Homeಮುಖಪುಟಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

ಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

- Advertisement -
- Advertisement -

ಕರ್ನಾಟಕದಲ್ಲಿ ಪಕ್ಷದ ಸಾಮಥ್ರ್ಯಕ್ಕಿಂತಲೂ ವ್ಯಕ್ತಿಗತ ಚರಿಷ್ಮಾ ಮಾತ್ರ ಲೆಕ್ಕ ಹಾಕುವುದಾದರೆ ಕುಮಾರಸ್ವಾಮಿಯೇ ಜನಪ್ರಿಯ ನಾಯಕರಾಗಿದ್ದರು. ರೈತರ ಗಣನೀಯ ವಿಭಾಗ, ಮಾಸಾಶನ ಪಡೆಯುವ ವೃದ್ಧರು-ಮಹಿಳೆಯರು ಮತ್ತು ಯುವಕರ ಒಂದು ವಿಭಾಗದ ನಡುವೆ ಎಚ್‍ಡಿಕೆ ಬಗ್ಗೆ ವಿಶೇಷವಾದ ಅಭಿಮಾನವಿತ್ತು. ಹಾಗಾಗಿಯೇ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಮೂವರ ಜನಪ್ರಿಯತೆಯ ಕುರಿತು ಸಮೀಕ್ಷೆ ನಡೆದಾಗ, ಜೆಡಿಎಸ್ ಪಕ್ಷದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಮಾರಸ್ವಾಮಿಯ ಪರ ಒಲವು ಇರುತ್ತಿತ್ತು. ಮುಖ್ಯಮಂತ್ರಿಯಾದ ನಂತರ ಜೆಡಿಎಸ್ ಪಕ್ಷದ ಅಭಿನಂದನೆ ಸ್ವೀಕರಿಸಿ ಮಾತನಾಡುವಾಗ ಅವರೂ ಇದನ್ನೇ ಹೇಳಿದರು. ‘ನಾನು ಹೋದ ಕಡೆಯಲ್ಲೆಲ್ಲಾ ಜನರು ತೋರುವ ಅಭಿಮಾನ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ನಮ್ಮ ಪಕ್ಷಕ್ಕೆ ಮಾತ್ರ ಅವರು ಏಕೆ ಓಟು ಕೊಡುವುದಿಲ್ಲ?’.
ಜೆಡಿಎಸ್ ಪಕ್ಷದ ಸಂಘಟನೆಗೆ ಯಾವ ರೀತಿಯ ಒತ್ತೂ ಕೊಡದೇ, ಪಕ್ಷದಲ್ಲಿ ಸ್ವತಂತ್ರವಾಗಿ ಆಲೋಚಿಸಿ ನಾಯಕರಾಗುವ ತಮ್ಮ ಕುಟುಂಬೇತರ ವ್ಯಕ್ತಿಗಳಿಗೆ ಅವಕಾಶ ಕೊಡದೇ ಪಕ್ಷ ಬೆಳೆಯಬೇಕು ಎಂದರೆ ಹೇಗೆ ಬೆಳೆಯಲು ಸಾಧ್ಯ? ಜೆಡಿಎಸ್‍ನ ಶಕ್ತಿ ಮತ್ತು ಮಿತಿ ಎರಡೂ ಸಹಾ ದೇವೇಗೌಡರ ಕುಟುಂಬವೇ ಆಗಿದೆ. ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ‘ಮೂರನೇ’ ಶಕ್ತಿಗಿರುವ ಸಾಧ್ಯತೆಯ ಪ್ರಮಾಣವನ್ನು ಅವರು ಇವತ್ತಿಗೂ ಸರಿಯಾಗಿ ಮನಗಂಡಂತಿಲ್ಲ. ಹಲವು ತಪ್ಪು ಹೆಜ್ಜೆಗಳ ನಂತರವೂ ಜೆಡಿಎಸ್ ಮತ್ತು ಸ್ವತಃ ಕುಮಾರಸ್ವಾಮಿಯವರ ಜನಪ್ರಿಯತೆಯ ಕಾರಣಗಳಾದರೂ ಆ ಕುಟುಂಬಕ್ಕೆ ಗೊತ್ತಿದ್ದಂತಿಲ್ಲ. ಹಾಗಾಗಿಯೇ ಎಡವಟ್ಟುಗಳನ್ನು ಪದೇ ಪದೇ ಮಾಡಿಕೊಂಡು ‘ಮೂರನೇ ಸ್ಥಾನದಲ್ಲಿರುವ’ ಶಕ್ತಿಯಾಗಿಯೇ ಜೆಡಿಎಸ್ ಉಳಿದುಕೊಂಡಿದೆ.
ಈ ಸಾರಿ ಕುಮಾರಸ್ವಾಮಿಯವರು ಮಾಡುತ್ತಿರುವ ಒಂದು ಮುಖ್ಯ ಎಡವಟ್ಟೆಂದರೆ, ಸಕಾರಾತ್ಮಕ ಅಜೆಂಡಾದೊಂದಿಗೆ ತಮ್ಮ ವೋಟ್ ಬೇಸ್‍ಅನ್ನು ವಿಸ್ತರಿಸಿಕೊಳ್ಳದೇ ಇರುವುದು. ಯುವಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‍ಗಿಂತ ಜೆಡಿಎಸ್‍ಗಿರುವ ಅವಕಾಶವೇ ಹೆಚ್ಚು. ಹಳೆಯ ವೋಟ್‍ಬೇಸ್ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಯಾರು ಯುವಜನರನ್ನು ಹೆಚ್ಚು ತಮ್ಮೆಡೆಗೆ ಸೆಳೆಯುತ್ತಾರೋ ಅವರು ಮಾತ್ರ ಚುನಾವಣಾ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸುವುದು ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಕುರಿತು ಅಪ್‍ಡೇಟೆಡ್ ಮುನ್ನೋಟದೊಂದಿಗೆ ಮತ್ತು ಆ ಮುನ್ನೋಟದ ಕನಸನ್ನು ಜಾರಿ ಮಾಡಲು ಖಚಿತ ಹೆಜ್ಜೆಗಳನ್ನಿಡುವುದರೊಂದಿಗೆ ಸಾಧಿಸಬೇಕಾದ ಅಂಶ ಅದಾಗಿದೆ.
ಹಾಗೆ ನೋಡಿದರೆ, ಜೆಡಿಎಸ್‍ನ ಚುನಾವಣಾ ಭರವಸೆಗಳು ಯುವಕರ ಪರವಾಗಿಯೇ ಇದ್ದವು. ಮೋದಿ ಕೋಟಿ ಉದ್ಯೋಗದ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದರಿಂದ, ಈ ಸಾರಿ ಬಿಜೆಪಿಯು ಯಾವ ಸಂಖ್ಯೆಯನ್ನೂ ಹೇಳಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‍ಗಳೆರಡೂ ಒಂದು ಕೋಟಿ ಉದ್ಯೋಗದ ಭರವಸೆ ನೀಡಿದ್ದರೂ, ಅದನ್ನು ಮತ್ತಷ್ಟು ನಿರ್ದಿಷ್ಟವಾಗಿ ಮುಂದಿಟ್ಟಿದ್ದು ಜೆಡಿಎಸ್. ಪ್ರಣಾಳಿಕೆ, ಪೂರ್ಣಪುಟದ ಜಾಹೀರಾತುಗಳಿಂದ ಹಿಡಿದು, ಈಚೆಗೆ ಮಂಡಿಸಿದ ಬಜೆಟ್‍ನವರೆಗೆ ಕುಮಾರಸ್ವಾಮಿ ಹೊಸ ಅಂಶಗಳಿಗೆ ತೆರೆದುಕೊಂಡಿದ್ದು ಸ್ಪಷ್ಟವಾಗಿತ್ತು. ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆಂದು ಪ್ರಕಟಿಸಿದ್ದರಿಂದ ಹಿಡಿದು, ‘ಚೀನಾದೊಂದಿಗೆ ಸ್ಪರ್ಧೆ’ ಎಂದು ಹೇಳಿದ್ದರತನಕ ವಿಶೇಷತೆಗಳು ಗಮನ ಸೆಳೆದಿದ್ದೆವು. ನೀವು ಇಲ್ಲಿಯೇ ಬಂದು ತಯಾರು ಮಾಡಿ, ನಿಮ್ಮ ದೇಶಕ್ಕೆ ಲಾಭ ಕೊಂಡೊಯ್ಯಿ ಎಂದು ಹೇಳುವ ಮೋದಿಯವರ ಮೇಕ್‍ಇನ್‍ಇಂಡಿಯಾ ಯೋಜನೆ ಒಂದು ಕಡೆಗೆ ಇದ್ದರೆ, ನಾವು ಇಲ್ಲಿಯೇ ಉತ್ಪಾದಿಸಿ ಚೀನಾದೊಂದಿಗೂ ಸ್ಪರ್ಧಿಸುತ್ತೇವೆ ಎಂದು ಹೇಳುವ ಧೈರ್ಯ ಇನ್ನೊಂದೆಡೆ. ಎಚ್‍ಡಿಕೆ ಸಹಾ ಇಸ್ರೇಲ್ ಕೃಷಿ ಎಂಬ ಈ ನೆಲಕ್ಕೆ ಹೊಂದದ ಕೃಷಿಯನ್ನು ಇಲ್ಲಿ ಅಳವಡಿಸಬೇಕೆಂದು ಹೇಳಿದ್ದರೂ, ಪಾಳೇಕರ್ ಮಾದರಿಯ ಸಹಜ ಕೃಷಿಯ ವಿಚಾರ ಗಮನಕ್ಕೆ ಬಂದಾಗ ಅದರತ್ತಲೂ ಗಮನ ಹರಿಸಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ 10-15 ವರ್ಷಗಳಿಗೂ ಹೆಚ್ಚು ಕಾಲ ಅಡಿಗೆ ಮಾಡಿ, ಅಲ್ಲಿನ ಮಕ್ಕಳನ್ನು ಸಲಹಿ ದುಡಿದಿದ್ದ ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತುಹಾಕಿ ನೇರನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ನೇರನೇಮಕಾತಿಯು ವಾಸ್ತವದಲ್ಲಿ ಎಚ್.ಆಂಜನೇಯ ಅವರ ಹಗರಣವಾಗಿತ್ತು. ಹಾಗಿದ್ದರೂ, ಅವರ ನಿರಂತರ ಪ್ರತಿಭಟನೆಗೆ ಸ್ಪಂದಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಲು ಎಚ್‍ಡಿಕೆ ಸೂಚಿಸಿದ್ದರು. ಕೆಲಸ ಹೋಗಿಯೇಬಿಟ್ಟಿತು ಎಂದಾದರೂ ಬಿಡದೇ ಹೋರಾಡಿದವರಿಗೆ ನಿಜಕ್ಕೂ ಜೀವ ವಾಪಸ್ಸು ಬಂದಂತಾಗಿತ್ತು.
2006ರಲ್ಲಿ ಸಿಕ್ಕ ಅವಕಾಶದಲ್ಲೂ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ ಎಚ್‍ಡಿಕೆ ಈ ಸಾರಿಯೂ ಅದೇ ರೀತಿ ಮಾಡಬಹುದು ಎಂಬ ಸೂಚನೆಗಳು ಕಾಣುತ್ತಿದ್ದ ಹೊತ್ತಿನಲ್ಲೇ ಎಡವಟ್ಟುಗಳೂ ಆರಂಭವಾಗಿವೆ. ಅದರ ಉದ್ಘಾಟನೆ ಆಗಿದ್ದು, ಶಾಲಾಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸಿದ್ದು. ಶೋಷಿತ ಸಮುದಾಯಗಳ ಪರವಾಗಿ ಪಕ್ಷಪಾತ ಎಣಿಸುತ್ತಾರೆ ಎಂದು ಟೀಕೆಗೊಳಗಾಗಿದ್ದ ಸಿದ್ದರಾಮಯ್ಯನವರೇ ತಮ್ಮ ಕಡೆಯ ಬಜೆಟ್‍ನಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಎಂದು ಪ್ರಕಟಿಸಿದ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಶೈಕ್ಷಣಿಕ ವರ್ಷದ ಕೊನೆ ಬಂದಿದ್ದರಿಂದ ಅದು ಜಾರಿಯಾಗುವ ಸಂದರ್ಭವಿರಲಿಲ್ಲ. ‘ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳೂ ಮುಂದುವರೆಯುತ್ತವೆ’ ಎಂದು ಪ್ರಕಟಿಸಿದ್ದರೂ, ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಮಾತ್ರ ಆಗಲಿಲ್ಲ.
ರಾಜ್ಯದ 19.6 ಲಕ್ಷ ಮಕ್ಕಳಿಗೆ ಹಿಂದಿನಿಂದಲೂ 650 ಕೋಟಿ ರೂ.ಗಳ ಸರ್ಕಾರೀ ಅನುದಾನದಿಂದ ರಿಯಾಯಿತಿ ದರದ ಬಸ್‍ಪಾಸ್ ನೀಡಲಾಗುತ್ತಿತ್ತು ಮತ್ತು ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲಾಗುತ್ತಿತ್ತು. ಅದಕ್ಕೆ ಇನ್ನೂ 836 ಕೋಟಿ ರೂ.ಗಳನ್ನು ಸೇರಿಸಿದ್ದರೆ, ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಿದಂತಾಗುತ್ತಿತ್ತು. ಅದನ್ನೇ ಸಿದ್ದರಾಮಯ್ಯವರು ಪ್ರಕಟಿಸಿದ್ದದ್ದು. ಆದರೆ, ಸಾರಿಗೆ ನಿಗಮಗಳಿಗೂ ಇದು ಇಷ್ಟವಿರಲಿಲ್ಲ. ಹಾಗಾಗಿಯೇ ಇದಕ್ಕೆ 1900 ಕೋಟಿ ರೂಗಳು ಬೇಕು ಇತ್ಯಾದಿ ಅಸಂಬದ್ಧ ಹೇಳಿಕೆಗಳು ಬಂದವು. ಕುಮಾರಸ್ವಾಮಿಯವರು ಒಂದಷ್ಟು ಕಾಲ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಎಳೆದರು. ನಂತರ, ಕೊಡುವುದೇ ಇಲ್ಲವಂತೆ ಎಂಬ ಸುದ್ದಿಗಳು ಹರಿದಾಡಿದವು. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕಿಳಿದವು. ಅವೆಲ್ಲಾ ಆದ ಮೇಲೆ ಸರ್ಕಾರೀ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್‍ಪಾಸ್ ನೀಡಲಾಗುವುದು ಎಂದು ಸ್ವತಃ ಸಿಎಂ ರಾಮನಗರದ ಸಭೆಯೊಂದರಲ್ಲಿ ಪ್ರಕಟಿಸಿದರು. ರಾಜ್ಯದ ಎಷ್ಟೋ ಕಡೆ ಸರ್ಕಾರೀ ವ್ಯವಸ್ಥೆಯಲ್ಲಿ ಓದಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಇದ್ದು, ಅನುದಾನಿತವೋ ಖಾಸಗಿ ಸಂಸ್ಥೆಯನ್ನೋ ಪೋಷಕರು ನೋಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಅಂತಿಮವಾಗಿ ಕುಮಾರಸ್ವಾಮಿಯವರ ನಿರ್ಧಾರವು ಭಾಗಶಃ ಕ್ರೆಡಿಟ್‍ಅನ್ನು ಸಹಾ ನೀಡದೇ, ಜಾರಿಯಾಗುವ ಹಂತದಲ್ಲಿದೆ.
ಇಂಥದ್ದೇ ಇನ್ನೊಂದು ಸಮಸ್ಯೆ ಗುತ್ತಿಗೆ ನೌಕರರ ವಿಚಾರದಲ್ಲಿ ಆಗುತ್ತಿದೆ. ಎಲ್ಲಾ ಗುತ್ತಿಗೆ ನೌಕರರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದ್ದ ಜೆಡಿಎಸ್ ನೇತೃತ್ವದಲ್ಲೇ ಸರ್ಕಾರವು ರಚನೆಯಾಗಿದೆ; ಇರುವ ಭದ್ರತೆಯನ್ನೂ ಕಿತ್ತುಹಾಕುವ ಕೆಲಸ ಹಲವು ಇಲಾಖೆಗಳಲ್ಲಿ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಯವರ ಕೈಯ್ಯಲ್ಲೇ ಇರುವ ಇಂಧನ ಇಲಾಖೆಗೆ ಸೇರಿದ ಕೆಪಿಟಿಸಿಎಲ್‍ನಲ್ಲಿ ಗುತ್ತಿಗೆ ನೌಕರರನ್ನು ಕಿತ್ತು ಹಾಕಲಾಗುತ್ತಿದೆ. ಅದರಲ್ಲೂ ಜೆಸ್ಕಾಂನ ವ್ಯಾಪ್ತಿಯಲ್ಲಿ ಒಬ್ಬ ಗುತ್ತಿಗೆ ನೌಕರರೂ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಖಜಾನೆ-2 ಎಂಬ ತಂತ್ರಾಂಶ ವಿಧಾನದ ಕಾರಣದಿಂದ ಡಾಟಾ ಎಂಟ್ರಿ ಆಪರೇಟರ್‍ಗಳು ಸಮಸ್ಯೆಗೆ ಸಿಲುಕಿದ್ದಾರೆ. ಪಶುಪಾಲನಾ ಇಲಾಖೆಯ ಗ್ರೂಪ್ ಡಿ ನೌಕರರಲ್ಲಿ 650 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟವು ಹೋರಾಟ ಮಾಡಿ, ಸ್ವತಃ ಮುಖ್ಯಮಂತ್ರಿಯವರನ್ನೇ ಭೇಟಿಯಾದರೂ, ಸ್ಪಷ್ಟ ಕ್ರಮ ತೆಗೆದುಕೊಳ್ಳದೇ ಎಚ್‍ಡಿಕೆ ನುಣುಚಿಕೊಂಡಿದ್ದಾರೆ. ಒಕ್ಕೂಟದ ಪದಾಧಿಕಾರಿಗಳ ಪ್ರಕಾರ ಸುಮಾರು 30,000 ಗುತ್ತಿಗೆ ನೌಕರರಿಗೆ 4-6 ತಿಂಗಳಿಂದ ಸಂಬಳವೇ ಇಲ್ಲ. ಇದರ ಕುರಿತೂ ಯಾವ ನಿರ್ದಿಷ್ಟ ಕ್ರಮವನ್ನು ಪ್ರಕಟಿಸಿಲ್ಲ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಭರವಸೆಯದ್ದೂ ಇದೇ ಪಾಡು. ಚೀನಾದೊಂದಿಗೆ ಸ್ಪರ್ಧೆಯೂ ಸೇರಿ ಅವರ ಯೋಜನೆಗಳಿಂದ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಬಜೆಟ್‍ನಲ್ಲಿ ಘೋಷಿಸಿದರು. ಆದರೆ, ಇದುವರೆಗಿನ ಇತಿಹಾಸ ನೋಡಿದರೆ, 2 ಲಕ್ಷ ಉದ್ಯೋಗಗಳಿಗಿಂತ ಹೆಚ್ಚಿನ ಸಾಧ್ಯತೆ ಇಲ್ಲ. ಅದಕ್ಕಿಂತ ತುಂಬಾ ಮೇಲು ಪದರದ ಒಂದು ಕ್ರಮವನ್ನೂ ಎಚ್‍ಡಿಕೆ ಪ್ರಕಟಿಸಿದರು. ಅದೆಂದರೆ, ತಮ್ಮ ಗೃಹ ಕಚೇರಿಯಲ್ಲೇ ಉದ್ಯೋಗ ಕೊಡಿಸುವುದು. ಅದೇ ಒಂದು ಉದ್ಯೋಗ ಮೇಳದ ಥರಾ ಆಗುತ್ತದೆ ಎಂತಲೂ ಪ್ರಕಟಿಸಿದರು. ಮುಖ್ಯಮಂತ್ರಿ ಹೇಳುತ್ತಾರೆಂಬ ಕಾರಣಕ್ಕೆ ಕೆಲವು ಕಂಪೆನಿಗಳು ಆಗಾಗ್ಗೆ ಕೆಲವು ಉದ್ಯೋಗಗಳನ್ನು ನೀಡಬಹುದಾದರೂ, ರಾಜ್ಯದ ಪ್ರತಿ ಮೂಲೆಯಲ್ಲೂ ಉದ್ಯೋಗ ಸ್ಥಳೀಯವಾಗಿಯೇ, ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸೃಷ್ಟಿಯಾಗಬೇಕು ಎಂಬುದು ತಿಳಿಯದಷ್ಟು ಮುಖ್ಯಮಂತ್ರಿ ಅಮಾಯಕರೇ ಎಂಬ ಪ್ರಶ್ನೆ ಏಳುತ್ತದೆ.
ಉದ್ಯೋಗ ಸೃಷ್ಟಿಗೆ ಬೇಕಿರುವುದು ಹಣ ಎಂದು ತಿಳಿದಿರುವುದರಲ್ಲೇ ಒಂದು ದಡ್ಡತನ ಅಡಗಿದೆ. ಹಾಗಾಗಿಯೇ ಹೆಚ್ಚೆಚ್ಚು ಹೂಡಿಕೆ ಆಗಬೇಕು ಎಂದು ಸರ್ಕಾರಗಳು ಅನಗತ್ಯವಾಗಿ ಬೃಹತ್ ಕಂಪೆನಿಗಳಿಗೆ ರಿಯಾಯಿತಿ ನೀಡುತ್ತಿರುತ್ತವೆ. ಹಣದ ಅಗತ್ಯವಿರುವುದು ನಿಜವಾದರೂ, ಅದಕ್ಕಿಂತ ಮುಖ್ಯವಾದುದೆಂದರೆ ಉದ್ಯೋಗ ಸೃಷ್ಟಿಯ ನೀತಿ ಮತ್ತು ಅದನ್ನು ಆಗಮಾಡಿಸುವ ಯಂತ್ರಾಂಗ. ಅದಕ್ಕಾಗಿ ನಿರ್ದಿಷ್ಟ ಕ್ರಮಗಳನ್ನೇನೂ ಕೈಗೊಳ್ಳದಿದ್ದರೆ, ಕುಮಾರಸ್ವಾಮಿಯವರಿಗೆ ಸಿಗಬಹುದಾದಷ್ಟು ಸಮಯದಲ್ಲಿ ಪರಿಣಾಮಕಾರಿಯಾದ ಏನನ್ನೂ ಮಾಡಿದಂತಾಗುವುದಿಲ್ಲ. ರೈತರ ಸಾಲಮನ್ನಾದ ವಿಚಾರಕ್ಕಿಂತಲೂ ಮಹತ್ವದ ಸಂಗತಿಗಳು ಇವಾಗಿವೆ. ಆ ಕಡೆಗೆ ಗಮನ ಹರಿಸದೇ, ಹೊಸ ತಲೆಮಾರಿನ ಯುವಜನರು ಮತ್ತಷ್ಟು ಸಿನಿಕತನಕ್ಕೆ, ಹತಾಶೆಗೆ ಒಳಗಾದರೆ ಅದರಿಂದ ಜೆಡಿಎಸ್‍ಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಅಷ್ಟು ಮುಖ್ಯವಲ್ಲ; ರಾಜ್ಯಕ್ಕಂತೂ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...