Homeಕರ್ನಾಟಕಸಾಮಾಜಿಕ ಹೋರಾಟದಲ್ಲಿ ಮಹಿಳೆಯ ಪಾತ್ರ ಬಿಂಬಿಸುವ ಚಿತ್ರ 'ಆಕ್ಟ್- 1978’

ಸಾಮಾಜಿಕ ಹೋರಾಟದಲ್ಲಿ ಮಹಿಳೆಯ ಪಾತ್ರ ಬಿಂಬಿಸುವ ಚಿತ್ರ ‘ಆಕ್ಟ್- 1978’

ರಾಷ್ಟ ಪ್ರಶಸ್ತಿ ಪುರಸ್ಕೃತ ಹರಿವು ಮತ್ತು ನಾತಿಚರಾಮಿ ಅಂತಹ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಕ್ಕೆ ತಾವೊಬ್ಬ ಭರವಸೆಯ ನಿರ್ದೇಶಕ ಎಂದು ಸಾಬೀತು ಮಾಡಿರುವ ನಿರ್ದೇಶಕ ಮಂಸೋರೆ ಅವರ ಮತ್ತೊಂದು ಬಹು ನಿರೀಕ್ಷಿತ ಮಹಿಳಾ ಕೇಂದ್ರಿತ ಚಿತ್ರ ಆಕ್ಟ್- 1978.

- Advertisement -
- Advertisement -

ಕೊರೊನಾ ಸಾಂಕ್ರಾಮಿಕದಿಂದಾಗಿ ಲಾಕ್‌ಡೌನ್ ಘೋಷಣೆಯಾಗಿ ಚಿತ್ರಮಂದಿರಗಳಿಗೆ ಬೀಗ ಜಡಿಯಲಾಗಿತ್ತು. ಅನ್‌ಲಾಕ್ 5.0ದಲ್ಲಿ ಚಿತ್ರಮಂದಿರಗಳ ರೀಒಪನ್‌ಗೆ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರ ಆಕ್ಟ್- 1978 ತೆರೆಗೆ ಬರಲು ಸಜ್ಜಾಗಿದೆ.

ಲಾಕ್‌ಡೌನ್‌ನಿಂದ ಸುಮಾರು ಏಳು ತಿಂಗಳ ನಂತರ ಸಿನಿಮಾಗಳು ಪ್ರರ್ದಶವಾಗುತ್ತಿದ್ದು, ಆಕ್ಟ್- 1978 ಸಿನಿಮಾವನ್ನು ನೇರವಾಗಿ ಥಿಯೇಟರ್ ನಲ್ಲಿಯೇ ರಿಲೀಸ್ ಮಾಡಲು ಚಿತ್ರತಂಡ ತಯಾರಾಗಿದೆ. ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣ ಪತ್ರವನ್ನು ನೀಡಲಾಗಿದ್ದು ಚಿತ್ರದ ನಿರ್ದೇಶಕ ಮಂಸೋರೆ ನವೆಂಬರ್ 2 ಕ್ಕೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್‌ಗಳು ಭಾರಿ ಹವಾ ಕ್ರಿಯೇಟ್ ಮಾಡಿವೆ. ಚಿತ್ರದ ಪೋಸ್ಟರ್‌ನಲ್ಲಿ ನಟಿ ಯಜ್ಞಾ ಶೆಟ್ಟಿ ಕುತೂಹಲ ಮೂಡಿಸುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗರ್ಭಿಣಿಯ ಕೈಯಲ್ಲಿ ಪಿಸ್ತೂಲ್ ಮತ್ತು ವಾಕಿ ಟಾಕಿ ಹಿಡಿದು, ಬಾಂಬ್ ಕಟ್ಟಿಕೊಂಡಿರುವ ಚಿತ್ರ ನಿಜಕ್ಕೂ ಸಿನಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

Nathicharami filmmaker's next gets a U certificate | Kannada Movie News - Times of India

ಇನ್ನು ಇತ್ತಿಚೇಗೆ (ಅ.25) ಬಿಡುಗಡೆಯಾದ ಚಿತ್ರದ “ತೇಲಾಡೋ ಮುಗಿಲೇ” ಲಿರಿಕಲ್ ಸಾಂಗ್ ಜನರ ಮೆಚ್ಚುಗೆ ಗಳಿಸಿವೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‌ ಬಿಡುಗಡೆ ಮಾಡಿದ ಈ ಹಾಡು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಇದು ಸಿನಿಮಾವಲ್ಲ, ಹೆಣ್ತನದ ಮುಖಾಮುಖಿ ನಾತಿಚರಾಮಿ

ಚಿತ್ರದ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಮಂಸೋರೆ, ’ಆಕ್ಟ್-1978 ಸಿನಿಮಾ ಸಾಮಾಜಿಕ ಜವಾಬ್ದಾರಿ ಹೊಂದಿರುವ ಮತ್ತು ಮಹಿಳಾ ಕೇಂದ್ರಿತ ಚಲನಚಿತ್ರ. ಸಾಮಾಜಿಕ ಹೋರಾಟಗಳಲ್ಲಿ ಮಹಿಳೆಯ ಪಾತ್ರವನ್ನು ಬಿಂಬಿಸುವ ಚಿತ್ರ ಇದು’ ಎಂದಿದ್ದಾರೆ.

’ಮೊದಲು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ನಂತರ ಒಟಿಟಿ  ವೇದಿಕೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ’. ಜೊತೆಗೆ ನವೆಂಬರ್ 2 ರಂದು ಸಿನಿಮಾ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಚಿತ್ರ ನಿರ್ದೇಶಕ ಮಂಸೋರೆ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಚಿತ್ರ ಬಿಡುಗಡೆ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಿದ್ದಾರೆ.

ರಾಷ್ಟ ಪ್ರಶಸ್ತಿ ಪುರಸ್ಕೃತ ಹರಿವು ಮತ್ತು ನಾತಿಚರಾಮಿ ಅಂತಹ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಕ್ಕೆ ತಾವೊಬ್ಬ ಭರವಸೆಯ ನಿರ್ದೇಶಕ ಎಂದು ಸಾಬೀತು ಮಾಡಿರುವ ನಿರ್ದೇಶಕ ಮಂಸೋರೆ ಅವರ ಮತ್ತೊಂದು ಬಹು ನಿರೀಕ್ಷಿತ ಮಹಿಳಾ ಕೇಂದ್ರಿತ ಚಿತ್ರ ಆಕ್ಟ್- 1978.

ನಿರ್ದೇಶಕ ಮಂಸೋರೆ

ಚಿತ್ರಕ್ಕೆ ಬೆಲ್ ಬಾಟಂ ಖ್ಯಾತಿಯ ಟಿ.ಕೆ.ದಯಾನಂದ್ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ದೇವರಾಜ್ .ಆರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯಜ್ಞಾ ಶೆಟ್ಟಿ, ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್ ಹೀಗೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: ಅತ್ಯುತ್ತಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಶೃತಿ ಹರಿಹರನ್: ಕನ್ನಡಕ್ಕೆ ದಾಖಲೆಯ 11 ರಾಷ್ಟ್ರಪ್ರಶಸ್ತಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...