Homeಕರ್ನಾಟಕಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ: ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ: ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?

- Advertisement -
- Advertisement -

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಸ್‌ವೈ, “ತಾಯಿ ಮಗಳು ತೊಂದರೆಯಲ್ಲಿದ್ದೇವೆ ಎಂದು ಹೇಳುತ್ತಾ ಕಣ್ಣೀರು ಹಾಕಿಕೊಂಡು ಬಂದಿದ್ದರು. ಅವರಿಗೆ ಸಹಾಯ ಮಾಡಿದ್ದೀನಿ. ಆದರೆ, ಈಗ ನನ್ನ ವಿರುದ್ಧವೇ ದೂರು ನೀಡಿದ್ದಾರೆ” ಎಂದು ಹೇಳಿದ್ದಾರೆ.

ಬೆಂಗಳೂರಿನ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ಮನೆಯ ಬಳಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಬಿಎಸ್‌ವೈ “ನನ್ನ ಮೇಲೆ ಯಾರೋ ಒಬ್ಬ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಯಾರೋ ತಾಯಿ ಮಗಳು ಒಂದು ತಿಂಗಳ ಹಿಂದೆ ನನ್ನ ಹತ್ತಿರ ಬಂದಿದ್ದರು. ನಮಗೆ ಅನ್ಯಾಯ ಆಗಿದೆ ಅಂತ ಹೇಳಿದ್ದರು. ಅವರು ಅನೇಕ ಬಾರಿ ನನ್ನ ಮನೆ ಬಳಿ ಬಂದು ಕಾಯುತ್ತಿದ್ದರು. ಒಮ್ಮೆ ಕಣ್ಣೀರು ಹಾಕುತ್ತಿದ್ದುದನ್ನು ನೋಡಿ, ಮನೆಯೊಳಗೆ ಕರೆದೊಯ್ದೆ. ಏನು ಸಮಸ್ಯೆ ಎಂದು ಆಲಿಸಿ ಬೆಂಗಳೂರು ಪೊಲೀಸ್ ಕಮಿಷನರ್‌ ದಯಾನಂದ್ ಅವರಿಗೆ ಫೋನ್ ಮಾಡಿ ಇವರ ಸಮಸ್ಯೆ ಬಗೆಹರಿಸಲು ಹೇಳಿದ್ದೆ. ಅಲ್ಲೇ, ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದ್ದರು” ಎಂದಿದ್ದಾರೆ.

“ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದಾಗ ಏನೋ ಆರೋಗ್ಯ ಸಮಸ್ಯೆ ಇದೆ ಅಂತ ಅನಿಸ್ತು. ಹೆಚ್ಚು ಮಾತಾಡಿದರೆ ಆಗಲ್ಲ ಎಂದು ಪೊಲೀಸರ ಬಳಿಗೆ ಕಳಿಸಿಕೊಟ್ಟೆ. ಇದನ್ನು ಈಗ ಬೇರೆ ರೀತಿಯಲ್ಲಿ ತಿರುಗಿಸಿದ್ದಾರೆ. ತೊಂದರೆ ಇದೆ ಅಂದಿದ್ದಕ್ಕೆ ಹಣವನ್ನೂ ಕೊಟ್ಟು ಕಳಿಸಿದ್ದೆ. ಒಬ್ಬರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಹೀಗಾಗಿದೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ದೂರು ರಾಜಕೀಯ ಪ್ರೇರಿತವೇ ಎಂದು ಕೇಳಿದಾಗ, “ಪ್ರಕರಣ ದಾಖಲಾಗಿದೆ, ರಾಜಕಾರಣ ಯಾರೂ ಮಾಡ್ತಿಲ್ಲ. ಇದನ್ನು ಹೇಗೆ ಎದುರಿಸಬೇಕೋ ಹಾಗೆಯೇ ಎದುರಿಸುವೆ. ಆದರೆ ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ” ಎಂದಿದ್ದಾರೆ.

ಇದನ್ನೂ ಓದಿ : ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪ; ಮಾಜಿ ಸಿಎಂ ಬಿ‌ಎಸ್‌ವೈ ವಿರುದ್ದ ಎಫ್ಐಆರ್ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...