Homeಮುಖಪುಟಟಿಎಂಸಿಗೆ ಕಳವಳ: ಪಂಚಾಯತ್ ಚುನಾವಣೆಯಲ್ಲಿ ಗಮನಾರ್ಹ ಸಾಧನಗೈದ ಹೊಸ ಪಕ್ಷ ISF

ಟಿಎಂಸಿಗೆ ಕಳವಳ: ಪಂಚಾಯತ್ ಚುನಾವಣೆಯಲ್ಲಿ ಗಮನಾರ್ಹ ಸಾಧನಗೈದ ಹೊಸ ಪಕ್ಷ ISF

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮೂರು ಹಂತದ ಪಂಚಾಯತ್ ಚುನಾವಣೆಗಳಲ್ಲಿ ಮುನ್ನಡೆಸಿದೆ. ಆದರೆ ಇದೀಗ ಟಿಎಂಸಿಗೆ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ಪಕ್ಷ ಕಳವಳ ಉಂಟು ಮಾಡುವ ರೀತಿಯಲ್ಲಿ ಅನಿಯಂತ್ರಿತವಾಗಿ ಬೆಳವಣಿಗೆ ಹೊಂದುತ್ತಿದೆ.

2021 ರ ಅಸೆಂಬ್ಲಿ ಚುನಾವಣೆಯಲ್ಲಿ ಮೊದಲ ಬಾರಿಗೆ ಹೊರಹೊಮ್ಮಿದ ಮುಸ್ಲಿಂ ಸಂಘಟನೆಯು ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದೀಗ ದಕ್ಷಿಣ 24 ಪರಗಣ ಜಿಲ್ಲೆಯ ತನ್ನ ಭದ್ರಕೋಟೆಯಾದ ಭಂಗಾರ್‌ನಲ್ಲಿ ಗ್ರಾಮ ಪಂಚಾಯ್ತಿ ಸ್ಥಾನಗಳನ್ನು ಪಡೆದುಕೊಂಡಿತು. ಹಾಗೆಯೇ ಉತ್ತರ 24 ಪರಗಣಗಳು, ಹೌರಾ ಮತ್ತು ಇತರ ಸಮೀಪದ ಜಿಲ್ಲೆಗಳಲ್ಲಿ ಗೆಲುವು ಕಂಡಿದೆ.

ರಾಜ್ಯ ಚುನಾವಣಾ ಆಯೋಗವು ಇನ್ನೂ ಅಂತಿಮ ಅಂಕಿಅಂಶಗಳನ್ನು ಪ್ರಕಟಿಸದಿದ್ದರೂ, ಪಶ್ಚಿಮ ಬಂಗಾಳದಲ್ಲಿ ISF ಸ್ಪರ್ಧಿಸಿದ ಮೊದಲ ಪಂಚಾಯತ್ ಚುನಾವಣೆಯಲ್ಲಿ 1,300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದರು ಮತ್ತು “400 ಕ್ಕೂ ಹೆಚ್ಚು” ಗೆದ್ದಿದ್ದಾರೆ ಎಂದು ISF ಮೂಲಗಳು ತಿಳಿಸಿವೆ.

2021ರ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ, ಬಂಗಾಳದ ಮುಸ್ಲಿಮರು ಮತ್ತು ದಲಿತರಿಗೆ “ಸಾಮಾಜಿಕ ನ್ಯಾಯವನ್ನು ನೀಡುವ” ಉದ್ದೇಶದಿಂದ ಫರ್ಫುರಾ ಷರೀಫ್ ದೇಗುಲದ ಧರ್ಮಗುರು ಪೀರ್ಜಾದಾ ಅಬ್ಬಾಸ್ ಸಿದ್ದಿಕಿ ಅವರು ಈ ISFಅನ್ನು ಘೋಷಿಸಿದರು.

ಟಿಎಂಸಿಯ ಹಿರಿಯ ನಾಯಕರೊಬ್ಬರು ISF ಕುರಿತು ಮಾತನಾಡಿದ್ದು, ”ಭೂಸ್ವಾಧೀನದ ವಿರುದ್ಧ ಹೋರಾಡಿದವರು ಈಗ ISF (ಭಾಂಗಾರ್‌ನಲ್ಲಿ) ಇದ್ದಾರೆ. ಬಹುತೇಕ ಎಲ್ಲಾ ಸಿಪಿಐ(ಎಂ) ಸದಸ್ಯರು ಕೂಡ ಈಗ ಐಎಸ್‌ಎಫ್‌ನಲ್ಲಿದ್ದಾರೆ… ಒಂದರ ಹಿಂದೆ ಒಂದರಂತೆ ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ, ಮತ್ತು ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಸಂಪೂರ್ಣವಾಗಿ ಐಎಸ್‌ಎಫ್‌ನತ್ತ ಸಾಗಿವೆ. ಭಾಂಗಾರ್‌ನ ಅನೇಕ ಹಳ್ಳಿಗಳಲ್ಲಿ, ನಮಗೆ ಈಗ ನೆಲೆಯೂ ಇಲ್ಲ” ಎಂದು ಒಪ್ಪಿಕೊಂಡಿದ್ದಾರೆ.

ISF ನಾಯಕ ತಪಾಶ್ ಚಕ್ರವರ್ತಿ ಮಾತನಾಡಿ, ಫಲಿತಾಂಶಗಳ ವಿಚಾರದಲ್ಲಿ ನಾವು ತುಂಬಾ ಆಶಾವಾದಿಯಾಗಿದ್ದೇವೆ ಎಂದು ಹೇಳಿದ್ದಾರೆ. ”ನಾವು ಬಂಕುರಾ, ಹೌರಾ, ಹೂಗ್ಲಿಯಲ್ಲಿಯೂ ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಗೆದ್ದಿದ್ದೇವೆ. ಪಶ್ಚಿಮ ಬಂಗಾಳದ ಜನರು ಬಿಜೆಪಿ ಮತ್ತು ಟಿಎಂಸಿ ಹೊರತುಪಡಿಸಿ ಹೊಸ ರಾಜಕೀಯ ಶಕ್ತಿಗಾಗಿ ಹುಡುಕುತ್ತಿದ್ದೇವೆ. ನಮ್ಮ ಪಕ್ಷದೊಂದಿಗೆ ಅಪಾರ ಸಂಖ್ಯೆಯ ಯುವಕರು ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸುತ್ತೇವೆ” ಎಂದು ಹೇಳಿದ್ದಾರೆ. ಇದು ಸಹಜವಾಗಿ ಟಿಎಂಸಿಗೆ ಆತಂಕ ಹುಟ್ಟಿಸಿದೆ.

ಇದನ್ನೂ ಓದಿ: ಪ.ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಜಯಭೇರಿ: 2,552 ಗ್ರಾಮ ಪಂಚಾಯತ್‌ಗಳಲ್ಲಿ ಗೆಲುವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...