Homeಅಂಕಣಗಳುಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

ಸಂಪಾದಕೀಯ | ಆಶಾಭ್ರಾಂತಿಯ ಆಚೆಗೆ ಸಾಗುವ ಸಮಯ

- Advertisement -
- Advertisement -

ಸಿನೆಮಾ ಕುರಿತ ವಿಶೇಷ ಒಳನೋಟ ಇರುವ ಗೆಳೆಯರೊಬ್ಬರು ಅಮೀರ್ ಖಾನ್‍ರ ‘ಪಿಕೆ’ ಸಿನೆಮಾ ಬಂದ ಸಂದರ್ಭದಲ್ಲಿ ಹೇಳಿದ ಮಾತು ಆಶ್ಚರ್ಯಕರವಾಗಿತ್ತು. ‘ಈ ಸಿನೆಮಾ ನನಗೆ ಇಷ್ಟವಾಗಲಿಲ್ಲ’, ‘ಅಲ್ಲಾರೀ ಇಷ್ಟೊಂದು ಪಾಪ್ಯುಲರ್ ಶೈಲಿಯಲ್ಲಿ ಹುಸಿ ಧಾರ್ಮಿಕತೆಯನ್ನು ಬಯಲುಗೊಳಿಸಿದೆ. ನಿಮಗೆ ಇಷ್ಟವಾಗದ ಅಂಶ ಏನು ಇದರಲ್ಲಿ?’, ‘ಅದೇ ನನಗೆ ಸಮಸ್ಯೆ ಅನ್ನಿಸಿದ್ದು. ಇದನ್ನು ಹೊಗಳುತ್ತಿರುವ ಸೆಕ್ಯುಲರ್‍ಗಳೆಲ್ಲರೂ, ತಮ್ಮ ಜವಾಬ್ದಾರಿಯನ್ನು ಮರೆತು ಅವೆಲ್ಲವನ್ನೂ ಅಮೀರ್ ಖಾನ್ ಮೇಲೆ ಅಥವಾ ಸಿನೆಮಾ ನಿರ್ದೇಶಕರ ಮೇಲೆ ಹಾಕುತ್ತಿದ್ದಾರೆ. ಸಿನೆಮಾ ಒಂದರಿಂದ ಇದನ್ನು ಮಾಡಲು ಸಾಧ್ಯವೇ?’ ಸಿನೆಮಾ ಚೆನ್ನಾಗಿದ್ದರೆ ಮೆಚ್ಚಿಕೊಳ್ಳಬೇಕು. ಇದ್ಯಾಕೋ ವಿಚಿತ್ರ ವಾದ ಎನಿಸಿತ್ತು.

ಈಗ ಇದು ನೆನಪಾಗಲು ಕಾರಣವಿದೆ. ಉತ್ತರ ದೇಶದಿಂದ ಹೊರಟಿರುವ ಬಿಜೆಪಿಯ ರಥವನ್ನು ಮತ್ತು ಫ್ಯಾಸಿಸ್ಟರ ಓಟವನ್ನು ದಕ್ಷಿಣಾಪಥದಲ್ಲಿ ಕಟ್ಟಿಹಾಕಲು ಸಿದ್ದರಾಮಯ್ಯ ವಿಫಲರಾದರು ಎಂದು ನಾವು ದೂರುತ್ತಾ ಕೂತರೆ? ಈ ಸಂಚಿಕೆಯ ಒಂದು ವರದಿಯಲ್ಲಿ ಸಿದ್ದರಾಮಯ್ಯನವರ ಮಿತಿಗಳೇನಾಗಿದ್ದವು ಮತ್ತು ಬಿಜೆಪಿಯ ಅನೈತಿಕ ಆಕ್ರಮಣಕಾರಿ ನಡೆಗಳೇನಾಗಿದ್ದವು ಎಂಬುದನ್ನು ವಿಸ್ತಾರವಾಗಿ ಬರೆಯಲಾಗಿದೆ. ಸಿದ್ದರಾಮಯ್ಯನವರ ಮಿತಿಗಳ ಬಗ್ಗೆ ಅದರಲ್ಲಿ ಬರೆದಿರುವ ಅಂಶಗಳು ಸರಿಯಾಗಿಯೇ ಇವೆ. ಅವರೂ ಮಿತಿಗಳಿರುವ ಮನುಷ್ಯರೇ. ಆ ಮಿತಿಗಳು ಅವರಲ್ಲಿ ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆಯಿಂದಲೂ ಇತ್ತು, ಬಹುಶಃ ರಾಜಕಾರಣಕ್ಕೆ ಬಂದಾಗಿನಿಂದಲೂ ಇದ್ದವು. ಅವೆಲ್ಲದರ ನಡುವೆಯೂ, ಕಳೆದ ಮೂರ್ನಾಲ್ಕು ದಶಕಗಳ ಈ ರಾಜ್ಯದ ಮುಖ್ಯಮಂತ್ರಿಗಳಲ್ಲೇ ಉತ್ತಮ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ತಮ್ಮ ಆಡಳಿತವನ್ನು ಘನತೆಯಿಂದಲೇ ನಡೆಸಿದ್ದಾರೆ.

ಪ್ರಜಾತಂತ್ರವನ್ನು ನಾಶ ಮಾಡಲು ಹೊರಟಿರುವ ಬಿಜೆಪಿಯ ರಥವನ್ನು ಕಟ್ಟಿ ಹಾಕುವ ಜವಾಬ್ದಾರಿ, ಅದನ್ನು ಬಯಸುವ ನಮ್ಮೆಲ್ಲರದ್ದೂ ಆಗಿದೆ. ಸಾಮಾಜಿಕ ನ್ಯಾಯ, ಜಾತ್ಯಾತೀತ ಮೌಲ್ಯಗಳ ಬಗ್ಗೆ ಬದ್ಧತೆಯಿಟ್ಟುಕೊಂಡಿರುವ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರಿಗೂ ಅದರಲ್ಲಿ ಒಂದು ಮುಖ್ಯ ಪಾತ್ರವಿರುತ್ತದೆ. ಆದರೆ, ಸಿದ್ದರಾಮಯ್ಯನವರು ನಡೆಸಿದ ಈ ಪ್ರಯೋಗವು ನಮಗೆ ಒಂದು ಬಹುಮುಖ್ಯವಾದ ಅಂಶವನ್ನು ಮನವರಿಕೆ ಮಾಡಿಕೊಟ್ಟಿದೆ. ಅದೇನೆಂದರೆ, ಈ ಚುನಾವಣೆ ಮತ್ತು ಚುನಾವಣೋತ್ತರ ಬೆಳವಣಿಗೆಗಳು ನಮ್ಮ ಇಂದಿನ ಪರಿಸ್ಥಿತಿಯನ್ನು, ನಮ್ಮ ಮುಂದಿರುವ ಕರ್ತವ್ಯವನ್ನು ಸ್ಫುಟವಾಗಿ ತೆರೆದಿಟ್ಟಿವೆ. ನಾವು ಎಚ್ಚೆತ್ತುಕೊಳ್ಳಲೇ ಬೇಕಾದ ಅಂತಿಮ ಕರೆ ಕೇಳುತ್ತಿದೆ.

ಹಾಗೆ ನೋಡಿದರೆ ಬಿಜೆಪಿ ಪಕ್ಷ ಮುಖ್ಯಮಂತ್ರಿಯಾಗಿ ಮುಂದುವರೆದರೆ ಕರ್ನಾಟಕಕ್ಕೆ, ದೇಶಕ್ಕೆ ಎಷ್ಟು ಅಪಾಯ ಎಂಬುದರ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ. ಈ ವಿಷಯ ಮಂಡನೆಯಲ್ಲಿ ಪಟ್ಟು ಸಾಧಿಸಿರುವ ಡಜನ್‍ಗಟ್ಟಲೆ ಚಿಂತಕರು, ವಾಗ್ಮಿಗಳು ನಮ್ಮ ನಡುವೆ ಇದ್ದಾರೆ. ಅಸಲಿ ಪ್ರಶ್ನೆ ಇರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅದು ಉಂಟುಮಾಡಬಹುದಾದ ಅಪಾಯದ ಕುರಿತಾದದ್ದು. ಇಲ್ಲಿ ಸಮಸ್ಯೆಯಿರುವುದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೂ ಅಲ್ಲ; ಸರ್ಕಾರ ರಚಿಸುವುದು ಅಲ್ಲ. ಅದು ನಾಡಿನ ಪ್ರಜಾತಂತ್ರವಾದಿಗಳಲ್ಲಿ, ಸಾಮಾಜಿಕ ಕಾರ್ಯಕರ್ತರಲ್ಲಿ ತರುವ ನಿರಾಳತೆಗೆ ಹಾಗೂ ಆ ಮೂಲಕ ಬರಬಹುದಾದ ನಿಷ್ಕ್ರಿಯತೆಗೆ ಸಂಬಂಧಿಸಿದ್ದು. ಫ್ಯಾಸಿಸಂನ ಅಪಾಯಗಳ ಕುರಿತು ಇತಿಹಾಸದ ಉದಾಹರಣೆಗಳನ್ನೂ ಹೆಕ್ಕಿ ಹೆಕ್ಕಿ ಮಾತನಾಡುತ್ತಾ ಹೋಗುವ ನಾವು, ಅದನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳುವಲ್ಲಿ ಮಾತ್ರ ಪದೇ ಪದೇ ಸೋಲುತ್ತಿದ್ದೇವೆ. ಇದು ನಮ್ಮೆಲ್ಲರ ಮುಂದಿರುವ ಕಟು ಸತ್ಯ.

ಇಂಗ್ಲಿಷಿನಲ್ಲೊಂದು ಪದ-ಪರಿಕಲ್ಪನೆ ಇದೆ. wishful thinking ಎಂದು. ಕನ್ನಡದಲ್ಲಿ ಇದಕ್ಕೆ ಸೂಕ್ತ ಪದವಿಲ್ಲ. ಗೂಗಲ್ ಟ್ರಾನ್ಸ್‍ಲೇಟ್‍ನ ಮೂರನೇ ಆಯ್ಕೆ ಆಶಾಭ್ರಾಂತಿ ಎಂದಿತ್ತು. ಬಹಳ ಸೂಕ್ತವಾದ ಅನುವಾದ. 2014ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ನಾವು ತರ್ಕಬದ್ಧವಾಗಿÀ ವಾದಗಳನ್ನು ಮಂಡಿಸಿದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪುನರಾಯ್ಕೆ ಬಗ್ಗೆ ಕೂಡ ನಾವು ವಾದ, ತರ್ಕಗಳನ್ನು ಮುಂದಿಟ್ಟೆವು. ತರ್ಕ ಸರಿಯಿರಲಿಲ್ಲವೆಂದೇನಲ್ಲ. ಜೊತೆಗೆ ಇವಿಎಂನ ಕುರಿತು ಇನ್ನೂ ಅಂತಿಮ ಅನಿಸಿಕೆಗೆ ಬರುವುದಕ್ಕೂ ಸಾಧ್ಯವಾಗಿಲ್ಲ. ಆದರೂ, ಅವು ತರ್ಕಕ್ಕಿಂತಲೂ ನಮ್ಮ ನಿರೀಕ್ಷೆ ಅಥವಾ ಬಯಕೆಯಾಗಿತ್ತು. Actually the writing on the wall was clear in one way or the other.
.

ಬಿಜೆಪಿ ಮತ್ತದರ ಪರಿವಾರವು ಸ್ವಾತಂತ್ರ್ಯೋತ್ತರ ಭಾರತದ ಅತೀ ದೊಡ್ಡ ದುಷ್ಟಕೂಟವಾಗಿ ರೂಪುತಳೆದಿದೆ. ಲಕ್ಷಾಂತರ ಕೋಟಿಗಳ ಅಕ್ರಮ ಸಂಪತ್ತನ್ನು ಬಾಚಿ ಗುಡ್ಡೆ ಹಾಕಿಕೊಂಡಿರುವ ಕಾರ್ಪೊರೇಟ್ ಕುಳಗಳು ಇವರ ಬೆನ್ನೆಲುಬಾಗಿ ನಿಂತಿವೆ. ಒಂದಲ್ಲಾ ಒಂದು ರೀತಿಯಲ್ಲಿ ಇದೇ ಕಾರ್ಪೊರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕಿರುವ ಮಾಧ್ಯಮಗಳು ಈ ದುಷ್ಟಕೂಟದ ಪರವಾಗಿ ಸಾಮಾಜದ ಮನೋಭೂಮಿಕೆಯನ್ನು ಸಿದ್ಧಪಡಿಸಲು ಬಹಿರಂಗವಾಗಿಯೇ ಇಳಿದಿವೆ. ಫ್ಯಾಸಿಸ್ಟರು ಏನೆಲ್ಲಾ ಮಾಡಬಹುದೆಂಬುದನ್ನು ಇತಿಹಾಸವು ನಮಗೆ ತೋರಿಸಿಕೊಟ್ಟಿದೆಯೋ ಅವೆಲ್ಲವನ್ನೂ ಮಾಡಲು ಅವರು ಇಳಿದಾಗಿದೆ. ಹಾಗಾಗಿ ನಾವು ಕೂಡಲೇ ಕಾರ್ಯೋನ್ಮುಖರಾಗಬೇಕು; ಮುಂದಿನ ಚುನಾವಣೆಗೆ ನಾವು ಈಗಿನಿಂದಲೇ ತಯಾರಿ ನಡೆಸಬೇಕಿದೆ. ಇದು ಕೇವಲ ಚುನಾವಣೆಯ ವಿಚಾರವೂ ಅಲ್ಲ. ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಚಟುವಟಿಕೆಗಳು ವಿಪರೀತವಿದ್ದ 2013ರ ಸಂದರ್ಭದಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲಾ ಸೋತಿದ್ದ ಬಿಜೆಪಿ, 5 ವರ್ಷಗಳ ಕಾಂಗ್ರೆಸ್ ಆಡಳಿತ ಮತ್ತು ಕೋಮುದ್ವೇಷದ ಚಟುವಟಿಕೆಗಳು ಸಾಪೇಕ್ಷವಾಗಿ ಕಡಿಮೆಯಿರುವ 2018ರ ಈ ಚುನಾವಣೆಯಲ್ಲಿ ಒಂದನ್ನು ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಿದೆ. ಅದೂ ಹೊಸ, ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿ! ಹೊರಗೆ ಕೋಮುಗಲಭೆಗಳು ಎಷ್ಟು ನಡೆಯುತ್ತಿವೆ ಎಂಬುದಕ್ಕಿಂತ ವಿಷ ಹಾಗೂ ವಿಷಪೂರಿತ ಸಂಘಟನೆಯನ್ನು ಎಷ್ಟು ಸಬಲವಾಗಿ ಹಾಗೂ ವ್ಯಾಪಕವಾಗಿ ಹರಡುವುದು ಸಾಧ್ಯವಾಗಿದೆ ಎಂಬುದೇ ನಿರ್ಣಾಯಕವಾಗುತ್ತಿದೆ.

ಅದಕ್ಕೆ ವಿರುದ್ಧವಾಗಿ ಪ್ರಜಾತಂತ್ರದ – ಅಂದರೆ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಯ – ಅರಿವನ್ನು ಸಮಾಜದ ತಳಮಟ್ಟದಿಂದ ಬೆಳೆಸುವ ಮತ್ತು ಬಲಿಷ್ಢ ಸಂಘಟನೆಯನ್ನು ಕಟ್ಟುವ ನಿಟ್ಟಿನಲ್ಲಿ ನಾವೆಷ್ಟು ಕಾರ್ಯಪ್ರವೃತ್ತಾರಾಗಿದ್ದೇವೆ ಅಥವ ಕಾರ್ಯಪ್ರವೃತ್ತರಾಗಲಿದ್ದೇವೆ? ನಮ್ಮ ಪ್ರಜಾತಂತ್ರವಾದಿಗಳಲ್ಲಿ ಗಣನೀಯ ವಿಭಾಗದ ಕಾಳಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾರಿಕೊಳ್ಳುವುದು ಅಥವಾ ನಮ್ಮದೇ ವರ್ತುಲದಲ್ಲಿ ತಂತಮ್ಮ ವಾದವನ್ನು ಗೆಲ್ಲಿಸಿಕೊಳ್ಳುವುದು ಅಥವ ಇನ್ನಾವುದೋ ವಾದವನ್ನು ಸೋಲಿಸುವುದರಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ಹೀಗೆ ನಮ್ಮ ಶಕ್ತಿ ಸಾಮಥ್ರ್ಯ ಹರಿದು ಹಳ್ಳಹಿಡಿಯುತ್ತಿದೆ ಅನಿಸುತ್ತಿದೆ.

ಇವೆಲ್ಲದರ ಅರ್ಥ, ಪರಿಸ್ಥಿತಿ ಅತ್ಯಂತ ನಿರಾಶಾದಾಯಕವಾಗಿದೆ ಎಂದೇನೂ ಅಲ್ಲ. ಬಿಜೆಪಿ ನಡೆಸಿದ ಬಹುಮುಖೀ ಆಕ್ರಮಣಕಾರಿ ದಾಳಿಯ ನಂತರವೂ ರಾಜ್ಯದಲ್ಲಿ ಅತ್ಯಂತ ಹೆಚ್ಚು ಮತ ಪಡೆದ ಪಕ್ಷ ಅದಾಗಲಿಲ್ಲ. ಆಯಾ ಕ್ಷೇತ್ರದಲ್ಲಿ ಗೆಲುವಾಗಿ ಪರಿಣಮಿಸುವ ರೀತಿಯಲ್ಲಿ ಮತಗಳು ಕ್ರೋಢೀಕೃತವಾಗಲಿಲ್ಲ ಅಷ್ಟೇ. ಈ ಸನ್ನಿವೇಶದಲ್ಲಿ ಜೆಡಿಎಸ್‍ನೊಂದಿಗೆ ಕಾಂಗ್ರೆಸ್ ಹೃತ್ಪೂರ್ವಕವಾಗಿ ಕೈ ಜೋಡಿಸಿರುವುದು ಒಂದು ಒಳ್ಳೆಯ ಬೆಳವಣಿಗೆಯೇ. ಈ ರಾಜ್ಯದ ರಾಜಕಾರಣದಲ್ಲಿ ಜಾತ್ಯತೀತತೆಯನ್ನು ನೆಲೆಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಸಿಗಲಾರದು. ಆದರೆ ಇಂದಿನ ಪರಿಸ್ಥಿತಿಯನ್ನು ಅಂತಿಮ ಕರೆಗಂಟೆ ಎಂದು ಗಂಭೀರವಾಗಿ ಪರಿಗಣಿಸಬೇಕು ಅಷ್ಟೇ. ಹಾಗೆಯೇ ಯಾವ ರೀತಿಯ ಆಶಾಭ್ರಾಂತಿಯೂ ನಮ್ಮನ್ನು ಆವರಿಸದಂತೆ ಕಾಪಾಡಿಕೊಳ್ಳಬೇಕು.

ಪರ್ಯಾಯ ಮಾಧ್ಯಮಗಳನ್ನು ಕಟ್ಟಲು ಬೇಕಾದ ಸಂವಾದವನ್ನು ಶುರು ಮಾಡೋಣವೆಂಬ ಕರೆಯನ್ನು ಈ ನಿಮ್ಮ ಪತ್ರಿಕೆ ಕೊಟ್ಟಿದೆ. ಅದನ್ನು ಓದಬೇಕೆಂದು ಕೋರುತ್ತೇವೆ ಮತ್ತು ಕಟ್ಟುವ ಪ್ರಕ್ರಿಯೆಯಲ್ಲಿ ಮುಂದೆ ಬರುವವರನ್ನು ಉತ್ತೇಜಿಸಲು, ಸೂಕ್ತ ಅವಕಾಶ ಕಲ್ಪಿಸಿಕೊಡಲು ಗೌರಿ ಮೀಡಿಯಾ ಟ್ರಸ್ಟ್ ಪ್ರಯತ್ನ ಹಾಕುತ್ತದೆಂದು ಹೇಳಬಯಸುತ್ತೇವೆ. ಗೌರಿ ಲಂಕೇಶರಿಗೆ ಇದಕ್ಕಿಂತ ಉತ್ತಮವಾದ ಶ್ರದ್ಧಾಂಜಲಿ ಇನ್ನೇನಿರಲು ಸಾಧ್ಯ?

ಸಂಪಾದಕೀಯ ತಂಡದ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...