Homeಮುಖಪುಟನೆಹರು ಉಪನಾಮ ಬಳಕೆ ಕುರಿತಾದ ಮೋದಿ ಹೇಳಿಕೆಯನ್ನು ಕಡತದಿಂದ ಏಕೆ ತೆಗೆದಿಲ್ಲ?: ರಾಹುಲ್ ಪ್ರಶ್ನೆ

ನೆಹರು ಉಪನಾಮ ಬಳಕೆ ಕುರಿತಾದ ಮೋದಿ ಹೇಳಿಕೆಯನ್ನು ಕಡತದಿಂದ ಏಕೆ ತೆಗೆದಿಲ್ಲ?: ರಾಹುಲ್ ಪ್ರಶ್ನೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ನೆಹರೂ ಉಪನಾಮ ಬಳಕೆ ಕುರಿತು ಮಾತನಾಡಿದ್ದನ್ನು ಏಕೆ ದಾಖಲೆಯಿಂದ ತೆಗೆದುಹಾಕಲಿಲ್ಲ ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಇಂದು ಪ್ರಶ್ನಿಸಿದ್ದಾರೆ. ”ನಾನು ಅತ್ಯಂತ ಸಭ್ಯ ಭಾಷೆ ಬಳಸಿದ್ದೇನೆ ಮತ್ತು ನಾನು ಹೇಳಿದ ಎಲ್ಲ ಹೇಳಿಕೆಗಳಿಗೂ ಸಾಕ್ಷಿಗಳಿವೆ. ಆದರೆ ಪ್ರಧಾನಿ ನೇರವಾಗಿ ನನ್ನನ್ನು ಅವಮಾನಿಸುತ್ತಾರೆ. ನಿಮ್ಮ ಹೆಸರು ರಾಹುಲ್ ಗಾಂಧಿ, ರಾಹುಲ್ ನೆಹರೂ ಅಲ್ಲ ಏಕೆ ಎಂದು ಅವರು ಹೇಳುತ್ತಾರೆ. ಆದರೆ ಅವರ ಈ ಯಾವ ಮಾತುಗಳನ್ನೂ ದಾಖಲೆಯಿಂದ ತೆಗೆದುಹಾಕಲಾಗಿಲ್ಲ. ಆದರೆ ಸತ್ಯ ಯಾವಾಗಲೂ ಹೊರಬರಬರುತ್ತದೆ” ಎಂದು ಅವರು ಕೇರಳದ ವಯಾನಂದ್‌ನಲ್ಲಿ ತಮ್ಮ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಹೇಳಿದರು.

”ನೀವು ಗಮನಿಸಿ ನೋಡಿ ನಾನು ಮಾತನಾಡುವಾಗ ಅವರು ಮುಖವನ್ನೇ ನೋಡುತ್ತಿದ್ದರು. ಆ ವೇಳೆ ಪ್ರಧಾನಿ ಎಷ್ಟು ಬಾರಿ ನೀರು ಕುಡಿದರು ಮತ್ತು ನೀರು ಕುಡಿಯುವಾಗ ಅವರ ಕೈಗಳು ಹೇಗೆ ನಡುಗುತ್ತಿದ್ದವು ಎಂಬುದನ್ನು ನೋಡಿ… ಪ್ರಧಾನಿ ಅವರು ತುಂಬಾ ಶಕ್ತಿಶಾಲಿ ಮತ್ತು ಎಲ್ಲರೂ ಅವರಿಗೆ ಭಯ ಪಡುತ್ತಾರೆ ಎಂದು ಜನರು ಭಾವಿಸುತ್ತಾರೆ. ಅವರು ಭಯಪಡುವ ಕೊನೆಯ ವಿಷಯವೆಂದರೆ ತಾನು ನರೇಂದ್ರ ಮೋದಿ ಎನ್ನುವ ಕಾರಣಕ್ಕೆ.. ಅವರು ಭಾರತದ ಪ್ರಧಾನಿಯಾಗಿದ್ದರೂ ಪರವಾಗಿಲ್ಲ. ಮುಂದೊಂದು ದಿನ ಅವರು ಸತ್ಯವನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಹೇಳಿದರು.

ಗೌತಮ್ ಅದಾನಿ ಹಗರಣದ ಬಗ್ಗೆ ಮಾತನಾಡುವ ಸಮಯದಲ್ಲಿ ಪ್ರಧಾನಿಗೂ ಅದಾನಿಗೂ ಸಂಬಂಧ ಏನು ಎಂದು ರಾಹುಲ್ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲದೇ ಪ್ರಧಾನಿ ಮೋದಿಯನ್ನು ಕ್ರೋನಿ ಕ್ಯಾಪಿಟಲಿಸಂ ಎಂದು ಆರೋಪಿಸಿದರು. ಅವರ ಈ ಹೇಳಿಕೆಗಳು ಸಂಸತ್ತಿನ ಒಳಗೆ ಮತ್ತು ಹೊರಗೆ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ರಾಹುಲ್ ಗಾಂಧಿಯವರ ಟೀಕೆಗಳನ್ನು ಕಡತದಿಂದ ತೆಗೆದುಹಾಕುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕಾಂಗ್ರೆಸ್ ಹೇಳಿದೆ.

”2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಾನಿ ಸಮೂಹದ ಹಲವು ವ್ಯವಹಾರಗಳಿಗೆ ಅನುಕೂಲವಾಗಲೆಂದು ಭಾರತದ ಆರ್ಥಿಕ ನೀತಿಗಳನ್ನು ಬದಲಿಸಲಾಗಿದೆ” ಎಂದ ರಾಹುಲ್ ಆರೋಪಿಸಿದರು. ಆಗ ಬಿಜೆಪಿಯವರು ಇದು “ಅಸಂಸದೀಯ” ಮತ್ತು “ದಾರಿ ತಪ್ಪಿಸುವ” ತಂತ್ರ ಎಂದು ಆರೋಪಿಸಿದ ನಂತರ ಕಡತದಿಂದ ಆವರ ಹೇಳಿಕೆಯನ್ನು ತೆಗೆದುಹಾಕಲಾಯಿತು.

ಇದನ್ನೂ ಓದಿ: ಸಂಸತ್ತಿನಲ್ಲಿ ಪ್ರಧಾನಿ ಬಗ್ಗೆ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿಗೆ ನೋಟಿಸ್‌

ಆ ಬಳಿಕ ಪ್ರಧಾನಿ ಮೋದಿ ಮಾತನಾಡುವಾಗ, ಗಾಂಧೀಜಿ ಅಥವಾ ಕಾಂಗ್ರೆಸ್‌ನ ಹೆಸರನ್ನು ಹೇಳದೆ, “ನಾವು ಎಲ್ಲಿಯಾದರೂ ನೆಹರೂ ಅವರ ಹೆಸರನ್ನು ಹೇಳಲು ತಪ್ಪಿಸಿಕೊಂಡರೆ, ಅವರು (ಕಾಂಗ್ರೆಸ್) ಅಸಮಾಧಾನಗೊಳ್ಳುತ್ತಾರೆ, ನೆಹರೂ ಅವರು ಅಂತಹ ಮಹಾನ್ ವ್ಯಕ್ತಿಯಾಗಿದ್ದರು. ನಂತರ ಅವರ್ಯಾರೂ ನೆಹರು ಉಪನಾಮವನ್ನು ತಮ್ಮ ಹೆಸರಿನ ಮುಂದೆ ಏಕೆ ಬಳಸುವುದಿಲ್ಲ, ನೆಹರೂ ಹೆಸರನ್ನು ಬಳಸುವುದರಲ್ಲಿ ನಾಚಿಕೆಗೇಡು ಏನು? ಎಂದೆಲ್ಲಾ ಮಾತನಾಡಿದರು. ಪ್ರಧಾನಿ ಈ ರೀತಿಯ ಅಸಭ್ಯ ಮಾತುಗಳನ್ನಾಡಿದಾಗ ಅದನ್ನು ಕಡತದಿಂದ ತೆಗೆದು ಹಾಕಲ್ಲ, ನಾವು ಸಭ್ಯಮಾತುಗಳೊಂದಿಗೆ ಸಾಕ್ಷಿಸಮೇತ ಟೀಕೆ ಮಾಡಿದರೂ ಕಡತದಿಂದ ತೆಗೆದು ಹಾಕುತ್ತಾರೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಲ್ಲವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

“ನಿಯಮಗಳ ಪ್ರಕಾರ, ನೀವು ಸಾಕ್ಷಿಗಳಿಲ್ಲದೇ ಏನನ್ನಾದರೂ ಹೇಳುತ್ತಿದ್ದರೆ ಅಥವಾ ನೀವು ಯಾರನ್ನಾದರೂ ಅವಮಾನಿಸುತ್ತಿದ್ದರೆ ಭಾಷಣದ ಭಾಗಗಳನ್ನು ರೆಕಾರ್ಡ್‌ನಿಂದ ತೆಗೆದುಹಾಕಬಹುದು. ನಾನು ಯಾರನ್ನೂ ಅವಮಾನಿಸಿಲ್ಲ, ನಾನು ಸೌಜನ್ಯ ಭಾಷೆಯನ್ನು ಬಳಸಿದ್ದೇನೆ, ನಾನು ಅತ್ಯಂತ ಸಭ್ಯ ಭಾಷೆ ಮತ್ತು ಎಲ್ಲವನ್ನೂ ಬಳಸಿದ್ದೇನೆ” ಎಂದು ರಾಹುಲ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...