ಕಳೆದ ವರ್ಷ ಪ್ರಾರಂಭವಾದ ಕೊರೊನಾ ಸಾಂಕ್ರಮಿಕಕ್ಕೆ ಕೊನೆಗೂ ಲಸಿಕೆ ತಯಾರಾಗಿದೆ. ಭಾರತದಲ್ಲಿ ಈಗಾಗಲೇ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎರಡು ಲಸಿಕೆಗಳಿಗೆ ಅನುಮತಿ ಸಿಕ್ಕಿವೆ. ಭಾರತ್ ಬಯೋಟೆಕ್ ಅಭಿವೃದ್ದಿಪಡಿಸಿರುವ ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗಗಳ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಲಸಿಕೆ ಬಗ್ಗೆ ವಿಜ್ಞಾನಿಗಳು ಸೇರಿದಂತೆ ಕೆಲವರು ಅಪಸ್ವರ ಎತ್ತಿದ್ದಾರೆ. ಈ ನಡುವೆಯೇ ಭಾರತದಾದ್ಯಂತ ಇಂದು ಮೊದಲ ಸುತ್ತಿನ ವ್ಯಾಕ್ಸಿನೇಷನ್ ಆರಂಭವಾಗಿದ್ದು ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗುತ್ತಿದೆ.
ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಎರಡು ದೋಸ್‌ಗಳನ್ನೂ ಮರೆಯದೆ ಪಡೆಯಿರಿ ಎಂದು ಹೇಳಿದ್ದಾರೆ. ಅದರಂತೆಯೆ ಕರ್ನಾಟಕದಲ್ಲಿ ಕೂಡಾ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವ್ಯಾಕ್ಸಿನೇಷನ್‌ಗೆ ಚಾಲನೆ ನೀಡಿ “ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ನಾಗರತ್ನ ಅವರಿಗೆ ಮೊದಲ ಲಸಿಕೆ ನೀಡುವ ಮೂಲಕ ರಾಜ್ಯಾದ್ಯಂತ ಲಸಿಕೆ ವಿತರಣೆ ಅಧಿಕೃತವಾಗಿ ಚಾಲನೆ ನೀಡಲಾಯಿತು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕೊವ್ಯಾಕ್ಸಿನ್ ಟ್ರಯಲ್: ಅನಿಲ ದುರಂತ ಸಂತ್ರಸ್ತರ ಮೇಲೆ ಲಸಿಕೆ ದಾಳಿ
ವಿಶ್ವದಾದ್ಯಂತ ಹೆಚ್ಚಿನ ದೇಶಗಳಲ್ಲೂ ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ. ಅದರಂತೆ ತಮ್ಮ ದೇಶಗಳ ಪ್ರಜೆಗಳಿಗೆ ಲಸಿಕೆಯ ಬಗ್ಗೆ ನಂಬಿಕೆ ಬರಲು ಅಲ್ಲಿನ ನಾಯಕರು ಮೊದಲಿಗೆ ಲಸಿಕೆಯನ್ನು ಪಡೆಯುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಭಾರತದಲ್ಲಿ ಕೂಡಾ ನಮ್ಮ ನಾಯಕರು ಈ ಲಸಿಕೆಯನ್ನು ಮೊದಲು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್, “ಮೊದಲು ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆಯಲಿ, ಅದರ ನಂತರ ನಾವು ಪಡೆಯುತ್ತೇವೆ ಎಂದು ನೇರವಾಗಿ ಸವಾಲೆಸೆದಿದ್ದರು.
ಇದನ್ನೂ ಓದಿ: ಕೋವಿಡ್ ಲಸಿಕೆಯಷ್ಟೇ ಸಾಕೆ? ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆಯೆ?
ರಾಜೀವ್ ಎಂಬುವವರು ಟ್ವಿಟ್ಟರ್‌ನಲ್ಲಿ “56 ಇಂಚಿನ ಪ್ರಧಾನ ಸೇವಕ, ಭಾರತೀಯ ಇತಿಹಾಸದಲ್ಲೇ ಎಲ್ಲರಿಗಿಂತಲೂ ದೊಡ್ಡ ದೇಶಭಕ್ತ ಅಥವಾ ವಿಶ್ವಗುರು” ಎಂದು ಕೊಲಾಜ್ ಚಿತ್ರವೊಂದನ್ನು ಹಾಕಿ, ಆದರೂ ಲಸಿಕೆ ಪಡೆದಿಲ್ಲ ಎಂದು ಪ್ರಧಾನಿಯನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ: ಮೊದಲ ಕೋವಿಡ್ ಲಸಿಕೆ ಮೋದಿಯವರೇ ತೆಗೆದುಕೊಳ್ಳಲಿ, ನಂತರ ನಮಗೆ: ತೇಜ್ ಪ್ರತಾಪ್ ಯಾದವ್
छप्पन इंची प्रधान सेवक, भारतीय इतिहास का सबसे बडा देशभक्त एव़ विश्व गुरु 😂😂#WhatsApp pic.twitter.com/2q1CoVVUfK
— Rajeev 🇮🇳 (@RajTheThinker) January 13, 2021
ಅನುಷ್ಕಾ ಇನ್ಸಾನಿಯತ್ ಎಂಬುವವರು ಟ್ವಿಟ್ಟರ್‌ನಲ್ಲಿ, “ವ್ಯಾಕ್ಸಿನ್ ಪಡೆಯಲು 56 ಇಂಚು ಯಾಕೆ ತುಂಬಾ ಹೆದರುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
Why 56"inch is so afraid of taking vaccine ? #Covaxin #atmanirbhar pic.twitter.com/yQINTuKxIX
— 💞 ANUSHKA 💞 (@INSANIYAT21) January 14, 2021
ಬಿಜೆಪಿ ಮುಕ್ತ ಕರ್ನಾಟಕ ಫೇಸ್‌ಬುಕ್ ಪೇಜ್, “ಬೇರೆ ದೇಶಗಳ ನಾಯಕರು ಕೊರೊನಾ ಲಸಿಕೆ ಮೊದಲು ಹಾಕಿಕೊಂಡರೆ , ನಮ್ಮ ಪ್ರಧಾನಿ ಮೋದಿಯನ್ನು ನೋಡಿ” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಪ್ರಯೋಗ ಪೂರೈಸದ ಲಸಿಕೆಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆಯೆ?: ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರ್‌ಟಿಐ ಕಾರ್ಯಕರ್ತ
