Homeಅಂಕಣಗಳುನೀರ ನಡೆ | ಡಾ : ವಿನಯಾ ಒಕ್ಕುಂದಹಿಂಸೆಯೆಂಬುದು ಹಾದಿ ಹಾಡು

ಹಿಂಸೆಯೆಂಬುದು ಹಾದಿ ಹಾಡು

- Advertisement -
- Advertisement -

ಇತ್ತೀಚಿನ ದಿನಮಾನಗಳು ಮನುಷ್ಯ ಸಮಾಜದಲ್ಲಿ ಹಬ್ಬುತ್ತಿರುವ ಹಿಂಸಾರತಿಗೆ ಪುರಾವೆಗಳಾಗುತ್ತಿವೆ ಆವತ್ತು, ದಾಂಡೇಲಿಯ ನಟ್ಟನಡುರಸ್ತೆ ಮನುಷ್ಯ ರಕ್ತವನ್ನು ಹೊಯ್ದುಕೊಂಡು ಜಿಗುಟಾದ, ಕಮಟು ವಾಸನೆಯ ಬೆಳಗು- ಕಾಲೇಜಿಗೆ ಬಂದ ಮಕ್ಕಳ ಮುಖವನ್ನು ತಡಕಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ನಿರ್ಣಯಾತ್ಮಕ ಅಧಿಕಾರವನ್ನು ಪಡೆದ ‘ದೊಡ್ಡ ಮಕ್ಕಳಿವರು’. ಇವರು ಸಮಾಜದ ನಡೆ-ನೀತಿಗಳನ್ನು ಸ್ಪಷ್ಟವಾಗಿ ಪ್ರತಿಫಲಿಸುವ ಕನ್ನಡಿಗಳು. ಹಾಗಾಗಿ ಇವರನ್ನು ‘ನನ್ನ ವಿಶ್ವವಿದ್ಯಾಲಯ’ಗಳು ಎಂದು ತಿಳಿಯುವುದು. ಈ ಮಕ್ಕಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಒಂದಿಷ್ಟು ಭಯ, ಅಚ್ಚರಿಗಳಿದ್ದ ಹಾಗಿತ್ತು. ಆದರೆ ಬಹುಪಾಲು ಹುಡುಗರು ಅದೆಂಥದೋ ಅವ್ಯಕ್ತ ಥ್ರಿಲ್‍ನಲ್ಲಿದ್ದರು. ಅದು ಖಂಡಿತ, ಮಜ ಉಡಾಯಿಸುವ ಸಂತಸವನ್ನು ವ್ಯಕ್ತಿಸುವ ಭಾವವಾಗಿರಲಿಲ್ಲ. ಆದರದು ಜೀವಕಲಕಿದ ವಿಷಾದವೂ ಆಗಿರಲಿಲ್ಲ. ಕಾಗೆಯೊಂದು ಸತ್ತುಬಿದ್ದರೆ, ಜೊತೆ ಕಾಗೆಗಳು ಕಾ ಕಾ ಎಂದು ವಾತಾವರಣವನ್ನು ಕಲಕಿಬಿಡುತ್ತವಲ್ಲ… ಅಂತಹ ಯಾವ ಗದ್ದಲವೂ ಅವರ ಮನಸ್ಸಿನಾಳದಲ್ಲಿರಲಿಲ್ಲ. ಆ ನಂತರದ ಪಿಸುಗುಡುವ ಮಾತುಗಳಲ್ಲಿ, ಕೊಲೆಯ ಕಾರಣವನ್ನು ತಿಳಿಯುವ, ಹೇಳುವ ಅವಸರವಿತ್ತು. ಅದು ಕೊಲೆಯ ಸಮರ್ಥನೆಯಾಗಿ ಅನುವಾದಗೊಳ್ಳುತ್ತಿತ್ತು. ವ್ಯಕ್ತಿಯೊಬ್ಬನ ಆರ್ಥಿಕ-ಸಾಮಾಜಿಕ-ಕಾನೂನಾತ್ಮಕ ದುಂದಾವರ್ತನೆಗಳಿದ್ದರೆ ಅದಕ್ಕೆ ಕೊಲೆಯನ್ನು ಪರಿಹಾರೋಪಾಯ ಎಂದು ರೂಪಿಸಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಸಿದ್ಧರಿರಲಿಲ್ಲ. ಅನ್ಯಾಯವೊಂದು ನಡೆದಿದೆ ಎಂದಾದರೆ, ಅದನ್ನು ಎದುರಿಸುವ ಸರಿದಾರಿಗಳಿಲ್ಲವೆ? ಪ್ರಜಾಪ್ರಭುತ್ವ ವ್ಯವಸ್ಥೆಯು ಕೊಡಮಾಡಿದ ಸೌಲಭ್ಯ ಹಾಗೂ ಹಕ್ಕುಬಾಧ್ಯತೆಗಳ ಫಲಾನುಭವಿಗಳಾದ ವಿದ್ಯಾರ್ಥಿಗಳಿಗೆ, ಕಾನೂನನ್ನು ಕೈಗೆತ್ತಿಕೊಳ್ಳುವುದು ಸಾಮಾಜಿಕ ಅನ್ಯಾಯ ಅಲ್ಲವೇ, ಎಂಬ ಪ್ರಶ್ನೆ ಕಾಡುತ್ತಿರಲಿಲ್ಲ. ಇನ್ನೂ ಅವರ ಮನಸ್ಸನ್ನು ಎಬ್ಬಿದರೆ ಅಲ್ಲಿ, ಕೊಲೆಗಾರನ ಬಗ್ಗೆ ಅನುಕಂಪ ಮತ್ತು ಮೆಚ್ಚುಗೆಯ ಬೀಜಗಳಿದ್ದಂತಿತ್ತು. ಹೌದು, ಅನ್ಯಾಯವನ್ನು ಎದುರಿಸಲು ಸ್ವತಃ ಕಾನೂನನ್ನು ತರಾಟೆಗೆ ತೆಗೆದುಕೊಳ್ಳುವ ‘ಹಿರೋಯಿಸಂ’ನ ಕಲ್ಪಿತವನ್ನು ಸಿನಿಮಾಗಳಂತಹ ಮನರಂಜನಾ ಉದ್ಯಮಗಳು ಧಾರಾಳವಾಗಿ ಉಣಬಡಿಸುತ್ತವೆ. ಅದನ್ನು ಉಂಡುಟ್ಟು ಬೆಳೆದವರು ಪ್ರತಿಯೊಂದು ಹಿಂಸೆಯೂ ಸ್ವಸಮರ್ಥನೆಯ ಪೋಷಾಕು ತೊಟ್ಟಿರುತ್ತದೆನ್ನುವುದನ್ನು ಗ್ರಹಿಸುವುದು ಕಷ್ಟ. ತೀರಾ ಇತ್ತೀಚೆಗೆ ಬಯಲುಸೀಮೆಯ ಸಣ್ಣ ಪಟ್ಟಣವೊಂದರಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಶಂಕಿಸಿ ಕೊಲೆಗೈದು ನೆತ್ತರು ಬಸಿಯುತ್ತಿರುವ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸ್ ಸ್ಟೇಷನ್ನಿಗೆ ಶರಣಾದ ಸುದ್ದಿ ಪ್ರಕಟವಾಗಿತ್ತು. ಕೊಲೆಯಾದ ಮತ್ತು ಕೊಲೆಗೈದವರ ನ್ಯಾಯ-ಅನ್ಯಾಯ, ಶೀಲ-ಅಶ್ಲೀಲಗಳ ನಿರೂಪಗಳು ಬೇರೆಬೇರೆಯೇ ಇದ್ದೀತು. ಆದರೆ ಆತನ ಧೈರ್ಯಕ್ಕೆ ಯುವಜನಾಂಗ ಬೇಸ್ತುಬಿದ್ದ ಹಾಗಿತ್ತು. ನ್ಯಾಯಕ್ಕಿರುವ ಬಹುಸಾಧ್ಯತೆಗಳ ಬೇರನ್ನು ಹೀಗೆ ಕತ್ತರಿಸುತ್ತಿದ್ದೇವೆ.
ದೇಶವೀಗ ಹಿಂಸಾರತಿಯಲ್ಲಿ ನಿರತವಾಗಿದೆ. ಜಾತಿಉಲ್ಲಂಘನೆಯನ್ನು ಒಪ್ಪಿಕೊಳ್ಳದ ಮೂಲಭೂತವಾದ, ಮರ್ಯಾದಾ ಹತ್ಯೆಯ ರೂಪ ಪಡೆದಿದೆ. ಕೋಮುವಾದ ಎಂಬ ಜನಾಂಗೀಯ ಭೇದವು ಆಹಾರವನ್ನು, ಆಚರಣೆಯನ್ನು, ಸೌಹಾರ್ದತೆಯನ್ನು ನೆಪ ಮಾಡಿಕೊಂಡು ನಿರ್ಲಜ್ಜವಾದ ಹತ್ಯಾಕಾಂಡಗಳನ್ನು ನಡೆಸಿದೆ. ಈಗ ಅದರ ಮುಂದುವರಿಕೆಯು ಶಂಕಿತರ ಮೇಲಿನ ಗುಂಪುದಾಳಿಯ ವಿರೂಪವನ್ನು ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಸುಶಿಕ್ಷಿತ ನಾಗರಿಕರೆನ್ನಿಸಿಕೊಂಡವರು ಉದ್ದೇಶಪೂರ್ವಕವಾಗಿಯೇ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ.ಇಂತಹ ಸುದ್ದಿಗಳಿಗೆ, ಅವುಗಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಜನರು ಕ್ಷಣಾರ್ಧದಲ್ಲಿ ಸೇರಿಬಿಡುತ್ತಾರೆ. ಶಂಕೆಯೊಂದೇ ಕಾರಣವಾಗಿ, ಬಡಪಾಯಿ ಜೀವಗಳು ಮನುಷ್ಯಕ್ರೌರ್ಯದ ದಾಖಲೆಗಳಾಗಿ ನರಳಿ ಸಾಯುತ್ತವೆ. ದೇಶದಾದ್ಯಂತ ಮರಮರಳಿ ಇಂತಹ ಘಟನೆಗಳು ನಡೆದವು. ಮೇಲ್ನೋಟಕ್ಕೆ ಇವು ಜನರ ಸಹಜ ಆಕ್ರೋಶದ ಆಕಸ್ಮಿಕಗಳು ಎಂಬಂತೆ ಕಾಣುತ್ತವೆ. ಆದರೆ ವಸ್ತುಸ್ಥಿತಿ ಇಷ್ಟು ಸರಳವಾಗಿಲ್ಲ. ಅಕಾರಣವಾಗಿ ಮರಣ ಹೊಂದಿದ ಜೀವಗಳ ಹಿನ್ನೆಲೆಯಲ್ಲಿ ನೋಡಿದಾಗ-ಹಲ್ಲೆಗೀಡಾದ ಬಹುತೇಕರು ದಲಿತರು, ಮುಸ್ಲಿಮರು, ಮಹಿಳೆಯರು ಮತ್ತು ಬಡವರು ಎಂಬುದು ಸಾಮಾಜಿಕ ಆಕ್ರೋಶವು ಯಾರತ್ತ ಮತ್ತು ಯಾಕೆ ಹೊರಳಿದೆಯೆಂದು ಖಚಿತಪಡಿಸುತ್ತಿದೆ. ಇವರಲ್ಲದೆ, ಸಮಾಜದ ಹರಕು ಹೊಲಿಯಲು ತಮ್ಮ ಜೀವವನ್ನು ದಾರವಾಗಿ ಪೋಣಿಸುತ್ತಿರುವವರ ಮೇಲಿನ ಹಲ್ಲೆ-ಹತ್ಯೆಗಳು ಈ ಹಿಂಸೋನ್ಮಾದದ ಮತ್ತೊಂದು ಮಾದರಿಗಳು. ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ ಇಂತಹ ಇತ್ತೀಚಿನ ನಿದರ್ಶನ. ಇಂತಹ ದಾಳಿಗಳನ್ನು ತಡೆಯಬಹುದಾದ, ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ ಕಾನೂನು ಪಾಲಕರು ತೋರುತ್ತಿರುವ ಅಸಡ್ಡೆ ಕೂಡ ಗಾಬರಿ ಬೀಳಿಸುವಂತಿದೆ. ತಮ್ಮ ಮೇಲೆ ಹಲ್ಲೆ ನಡೆದ 18 ದಿನಗಳ ನಂತರವೂ ಹಲ್ಲೆಗಾರರು ಯಾರು ಎಂಬ ಸರಿಯಾದ ಅಂದಾಜು ಇದ್ದರೂ ಅವರನ್ನು ಬಂಧಿಸಲಾಗಿಲ್ಲ ಎಂದು ಪ್ರತಿಭಟಿಸಿ ಸ್ವಾಮಿ ಅಗ್ನಿವೇಶ ಸುಪ್ರಿಂಕೋರ್ಟಿನ ಮೊರೆ ಹೋಗಲಿದ್ದಾರೆ. ಕಾನೂನು ಪಾಲಕರ ಕರ್ತವ್ಯಲೋಪವು ಬರಿಯ ಅಸಡ್ಡೆಯಿಂದ ನಡೆಯುವುದಿಲ್ಲ. ಅದರ ಬೆನ್ನಿಗೆ ಕಾನೂನು ರೂಪಿಸಿದ ಶಾಸಕಾಂಗದ ರಾಜಕಾರಣದ ದಾಳಗಳಿರುತ್ತವೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟು ಜುಲೈ 17 ರಂದು ಎಚ್ಚರಿಸಿದೆ. ಆದರೆ…
ಅಧಿಕಾರ ರಾಜಕಾರಣವೇ, ಹಿಂಸೋನ್ಮಾದದ ನೇರ ಹೊಣೆಯಾಗಿದೆ. ಸಾಮಾಜಿಕ ಸಹಜೀವನವನ್ನು ಛಿದ್ರಗೊಳಿಸುವುದು ರಾಜಕಾರಣಿಗಳಿಂದ ಮುಲಾಜಿಲ್ಲದಂತೆ ನಡೆಯುತ್ತಿದೆ. ನಮ್ಮದೇ ರಾಜ್ಯದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು- ತಾನೇನಾದರೂ ಗೃಹಮಂತ್ರಿಯಾದರೆ, ಬುದ್ಧಿಜೀವಿಗಳನ್ನು ನಿಲ್ಲಿಸಿ ಗುಂಡು ಹಾಕಿಸುತ್ತಿದ್ದೆ- ಎಂದು ಭವಿಷ್ಯತ್ತಿನ ಹಿಟ್ಲರ್‍ತನವನ್ನು ಹೇಳಿಕೊಂಡರು. ತಮ್ಮ ಕ್ಷೇತ್ರದ ಕಾರ್ಪೊರೇಟರುಗಳಿಗೆ, ನೀವು ಟೊಪ್ಪಿಗೆಯವರು, ಬುರ್ಖಾದವರ ಪರವಾಗಿ ಕೆಲಸ ಮಾಡಬೇಡಿ, ಹಿಂದೂಗಳ ಪರವಾಗಿ ಕೆಲಸ ಮಾಡಿರಿ- ಎಂದು ಫರ್ಮಾನು ಹೊರಡಿಸಿದರು. ಶಾಸಕರು, ಸಂಸದರು ಹೀಗೆ ತಮ್ಮನ್ನು ಒಂದುಜಾತಿ-ಧರ್ಮದ ಹುರಿಯಾಳುಗಳು ಎನ್ನುವಂತೆ ಬಿಂಬಿಸಿಕೊಳ್ಳಲು ಅವರಿಗೆ ಯಾವುದೇ ಮುಜುಗರವಿಲ್ಲದ ವಾತಾವರಣ, ತಡೆಯುವವರಿಲ್ಲದ ಪರಿಸ್ಥಿತಿ ಖಂಡಿತವಾಗಿಯೂ ಮತೀಯ ಅರಾಜಕತೆಯೇ ಆಗಿದೆ. ಸಮಾಜವು ಜಾತಿ, ಧರ್ಮ, ವರ್ಗಗಳಲ್ಲಿ ಛಿದ್ರವಾಗುವುದರಿಂದಲೇ ಹಿಂಸಾಪ್ರವೃತ್ತಿ ತೀವ್ರಗೊಳ್ಳುತ್ತದೆ. ನಮ್ಮವರು, ನಮ್ಮವರಲ್ಲದವರು- ಎಂಬ ಒಡಕಿನ ಭಾಷೆ ಬಲುಬೇಗ ಮನದಟ್ಟಾಗುತ್ತದೆ. ಈ ನಂಬಿಕೆಯ ಆಧಾರದಲ್ಲಿ ಒಡೆಯುವುದನ್ನು ಕಾನೂನುಬದ್ಧಗೊಳಿಸಲಾಗುತ್ತದೆ. ಬಡ ದಮನಿತ ಸಮುದಾಯಗಳು ಅಕಾರಣ ಆರೋಪಿಗಳಾಗುತ್ತಾರೆ. ರೊಹಿಂಗ್ಯಾ ಮುಸ್ಲಿಮರ ಕಥನದಂತೆಯೇ, ಭಾರತದಲ್ಲೀಗ ಬಾಂಗ್ಲಾ ನುಸುಳುಕೋರರ ಅಧ್ಯಾಯ ಪ್ರಾರಂಭವಾಗಿದೆ. ಇಲ್ಲಿಯೇ ಜನಿಸಿ, ಇಲ್ಲಿಯೇ ಬದುಕಿ, ಬದುಕಿಗೆ ನೆಲೆಯರಸುತ್ತಿರುವ ಬಡವರನ್ನು ದೇಶದ್ರೋಹಿಗಳೆಂದು, ಉಗ್ರಗಾಮಿಗಳೆಂದು, ದಂಗೆಕೋರರೆಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಆತಂಕದ ಎಲ್ಲ ಬೆಳವಣಿಗೆಗಳೂ ಇವರಿಂದಲೇ ಸಂಭವಿಸಿದ್ದೆಂದು ನಂಬಿಸಲಾಗುತ್ತದೆ. ಮಾಧ್ಯಮಗಳು ಈ ಊಹಾಪೋಹಗಳನ್ನೇ ಕಲ್ಪಿತವಾಗಿಸಿ, ಕೂಗುಮಾರಿಯಂತೆ ಕೂಗುತ್ತವೆ. ದ್ರೋಹಿಗಳೆಂಬ ನಂಬಿಕೆಯನ್ನು ಉತ್ಪಾದಿಸುತ್ತವೆ. ಜನರ ವಿಚಾರ ಸಾಧ್ಯತೆಯನ್ನು ಬೇರೊಂದು ನೆಲೆಯಲ್ಲಿ ಮುನ್ನಡೆಸುವುದರಿಂದ; ವಲಸೆ-ವಲಸಿಗರ ಪ್ರಶ್ನೆಯ ಚರಿತ್ರೆಯನ್ನಾಗಲೀ ಭಾರತೀಯರು ಅಮೆರಿಕಾದಂತಹ ದೇಶದ ರಾಜಕೀಯ ತೀರ್ಮಾನಕ್ಕೆ ಬೆಲೆ ತೆತ್ತಬೇಕಾದ ಕಾಲ ಹತ್ತಿರದಲ್ಲಿಯೇ ಇದೆಯೆಂಬ ವಿಸ್ತರಣೆಯನ್ನಾಗಲೀ ಗಮನಿಸುವ ಪುರುಸೊತ್ತು ಒದಗುವುದಿಲ್ಲ. ಜಾತಿ-ಧರ್ಮಗಳಿಗೆ ಅಂಟಿಕೊಂಡ ಮನಸ್ಸಿಗೆ ನ್ಯಾಯ-ಅನ್ಯಾಯಗಳ ವೈರುಧ್ಯಗಳು ಗೋಚರಿಸುವುದಿಲ್ಲ. ಅಪರಾಧಕೃತ್ಯದಲ್ಲಿ ಅರೆಸ್ಟಾದ ಆರೋಪಿಯನ್ನು ಸೃಷ್ಟಿಸಿದ ಸಮಕಾಲೀನ ದುರಂತಗಳನ್ನು ಪ್ರಶ್ನಿಸಬೇಕಾದ, ಅದರ ವಿರುದ್ಧ ಸಂಘಟಿತರಾಗಬೇಕಿದ್ದ ಜನರು, ಯೋಚನಾ ಸಾಮಥ್ರ್ಯವನ್ನು ಕಳೆದುಕೊಂಡವರ ಹಾಗೆ ‘ಆರೋಪಿ ನಮ್ಮಜಾತಿಯವನು, ಆದ್ದರಿಂದ ಆರೋಪಿಯಲ್ಲ’ ಎಂದು ವಾದಿಸುತ್ತಿದ್ದಾರೆ, ಬೀದಿಗಿಳಿಯುತ್ತಿದ್ದಾರೆ. ತಮ್ಮ ಮಕ್ಕಳು ನಿರಪರಾಧಿಗಳು ಅವರ ಪರವಾಗಿ ಹಿಂದೂ ಸಂಘಟನೆಗಳು ವಕೀಲರನ್ನಿಟ್ಟು ವಾದಿಸುತ್ತವೆ- ಎಂದು ಒಪ್ಪಿಕೊಳ್ಳುವ ಹಿರಿಯರು; ಗುಣ-ಸ್ವಭಾವಗಳು ಜಾತಿವಾಚಕಗಳು ಎಂದು ನಂಬುವವರು- ತಮ್ಮ ಕಣ್ಣೆದುರೇ ನಡೆಯುತ್ತಿರುವ ಅಪಾಯವನ್ನು ಕಾಣಲಾರರು. ಯಾರು ತಮ್ಮ ಕೌಟುಂಬಿಕ ಸ್ವಾಸ್ಥ್ಯವನ್ನು ಲೂಟಿಗೈದವರು- ಎಂಬುದನ್ನು ತಿಳಿಯಲಾರದಷ್ಟು ಮುಗ್ಧತೆಯನ್ನು ತೋರುತ್ತಾರೆ. ಹಿಂಸೆಯೀಗ ದಶಾವತಾರವನ್ನೆತ್ತಿದೆ. ಅದರ ಮೈತುಂಬ ಕಣ್ಣು, ಬಾಯಿಗಳೆದ್ದಿವೆ. ಬಿಹಾರದ ಹಾಸ್ಟೆಲ್ಲಿನ ಬಡ-ಎಳೆಯ ಹೆಣ್ಣುಮಕ್ಕಳ ದೇಹವನ್ನು ಹುರಿದು ಮುಕ್ಕಿದ ಕರಾಳ ಹಿಂಸೆಯು, ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಸುರಕ್ಷಿತವಲ್ಲ; ಮದುವೆಯೊಂದೇ ಸುರಕ್ಷಿತ- ಎಂಬ ಭಾವನೆಯನ್ನು ಬಲಿಸುತ್ತದೆ ಎಂದಾದರೆ ಸಂವಹನದ ಯಾವ ಸಾಧ್ಯತೆಯನ್ನು ಆಯ್ದುಕೊಂಡೇವು?
ಚೋಮನದುಡಿಯಲ್ಲಿ, ಚೋಮನ ಗುಡಿಸಲಲ್ಲಿ ದನದ ಮಾಂಸದೂಟದ ಪ್ರಸಂಗ ಬಂದೊಡನೆ ‘ಶ್ಶೀ’ ಎಂದು ತನ್ನ ಜಾತಿನಿಷ್ಠೆಯನ್ನು ಪ್ರಕಟಪಡಿಸುವ ಹುಡುಗಿಯರು ಬೇರೆಲ್ಲ ವಿಷಯದಲ್ಲಿ ಬೆಳ್ಳಿಯಂಥವರೇ. ಭಿತ್ತಿ ಪತ್ರಿಕೆಗೆ ಬರಹ ಕೇಳಿದರೆ, ಗೋಮಾತೆಯ ಮಹತ್ವವನ್ನು ಬರೆದು ತರುವವರಿಗೆ, ಇಂದಿನ ಪತ್ರಿಕೆಯಲ್ಲಿ ನಿಮ್ಮನ್ನು ಸತಾಯಿಸಿದ ಸುದ್ದಿ ಯಾವುದು? ಎಂದು ಕೇಳಿದರೆ ಮೌನವಾಗುವ; ಏನು ಓದಿದಿರಿ? ಎಂದರೆ ಸಿನಿಮಾದ,ಕ್ರೀಡೆಯ ಸುದ್ದಿಯನ್ನು ಹೇಳುವ ‘ದೊಡ್ಡ ಮಕ್ಕಳನ್ನು’ ವರ್ತಮಾನದ ಕುದಿ ಕುಲುಮೆಯ ಸ್ಪರ್ಶಕ್ಕೆ ತರುವ ಹಾದಿ ಕಾಣದೆ ಕಂಗಾಲಾಗುತ್ತೇನೆ. ಅವರ ಕಣ್ಣೊಳಗೆ ಆಗಾಗ ಹಿಂಸಾರತಿಯ ಉನ್ಮತ್ತ ಎಳೆಯೊಂದು ಹಾರಾಡಿದಂತಾಗಿ ದಿಕ್ಕೆಡುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...