Homeಅಂಕಣಗಳುಚುಕುಬುಕು ಚುಕುಬುಕು ರೈಲು; ರೈಲ್ವೆ ಸಚಿವ ಸುತ್ತಿದರು ರೀಲು!

ಚುಕುಬುಕು ಚುಕುಬುಕು ರೈಲು; ರೈಲ್ವೆ ಸಚಿವ ಸುತ್ತಿದರು ರೀಲು!

- Advertisement -
- Advertisement -

ಮಿಥ್ಯ: ‘ಅದು ಹಕ್ಕಿ…ಅದು ವಿಮಾನ…ವೀಕ್ಷಿಸಿ, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ನಿರ್ಮಿಸಿರುವ ಭಾರತದ ಮೊದಲ ಅರೆ-ವೇಗವಾಹಿನಿ (ಸೆಮಿ-ಸ್ಪೀಡ್) ರೈಲು ವಂದೇ ಮಾತರಂ ಎಕ್ಸಪ್ರೆಸ್ ಅನ್ನು. ಇದು ಬೆಳಕಿನ ವೇಗದಲ್ಲಿ ಓಡುತ್ತದೆ…’

ರೈಲ್ವೆ ಸಚಿವ ಗೋಯಲ್ ಪೋಸ್ಟ್.

ಫೆಬ್ರುವರಿ 9ರಂದು ಈ ಮೇಲಿನ ಪೋಸ್ಟ್ ಹಾಕಿರುವ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಇದರ ಜೊತೆಗೆ ಒಂದು ಚಲಿಸುವ ರೈಲಿನ ವಿಡಿಯೋವನ್ನೂ ಹಾಕಿದ್ದಾರೆ. ಗೋಯಲ್ ಅವರ ಅಧಿಕೃತ ಟ್ವಿಟರ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲೂ ಇದನ್ನು ಹಾಕಲಾಗಿದೆ. ಇದನ್ನೇ ನಂಬಿದ ‘ಭಕ್ತರು’ ಈ ವಿಷಯವನ್ನು ಜಾಲತಾಣದಲ್ಲಿ ಹರಡಿದ್ದೇ ಹರಡಿದ್ದು.
ಸಚಿವರು ಹಾಕಿದ ವಿಡಿಯೋ ಲಿಂಕ್: https://twitter.com/PiyushGoyal/status/1094496373410615296
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಕೂಡ ಇದೇ ವಿಡಿಯೋವನ್ನು ರಿಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಇಂತಹ ವಿಷಯಗಳನ್ನು ಬೆಳಕಿನ ವೇಗದಲ್ಲಿ ಕ್ಯಾಚ್ ಮಾಡುವ ‘ರಿಪಬ್ಲಿಕ್’ ಟಿವಿಯವರು ತಮ್ಮ ವೆಬ್‌ಸೈಟಿನಲ್ಲಿ ಈ ವಿಡಿಯೋ ಒಗೆದು, ‘ವಾವ್, ಮೇಕ್ ಇನ್ ಇಂಡಿಯಾ’ ಎಂದಿದ್ದಾರೆ!

ಸತ್ಯ: ರೈಲು ಸಚಿವ ರೀಲು ಬಿಟ್ಟಿದ್ದು ಅವರು ಪೋಸ್ಟ್ ಹಾಕಿದ ಸ್ವಲ್ಪ ಹೊತ್ತಿನಲ್ಲೇ ಬಯಲಾಗಿತ್ತು. ಅವರ ಫೇಸ್‌ಬುಕ್ ಪೇಜ್‌ನಲ್ಲಿ ಕಮೆಂಟ್ ಮಾಡಿದ ಹಲವರು ಇದು ಒರಿಜಿನಲ್ ವಿಡಿಯೋ ಅಲ್ಲ ಎಂದು ಟೀಕಿಸಿದ್ದರು. ‘ಆರ್‌ಎಫ್ ಎಜೆ’ ಹೆಸರಿನ ಒಬ್ಬರು, ಇದು ನನ್ನ ವಿಡಿಯೋ. ಗೋಯಲ್ ಇದರ ವೇಗವನ್ನು (ವಿಡಿಯೋದಲ್ಲಿ) ದುಪ್ಪಟ್ಟು ಮಾಡಿ ಸುಳ್ಳು ಹರಡುತ್ತಿದ್ದಾರೆ ಎಂದು ಕಮೇಂಟ್ ಮಾಡಿದ್ದಲ್ಲದೇ, ಒರಿಜಿನಲ್ ವಿಡಿಯೊದ ಯು-ಟ್ಯೂಬ್ ವಿಳಾಸವನ್ನೂ ನೀಡಿದ್ದರು.

ಓರಿಜಿನಿಲ್ ವಿಡಿಯೋ ಮಾಡಿದವರ ಕಮೆಂಟ್

ಯು-ಟ್ಯೂಬ್ ಪರೀಕ್ಷಿಸಿದಾಗ ‘ರೈಲ್ ಮೇಲ್’ ಎಂಬ ಚಾನೆಲ್ ಒಂದಿದ್ದು, ಇದರ ಸದಸ್ಯರು ರೈಲು, ರೈಲು ಪ್ರಯಾಣ ಕುರಿತು ಆಸಕ್ತಿ ಇರುವ ಜನರಾಗಿದ್ದಾರೆ. ‘ಆರ್‌ಎಫ್ ಎಜೆ’ ಅವರೇ ಅಡ್ಮಿನ್ ಆಗಿರುವ ‘ರೈಲ್‌ಮೇಲ್’ ಹೆಸರಿನ ಫೇಸ್‌ಬುಕ್ ಪೇಜ್ ಕೂಡ ಇದೆ.
ಮೂಲ ವಿಡಿಯೋದಲ್ಲಿನ ರೈಲಿನ ವೇಗವನ್ನು ವಿಡಿಯೋದಲ್ಲಿ ಡಬಲ್ ಮಾಡಿರುವ (ಮಾಡಿಸಿರುವ!) ರೈಲು ಸಚಿವರು, ಮೇಕ್ ಇನ್ ಇಂಡಿಯಾ ಅಂತೆಲ್ಲ ರೈಲು ಬಿಟ್ಟಿದ್ದು, ರೀಲು ಸುತ್ತಿದ್ದು ಪಕ್ಕಾ ಆಗಿತು. ಇವೆರಡೂ ವಿಡಿಯೋಗಳನ್ನು ಪಕ್ಕಕ್ಕಿಟ್ಟು ಪರೀಕ್ಷಿಸಿದಾಗ ಸತ್ಯ ಇನ್ನಷ್ಟು ನಿಚ್ಚಳವಾಯಿತು. ಮೂಲ ವಿಡಿಯೋವನ್ನು ಹರಿಯಾಣದ ಅಸೌಟಿ ರೈಲು ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದ್ದು, ಆ ವಿಡಿಯೋ ಮೇಲೆ ವಾಟರ್ ಟ್ರೇಡ್‌ಮಾರ್ಕ್ ಕೂಡ ಇದೆ.

ಪಿಯುಷ್ ಗೋಯಲ್

ಎರಡೂ ವಿಡಿಯೋ ಪರೀಕ್ಷಿಸಿದ ಲಿಂಕ್:
https://vimeo.com/316395038
ಇದೇನೂ ಮೊದಲ ಬಾರಿ ಅಲ್ಲ, ಹಲವಾರು ಸಲ ರೈಲ್ವೆ ಸಚಿವ ಕೇಂದ್ರ ಸರ್ಕಾರವನ್ನು ಹೊಗಳಿಕೊಳ್ಳಲು ಸುಳ್ಳು ಟ್ವೀಟ್, ಸುಳ್ಳು ಪೋಸ್ಟ್ಗಳನ್ನು ಹಾಕುತ್ತಲೇ ಬಂದಿದ್ದಾರೆ.
ರೈಲು ಬಿಡೋ ಮಾರಾಯ ಅಂದರೆ ರೀಲು ಸುತ್ತುತ್ತ ಕುಳಿತಿದ್ದಾರೆ ಪಿಯುಷ್ ಗೋಯಲ್.

( ಕೃಪೆ: ಅಲ್ಟ್ ನ್ಯೂಸ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...