Homeಬಹುಜನ ಭಾರತಜನಕೋಟಿಯ ಮಿದುಳು ಹೊಕ್ಕಿರುವ ವೈರಸ್ ಕತೆಯೇನು? - ಡಿ.ಉಮಾಪತಿ

ಜನಕೋಟಿಯ ಮಿದುಳು ಹೊಕ್ಕಿರುವ ವೈರಸ್ ಕತೆಯೇನು? – ಡಿ.ಉಮಾಪತಿ

ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಕೊರೋನಾ ರೀತಿಯೇ ಕೆಲಸ ಮಾಡುತ್ತವೆ.

- Advertisement -
- Advertisement -

ಪುನರುತ್ಪಾದನೆಯಾಗಿ ಹರಡಲು ವೈರಸ್‌ಗಳಿಗೆ ಜೀವಿ ದೇಹವೊಂದು ಬೇಕೇ ಬೇಕಂತೆ. COVID-19 ಕೂಡ ಈ ಮಾತಿಗೆ ಹೊರತಲ್ಲ. ಮೂಲಭೂತವಾಗಿ ವೈರಸ್ ಒಂದು ಆನುವಂಶಿಕ ವಸ್ತು. ತಂತಾನೇ ಏನನ್ನೂ ಮಾಡಲು ಸಾಧ್ಯವಿಲ್ಲ. ಪುನರುತ್ಪಾದನೆ ಮಾಡಲು ಅದು ಜೀವಿಯೊಂದರ ದೇಹಕ್ಕೆ ಲಗ್ಗೆ ಹಾಕಲೇಬೇಕು. ಜೀವಿಯ ದೇಹ ಸಿಗದಿದ್ದರೆ ಇಂತಿಷ್ಟು ದಿನಗಳೊಳಗಾಗಿ ಸತ್ತು ಹೋಗುತ್ತದೆ. ವೈರಸ್ ಬ್ಯಾಕ್ಟೀರಿಯಾದಂತಲ್ಲ. ಅದಕ್ಕೆ ತಿನ್ನಲು, ಕುಡಿಯಲು ಏನೂ ಬೇಕಿಲ್ಲ. ಏನನ್ನೂ ವಿಸರ್ಜಿಸಬೇಕಿಲ್ಲ, ಬಿಡುವು ಇಲ್ಲವೇ ವಿಶ್ರಾಂತಿಯ ಅಗತ್ಯ ಮೊದಲೇ ಇಲ್ಲ. ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ತನ್ನ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತ ಹೋಗುವುದೊಂದೇ ಅದರ ಏಕೈಕ ಕೆಲಸ. ಹೀಗಾಗಿ ಅದಕ್ಕೆ ಬೇಕಾದದ್ದೆಲ್ಲ ಜೀವಿಯೊಂದರ ದೇಹ.

ಕೊರೋನ ವೈರಸ್ ಲಗ್ಗೆ ಹಾಕಿದ್ದು ಮನುಷ್ಯ ದೇಹಕ್ಕೆ. ಮನುಷ್ಯ ದೇಹ ಪ್ರವೇಶಿಸಿ ಜೀವಕೋಶವೊಂದಕ್ಕೆ ಅಂಟಿಕೊಂಡು ಪುನರುತ್ಪಾದನೆಯಾಗುತ್ತವೆ ಈ ವೈರಸ್. ವೈರಸ್‌ಗಳ ಸಂಖ್ಯೆಯು ನಿರ್ದಿಷ್ಟ ಜೀವಕೋಶವು ಸಲಹಲಾರದಷ್ಟು ಹೆಚ್ಚಿದ ನಂತರ ಪಕ್ಕದ ಮತ್ತೊಂದು ಜೀವಕೋಶದ ಮೇಲೆ ದಾಳಿ ಮಾಡುತ್ತವೆ ಎನ್ನುತ್ತಾರೆ ಜೀವಿ ವಿಜ್ಞಾನಿಗಳು.

ಮನುಷ್ಯನ ಭಾವ ಮತ್ತು ಬುದ್ಧಿಯ ಮೇಲೆ ದಾಳಿ ನಡೆಸುವ ದ್ವೇಷ- ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳು ಕೂಡ ಥೇಟ್ ಹೀಗೆಯೇ ಕೆಲಸ ಮಾಡುತ್ತವೆ. ಬುದ್ಧಿ ಮತ್ತು ಭಾವವನ್ನು ಭ್ರಷ್ಟಗೊಳಿಸುವ ಈ ವೈರಾಣುಗಳು ಮನುಷ್ಯನಲ್ಲಿನ ಮನುಷ್ಯತ್ವವನ್ನು ತಿಂದು ಹಾಕುತ್ತವೆ. ಮನುಷ್ಯತ್ವವನ್ನು ಕಳೆದುಕೊಂಡ ಮೆದುಳುಗಳ ದೂರನಿಯಂತ್ರಣ ಮಾಡುವುದು ಸಲೀಸು.

ಕಳೆದ ಐದಾರು ವರ್ಷಗಳಿಂದ ನಮ್ಮ ಪ್ರಚಂಡ ಜನನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಸಂಗತಿಯನ್ನು ಒಂದಲ್ಲ ಹಲವು ಸಲ ಆಗು ಮಾಡಿ ತೋರಿದ್ದಾರೆ. ಮೊನ್ನೆ ಭಾನುವಾರ ಸಂಜೆ ನಡೆದ ವಿದ್ಯಮಾನ ಈ ಮಾತಿಗೆ ಮತ್ತೊಂದು ಉದಾಹರಣೆ. ಭಯಾನಕ ಸಾಂಕ್ರಾಮಿಕ ಕೊರೋನಾ ಮಹಾಮಾರಿಯನ್ನು ಮೆದುಳುರಹಿತ ಜನಕೋಟಿ ಹಬ್ಬದಂತೆ ಆಚರಿಸಿತು. ಶಾರೀರಿಕ ದೂರದ ನಿಯಮವನ್ನು ಬಿಗಿಯಾಗಿ ಪಾಲಿಸಬೇಕಿರುವ ಈ ಹೊತ್ತಿನಲ್ಲಿ ಜನ ಗುಂಪು ಗುಂಪಾಗಿ ಬೀದಿಗಿಳಿದು ಸಂಭ್ರಮಿಸಿದರು. ತಟ್ಟೆ, ಜಾಗಟೆ ಬಾರಿಸಿ, ಶಂಖ ಊದಿ, ಚಪ್ಪಾಳೆ ತಟ್ಟಿ ಕೊರೋನ ಪರಾರಿಯಾಯಿತೆಂದು ಗೆಲುವಿನಿಂದ ಬೀಗಿದರು.

ನೋಟುರದ್ದಿನಂತ ಮೂರ್ಖ ಮತ್ತು ಅಮಾನವೀಯ ಕ್ರಮವನ್ನು ಕೂಡ ಜನ ಹೀಗೆಯೇ ಸಾಮೂಹಿಕ ಸನ್ನಿಗೊಳಗಾಗಿ ಸ್ವಾಗತಿಸಿದ್ದರು. ತಮ್ಮ ಬದುಕುಗಳ ಮೇಲೆ ಬಿದ್ದ ಈ ಮಾರಣಾಂತಿಕ ಹೊಡೆತದಿಂದ ಕೋಟ್ಯಂತರ ಜನ ಈಗಲೂ ಚೇತರಿಸಿಕೊಂಡಿಲ್ಲ.

ಸಾಂಕ್ರಾಮಿಕ ರೋಗಗಳ ತಜ್ಞರು ಹೇಳುವಂತೆ ಕೊರೋನಾ ಮಹಾಮಾರಿಯನ್ನು ಭಾರತ ಎಷ್ಟು ಗಂಭೀರವಾಗಿ ಪರಿಗಣಿಸಬೇಕೋ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಕೋಟಿಗಟ್ಟಲೆ ಸಾವು ನೋವು ಸಂಭವಿಸಿದರೆ ಆಶ್ಚರ್ಯವಿಲ್ಲ. ಭಾರೀ ಬಾಂಬೊಂದು ಸ್ಫೋಟಿಸಲಿದೆ ಎಂಬ ಅವರ ಎಚ್ಚರಿಕೆಯ ನಂತರವೂ ಜನಸಮೂಹ ಮೊನ್ನೆ ಭಾನುವಾರ ಬೀದಿಗಿಳಿದು ಮೂಢನಂಬಿಕೆಯನ್ನು ಮೆರೆಯಿತು.

ಭಾನುವಾರ ಸಂಜೆ ತಟ್ಟೆ ಜಾಗಟೆ ಚಪ್ಪಾಳೆ ಬಾರಿಸುವಂತೆ ಕರೆ ನೀಡಿದ ಮಹಾನ್ ನಾಯಕರಿಗೆ ಜನಸಮೂಹಗಳ ವರ್ತನೆಯ ವೈಖರಿ ತಿಳಿಯದ್ದೇನಲ್ಲ. ಆದರೆ ಅವರಿಗೆ ಬೊಮ್ಮನಹಳ್ಳಿಯ ಕಿಂದರಿ ಜೋಗಿಯಾಗುವ ವಿಕೃತ ಸಂಭ್ರಮ. ಅವರ ಮಡಿಲ ಮುದ್ದಿನ ನಾಯಿಯಾಗಿ ಬದಲಾಗಿದೆ ಸಮೂಹಮಾಧ್ಯಮ ಎಂಬ ಜನತಂತ್ರದ ಕಾವಲು ನಾಯಿ. ಅದು ಮಹಾನ್ ನಾಯಕರ ಸಂದೇಶದ ಡಂಗುರವನ್ನು ಹಗಲಿರುಳು ಬಾರಿಸಿ ನಿಷ್ಠೆ ಮೆರೆಯಿತು. ಮೆದುಳನ್ನು ಒತ್ತೆ ಇರಿಸಿರುವ ಜನಸಮೂಹ ಕೀಲುಬೊಂಬೆಯಂತೆ ಕುಣಿಯಿತು.

ವುಹಾನ್‌ನಲ್ಲಿ ಈ ಮಹಾಮಾರಿ ಅಬ್ಬರಿಸಿದಾಗ ಚೀನಾ ಸರ್ಕಾರ ತಟ್ಟೆ ಜಾಗಟೆ ಬಾರಿಸುವ ಸರ್ಕಸ್ ಮಾಡಲಿಲ್ಲ. ಬದಲಾಗಿ ದಾಖಲೆಯ ಸಮಯದಲ್ಲಿ ದೈತ್ಯ ಆಸ್ಪತ್ರೆಯ ನಿರ್ಮಿಸಿತು. ಸಾಂಕ್ರಾಮಿಕದ ಬೇರುಗಳ ಸುಟ್ಟು ಹಾಕಲು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿತು. ಸಾರ್ವಜನಿಕ ಆರೋಗ್ಯದ ಮೇಲೆ ಭಾರತ ಸರ್ಕಾರದ ವೆಚ್ಚದ ಪ್ರಮಾಣ ಶೋಚನೀಯ ಪ್ರಮಾಣದ್ದು. ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತಲೂ ಕಡಿಮೆ. ಜಿ.ಡಿ.ಪಿ.ಯ ಶೇ.1.28ರಷ್ಟು ಮಾತ್ರ. ಈ ಮೊತ್ತವನ್ನು ಕನಿಷ್ಠ ಶೇ.ಮೂರಕ್ಕೆ ಹೆಚ್ಚಿಸಬೇಕೆಂದು ದಶಕಗಳಿಂದ ಮುಂದಿಡುತ್ತ ಬಂದಿರುವ ಬೇಡಿಕೆಯನ್ನು ಯಾವ ಸರ್ಕಾರಗಳೂ ಕಿವಿಗೆ ಹಾಕಿಕೊಳ್ಳಲಿಲ್ಲ. ನರೇಂದ್ರ ಮೋದಿಯವರ ಸರ್ಕಾರವೂ ಈ ಮಾತಿಗೆ ಹೊರತಾಗಲಿಲ್ಲ. ಹಣವುಳ್ಳ ವರ್ಗಗಳ ಅಗತ್ಯಗಳನ್ನು ಪೂರೈಸುವ ಮಲ್ಟಿ ಸ್ಪೆಶಾಲಿಟಿ, ಸೂಪರ್ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆ ವ್ಯವಸ್ಥೆ ತಲೆಯೆತ್ತಿ ಬೆಳೆಯಿತೇ ವಿನಾ ಸಾರ್ವಜನಿಕ ಆರೋಗ್ಯ ಹಾಸಿಗೆ ಹಿಡಿಯುತ್ತಲೇ ಹೋಯಿತು. ಈಗ ಅದು ಕೃತಕ ಉಸಿರಾಟದಲ್ಲಿದೆ. ಸಾವು ಬದುಕಿನ ನಡುವೆ ತೂಗುಯ್ಯಾಲೆ ಆಡಿದೆ. ಅರ್ಥಾತ್ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನೇ ಆಧರಿಸಿರುವ ಶೇ.80ರಷ್ಟು ಜನಸಂಖ್ಯೆ ಹಾಸಿಗೆ ಹಿಡಿದಿರುವ ಆರೋಗ್ಯ ವ್ಯವಸ್ಥೆಯನ್ನು ಅವಲಂಬಿಸಿದೆ. ಪ್ರತಿ ಹನ್ನೊಂದು ಸಾವಿರ ಮಂದಿಗೆ ಒಬ್ಬ ಸರ್ಕಾರಿ ವೈದ್ಯರಿದ್ದಾರೆ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ದೇಶದಲ್ಲಿರುವ ವೆಂಟಿಲೇಟರುಗಳ (ಕೃತಕ ಉಸಿರಾಟ ವ್ಯವಸ್ಥೆ) ಸಂಖ್ಯೆ ಒಂದು ಲಕ್ಷ ಮೀರುವುದಿಲ್ಲ. ಇನ್ನು ಮಹಾಮಾರಿಯು ಅಬ್ಬರಿಸಿರುವ ಈ ದಿನಗಳಲ್ಲಂತೂ ಈ ಜನವರ್ಗಗಳನ್ನು ಕೇಳುವವರು ಯಾರು? ಅವರ ಪ್ರಾಣಗಳು ಬಲು ಅಗ್ಗ.

ಅಷ್ಟಿಷ್ಟು ಪ್ರಮಾಣಕ್ಕೆ ಬೆಳೆದಿದ್ದ ವೈಜ್ಞಾನಿಕ ಮನೋಧರ್ಮವನ್ನು ನಾಶ ಮಾಡುವ ಎಲ್ಲ ಪ್ರಯತ್ನಗಳು ಕಳೆದ ಆರೇಳು ವರ್ಷಗಳಿಂದ ನಡೆಯುತ್ತ ಬಂದಿವೆ. ತರ್ಕ, ಸಂಶೋಧನೆ, ವಿಜ್ಞಾನ, ವಿದ್ವತ್ತಿನ ಮಾನಹರಣ ಮಾಡಲಾಗಿದೆ. ಅಂಧ ವಿಶ್ವಾಸ ಮತ್ತು ನಕಲಿ ಸುದ್ದಿಗಳು ಮತ್ತು ಹಸೀ ಸುಳ್ಳುಗಳನ್ನು ಉತ್ಪಾದಿಸಿ ಹಬ್ಬಿಸುವ ‘ಕಾರ್ಖಾನೆ’ಗಳನ್ನು ಲಕ್ಷಗಳ ಸಂಖ್ಯೆಯಲ್ಲಿ ದೇಶದುದ್ದಗಲಕ್ಕೂ ಕಟ್ಟಿ ನಿಲ್ಲಿಸಲಾಗಿದೆ. ಭಾವ ಬುದ್ಧಿಗಳನ್ನು ಭ್ರಷ್ಟಗೊಳಿಸಿ ಮಿದುಳುಗಳನ್ನು ತಿಂದು ಹಾಕುವ ದ್ವೇಷ-ಹಿಂಸೆ-ಶ್ರೇಷ್ಠತೆಯ ವ್ಯಸನದ ವೈರಾಣುಗಳನ್ನು ತಿನ್ನುವ ವೈರಾಣುಗಳನ್ನು ಬಿಟ್ಟು ಬಹಳ ಕಾಲವೇ ಆಗಿದೆ. ಭಾನುವಾರ ಸಂಜೆ ಕಂಡು ಬಂದ ಭೀಭತ್ಸದ ತಳಪಾಯವಿದು.

ರೋಗಗ್ರಸ್ತ ಸಮಾಜವನ್ನು ಕಟ್ಟಿ ನಿಲ್ಲಿಸಿದರೆ ಮಹಾಮಾರಿಯನ್ನು ಎದುರಿಸುವ ಚೈತನ್ಯವಾದರೂ ಅದಕ್ಕೆ ಎಲ್ಲಿಂದ ಬರಬೇಕು? ಸಮಾಜದಲ್ಲಿ ಹಂಚಿಕೆಯಾಗಬೇಕಿರುವ ಸಂಪತ್ತನ್ನು ಬಾಚಿಕೊಂಡಿರುವ ರೆಡ್ಡಿಗಳು, ಅಂಬಾನಿಗಳು, ಅದಾನಿಗಳು ಮುಂತಾದ ಉದ್ಯಮಿಗಳು, ಮಹಾನ್ ನಟರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆಯವ ಕನಿಷ್ಠ ಮಾನವೀಯತೆಯನ್ನೂ ಮರೆತಿದ್ದಾರೆ.

ದೇಶಾದ್ಯಂತ ಜನಜೀವನ ಅನಿರ್ದಿಷ್ಟ ಕಾಲ ಸ್ತಬ್ದಗೊಳ್ಳಲಿದೆ. ನಿತ್ಯದ ದುಡಿಮೆಯನ್ನು ಆಧರಿಸಿ ಹೊಟ್ಟೆ ಹೊರೆಯುವ ಕೋಟ್ಯಂತರ ಜನರ ಬದುಕು ನೋಟು ರದ್ದಿನ ನಂತರ ಮತ್ತೊಮ್ಮೆ ಅತಂತ್ರ ಆಗಲಿದೆ. ಈ ಜನರಿಗೆ ಪ್ರಧಾನಿಯವರು ಯಾವ ಪರಿಹಾರವನ್ನೂ ನೀಡಿಲ್ಲ. ಕೇವಲ ಚಪ್ಪಾಳೆ ತಟ್ಟಲು ಹೇಳಿರುವುದು ಕ್ರೌರ್ಯದ ಪರಮಾವಧಿ.

ಜನತಾಂತ್ರಿಕವಾಗಿ ಆರಿಸಿ ಬಂದಿರುವವರು ಸರ್ವಾಧಿಕಾರಿಗಳಾಗುವ ದಿನ ದೂರವಿಲ್ಲ. ಚಿಂತಕ ಶಿವಸುಂದರ್ ಅವರು ಹೇಳುವಂತೆ ದೇಹಕ್ಕೆ ಬಿದ್ದ ಪೆಟ್ಟು ಮೆದುಳಿಗೆ ತಿಳಿಯುತ್ತಿಲ್ಲ. ಯಾಕೆಂದರೆ ಮಿದುಳನ್ನು ನಾಶ ಮಾಡಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...