Homeಮುಖಪುಟಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ್ರೆ NDA ತೊರೆಯುತ್ತೇವೆ: ಮಿಜೋರಾಂ ಸಿಎಂ ಎಚ್ಚರಿಕೆ

ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ್ರೆ NDA ತೊರೆಯುತ್ತೇವೆ: ಮಿಜೋರಾಂ ಸಿಎಂ ಎಚ್ಚರಿಕೆ

- Advertisement -
- Advertisement -

ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ತೊರೆಯಲಿದೆ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಶುಕ್ರವಾರ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ದೇಶದ ಎಲ್ಲಾ ಸಮುದಾಯಗಳಿಗೆ ಒಂದೇ ವೈಯಕ್ತಿಕ ಕಾನೂನುಗಳನ್ನು ರೂಪಿಸುವ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಪಿತೃಪ್ರಭುತ್ವದ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದ ಹಕ್ಕುಗಳನ್ನು ಸಾಮಾನ್ಯವಾಗಿ ನಿರಾಕರಿಸುವ ಮಹಿಳೆಯರಿಗೆ ಸಮಾನತೆ ಮತ್ತು ನ್ಯಾಯವನ್ನು ನೀಡುವ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆ ಜಾರಿತರುವ ಚಿಂತನೆ ಇದೆ ಎಂದು ಬಿಜೆಪಿ ಹೇಳುತ್ತದೆ.

ಈಶಾನ್ಯ ರಾಜ್ಯಗಳು ಈ ಏಕರೂಪದ ನಾಗರಿಕ ಸಂಹಿತೆಯನ್ನು ಬಲವಾಗಿ ವಿರೋಧಸಿಸುತ್ತವೆ. ಶುಕ್ರವಾರ, ಮಿಜೋರಾಂ ಸಿಎಂ ಝೋರಂತಂಗ ಅವರು ”ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸುತ್ತೇವೆ ಎಂದ ಮಾತ್ರಕ್ಕೆ ನಾವು ಅವರ ”ಪ್ರತಿಯೊಂದು ವಿಷಯದಲ್ಲೂ ಅವರನ್ನು ಪಾಲಿಸಬೇಕು” ಎಂದು ಹೇಳಲಾಗದು” ಎಂದು ಹೇಳಿದ್ದಾರೆ.

“ಉದಾಹರಣೆಗೆ, ಮಿಜೋರಾಂನಲ್ಲಿ ಯುಸಿಸಿ [ಏಕರೂಪದ ನಾಗರಿಕ ಸಂಹಿತೆ] ಯನ್ನು ಜಾರಿ ಮಾಡಿದರೆ, ನಾವು ಖಂಡಿತವಾಗಿಯೂ ಎನ್‌ಡಿಎ [ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ]ದಲ್ಲಿ ಇರಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

”ನಾವು ಎನ್‌ಡಿಎ ತೊರೆಯುವ ರೀತಿಯಲ್ಲಿ ಯಾವುದೇ ಸಮಸ್ಯೆಯನ್ನು ಅವರು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಜೋರಮ್‌ತಂಗಾ ಹೇಳಿದರು.

ಈ ವಾರದ ಆರಂಭದಲ್ಲಿ ಕೂಡ ಝೋರಂತಂಗ  ಅವರು, ”ತಮ್ಮ ಪಕ್ಷವು ಬಿಜೆಪಿಯ ಎಲ್ಲಾ ನೀತಿಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ” ಎಂದು ಹೇಳಿದ್ದರು.

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೊಂದಿರುವ ನೆರೆಯ ರಾಜ್ಯ ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆಯೂ ಅವರು ಧ್ವನಿಯೆತ್ತಿದ್ದಾರೆ. ಮಂಗಳವಾರ, ಝೋರಂತಂಗ ಐಜ್ವಾಲ್‌ನಲ್ಲಿ ರ್ಯಾಲಿಯಲ್ಲಿ ಭಾಗವಹಿಸಿ, ಕುಕಿ ಸಮುದಾಯದೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದರು. ಝೋರಂತಂಗ ಅವರ ಈ ಕ್ರಮಕ್ಕೆ ಸಿಂಗ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದರು. ಅವರು ತಮ್ಮ ರಾಜ್ಯದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಂತೆ ಕೇಳಿಕೊಂಡರು.

ಮಣಿಪುರದಲ್ಲಿನ ಮೈತಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ ಈವರೆಗೂ 160 ಕ್ಕೂ ಹೆಚ್ಚು ಜನರನ್ನು ಕೊಂದು 60,000 ಜನರನ್ನು ಸ್ಥಳಾಂತರಿಸಿದೆ. ಮಣಿಪುರದಿಂದ ಪಲಾಯನ ಮಾಡಿದ ಸುಮಾರು 13,000 ಕುಕಿ ಜನರಿಗೆ ಮಿಜೋರಾಂ ಸರ್ಕಾರ ಆಶ್ರಯ ನೀಡುತ್ತಿದೆ.

ಇದನ್ನೂ ಓದಿ: ಮುಂದಿನ ವಾರ ಸಂಸತ್‌ನಲ್ಲಿ ವಿವಾದಿತ ದೆಹಲಿ ಸೇವಾ ಮಸೂದೆ ಮಂಡನೆ; ಪ್ರತಿಪಕ್ಷಗಳ ವಿರೋಧದ ಮಧ್ಯೆ ಅಂಗಿಕಾರ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...