Homeಮುಖಪುಟನಿಮ್ಮ ಕೈಕಾಲುಗಳು ಮುರಿಯುತ್ತವೆ; ಕೊಲೆಯಾಗುತ್ತೀರಿ: ಬಿಜೆಪಿ ರಾಜ್ಯಾಧ್ಯಕ್ಷನಿಂದ ಬೆದರಿಕೆ

ನಿಮ್ಮ ಕೈಕಾಲುಗಳು ಮುರಿಯುತ್ತವೆ; ಕೊಲೆಯಾಗುತ್ತೀರಿ: ಬಿಜೆಪಿ ರಾಜ್ಯಾಧ್ಯಕ್ಷನಿಂದ ಬೆದರಿಕೆ

ಬಿಹಾರದಲ್ಲಿ ಲಾಲು ರಾಜ್ ಇದ್ದಾಗ, ಜಂಗಲ್ ರಾಜ್ ಇದ್ದವು, ಆಗ ಅಲ್ಲಿ ದಿನವು ಹಿಂಸಾಚಾರ ನಡೆಯುತ್ತಿತ್ತು. ಆದರೆ ನಾವು ಆ ಗೂಂಡಾಗಳನ್ನು ಓಡಿಸಿದ್ದೇವೆ, ಇದನ್ನೇ ಬಿಜೆಪಿ ರಾಜ್ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.

- Advertisement -
- Advertisement -

ಮಮತಾ ಬ್ಯಾನರ್ಜಿ ಬೆಂಬಲಿಗರು ತಮ್ಮ ನಡೆಗಳನ್ನು ಸರಿಪಡಿಸಿಕೊಳ್ಳಬೇಕು ಇಲ್ಲವೆಂದರೆ ಅವರ ಕೈ ಕಾಲುಗಳು ಮುರಿದು ಹೋಗುವ ಇಲ್ಲವೆಂದರೆ, ಕೊಲೆಯಾಗುವ ಅಪಾಯವಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್‌ ನಿನ್ನೆ ವಿವಾದಾತ್ಮಕ ಎಚ್ಚರಿಕೆ ನೀಡಿದ್ದಾರೆ.

“ತೊಂದರೆ ಸೃಷ್ಟಿಸುತ್ತಿರುವ ದೀದಿ ಸಹೋದರರು ಮುಂದಿನ ಆರು ತಿಂಗಳಲ್ಲಿ ತಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ತಲೆ, ತೋಳು, ಕಾಲು ಹಾಗೂ ಪಕ್ಕೆಲುಬು ಮುರಿದುಹೋಗುತ್ತದೆ. ನೀವು ಆಸ್ಪತ್ರೆಗೆ ಸೇರಬೇಕಾಗುತ್ತದೆ. ಅದಕ್ಕಿಂತ ಹೆಚ್ಚಿನದನ್ನು ಮಾಡಿದರೆ ಶ್ಮಶಾನಕ್ಕೆ ಹೋಗಬೇಕಾಗುತ್ತದೆ ” ಎಂದು ಅವರು ಹಲ್ಡಿಯಾದಲ್ಲಿ ನಡೆದ ರ್‍ಯಾಲಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ?

ತೃಣಮೂಲ ಸರ್ಕಾರದ ಕೊನೆಯ ದಿನಗಳನ್ನು ಎಣಿಸಲಾಗುತ್ತಿದೆ ಎಂದಿರುವ ದಿಲೀಪ್ ಘೋಷ್, ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಯುತ ವಿಧಾನಸಭಾ ಚುನಾವಣೆಯನ್ನು ಕೇಂದ್ರ ಪಡೆಗಳು ಖಚಿತಪಡಿಸುತ್ತವೆ ಎಂದು ಹೇಳಿದ್ದಾರೆ.

“ಬಿಹಾರದಲ್ಲಿ ಲಾಲು ರಾಜ್ ಇದ್ದಾಗ, ಜಂಗಲ್ ರಾಜ್ ಇದ್ದವು, ಆಗ ಅಲ್ಲಿ ದಿನವು ಹಿಂಸಾಚಾರ ನಡೆಯುತ್ತಿತ್ತು. ಆದರೆ ನಾವು ಆ ಗೂಂಡಾಗಳನ್ನು ಓಡಿಸಿದ್ದೇವೆ, ಇದನ್ನೇ ಬಿಜೆಪಿ ರಾಜ್ ಎಂದು ಕರೆಯಲಾಗುತ್ತದೆ. ನಾವು ಜಂಗಲ್ ರಾಜ್ ಅನ್ನು ಪ್ರಜಾಪ್ರಭುತ್ವಕ್ಕೆ ಬದಲಾಯಿಸಿದ್ದೇವೆ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುತ್ತೇವೆ” ಎಂದು ಹೇಳಿದ್ಧಾರೆ.

“ಮುಂಬರುವ ವಿಧಾನಸಭಾ ಚುನಾವಣೆ ದೀದಿ ಪೊಲೀಸರ ಅಡಿಯಲ್ಲಿ ನಡೆಯುವುದಿಲ್ಲ, ಬದಲಾಗಿ ದಾದಾ ಅವರ ಪೊಲೀಸರಿಂದ ಘೋಷಣೆಯಾಗಬೇಕೆಂದು ನಾನು ಬಯಸುತ್ತೇನೆ. ಖಾಕಿ ಧರಿಸಿದ ಪೊಲೀಸರು ಮಾವಿನ ಮರದ ಕೆಳಗೆ ಬೂತ್‌ಗಳಿಂದ ನೂರು ಮೀಟರ್ ದೂರದಲ್ಲಿ, ಕುರ್ಚಿಯ ಮೇಲೆ ಕುಳಿತು, ಖೈನಿ ಜಗಿಯುತ್ತಾ ಮತದಾನ ವೀಕ್ಷಿಸುತ್ತಾರೆ” ಎಂದು ದಿಲೀಪ್ ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ನಿರುದ್ಯೋಗ ದರ, ದೇಶದ ಒಟ್ಟು ನಿರುದ್ಯೋಗ ದರಕ್ಕಿಂತ ಉತ್ತಮ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಎದುರಿಸಲು ಬಿಜೆಪಿ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸುತ್ತಿದೆ. ರಾಜಕೀಯ ಹಿಂಸಾಚಾರ ಮತ್ತು ಪರಸ್ಪರರ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಉಭಯ ಪಕ್ಷಗಳೂ ಪರಸ್ಪರ ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಇದಾಗಿ ಕಲವೇ ದಿನಗಳಲ್ಲಿ ದಿಲೀಪ್ ಘೋಷ್ ಹೇಳಿಕೆಗಳು ಹೊರಬಿದ್ದಿದೆ. ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಲು ದಿಲೀಪ್ ಘೋಷ್ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಸೋಮವಾರ ದೆಹಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮೋದಿ ಪಶ್ಚಿಮ ಬಂಗಾಳ ಭೇಟಿ ವೇಳೆ ಚೌಕಿದಾರ್‌ ಚೋರ್‌ ಹೈ ಘೋಷಣೆ ಕೂಗಿದ್ದು ನಿಜವೇ? 

ದಿಲೀಪ್‌ ಹೇಳಿಕೆಗೆ ಖಂಡನೆ

ಬಿಜೆಪಿ ರಾಜ್ಯಾಧ್ಯಕ್ಷರ ಬೆದರಿಕೆಯ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ಖಂಡಿಸಿದ್ದು, ಅವರು ರಾಜ್ಯದ ರಾಜಕೀಯ ವಾತಾವರಣವನ್ನು ಕಳಂಕಗೊಳಿಸುತ್ತಿದ್ದಾರೆ ಎಂದು ಹೇಳಿದೆ ಎಂದು ಹೇಳಿದೆ.

ಹಿರಿಯ ತೃಣಮೂಲ ನಾಯಕ ಮತ್ತು ಸಂಸದರಾಗಿರುವ ಸುಗತ ರಾಯ್, “ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ತನ್ನ ಭಯೋತ್ಪಾದನಾ ಆಳ್ವಿಕೆಯನ್ನು ಬಹಿರಂಗಪಡಿಸಲು ಮತ್ತು ರಾಜ್ಯದ ರಾಜಕೀಯ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಈ ಹೇಳಿಕೆಗಳು ಸೂಚಿಸುತ್ತವೆ. ರಾಜ್ಯದ ಜನರು ಅವರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾರೆ” ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಹೇಳಿಕೆಯನ್ನು ಖಂಡಿಸಿದ್ದು, “ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಯಾರೂ ರಾಜಕೀಯ ಭಾಷಣವನ್ನು ಬೀದಿ ಗಲಾಟೆಯ ಮಟ್ಟಕ್ಕೆ ಅಥವಾ ಸಾಮಾನ್ಯ ಕೊಲೆಗಡುಕನ ಭಾಷೆಗೆ ಇಳಿಸಬಾರದು. ಇದಕ್ಕಿಂತ ಕೆಟ್ಟದ್ದೇನೆಂದರೆ, ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರು ಇದನ್ನು ಮಾಡುತ್ತಿದ್ದಾರೆ!” ಎಂದಿದ್ದಾರೆ.

ಇದನ್ನೂ ಓದಿ: ‘ಡಬ್ಬಲ್ ಸ್ಟಾಂಡರ್ಡ್’ ಪ್ರಧಾನಿ: ಪಶ್ಚಿಮ ಬಂಗಾಳದ ಭೇಟಿಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...