Homeಮುಖಪುಟಅಪಾಯದಲ್ಲಿರುವುದು ಪ್ರಜಾತಂತ್ರವಲ್ಲ, ವಂಶಾಡಳಿತ ರಾಜಕಾರಣ ಎಂದ ಅಮಿತ್ ಶಾ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವೇ?

ಅಪಾಯದಲ್ಲಿರುವುದು ಪ್ರಜಾತಂತ್ರವಲ್ಲ, ವಂಶಾಡಳಿತ ರಾಜಕಾರಣ ಎಂದ ಅಮಿತ್ ಶಾ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲವೇ?

- Advertisement -
- Advertisement -

ಉತ್ತರ ಪ್ರದೇಶದ ಕೌಶಂಭಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಪಾಯದಲ್ಲಿರುವುದು ಪ್ರಜಾತಂತ್ರವಲ್ಲ, ವಂಶಾಡಳಿತ ರಾಜಕಾರಣ ಮತ್ತು ಜಾತಿವಾದಿ ಎಂದಿದ್ದಾರೆ.

ರಾಹುಲ್ ಗಾಂಧಿ ಅನರ್ಹ ಪ್ರಕರಣದಲ್ಲಿ ಸದನ ನಡೆಯಲು ಬಿಡದ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಈ ಕೃತ್ಯಕ್ಕಾಗಿ ಜನ ನಿಮ್ಮನ್ನು ಕ್ಷಮಿಸುವುದಿಲ್ಲ. 2024ರಲ್ಲಿಯೂ ಸರ್ವಜನರ ಕಲ್ಯಾಣಕ್ಕಾಗಿ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.

ಸದಾ ವಂಶಾಡಳಿತದ ವಿರುದ್ಧ ಬಿಜೆಪಿ ಕಿಡಿಕಾರುತ್ತದೆ. ಆದರೆ ಅವರಲ್ಲಿ ಕುಟುಂಬ ರಾಜಕಾರಣವಿಲ್ಲವೇ ಎಂಬ ಪ್ರಶ್ನೆಗೆ ಮೌನ ವಹಿಸುತ್ತದೆ. ದೇಶದ ವಂಶಾಡಳಿತದ ವಿವರ ಇಲ್ಲಿದೆ.

2009 ರಲ್ಲಿ ಶೇ. 30 ರಷ್ಟು ವಂಶಪಾರಂಪರ್ಯದ ಸದಸ್ಯರು ಲೋಕಸಭೆಗೆ ಆಯ್ಕೆಯಾದರೆ 2014 ರಲ್ಲಿ ಶೇ. 22ಕ್ಕೆ ಇಳಿದಿತ್ತು. ಈ ಕುಟುಂಬ ರಾಜಕಾರಣ ಎಂಬುದು ನಿಜಕ್ಕೂ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಮಾರಕ ಅಂಶವಾಗಿದೆ. ಆದರೆ ಕೇವಲ ಕಾಂಗ್ರೆಸ್‌ನಲ್ಲಿ, ಅಥವಾ ಪ್ರಾದೇಶಿಕ ಪಕ್ಷಗಳಲ್ಲಿ ಮಾತ್ರ ವಂಶಾಡಳಿತ ಇದೆ ಎಂದರೆ ತಪ್ಪಾಗುತ್ತದೆ. ಏಕೆಂದರೆ 2014ರಲ್ಲಿ ಬಿಜೆಪಿಯಿಂದ ಶೇ. 44 ರಷ್ಟು ಕುಟುಂಬ ರಾಜಕಾರಣದ ಸದಸ್ಯರು ಲೋಕಸಭೆಗೆ ಆಯ್ಕೆಯಾಗಿದ್ದರು ಎಂದು ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ವಿದ್ವಾಂಶ ರೋಮೈನ್ ಕಾರ್ಲೆವಾನ್ ಎಂಬುವವರ ಅಧ್ಯಯನ ತೆರೆದಿಟ್ಟಿದೆ.

ಮಾರ್ಚ್ 2019 ರಲ್ಲಿ ಬ್ಲೂಮ್‌ಬರ್ಗ್ ಕ್ವಿಂಟ್ ಪ್ರಕಟಿಸಿದ ಇಂಡಿಯಾ ಸ್ಪೆಂಡ್ ಅಧ್ಯಯನದಂತೆ 1999 ರಿಂದ ಕಾಂಗ್ರೆಸ್ 36 ವಂಶಾಡಳಿತದ ಸಂಸತ್ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದರೆ ಬಿಜೆಪಿಯು ಸಹ 31 ಸದಸ್ಯರನ್ನು ಆಯ್ಕೆ ಮಾಡಿತ್ತು!. ಹಾಗಾಗಿ ಎಲ್ಲಾ ಪಕ್ಷದ ಮತ್ತು ಎಲ್ಲಾ ರೀತಿಯ ಕುಟುಂಬ ರಾಜಕಾರಣವೂ ಸಹ ಖಂಡಿಸಬೇಕು.

ಒಂದೆಡೆ ಮೋದಿಯವರು ಮತ್ತು ಬಿಜೆಪಿ ವಂಶಾಡಳಿತ ರಾಜಕಾರಣವನ್ನು ವಿರೋಧಿಸುತ್ತಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುತ್ತಾರೆ. ಆದರೆ ಅವರ ಪಕ್ಷದಲ್ಲಿಯೇ ವಂಶವಾಹಿನಿ ರಾಜಕಾರಣ ಡಾಳಾಗಿ ಎದ್ದು ಕಾಣುತ್ತದೆ. ಅದರ ಬಗ್ಗೆ ಮಾತ್ರ ಅವರು ಮೌನ ವಹಿಸುತ್ತಾರೆ. ಇದು ಅವರ ಇಬ್ಬಂದಿತನವನ್ನು ತೋರಿಸುತ್ತದೆ.

2019ರಲ್ಲಿ ಬಿಜೆಪಿಯು ಲೋಕಸಭೆಯಲ್ಲಿ 303 ಸಂಸದರು ಮತ್ತು ರಾಜ್ಯಸಭೆಯಲ್ಲಿ 85 ಸದಸ್ಯರನ್ನು ಹೊಂದಿತ್ತು. ಎರಡೂ ಸೇರಿ ಒಟ್ಟು 388 ಸಂಸದರಲ್ಲಿ 45 ಸಂಸದರು ವಂಶಾಡಳಿತ ರಾಜಕಾರಣದಿಂದಲೇ ಬಂದಿದ್ದರು. ಅಂದರೆ ಸುಮಾರು ಶೇ. 11 ರಷ್ಟು ಎಂದು ದಿ ಪ್ರಿಂಟ್ ವರದಿ ಮಾಡಿತ್ತು.

ಬಿಜೆಪಿಯ ವಂಶಾಡಳಿತ ರಾಜಕಾರಣದ ಪಟ್ಟಿ ಇಲ್ಲಿದೆ

ಜೆ.ಪಿ ನಡ್ಡಾ

ಸದ್ಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಇವರು ಜಬಲ್‌ ಪುರದ ಮಾಜಿ ಸಂಸದೆ ಜಯಶ್ರೀ ಬ್ಯಾನರ್ಜಿಯವರ ಅಳಿಯರಾಗಿದ್ದಾರೆ.

ಬಸವರಾಜ ಬೊಮ್ಮಾಯಿ

ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾರೆ. ಅವರ ತಂದೆ ಸಹ ಹಿಂದೆ ಕರ್ನಾಟಕದಲ್ಲಿ ಸಿಎಂ ಹುದ್ದೆ ಅಲಂಕರಿಸಿದ್ದರು.

ಪೆಮಾ ಖಂಡು

ಹಾಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿರುವ ಇವರ ರಾಜ್ಯದ ಮಾಜಿ ಸಿಎಂ ದೋರ್ಜಿ ಖಂಡುರವರ ಪುತ್ರರಾಗಿದ್ದಾರೆ.

ದೇವೇಂದ್ರ ಫಡ್ನವೀಸ್

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರವರ ತಂದೆ ಗಂಗಾಧರ ಪಂತ್ ಫಡ್ನವೀಸ್‌ರವರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ದೇವೇಂದ್ರ ಫಡ್ನವೀಸ್‌ರವರ ಚಿಕ್ಕಮ್ಮ ಶೋಭಾ ಫಡ್ನವಿಸ್ ರಾಜ್ಯ ಸಚಿವರಾಗಿದ್ದರು.

ಸುವೇಂಧು ಅಧಿಕಾರಿ

ಪಶ್ಚಿಮ ಬಂಗಾಳದ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿಯವರ ಆಪ್ತನಾಗಿದ್ದ ಸುವೇಂಧು ಅಧಿಕಾರಿಯನ್ನು ಬಿಜೆಪಿ ಸೆಳೆದುಕೊಂಡಿತು. ಅವರ ತಂದೆ ಶಿಶಿರ್ ಅಧಿಕಾರಿ ಕೇಂದ್ರ ಸಚಿವರಾಗಿದ್ದವರು. ಈಗ ಸುವೇಂಧು ಬಂಗಾಳದ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ಮೋದಿ ಕ್ಯಾಬಿನೆಟ್‌ನಲ್ಲಿರುವ ವಂಶಾಡಳಿತದಿಂದ ಬಂದ ಮಂತ್ರಿಗಳು

ಜ್ಯೋತಿರಾಧಿತ್ಯ ಸಿಂಧಿಯಾ

ಈಗ ವಿಮಾನಯಾನ ಸಚಿವರಾಗಿದ್ದಾರೆ. ಅವರ ತಂದೆ ಮಾಧವರಾವ್‌ ಸಿಂಧಿಯಾ ಹಿಂದೆ ಕೇಂದ್ರ ಸಚಿವರಾಗಿದ್ದರು.

ಅನುರಾಗ್ ಠಾಕೂರ್

ಈಗ ಕ್ರೀಡೆ ಮತ್ತು ಯುವಜನರ ಸಬಲೀಕರಣ ಸಚಿವರಾಗಿದ್ದಾರೆ. ಅವರ ತಂದೆ ಪ್ರೇಮ್ ಕುಮಾರ್ ಧುಮಾಲ್ ಹಿಂದೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ಪಿಯೂಷ್ ಗೋಯಲ್

ಈಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರು. ಅವರು ಮಾಜಿ ಬಿಜೆಪಿ ರಾಷ್ಟ್ರೀಯ ಖಜಾಂಚಿ ಮತ್ತು ಕೇಂದ್ರ ಸಚಿವ ದಿವಂಗತ ವೇದ್ ಪ್ರಕಾಶ್ ಗೋಯಲ್ ಅವರ ಪುತ್ರ.

ಧರ್ಮೇಂದ್ರ ಪ್ರಧಾನ್

ಸದ್ಯ ಕೇಂದ್ರ ಶಿಕ್ಷಣ ಸಚಿವ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿರುವ ಪ್ರಧಾನ್ ಅವರು ಬಿಜೆಪಿ ನಾಯಕ ದೇಬೇಂದ್ರ ಪ್ರಧಾನ್ ಅವರ ಪುತ್ರರಾಗಿದ್ದಾರೆ. ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಕಿರಣ್ ರಿಜಿಜು

ಇತ್ತೀಚೆಗೆ ಕಾನೂನು ಮತ್ತು ನ್ಯಾಯ ಸಚಿವರಾಗಿರುವ ಇವರು ಅರುಣಾಚಲ ಪ್ರದೇಶದ ಮೊದಲ ಹಂಗಾಮಿ ಸ್ಪೀಕರ್ ಆಗಿದ್ದ ರಿಂಚಿನ್ ಖರು ಅವರ ಪುತ್ರರಾಗಿದ್ದಾರೆ.

ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಮಂತ್ರಿಯಾಗಿರುವ ಇವರ ತಂದೆ ಆಂಧ್ರಪ್ರದೇಶದಲ್ಲಿ ಸಚಿವರಾಗಿದ್ದರು. ಇವರ ಅತ್ತೆ ಶಾಸಕಿಯಾಗಿದ್ದರು. ಪತಿ ಪರಕಾಲ ಪ್ರಭಾಕರ್ ಅವರು ಕಾಂಗ್ರೆಸ್‌ನಲ್ಲಿದ್ದರು ಮತ್ತು ಆಂಧ್ರಪ್ರದೇಶದ ನರಸಾಪುರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಫಲರಾದರು.

ಸುಷ್ಮಾ ಸ್ವರಾಜ್

ದೆಹಲಿಯ ಮಾಜಿ ಸಿಎಂ ಆಗಿರುವ ಸುಷ್ಮಾ ಸ್ವರಾಜ್‌ರವರ ಪತಿ ಮಿಜೋರಾಂನ ರಾಜ್ಯಪಾಲರಾಗಿದ್ದರು.

ಜಯ್ ಶಾ

ಗೃಹ ಸಚಿವ ಅಮಿತ್ ಶಾರವರ ಮಗ ಜಯ್‌ ಶಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದಾರೆ ಹಾಗೂ ಐಸಿಸಿ ಅಧ್ಯಕ್ಷರಾಗಿದ್ದಾರೆ.

ಬಿಜೆಪಿಯ ವಂಶಾಡಳಿತ ಮುಂದುವರೆಸಿರುವ ಸಂಸತ್ ಸದಸ್ಯರು 

ರವಿಶಂಕರ್ ಪ್ರಸಾದ್: ಮಾಜಿ ಸಚಿವರಾಗಿರುವ ಇವರು, ಕಾಂಗ್ರೆಸ್ ಸಂಸದರಾಗಿದ್ದ ರಾಜೀವ್ ಶುಕ್ಲಾರವರ ಭಾಮೈದ.

ದುಷ್ಯಂತ್ ಸಿಂಗ್: ಸಂಸದರಾಗಿರುವ ಇವರು ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇರವರ ಪುತ್ರ.

ಬಿ.ವೈ. ರಾಘವೇಂದ್ರ: ಸಂಸದರಾಗಿರುವ ಇವರು ಕರ್ನಾಟಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಮಗ. ಅವರ ಮತ್ತೊಬ್ಬ ಪುತ್ರ ಬಿ.ವೈ ವಿಜಯೇಂದ್ರ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಮಂಗಳಾ ಅಂಗಡಿ: ಇವರ ಪತಿ ಸುರೇಶ್ ಅಂಗಡಿ ಬೆಳಗಾವಿ ಸಂಸದರಾಗಿದ್ದರು. ಅವರು ಮೃತಪಟ್ಟ ನಂತರ ಸಂಸದರಾಗಿದ್ದಾರೆ.

ರಾಜ್‌ಬೀರ್ ಸಿಂಗ್: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್‌ರವರ ಪುತ್ರ.

ಪ್ರವೇಶ್ ವರ್ಮಾ: ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ.

ಪೂನಂ ಮಹಾಜನ್: ಮಾಜಿ ಕೇಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರಿ.

ಪ್ರೀತಮ್ ಮುಂಡೆ: ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪುತ್ರಿ.

ರಕ್ಷಾ ಖಡ್ಸೆ: ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಏಕ್‌ನಾಥ್‌ ಖಡ್ಸೆಯವರ ಸೊಸೆ.

ಸುಜೈ ವಿಖೆ ಪಾಟೀಲ್: ಮಹಾರಾಷ್ಟ್ರದ ಮಾಜಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ರವರ ಪುತ್ರ.

ವರುಣ್ ಗಾಂಧಿ: ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಪುತ್ರ.

ಸನ್ನಿ ಡಿಯೋಲ್: ಅವರ ತಂದೆ ಧರ್ಮೇಂದ್ರ ರಾಜಸ್ಥಾನದ ಬಿಜೆಪಿ ಸಂಸದರಾಗಿದ್ದರು.

ರೀಟಾ ಬಹುಗುಣ ಜೋಶಿ: ಇವರು ಉತ್ತರ ಪ್ರದೇಶದ ಮಾಜಿ ಸಿಎಂ ಹೇಮಾವತಿ ನಂದನ್ ಬಹುಗುಣ ಅವರ ಪುತ್ರಿ.

ದಿಯಾ ಕುಮಾರಿ: ಅವರ ಅಜ್ಜಿ ಮಹಾರಾಣಿ ಗಾಯತ್ರಿ ದೇವಿ ಸಂಸದರಾಗಿದ್ದರು.

ಸಂಗೀತಾ ಸಿಂಗ್ ದೇವು: ಅವರ ಪತಿ ಕನಕ್ ವರ್ಧನ್ ಸಿಂಗ್ ದೇವ್ ಅವರು ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

ಜಯಂತ್ ಸಿನ್ಹಾ: ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಪುತ್ರ. (ಈಗ ಇವರು ಟಿಎಂಸಿಯಲ್ಲಿದ್ದಾರೆ)

ಸಂಘಮಿತ್ರ ಮೌರ್ಯ: ಮಾಜಿ ಯುಪಿ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ. (ಈಗ ಇವರು ಸಮಾಜವಾದಿ ಪಕ್ಷದಲ್ಲಿದ್ದಾರೆ)

ಅಭಿಷೇಕ್ ಸಿಂಗ್: ಛತ್ತೀಸ್‌ಘಡದ ಮಾಜಿ ಮುಖ್ಯಮಂತ್ರಿಗಳಾದ ರಮಣ್ ಸಿಂಗ್‌ರವರ ಪುತ್ರ. ಮಾಜಿ ಲೋಕಸಭಾ ಸದಸ್ಯರು

ರಾಜ್ಯಸಭಾ ಸದಸ್ಯರಾಗಿರುವ ವಂಶವಾಹಿನಿ ರಾಜಕಾರಣದಲ್ಲಿರುವವರು

ಉದಯರಾಜೇ ಭೋಸಲೆಯವರ ಸಹೋದರ ಸಂಬಂಧಿ ಶಿವೇಂದ್ರ ರಾಜೆಯವರು ಮಹಾರಾಷ್ಟ್ರದ ಶಾಸಕರಾಗಿದ್ದಾರೆ.

ವಿವೇಕ್ ಠಾಕೂರ್ ರವರ ತಂದೆ ಐದು ಬಾರಿ ಸಂಸದರು ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ಸಚಿವರಾಗಿದ್ದರು.

ನಬಮ್ ರೆಬಿಯಾ ಕಾಂಗ್ರೆಸ್‌ನಿಂದ ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಸ್ಪೀಕರ್ ಆಗಿದ್ದರು. ಅವರ ಸಹೋದರ ನಬಮ್ ತುಕಿ ಸಿಎಂ ಆಗಿ ಸೇವೆ ಸಲ್ಲಿಸಿದರು. ರೆಬಿಯಾ ಜೂನ್ 2020 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ರಾಜ್ಯಸಭೆ ಪ್ರವೇಶಿಸಿದರು.

ನೀರಜ್ ಶೇಖರ್ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರರಾದ ಇವರು ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸಂಸದರಾಗಿದ್ದರು ಆದರೆ 2019 ರಲ್ಲಿ ಬಿಜೆಪಿಗೆ ಹಾರಿ ಮತ್ತೆ ಮೇಲ್ಮನೆ ಸದಸ್ಯರಾದರು.

ಇದಲ್ಲದೆ ಉತ್ತರ ಪ್ರದೇಶದ ಚುನಾವಣೆಗೆ ಮುನ್ನವೆ ಕಾಂಗ್ರೆಸ್ ನಾಯಕ ಜಿತೇಂದ್ರ ಪ್ರಸಾದ್‌ರವರ ಪುತ್ರ ಜಿತಿನ್ ಪ್ರಸಾದ್‌ರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿತು.

ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗೀಯರವರ ಪುತ್ರ ಆಕಾಶ್ ವಿಜಯವರ್ಗೀಯ ಉತ್ತರ ಪ್ರದೇಶದ ಶಾಸಕರಾಗಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕ, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಎ.ಕೆ ಆಂಟನಿಯವರ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರಿದ್ದಾರೆ.

ಕರ್ನಾಟಕದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಸಂಸದ ತೇಜಸ್ವಿ ಸೂರ್ಯರವರ ದೊಡ್ಡಪ್ಪ ರವಿ ಸುಬ್ರಮಣ್ಯ ಬಸವನಗುಡಿ ಶಾಸಕರು. ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್‌ರವರ ಅಳಿಯ ಹರ್ಷವರ್ಧನ್ ನಂಜನಗೂಡಿನ ಶಾಸಕರು.

ಇದಿಷ್ಟು ರಾಷ್ಟ್ರಮಟ್ಟದಲ್ಲಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಚಿವರು ಮತ್ತು ಲೋಕಸಭೆ – ರಾಜ್ಯ ಸಭೆಯ ಸಂಸದರಾಗಿರುವ ಕುಟುಂಬ ರಾಜಕಾರಣದ ಹಿನ್ನೆಲೆ ಇರುವ ಬಿಜೆಪಿ ರಾಜಕಾರಣಿಗಳ ಪಟ್ಟಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿಯೂ ಇದೇ ಮುಂದುವರೆದಿದೆ. ನಾವು ರಾಜ್ಯಗಳ ವಿಶ್ಲೇಷಣೆ ಮಾಡಿದರೆ ಇನ್ನಷ್ಟು ಸಿಗಬಹುದು. ಏನೇ ಆದರೂ ಇದನ್ನು ಕಡಿಮೆ ಮಾಡುತ್ತಾ, ಜನಸಾಮಾನ್ಯರು ಶಾಸನ ರೂಪಿಸುವ ಸ್ಥಾನಗಳಿಗೆ ಹೋಗಬೇಕಿದೆ.

ಇದನ್ನೂ ಓದಿ: ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ: ಕಾಂಗ್ರೆಸ್ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತನ ‘ಪಾಕಿಸ್ತಾನ್ ಜಿಂದಾಬಾದ್’ ಪ್ರಕರಣ ರದ್ದು! ಪ್ರತಿಭಟನೆ ವೇಳೆ ‘ಬಾಯಿತಪ್ಪಿ ಬಂದ ಮಾತು’ ಎಂಬ ವಾದ ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್!

ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕಾರ್ಯಕರ್ತನೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯಿತಪ್ಪಿ...

“ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು”: ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಜೆಎನ್‌ಯುನಲ್ಲಿ 500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರ ಮುಷ್ಕರ

ನವದೆಹಲಿ: ಕಾನೂನುಬಾಹಿರ ವೇತನ ಕಡಿತ, ಶಾಸನಬದ್ಧ ಬೋನಸ್ ಪಾವತಿಸದಿರುವುದು, ಕಾರ್ಮಿಕರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸುವುದು ಮತ್ತು ಸಿಬ್ಬಂದಿ ಕೊರತೆಯಿಂದ ಹೆಚ್ಚುತ್ತಿರುವ ಕೆಲಸದ ಹೊರೆ ಸೇರಿದಂತೆ ಹಲವು ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳನ್ನು ಖಂಡಿಸಿ ದೆಹಲಿಯ ಜವಾಹರಲಾಲ್...

ಅಮೆರಿಕ ಮಧ್ಯಂತರ ಚುನಾವಣೆ | ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಸಾಧಿಸಿದ ಡೆಮಾಕ್ರಟಿಕ್ ಪಕ್ಷ : ಅಧ್ಯಕ್ಷ ಟ್ರಂಪ್‌ಗೆ ತೀವ್ರ ಮುಖಭಂಗ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ (US Midterm Elections 2026) ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ 'ಬ್ಲೂ ವೇವ್' (ನೀಲಿ ಅಲೆ) ಸೃಷ್ಟಿಸಿದ್ದು, ಸಂಸತ್ತಿನ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ)...

ಭಾರತಕ್ಕೆ ಬಿಗ್ ರಿಲೀಫ್ ಕೊಟ್ಟ ಇರಾನ್: ಹೊರ್ಮುಜ್ ಜಲಸಂಧಿ ನಿರ್ಬಂಧದಿಂದ ಭಾರತೀಯ ನೌಕೆಗಳಿಗೆ ವಿನಾಯಿತಿ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ನಡುವಿನ ಶೀತಲ ಸಮರ ಹಾಗೂ ಅಮೆರಿಕದ ಮಿಲಿಟರಿ ಹಾಜರಾತಿಯಿಂದಾಗಿ ತೈಲ ಸಾರಿಗೆ ಮಾರ್ಗಗಳಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ, ಇರಾನ್ ಸರ್ಕಾರವು ಜಾಗತಿಕ ವಾಣಿಜ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು...

ಗುಜರಾತ್: ‘ತಪ್ಪಿತಸ್ಥನೆಂದು ಸಾಬೀತುಪಡಿಸಲು ಪುರಾವೆಗಳಿಲ್ಲ’: ಗೋಮಾಂಸ ಸಂಗ್ರಹ ಆರೋಪದ ಮುಸ್ಲಿಂ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಗೋಮಾಂಸ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಸುಮಾರು ಹತ್ತು ತಿಂಗಳಿನಿಂದ ಜೈಲಿನಲ್ಲಿದ್ದ ಗುಜರಾತ್‌ನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಯ ವಿರುದ್ಧ ಈ ಹಿಂದೆ ದಾಖಲಾಗಿದ್ದ...

ದೆಹಲಿಯ ‘ವೋಟ್ ಚೋರಿ’ ರ‍್ಯಾಲಿಗೆ ಗೈರು: ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ 60 ಪ್ರಮುಖ ಪದಾಧಿಕಾರಿಗಳು ಅಮಾನತು!

ಅಖಿಲ ಭಾರತ ಯುವ ಕಾಂಗ್ರೆಸ್ ನಾಯಕತ್ವವು ಕಠಿಣ ನಿರ್ಧಾರ ತಳೆದಿದ್ದು, ರಾಷ್ಟ್ರೀಯ ನಾಯಕತ್ವ ನೀಡಿದ್ದ ಕರೆಗೆ ಗೈರುಹಾಜರಾದ ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಬರೋಬ್ಬರಿ 60 ಪ್ರಮುಖ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ...

ಮೂರು ಕೋಟಿ ಒಳನುಸುಳುಕೋರರು ಎಲ್ಲಿಂದ ಬಂದರು?: ‘ವೋಟ್ ಚೋರಿ’ ಬಗ್ಗೆ ಮುಕ್ತ ಚರ್ಚೆಗೆ ಬನ್ನಿ: ಮೋದಿ-ಅಮಿತ್ ಶಾಗೆ ಖರ್ಗೆ ಸವಾಲು

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನದ (ವೋಟ್ ಚೋರಿ) ಆರೋಪಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ತೋರಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿರುವ ಮುಕ್ತ ಚರ್ಚೆಯ ಸವಾಲನ್ನು ಸ್ವೀಕರಿಸಿ ಎಂದು ಕಾಂಗ್ರೆಸ್ ರಾಷ್ಟ್ರೀಯ...

ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದುವುದನ್ನು ದಂಡನೀಯವಾಗಿಸುವ ಕಾನೂನುಗಳು ಪ್ರಸ್ತುತತೆ ಕಳೆದುಕೊಂಡಿವೆ : ಸುಪ್ರೀಂ ಕೋರ್ಟ್

ಭಾರತದ ಕುಸಿಯುತ್ತಿರುವ ಫಲವತ್ತತೆ ದರವನ್ನು (fertility rate) ಗಮನದಲ್ಲಿಟ್ಟುಕೊಂಡು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಕಾನೂನುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್...

ಅಮೆರಿಕ ಮಧ್ಯಂತರ ಚುನಾವಣೆ : ಜಗತ್ತಿನ ಗಮನ ಸೆಳೆದ ಅಬ್ದುಲ್ ಸಯೀದ್, ಡೆಬ್ ಹಾಲೆಂಡ್ ಮತ್ತು ಇಲ್ಹಾನ್ ಉಮರ್ ಆಯ್ಕೆ!

ಅಮೆರಿಕದ ರಾಜಕೀಯ ಅಖಡಾದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 2026ರ ಮಧ್ಯಂತರ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಹೊರಬಿದ್ದಿದ್ದು, ಡೆಮಾಕ್ರಟಿಕ್ ಪಕ್ಷದ ಸುಧಾರಣಾವಾದಿ ನಾಯಕರ ಜಯಯಾನ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ. ಅಸೋಸಿಯೇಟೆಡ್...

ನ್ಯಾಯಾಲಯದ ಆಕ್ಷೇಪದ ಬಳಿಕವೂ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸಿ ಎಂದ ಚು. ಆಯೋಗ : ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಪ್ರಶಾಂತ್ ಭೂಷಣ್

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿರುವ ಅರ್ಜಿದಾರರು, ಡಿಲೀಟ್ ಆದ ಮತದಾರರು ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಫಾರಂ 6 ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಇತ್ತೀಚೆಗೆ ನೀಡಿರುವ...