Homeಮುಖಪುಟಪಾಕಿಸ್ತಾನದ ಕರಾಚಿ ಭಾರತದ ಭಾಗವಾಗಲಿದೆ: ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್

ಪಾಕಿಸ್ತಾನದ ಕರಾಚಿ ಭಾರತದ ಭಾಗವಾಗಲಿದೆ: ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್

"ನಮಗೆ ಅಖಂಡ ಭಾರತದಲ್ಲಿ ನಂಬಿಕೆಯಿದೆ"

- Advertisement -
- Advertisement -

‘ಮುಂದೊಂದು ದಿನ ಪಾಕಿಸ್ತಾನದ ಕರಾಚಿ ಭಾರತದ ಭಾಗವಾಗಲಿದೆ’ ಎಂದು ಮಹಾರಾ‍ಷ್ಟ್ರ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿದ್ದು, ತಾವು ಅಖಂಡ ಭಾರತದಲ್ಲಿ ನಂಬಿಕೆಯಿರಿಸಿರುವುದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್, “ನಮಗೆ ಅಖಂಡ ಭಾರತದಲ್ಲಿ ನಂಬಿಕೆಯಿದೆ. ಜೊತೆಗೆ ಮುಂದೊಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎನ್ನುವ ನಂಬಿಕೆಯೂ ಇದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಒತ್ತಾಯ: ದಲಿತರ ಗುಡಿಸಲು ಸುಟ್ಟ ಮೇಲ್ಜಾತಿಯವರು!

ಇದನ್ನೂ ಓದಿ: ತೇಜಸ್ವಿ ಯಾದವ್ ಬಿಹಾರ ವಿರೋಧ ಪಕ್ಷದ ನಾಯಕನಾಗಬಾರದು: ಜೆಡಿಯು ಆಗ್ರಹ

ಇತ್ತೀಚೆಗೆ ಮುಂಬೈನಲ್ಲಿನ ಕರಾಚಿ ಸ್ವೀಟ್ಸ್‌ ಅಂಗಡಿಯ ಹೆಸರನ್ನು ಬದಲಾಯಿಸುವಂತೆ ಶಿವಸೇನೆಯ ಮುಖಂಡರು ಒತ್ತಾಯಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ದೇವೇಂದ್ರ ಫಡ್ನವೀಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ಕರಾಚಿ ಸ್ವೀಟ್ಸ್‌ ಅಂಗಡಿ’ಯ ಹೆಸರನ್ನು ಬದಲಾಯಿಸುವಂತೆ ಶಿವಸೇನೆಯ ಮುಖಂಡ ನಿತಿನ್ ನಂದಗಾಂವ್ಕರ್ ಅಂಗಡಿ ಮಾಲೀಕನನ್ನು ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕರಾಚಿ ಎನ್ನುವುದು ಪಾಕಿಸ್ತಾನದ ಒಂದು ಸ್ಥಳದ ಹೆಸರಾಗಿದೆ. ಹಾಗಾಗಿ ಇದನ್ನು ಬದಲಾಯಿಸಿ, ಮರಾಠಿಯಲ್ಲಿ ಯಾವುದಾದರೂ ಹೆಸರಿಡುವಂತೆ ಶಿವಸೇನೆ ಮುಖಂಡ ಒತ್ತಾಯಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟಿಲ್ಲ, ಸೋನಿಯಾ- ರಾಹುಲ್‌ಗೆ ಬೆಂಬಲವಿದೆ: ಸಲ್ಮಾನ್ ಖುರ್ಷಿದ್

ಘಟನೆ ನಡೆದ ಬಳಿಕ ಬೆದರಿಕೆ ಮಣಿದ ಅಂಗಡಿ ಮಾಲೀಕ ‘ಕರಾಚಿ’ ಎನ್ನುವ ಅಕ್ಷರಗಳು ಕಾಣಿಸದಂತೆ ಪೇಪರ್‌ನಿಂದ ಮುಚ್ಚಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಹಾರಾಷ್ಟ್ರ ಕಾಂಗ್ರೆಸ್ ಸಚಿವ ನವಾಬ್ ಮಲಿಕ್, ‘ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಲೀನಗೊಳಿಸಿ ಒಂದು ದೇಶವನ್ನು ಸೃಷ್ಟಿಸಿದರೆ’ ಬಿಜೆಪಿಯ ಈ ಕ್ರಮವನ್ನು ತಮ್ಮ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಬೆಂಗಳೂರು: ಬಿಎಂಟಿಸಿ ಮಹಿಳಾ ಕಂಡಕ್ಟರ್‌ಗಳಿಗೆ ಸ್ವಯಂ ರಕ್ಷಣಾ ತರಬೇತಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...