ಹೆಚ್ಚು ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಅವರ ಸಹಚರರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳಿದ್ದರು ಎಂದು ತಿಳಿಸಿದರು. ಆದರೆ, ಕೇವಲ 50 ಗಜಗಳಷ್ಟು ದೂರದಲ್ಲಿ ಚುನಾವಣಾ ಆಯೋಗದ ಕಚೇರಿ ಇದ್ದರೂ ಪೊಲೀಸರನ್ನು ಬಳಸಿ ಸಂಸದರನ್ನು ತಡೆಯಲಾಗಿದೆ ಎಂದು ಅವರು ದೂರಿದ್ದಾರೆ. “ನಾವು ಈ ದೇಶದ ಜನರನ್ನು ಪ್ರತಿನಿಧಿಸುವವರು. ಮುನ್ನೂರು ಸಂಸದರನ್ನು ಇಲ್ಲಿ ತಡೆದು ರಸ್ತೆಯಲ್ಲಿ ಕೂರಿಸಲಾಗಿದೆ. ಚುನಾವಣಾ ಆಯೋಗದ ಕೆಲಸವೆಂದರೆ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ನಡೆಸುವುದು, ಆದರೆ ಗ್ಯಾನೇಶ್ ಕುಮಾರ್ ಇಂದು ಭಯಭೀತರಾಗಿದ್ದಾರೆ. ದೇಶದ ಚುನಾಯಿತ ಪ್ರತಿನಿಧಿಗಳೇ ಆಯೋಗವನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ, ಪ್ರಜಾಪ್ರಭುತ್ವದ ಅರ್ಥವೇನು?” ಎಂದು ರಾಹುಲ್ ಗಾಂಧಿ ತೀವ್ರವಾಗಿ ಪ್ರಶ್ನಿಸಿದರು.

ಮತಗಳ ಕಳವು ಮತ್ತು ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮುಖ್ಯ ಚುನಾವಣಾ ಆಯುಕ್ತರ ಬೆಂಬಲದೊಂದಿಗೆ ದೇಶದ ಅಧಿಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ತಮ್ಮ ಈ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಡೆದಿರುವ ಈ ರಾಜಕೀಯ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫ್ರೀಡಂ ಪಾರ್ಕ್‌ಗೆ ಬರುತ್ತಿದೆ ಸಿಜೆಪಿ ದಂಡು; ಜನತಾ ನ್ಯಾಯಾಲಯದ ಮುಂದೆ ಎಸ್‌ಐಆರ್ ಅನ್ಯಾಯಗಳ ಅನವಾರಣ

ಇದೇ ತಿಂಗಳ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ 'ಜನತಾ ನ್ಯಾಯಾಲಯ' ವಿನೂತನ ಹೋರಾಟಕ್ಕೆ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಯ ದಂಡು ಬರುತ್ತಿದೆ. ರಾಜ್ಯದಲ್ಲಿ ಎಸ್‌ಐಆರ್‌ನಿಂದ ಆಗಿರುವ ಅನ್ಯಾಯಗಳ ಈ...

ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಮೈತ್ರಿಕೂಟ ಮೆರವಣಿಗೆ; ಬ್ಯಾರಿಕೇಡ್ ಹತ್ತಿದ ರಾಹುಲ್ ಗಾಂಧಿ

ಸಂಸತ್ ಭವನದಿಂದ ಚುನಾವಣಾ ಆಯೋಗದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ 'ಇಂಡಿಯಾ' ಮೈತ್ರಿಕೂಟದ ಸಂಸತ್ತಿನ ಸದಸ್ಯರನ್ನು ಮಾರ್ಗ ಮಧ್ಯದಲ್ಲೇ ತಡೆಯಲಾಗಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್...

ಕಾಸರಗೋಡು: ವಿಶ್ವವಿದ್ಯಾಲಯ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ನಾಯಕನ ಉಪಸ್ಥಿತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

'ವಂದೇ ಮಾತರಂ'ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ನಂಟಿನ ಸಂಘಟನೆಯೊಂದರ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಅವರ ಉಪಸ್ಥಿತಿಯನ್ನು ವಿರೋಧಿಸಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಅ.6) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮದಲ್ಲಿ ನಂದಕುಮಾರ್ ಅವರ...

ಜಂತರ್ ಮಂತರ್ ಪ್ರತಿಭಟನೆ: ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ದೆಹಲಿ ಪೊಲೀಸ್ ಅಧಿಕಾರಿಗೆ ಬಡ್ತಿ: ದೂರುದಾರರನ್ನೇ ಎರಡು ಬಾರಿ ಬಂದಿಸಿದ್ದ ಪೊಲೀಸರು

ನವದೆಹಲಿ: ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಅಧಿಕಾರಿ ವಿವೇಕ್ ಭಗತ್ ಅವರನ್ನು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಅಡಿಷನಲ್ ಡಿಸಿಪಿ) ಹುದ್ದೆಗೆ ಬಡ್ತಿ ನೀಡಿರುವುದು ತೀವ್ರ...

ಪತ್ರಕರ್ತೆ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಎಸಿಪಿಗೆ ಹೆಚ್ಚುವರಿ ಡಿಸಿಪಿ ಹುದ್ದೆ; ವಿರೋಧದ ಬಳಿಕ ಆದೇಶಕ್ಕೆ ತಡೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರಿಗೆ ನೀಡಲಾಗಿದ್ದ...

ಬಿಜೆಪಿ ಸದಸ್ಯರಾಗಿರುವವರು ಮಾತ್ರ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ನಂಬಿದೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ವಾಗ್ದಾಳಿ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಆಯೋಗದ ವಿವಾದಾತ್ಮಕ ಕಾರ್ಯವೈಖರಿಯನ್ನು ಖಂಡಿಸಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ವೇಳೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್...

ದೆಹಲಿಯಲ್ಲಿ ಎಸ್‌ಐಆರ್ ಅಕ್ರಮಗಳ ವಿರುದ್ಧ ‘ಇಂಡಿಯಾ’ ಸಂಸದರ ಜಾಥಾ: ಗ್ಯಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಪ್ರಮುಖ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮಗಳು ನಡೆಯುತ್ತಿದ್ದು, ಅರ್ಹ ಮತದಾರರ...

SIR ಅಕ್ರಮಗಳ ವಿರುದ್ಧ ಅಕ್ಟೋಬರ್‌ 8ರಂದು ‘ಜನತಾ ನ್ಯಾಯಾಲಯ’: ಮತ ಹಕ್ಕು ರಕ್ಷಣೆಗೆ ವಿನೂತನ ಹೋರಾಟ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅಕ್ರಮಗಳ ವಿರುದ್ಧ ಮತ್ತು ಎಸ್‌ಐಆರ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಅಕ್ಟೋಬರ್‌‌ 8ರಂದು 'ಜನತಾ ನ್ಯಾಯಾಲಯ' ಎಂಬ...

‘ಫಾರಂ 6 ಬದಲಾವಣೆ ಅನುಮೋದಿಸಿಲ್ಲ’: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷಗಳ ಆರೋಪಕ್ಕೆ ಮತ್ತಷ್ಟು ಬಲ ತುಂಬಿದ ಸುಪ್ರೀಂ ಹೇಳಿಕೆ

ನವದೆಹಲಿ: ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಬಳಸುವ ನಮೂನೆ 6ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ಹೇಳಿಕೆ ಇದೀಗ ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಮತದಾರರ ಪಟ್ಟಿಯ...

ಬಂಗಾಳ ಟ್ರಿಬ್ಯೂನಲ್ ನ್ಯಾಯಾಧೀಶರಿಂದ ಚುನಾವಣಾ ಆಯೋಗದ ಪೋರ್ಟಲ್ ವೈಫಲ್ಯದ ಬಗ್ಗೆ ಗಂಭೀರ ಆರೋಪ: ‘ನೋಡೀಸ್ ಜಾರಿ, ವಿಚಾರಣೆ ಅಥವಾ ಮತದಾರರ ಹಕ್ಕು ಮರುಸ್ಥಾಪನೆ ಅಸಾಧ್ಯ!

ಪ್ರಮುಖ ರಾಷ್ಟ್ರೀಯ ದಿನಪತ್ರಿಕೆ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿರುವಂತೆ, ಪಶ್ಚಿಮ ಬಂಗಾಳದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅಳಿಸಲ್ಪಟ್ಟ ಲಕ್ಷಾಂತರ ಮತದಾರರ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಸುಪ್ರೀಂ ಕೋರ್ಟ್...