Homeದಿಟನಾಗರಫ್ಯಾಕ್ಟ್‌‌ಚೆಕ್‌: ಮಹಾರಾಷ್ಟ್ರದಲ್ಲಿ ಬಕ್ರೀದ್‌ಗೆ ತಂದ ಆಡುಗಳನ್ನು ಲೂಟಿ ಮಾಡಿದ್ದು ನಿಜವೆ?

ಫ್ಯಾಕ್ಟ್‌‌ಚೆಕ್‌: ಮಹಾರಾಷ್ಟ್ರದಲ್ಲಿ ಬಕ್ರೀದ್‌ಗೆ ತಂದ ಆಡುಗಳನ್ನು ಲೂಟಿ ಮಾಡಿದ್ದು ನಿಜವೆ?

ಮಹಾರಾಷ್ಟ್ರದಲ್ಲಿ ನಡೆದ ಈ ಲೂಟಿಯ ಹಿಂದೆ ಕೊಮುವಾದಿ ರಾಜಕಾರಣಿಗಳು ಹಾಗೂ ಪೊಲೀಸರು ಇದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲಾಗಿದೆ.

- Advertisement -
- Advertisement -

ಜಾನುವಾರು ಮಾರುಕಟ್ಟೆಯಲ್ಲಿ ಲೂಟಿ ಮತ್ತು ಹಿಂಸಾಚಾರವನ್ನು ತೋರಿಸುವ ವಿಡಿಯೋವೊಂದು ಮಹಾರಾಷ್ಟ್ರದ ಗಡಿಯಲ್ಲಿ ಸಂಭವಿಸಿದೆ ಎಂಬ ಶಿರ್ಷಿಕೆ ಹೊತ್ತ ವೀಡಿಯೋ‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜುಲೈ 31 ರಂದು ನಡೆದ ಈದ್ ಹಬ್ಬದ ಹಿನ್ನೆಲೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಆಡುಗಳನ್ನು ಮಹಾರಾಷ್ಟ್ರ ಗಡಿಯಲ್ಲಿ ಲೂಟಿ ಮಾಡಲಾಗಿದ್ದು, ಲೂಟಿಯ ಹಿಂದೆ ಕೋಮುವಾದಿ ರಾಜಕಾರಣಿಗಳು ಮತ್ತು ಪೊಲೀಸರು ಇದ್ದಾರೆ. ಮೇಕೆಗಳನ್ನು ಖರೀದಿಸಿ ತಂದ ಮುಸ್ಲಿಮರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್

ವೀಡಿಯೊದ ಕೀ-ಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಮೊರೊಕಾದ ದೈನಂದಿನ ಟ್ಯಾಬ್ಲಾಯ್ಡ್  ahdath.info ನ ಲೇಖನದಲ್ಲಿ ಈ ಚಿತ್ರಣವನ್ನು ಕಾಣಬಹುದಾಗಿದೆ. ಕಾಸಾಬ್ಲಾಂಕಾದ ಅಲ್-ಹಸಾನಿ ಬಳಿಯಿರುವ ಕುರಿ ಮಾರುಕಟ್ಟೆಯಲ್ಲಿ ನಡೆದ ಇತ್ತೀಚೆಗೆ ನಡೆದ ಲೂಟಿ ಮತ್ತು ಹಿಂಸಾಚಾರ ಎಂದು ಅದು ಹೇಳಿದೆ.

“ಹಿಂಸೆ”, “ಲೂಟಿ” ಮತ್ತು “ಅಲ್-ಹಸಾನಿ” ಮುಂತಾದ ಕೀವರ್ಡ್ ಬಳಸಿ ಮತ್ತಷ್ಟು ಹುಡುಕಾಡಿದಾಗ ಘಟನೆಯ ಹಲವಾರು ಸುದ್ದಿ ವರದಿಳನ್ನು ಕಂಡುಕೊಳ್ಳಬಹುದು.

ಮೊರಾಕೊ ವರ್ಲ್ಡ್ ನ್ಯೂಸ್, ಎಂಬ ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಯ ಇ-ಪತ್ರಿಕೆ ಜುಲೈ 31 ರಂದು ಮಾಡಿದ ವರದಿಯಲ್ಲಿ ,”ಅಜ್ಮತ್ ಎಂಬ ಜಾನುವಾರು ಮಾರುಕಟ್ಟೆ ಕುರಿ ಮತ್ತು ಮೇಕೆಗಳನ್ನು ಬಕ್ರೀದ್‌ ಗೆ ಮಾರಾಟ ಮಾಡುತ್ತಿರುವಾಗ ಹಿಂಸಾಚಾರ  ಉಂಟಾಗಿ ಅಸ್ತವ್ಯಸ್ತವಾಗಿದೆ” ಎಂದು ಹೇಳಿದೆ. ಈ ಲೇಖನದಲ್ಲಿ ವೈರಲ್ ಆಗಿರುವ ವೀಡಿಯೊದ ಸ್ಕ್ರೀನ್‌ಶಾಟ್‌ ಅನ್ನು ಹೊಂದಿದೆ.

ಇದೇ ಘಟನೆಯ ಬಗ್ಗೆ ಕಾಸಾಬ್ಲಾಂಕಾ ಮೂಲದ ಡಿಜಿಟಲ್ ಮೀಡಿಯಾ ಕಂಪನಿಯಾದ ವಿ ಲವ್ ಬಝ್‌ ವರದಿಯನ್ನು ನೋಡಬಹುದಾಗಿದೆ. ಅದರಲ್ಲಿ ಮೊರಾಕೊದ ರಾಷ್ಟ್ರೀಯ ಭದ್ರತೆಯ ಸಾಮಾನ್ಯ ನಿರ್ದೇಶನಾಲಯವು “ಘಟನೆಯಲ್ಲಿ ಭಾಗಿಯಾಗಿರುವ ಹಲವಾರು ವ್ಯಕ್ತಿಗಳನ್ನು ಬಂಧಿಸಲು ಸಾಧ್ಯವಾಯಿತು” ಎಂದು ಹೇಳಿದೆ.

ಈ ಸುದ್ದಿವಾಹಿನಿಯನ್ನು ಫೇಸ್‌ಬುಕ್‌ ಪರಿಶೀಲಿಸಿದೆ. ಅಲ್ಲದೆ ವಿವರಗಳೊಂದಿಗೆ ಈ ವೈರಲ್ ವೀಡಿಯೊವನ್ನು ಅದರಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಈ ಘಟನೆ ಬಕ್ರೀದಿನ ಹಿಂದಿನ ದಿನ ಇದು ಸಂಭವಿಸಿದೆ ಎಂದು ಹೇಳಿದೆ. ಅಲ್ಲದೆ ಈ ಸುದ್ದಿ ವಾಹಿನಿಯನ್ನು ಟ್ವಿಟರ್‌ ಕೂಡಾ ಪರಿಶೀಲಿಸಿದೆ.

ಮೊರೊಕನ್ ಪತ್ರಕರ್ತ ರಿಡೌನೆ ಎರ್ರಾಂಡಾನಿ ಎಂಬವರು ತಮ್ಮ ಅಧೀಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ “ಈದ್ ಅಲ್-ಅಝಾ … ಯಾವುದೇ ಕಾಮೆಂಟ್ ಇಲ್ಲ …” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

View this post on Instagram

بدون تعليق…

A post shared by Ridouane Erramdani (@ridouane_erramdani) on

ಇದಲ್ಲದೆ, ಮೊರಾಕೊದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಫೇಸ್‌ಬುಕ್ ಪುಟದಲ್ಲಿ ಕೂಡಾ ಜುಲೈ 31 ರಂದು ಘಟನೆಯ ಬಗ್ಗೆ ಒಂದು ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದಾರೆ.

الدارالبيضاء: توقيف 20 شخصا للاشتباه في تورطهم في أعمال السرقة التي شهدها سوق لبيع الأغنامأسفرت العمليات الأمنية التي…

Posted by DGSN – Direction Générale de la Sûreté Nationale on Thursday, July 30, 2020

ಈ ಘಟನೆ ಕಾಸಾಬ್ಲಾಂಕಾದ ಹಸಾನಿ ಬಳಿಯಲ್ಲಿ ನಡೆದಿದೆ ಹಾಗೂ ಜಾನುವಾರು ಮಾರುಕಟ್ಟೆಯಲ್ಲಿ ಹಿಂಸಾಚಾರ ಮತ್ತು ಕಳ್ಳತನದಲ್ಲಿ ಭಾಗಿಯಾಗಿದ್ದಕ್ಕಾಗಿ 20 ಜನರನ್ನು ಈವರೆಗೆ ಪೊಲೀಸರು ಬಂಧಿಸಿದ್ದಾರೆ ಎಂದು ಪೋಸ್ಟ್ ಹೇಳಿದೆ.

ಆದ್ದರಿಂದ ಬಕ್ರೀದ್‌ಗೆ ಮುಂಚಿತವಾಗಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂಬುವುದು ನಿಜವಾಗಿದ್ದರೂ ಇದು ಮೊರಾಕೊದ ಕಾಸಾಬ್ಲಾಂಕಾ ನಗರದ ಚಿತ್ರಣವಾಗಿದೆ ಹಾಗೂ ಮಹಾರಾಷ್ಟ್ರದ ವಿಡಿಯೊ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಕೃಪೆ: ದಿಕ್ವಿಂಟ್


ಓದಿ: ಮಾಸ್ಕ್ ಧರಿಸದ ಮೇಕೆ ಬಂಧಿಸಿದ ಕಾನ್ಪುರ ಪೊಲೀಸರು?- ತಪ್ಪು ವರದಿ ಮಾಡಿದ ಮಾಧ್ಯಮಗಳು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...