Homeಮುಖಪುಟಕೊರೆವ ಚಳಿಯಲ್ಲಿ ದೇಶದ ಅನ್ನದಾತರು: ದೇವ್ ದೀಪಾವಳಿ ಸಂಭ್ರಮದಲ್ಲಿ ಪ್ರಧಾನಿ ಮೋದಿ!

ಕೊರೆವ ಚಳಿಯಲ್ಲಿ ದೇಶದ ಅನ್ನದಾತರು: ದೇವ್ ದೀಪಾವಳಿ ಸಂಭ್ರಮದಲ್ಲಿ ಪ್ರಧಾನಿ ಮೋದಿ!

ದೀಪಾವಳಿ ಕಾರ್ಯಕ್ರಮದಲ್ಲಿರುವ ಪ್ರಧಾನಿ ವಿಡಿಯೋಗೆ, ರೈತರ ಮೇಲೆ ಪೊಲೀಸರ ದೌರ್ಜನ್ಯದ ವಿಡಿಯೋವನ್ನು ಟ್ಯಾಗ್ ಮಾಡಿರುವ ಆಮ್ ಆದ್ಮಿ ಪಕ್ಷ ಇವರು ಯಾವ ಪ್ರಧಾನ ಸೇವಕರು ಎಂದು ಪ್ರಶ್ನೆ ಮಾಡಿದೆ.

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ದೇಶದ ಅನ್ನದಾತ ನಡೆಸುತ್ತಿರುವ ’ದೆಹಲಿ ಚಲೋ’ ಪ್ರತಿಭಟನೆ 6 ನೇ ದಿನಕ್ಕೆ ಕಾಲಿಟ್ಟಿದೆ.

ದಿನೇ ದಿನೇ ಪ್ರತಿಭಟನೆ ಉಗ್ರ ರೂಪ ಪಡೆದುಕೊಳ್ಳುತ್ತಿರುವುದರ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಕಿಂಚಿತ್ತು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಾಮಕಾವಸ್ಥೆಗೆ ಮಾತುಕತೆಗೆ ಕರೆದಂತೆ ಮಾಡಿದ್ದ “ಷರತ್ತುಬದ್ಧ” ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ.

ರೈತರನ್ನು ದೇಶದ ಬೆನ್ನೆಲುಬು ಎಂದು ಕರೆದು, ಇಂದು ಆ ಬೆನ್ನೆಲುಬು ರಸ್ತೆಯಲ್ಲಿ, ಈ ಚಳಿಯಲ್ಲಿ ತನ್ನ ಹಕ್ಕಿಗಾಗಿ ಹೋರಾಡುತ್ತಿದ್ದರೇ ಇತ್ತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ದಿನವನ್ನು ಹಾಡು, ನೃತ್ಯಗಳಿಗೆ ಮೀಸಲಿಟ್ಟು ಮನರಂಜನೆ ಪಡೆಯುತ್ತಿದ್ದಾರೆ.

ಉತ್ತರಪ್ರದೇಶದ ಕಾಶಿಯಲ್ಲಿ ಪ್ರಧಾನಿ ಮಂತ್ರಿ ಅವರು ದೇವ್ ದೀಪಾವಳಿ ಆಚರಿಸಿ, ಹಾಡು, ನೃತ್ಯ, ವಾಟರ್‌ ಡ್ಯಾನ್ಸ್, ಬೆಳಕಿನ ನೃತ್ಯಗಳನ್ನು ನೋಡಿ ಆನಂದ ಅನುಭವಿಸಿದ್ದಾರೆ.

ಇದನ್ನೂ ಓದಿ: ಆಜ್‌‌ತಕ್ ವರದಿಗಾರರನ್ನು ’ಗೋದಿ ಮೀಡಿಯಾ’ ಎಂದು ಕರೆದು ಸ್ವಾಗತಿಸಿದ ಚಳವಳಿ ನಿರತ ರೈತರು!

ಪ್ರಧಾನಿ ಮೋದಿ ತಮ್ಮ ಟ್ವಿಟರ್‌ ಖಾತೆಯಲ್ಲಿ ತಾವು ಕಾಶಿಯಲ್ಲಿ ದೇವ್ ದೀಪಾವಳಿಯಲ್ಲಿ ಭಾಗವಹಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಲಕ್ಷಾಂತರ ಸಂಖ್ಯೆಯಲ್ಲಿ ರೈತರು ರಸ್ತೆಗಳಲ್ಲಿ, ಬಿದಿಗಳಲ್ಲಿ ಕೊರೆಯುವ ಚಳಿಯಲ್ಲಿ, ಮಳೆ, ಗಾಳಿ ಬಿಸಿಲೆನ್ನದೇ ತಮ್ಮ ಹೋರಾಟ ಮುಂದುವರೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸದೇ, ಅನ್ನದಾತ ತನ್ನ ಕಷ್ಟ ಹೇಳಲು ಬಂದರೇ ಅವರ ಮಾತನ್ನೂ ಕೇಳದೆ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರ ಮತ್ತು ಪ್ರಧಾನಿ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ದೀಪಾವಳಿ ಕಾರ್ಯಕ್ರಮದಲ್ಲಿರುವ ಪ್ರಧಾನಿ ವಿಡಿಯೋಗೆ, ರೈತರ ಮೇಲೆ ಪೊಲೀಸರ ದೌರ್ಜನ್ಯದ ವಿಡಿಯೋವನ್ನು ಟ್ಯಾಗ್ ಮಾಡಿರುವ ಆಮ್ ಆದ್ಮಿ ಪಕ್ಷ ಇವರು ಯಾವ ಪ್ರಧಾನ ಸೇವಕರು ಎಂದು ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ

#किसान_के_मन_की_बात ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪ್ರಧಾನಿಯವರ ಚಿತ್ರಗಳನ್ನು ಟ್ರೋಲ್ ಮಾಡಲಾಗುತ್ತಿದೆ.

ಪ್ರಧಾನಿ ದೀಪಾವಳಿ ಸಂಭ್ರಮದಲ್ಲಿದ್ದರೇ, ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಮಾತುಕತೆ ನಡೆಸದೆ ಕಳ್ಳಾಟ ಆಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಬಿಜೆಪಿ ಸರ್ಕಾರದ ನಿಜ ರೂಪ ಹೀಗಿದೆ ಎಂದು ಟ್ವಿಟರ್‌ ಬಳಕೆದಾರರು ಅನ್ನದಾತ  ಮೇಲೆ ಪೊಲಿಸರು ನಡೆಸಿದ ದೌರ್ಜನ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಭಯೋತ್ಪಾದಕರು ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದಾರೆ, ಆದರೆ ಸರ್ಕಾರ ರೈತರನ್ನು ಭಯೋತ್ಪಾಕರಂತೆ ನೋಡುತ್ತಿದೆ: ಶಿವಸೇನೆ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...