Homeಕರೋನಾ ತಲ್ಲಣಗ್ರಾಹಕರನ್ನು ಆಕರ್ಷಿಸಲು 'ಕೋವಿಡ್ ಕರಿ' ಎಂಬ ಹೊಸ ಮೆನು ಸೇರಿಸಿದ ರೆಸ್ಟೋರೆಂಟ್!

ಗ್ರಾಹಕರನ್ನು ಆಕರ್ಷಿಸಲು ‘ಕೋವಿಡ್ ಕರಿ’ ಎಂಬ ಹೊಸ ಮೆನು ಸೇರಿಸಿದ ರೆಸ್ಟೋರೆಂಟ್!

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವಿಶೇಷ “ಕೋವಿಡ್ ಕರಿ” ಮತ್ತು “ಮಾಸ್ಕ್ ನಾನ್ಸ್” ಎಂಬ ಹೊಸ ಅಡುಗೆಯನ್ನು ಜೋಧ್‌ಪುರದ ರೆಸ್ಟೋರೆಂಟ್ ಪರಿಚಯಿಸಿದೆ.

ಹುರಿದ ತರಕಾರಿ ಉಂಡೆಯನ್ನು ಕಿರೀಟಧಾರಿ ಕೊರೊನಾ ವೈರಸ್‌ನಂತೆ ಕಾಣುವ ಆಕಾರವನ್ನು ನೀಡಲಾಗಿದ್ದು, ಜೊತೆಯಲ್ಲಿರುವ ಬ್ರೆಡ್‌ಗಳು ಶಸ್ತ್ರಚಿಕಿತ್ಸೆಯ ಮಾಸ್ಕ್‌ಗಳಂತೆ ಕಾಣುತ್ತವೆ. ಈ ಹೊಸ ಆಹಾರವನ್ನು ಹೋಟೆಲ್ ತನ್ನ ಮೆನುವಿನಲ್ಲಿ ಸೇರಿಸಿದೆ.

ಹೆಚ್ಚುವರಿ ಭಾರತೀಯ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ತಮ್ಮ ಅಡುಗೆಯಲ್ಲಿ ಸೇರಿಸಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಜಾಹೀರಾತು ನೀಡಿದ್ದೇವೆ ಎಂದು ಹೋಟೆಲ್ ಮಾಲೀಕ ಯಶ್ ಸೋಲಂಕಿ ಹೇಳಿದ್ದಾರೆ.

ಇತ್ತೀಚೆಗೆ ಲಾಕ್‌ಡೌನ್‌ ಅನ್ಲಾಕ್ ಆರಂಭವಾಗಿದ್ದರೂ ಸಹ ಜನರಲ್ಲಿ ಇನ್ನೂ ಭಯವಿದೆ. ಹಾಗಾಗಿ ಜನರು ಇನ್ನೂ ಹೊಟೆಲ್‌ನಲ್ಲಿ ಊಟ ಮಾಡಲು ಹಿಂಜರಿಯುತ್ತಿದ್ದಾರೆ. ನಾವು ನಿಜಕ್ಕೂ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ, ಹಾಗಾಗಿ ಗ್ರಾಹಕರನ್ನು ಸೆಳೆಯಲು ಈ ವಿಧಾನ ಅನುಸರಿಸಿದ್ದೇವೆ ಎಂದು ಸೋಲಂಕಿ ಹೇಳಿದ್ದಾರೆ.

‘ಮಾಸ್ಕ್ ಪರೋಟಾ’ದ ತಯಾರಿಕೆಯು ‘ಗೋಧಿ ಪರೋಟಾ’ದಂತೆಯೇ ಇರುತ್ತದೆ ಮತ್ತು ಆಕಾರದಲ್ಲಿ ಮಾತ್ರ ಭಿನ್ನವಾಗಿರುತ್ತದೆ. ಅಲ್ಲಿ ಮುಖದ ಮಾಸ್ಕ್ ನಂತೆಯೇ ಮೂರು ಪದರಗಳನ್ನು ಹಿಟ್ಟಿನಿಂದ ಚಾಕಚಕ್ಯತೆಯಿಂದ ಬೆರೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಸಾಂಕ್ರಾಮಿಕ ಅವಧಿಯಲ್ಲಿ ನನ್ನ ಊರಿನಲ್ಲಿ ಮಾಸ್ಕ್ ಧರಿಸಿ ಎಂಬ ಒಂದು ಪ್ರಮುಖ ಸಂದೇಶವನ್ನು ಆಹಾರದ ಮೂಲಕ ಹರಡುತ್ತಿರುವುದಕ್ಕೆ ನನಗೆ ಅಪಾರ ತೃಪ್ತಿ ಇದೆ ಎಂದು ಅಲ್ಲಿ ಕೆಲಸ ಮಾಡುತ್ತಿರುವ ಎಸ್ ಸತೀಶ್ ಬಾಬು ಹೇಳಿದ್ದಾರೆ.

ಮೇ ತಿಂಗಳಲ್ಲಿ ಮಧುರೈನ ಹೋಟೆಲ್ ಕೊರೊನಾ ರವಾ ದೋಸೆ, ಕೊರೊನಾ ಬೋಂಡಾ ಮತ್ತು ಸಿದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಿಶ್ರಣದ ಪದಾರ್ಥಗಳನ್ನು ಬಳಸಿ ತಯಾರಿಸಿದ ಗಿಡಮೂಲಿಕೆಗಳ ರಸಮ್ ಅನ್ನು ಪರಿಚಯಿಸಿತ್ತು.


ಇದನ್ನೂ ಓದಿ: ರಾಮ ಎಲ್ಲರಿಗೂ ಸೇರಿದವನು, ಅಯೋಧ್ಯೆ ಕಾರ್ಯಕ್ರಮ ರಾಷ್ಟ್ರೀಯ ಏಕತೆಗೆ ದಾರಿಯಾಗಲಿ: ಪ್ರಿಯಾಂಕ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...