Homeಅಂಕಣಗಳುಆಡಿಯೋ ಬಿಚ್ಚಿಡುತ್ತಿರುವ ಸತ್ಯ; ಮೋದಿ-ಶಾ ಪ್ರಸ್ತಾಪಕ್ಕೆ ಬಿಜೆಪಿಗೆ ಖೇದವೇ ಇಲ್ಲ!

ಆಡಿಯೋ ಬಿಚ್ಚಿಡುತ್ತಿರುವ ಸತ್ಯ; ಮೋದಿ-ಶಾ ಪ್ರಸ್ತಾಪಕ್ಕೆ ಬಿಜೆಪಿಗೆ ಖೇದವೇ ಇಲ್ಲ!

- Advertisement -
- Advertisement -

ಪೀಕೆ |
ಒಂದು ಆಡಿಯೋ ಸುತ್ತ ನಡೆಯುತ್ತಿರುವ ಒಟ್ಟೂ ಪ್ರಹಸನ ಬಿಚ್ಚಿಡುತ್ತಿರುವ ಸತ್ಯ ಏನೆಂದರೆ, ಆಪರೇಷನ್ ಕಮಲಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಂಬಲವಿದೆ ಎಂಬುದನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಪ್ಪಿಕೊಳ್ಳುತ್ತಿದ್ದಾರೆ ಬಿಜೆಪಯ ನಾಯಕರು!

ಸದನದಲ್ಲಿ ಈ ಆಡಿಯೋ ವಿಚಾರವಾಗಿ ಮಾತನಾಡಿದ ಬಿಜೆಪಿಯ ಎಲ್ಲ ನಾಯಕರು ಪದೇ ಪದೇ, ‘ಸ್ಪೀಕರ್ ರಮೇಶಕುಮಾರವರೇ, ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ತಮ್ಮ ಹೆಸರು ಉಲ್ಲೇಖವಾದುದಕ್ಕೆ ನಮಗೂ ಬೇಜಾರಾಗಿದೆ’ ಎಂದು ಸ್ಪೀಕರ್ ಅವರ ಪ್ರಾಮಾಣಿಕತೆಗೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ. ಆದರೆ, ಆ ಆಡಿಯೋದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಸರೂ ಪ್ರಸ್ತಾಪವಾಗಿದೆಯಲ್ಲ? ಆ ಬಗ್ಗೆ ಇಲ್ಲಿವರೆಗೂ ಯಾವ ಬಿಜೆಪಿ ನಾಯಕನೂ ಖೇದ ವ್ಯಕ್ತಪಡಿಸಿಲ್ಲ, ನೊಂದುಕೊಂಡಿಲ್ಲ. ಅಂದರೆ ಅವರಿಗೆ ಪಕ್ಕಾ ಗೊತ್ತಿದೆ: ಮೋದಿ-ಶಾ ಬೆಂಬಲದಿಂದಲೇ ಇದೆಲ್ಲ ನಡೆಯುತ್ತಿದೆ ಎಂಬುದು. ಆದರೆ ಬಾಹ್ಯವಾಗಿಯಾದರೂ ಈ ಕುರಿತಂತೆ ಮಾತಾಡಬಹುದಿತ್ತಲ್ಲ? ಎಂಟು ತಿಂಗಳಿಂದ ನಡೆದಿರುವ ಅಸಹ್ಯ ಆಪರೇಷನ್ ಕಮಲದಲ್ಲಿ ತಮ್ಮ ರಾಷ್ಟ್ರೀಯ ನಾಯಕರೂ ಭಾಗಿ ಎಂಬುದು ಮನದಟ್ಟಾಗಿರುವುದರಿಂದ ಅರ‍್ಯಾರಿಗೂ ಆಡಿಯೊದಲ್ಲಿ ಬಂದ ‘ಸತ್ಯ’ವನ್ನು ವಿರೋಧಿಸಲು ಆಗುತ್ತಿಲ್ಲವೇ?

ಇಲ್ಲಿ ಒಂದಿಷ್ಟು ಅಂಶಗಳನ್ನು ಸುಮ್ಮನೆ ಗಮನಿಸಿ:

* ಸೋಮವಾರ ಸ್ಪೀಕರ್ ಈ ವಿಷಯ ಎತ್ತಿದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಮಾಧುಸ್ವಾಮಿ, ‘ಎಲ್ಲೋ ಯಾರೋ ಮಾತಾಡಿದ್ದಕ್ಕೆ ತಾವು (ಸ್ಪೀಕರ್) ನೊಂದುಕೊಳ್ಳಬೇಡಿ. ನಿಮ್ಮ ಬಗ್ಗೆ ನಮಗೆಲ್ಲ ಗೌರವವಿದೆ. ಏನೋ ಅಚಾತುರ್ಯ ನಡೆದಿದೆ, ಅದನ್ನು ಮರೆತುಬಿಡಿ, ಮನ್ನಿಸಿಬಿಡಿ’ ಎಂದರು. ಅಂದರೆ ಈ ‘ಅಚಾತುರ್ಯ’ ನಡೆದಿರುವುದು ಸತ್ಯ ಎಂದು ಪರೋಕ್ಷವಾಗಿ ಅವರು ಒಪ್ಪಿಕೊಂಡರು. ಆದರೆ ರಮೇಶಕುಮಾರ್ ಹೆಸರು ಪ್ರಸ್ತಾಪವಾದುದಕ್ಕೆ ಕಳವಳ ವ್ಯಕ್ತಪಡಿಸಿದ ಅವರಿಗೆ, ಮೋದಿ-ಶಾ ಹೆಸರು ಪ್ರಸ್ತಾಪವಾಗಿದ್ದರ ಬಗ್ಗೆ ಯಾವ ಬೇಜಾರೂ ಇಲ್ಲವೆಂದಾಯಿತಲ್ಲ? ಅವತ್ತು ಮಾತಾಡಿದ ಬಿಜೆಪಿಯ ಎಲ್ಲ ನಾಯಕರೂ ಸ್ಪೀಕರ್ ಹೆಸರು ಬಂದುದಕ್ಕೆ ಬೇಸರ ವ್ಯಕ್ತಪಡಿಸಿದರೆ ಹೊರತು ತಮ್ಮ ರಾಷ್ಟ್ರೀಯ ನಾಯಕರ ಹೆಸರು ಪ್ರಸ್ತಾಪವಾದುದಕ್ಕೆ ಖೇದ ಪಡಲೇ ಇಲ್ಲ!

* ಮಂಗಳವಾರ, ಬುಧವಾರ ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತ ಮಾಡುವಾಗಲೂ, ಆಡಿಯೋದ ಸಣ್ಣ ಭಾಗ ಮಾತ್ರ ರಿಲೀಸ್ ಮಾಡಲಾಗಿದೆ ಎಂದರೆ ಹೊರತು ಅದು ನಕಲಿ ರಂದೂ ಗಟ್ಟಿಯಾಗಿ ಪ್ರತಿಪಾದಿಸಲೇ ಇಲ್ಲ!

* ಶರಣಗೌಡ ಎಂಬ 37 ವರ್ಷದ ಜೆಡಿಎಸ್ ಕಾರ್ಯಕರ್ತನೊಂದಿಗೆ ಒಂದೆರಡು ತಾಸು ಮಾತಾಡಿದ್ದಾರಂತೆ ಯಡಿಯೂರಪ್ಪ ಮತ್ತು ಶಿವನಗೌಡ ನಾಯಕ್. ಆ ‘ಹುಡುಗ’ನ ಜೊತೆ ಮಾತಾಡಿದ ಪೂರ್ತಿ ಆಡಿಯೋ ಬಿಡಿಗಡೆಯಾದರೂ, ಈಗ ರಲೀಸ್ ಆಗಿರುವ ವಿಷಯ ಸತ್ಯ ಎಂಬುದು ಗ್ಯಾರಂಟಿಯಾಯಿತಲ್ಲ. ಅಷ್ಟಕ್ಕೂ ಶರಣಗೌಡನಿಗೆ ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ ಯಡಿಯೂರಪ್ಪ ಬೋಧಿಸುತ್ತ ಕುಳಿತಿದ್ದರೆ? ಮಧ್ಯರಾತ್ರಿಯಲ್ಲಿ ದೇವದುರ್ಗದ ಶಾಸಕ ಶಿವನಗೌಡ, ಸರ್ಕಾರ ತಾನಾಗೇ ಬೀಳುತ್ತೆ. ಆಗ ನಮ್ಮ ಜೊತೆ ನೀನು ಇರು ಸಾಕು. ಎಲ್ಲ ನ್ಯಾಯಯುತವಾಗಿಯೇ ನಡೆಯಲಿದೆ/ ಎಂದು ಶರಣಗೌಡನಿಗೆ ಉಪದೇಶ ಮಾಡುತ್ತಿದ್ದರೆ?

ಹೀಗೆ ಸುಮ್ಮನೆ ಸರಳ ತರ್ಕ ಉಪಯೋಗಿಸಿದರೂ, ಬಿಜೆಪಿಯ ಹಿಪಾಕ್ರಸಿ ಬಯಲಾಗುತ್ತ ಹೋಗುತ್ತದೆ. ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದ ಮೇಲೆ, ಎಸ್‌ಐಟಿ ತನ್ನನ್ನು ಹಣಿಯಲಿದೆ ಎಂಬುದು ಖಾತ್ರಿಯಾಗಿದ್ದರಿಂದಲೇ ಯಡಿಯೂರಪ್ಪ ಈಗ ಸದಸನದ ಕಲಾಪಗಳನ್ನೆಲ್ಲ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇದರಲ್ಲಿ ಮಾಧುಸ್ವಾಮಿಯಂತವರು ಸಂಪೂರ್ಣ ಬೆತ್ತಲಾಗುತ್ತಿದ್ದಾರೆ. ಯಡಿಯೂರಪ್ಪ, ಶಿವನಗೌಡರನ್ನು ಬಿಡಿ, ಅವರು ಎಂದೋ ವಿವಸ್ತ್ರರಾಗಿ ಬಿಟ್ಟಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...