Homeಕರೋನಾ ತಲ್ಲಣರಾಜಸ್ಥಾನದಲ್ಲಿ ಪಟಾಕಿ ನಿಷೇಧ: ಮಾಸ್ಕ್ ಕಡ್ಡಾಯ ಕಾನೂನು ಜಾರಿಗೆ!

ರಾಜಸ್ಥಾನದಲ್ಲಿ ಪಟಾಕಿ ನಿಷೇಧ: ಮಾಸ್ಕ್ ಕಡ್ಡಾಯ ಕಾನೂನು ಜಾರಿಗೆ!

ವಾಯುಮಾಲಿನ್ಯ ಪ್ರಮಾಣ ಪ್ರತ್ರಗಳು ಇಲ್ಲದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

- Advertisement -
- Advertisement -

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೊಸ ಕಾನೂನನ್ನು ಜಾರಿಗೊಳಿಸಿದ್ದು, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಘೋಷಿಸಿದ್ದಾರೆ. ಕೊರೊನಾ ವಿರುದ್ದ ಹೋರಾಡಲು ಈ ರೀತಿಯ ಕಾನೂನು ತಂದ ದೇಶದ ಮೊದಲ ರಾಜ್ಯ ರಾಜಸ್ಥಾನವಾಗಿದೆ.

“ರಾಜ್ಯದಲ್ಲಿ ಕೊರೊನಾ ವಿರುದ್ದ ನಡೆಯುತ್ತಿರುವ ‘ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕ ಆಂದೋಲನ’ದ ಜೊತೆಗೆ, ಸರ್ಕಾರವು ಇಂದು ಕಾನೂನು ಜಾರಿಗೆ ಮಾಡುವ ಮೂಲಕ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುತ್ತದೆ” ಎಂದು ಅಶೋಕ್ ಗೆಹ್ಲೋಟ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಭೂವಿವಾದದಲ್ಲಿ ಅರ್ಚಕನಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಕೊರೊನಾ ಸೋಂಕಿತ ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪಟಾಕಿಗಳ ಮಾರಾಟ ಮತ್ತು ಸಿಡಿತವನ್ನು ನಿಷೇಧಿಸಲು ಮತ್ತು ಪಟಾಕಿಗಳಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಸಾರ್ವಜನಿಕರನ್ನು ರಕ್ಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಾಯುಮಾಲಿನ್ಯ ಪ್ರಮಾಣ ಪ್ರತ್ರಗಳು ಇಲ್ಲದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ರಾಜಸ್ಥಾನ: ವೇಶ್ಯಾವಾಟಿಕೆ ನಡೆಸುತ್ತಿದ್ದ BJP ಮಹಿಳಾ ಮೋರ್ಚಾ ಅಧ್ಯಕ್ಷೆ ಬಂಧನ

ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಎತ್ತಿ ತೋರಿಸಿರುವ ಮುಖ್ಯಮಂತ್ರಿ, ಅನೇಕ ದೇಶಗಳು ಮತ್ತೊಂದು ಸುತ್ತಿನ ಲಾಕ್‌ಡೌನ್‌ ಮಾಡಬೇಕಾಗಿರುವ ಸ್ಥಿತಿಯಲ್ಲಿವೆ. ಇದಕ್ಕಾಗಿ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು. ಕೊರೊನಾ ಸವಾಲನ್ನು ಎದುರಿಸಲು ಇನ್ನೂ 2 ಸಾವಿರ ವೈದ್ಯರ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯವು ತ್ವರಿತಗೊಳಿಸಿದೆ ಎಂದು ಅವರು ಹೇಳಿದರು.

ರಾಜಸ್ಥಾನದಲ್ಲಿ ಇದುವರೆಗೂ ಕೊರೊನಾ ಸಂಬಂಧಿಸಿದ ಒಟ್ಟು ಸಾವುಗಳ ಸಂಖ್ಯೆ 1,917 ಕ್ಕೆ ತಲುಪಿದೆ.  ಸೋಂಕಿತರ ಸಂಖ್ಯೆ 1,98,747 ಕ್ಕೆ ಏರಿದ್ದು, ಪ್ರಸ್ತುತ ರಾಜ್ಯದಲ್ಲಿ 15,255 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.


ಇದನ್ನೂ ಓದಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಮೋದಿ-ಶಾ ಕಾರಣ: ಅಶೋಕ್ ಗೆಹ್ಲೋಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಫಾ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿದ ಇಸ್ರೇಲ್: 40 ಪ್ಯಾಲೆಸ್ತೀನಿಯರು ಸಾವು

0
ಇಸ್ರೇಲಿ ಪಡೆಗಳು ರಫಾದಲ್ಲಿ ವಿನ್ಯಾಸಗೊಳಿಸಲಾದ ಸುರಕ್ಷಿತ ವಲಯದಲ್ಲಿ ಸ್ಥಳಾಂತರಗೊಂಡ ಜನರು ವಾಸಿಸುವ ಟೆಂಟ್ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 40 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು...