Homeಆರೋಗ್ಯಪ್ಲಾಸ್ಮಾ ಥೆರಪಿ ಸಕ್ಸಸ್‌, 4 ರೋಗಿಗಳು ಗುಣಮುಖ: ದೆಹಲಿ ಆರೋಗ್ಯ ಸಚಿವ

ಪ್ಲಾಸ್ಮಾ ಥೆರಪಿ ಸಕ್ಸಸ್‌, 4 ರೋಗಿಗಳು ಗುಣಮುಖ: ದೆಹಲಿ ಆರೋಗ್ಯ ಸಚಿವ

- Advertisement -
- Advertisement -

ಗಂಭೀರ ಸ್ಥಿತಿಯಲ್ಲಿರುವ ನಾಲ್ಕು ಕೊರೊನಾ ರೋಗಿಗಳ ಮೇಲೆ ನಡೆಸಿದ ಪ್ಲಾಸ್ಮಾ ಥೆರಪಿ ಚಿಕಿತ್ಸೆಯು ಫಲ ನೀಡಿದ್ದು ಅವರು ಗುಣಮುಖರಾಗಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೆಂದರ್‌ ಜೈನ್‌ ತಿಳಿಸಿದ್ದಾರೆ.

ನಾವು ಇದುವರೆಗೂ ಗಂಭೀರ ಸ್ಥಿತಿಯಲ್ಲಿರುವ ಆರು ಕೊರೊನಾ ಬಾಧಿತರನ್ನು ದಾಖಲಿಸಿಕೊಂಡಿದ್ದೇವೆ. ಈ ನಾಲ್ಕು ದಿನದಲ್ಲಿ ನಾಲ್ಕು ರೋಗಿಗಳು ಗುಣಮುಖರಾಗಿದ್ದರೆ ಎಂದು ಅವರು ತಿಳಿಸಿದ್ದಾರೆ.

ದೆಹಲಿಯು ಮಂಗಳವಾರ ಕೊರೊನಾ ವೈರಸ್ ಸೋಂಕಿತರಿಗೆ ಪ್ಲಾಸ್ಮಾಥೆರಪಿ ಪ್ರಯೋಗಗಳನ್ನು ಪ್ರಾರಂಭಿಸಿತು. ಇಬ್ಬರು ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳ ಆಂಟಿಬಾಡಿ-ಭರಿತ ಪ್ಲಾಸ್ಮಾವನ್ನು ಬಳಸಿ ಚಿಕಿತ್ಸೆಯನ್ನು ನೀಡಲಾಗಿದೆ.

ಏನಿದು ಪ್ಲಾಸ್ಮಾಥೆರಪಿ?

ಈಗಾಗಲೇ ಕೊರೊನಾ ಸೋಂಕು ತಗುಲಿ ಗುಣಮುಖರಾದವರ (ಅವರ ದೇಹದಲ್ಲಿ ಕೊರೊನಾ ವೈರಸ್‌ ಇಲ್ಲ ಎಂಬುದು ಎರಡು ಸಾರಿ ಖಾತ್ರಿಯಾದ ನಂತರ) ರಕ್ತದಲ್ಲಿನ ರೋಗನಿರೋಧಕ ಪ್ಲಾಸ್ಮಾ ಕಣಗಳನ್ನು ತೆಗೆದುಕೊಂಡು ಹಾಲಿ ಸೋಂಕಿತರಿಗೆ ನೀಡುವುದೇ ಪ್ಲಾಸ್ಮಾ ಥೆರಪಿಯಾಗಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಬೆಳೆದಿರುವುದರಿಂದ ಸೋಂಕಿತರಿಗೆ ಅದನ್ನು ಬಳಸುವ ಪ್ರಯೋಗ ಈಗ ಆರಂಭಗೊಂಡಿದೆ.

ಐಸಿಎಂಆರ್‌ ಈ ರೀತಿಯ ಪ್ಲಾಸ್ಮಾಥೆರಪಿಯನ್ನು ಹಲವು ಆಸ್ಪತ್ರೆಗಳು ಮಾಡಬಹುದು ಎಂದು ಕರೆ ನೀಡಿದೆ. ಈ ಪ್ರಯೋಗವನ್ನು ತುಂಬಾ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಮೇಲೆ ನಡೆಸಲಾಗುತ್ತದೆ. ಇದು ಈಗಾಗಲೇ ಚೈನಾ ಮತ್ತು ಅಮೆರಿಕಾದಲ್ಲಿ ನಡೆದಿದ್ದು ಭಾರತದಲ್ಲಿ ಇತ್ತೀಚೆಗೆ ಆರಂಭಗೊಂಡಿದೆ.

ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ

“ಕೊರೊನಾ ಸೋಂಕಿತರ ಮೇಲೆ ನಡೆಸಿದ ಪ್ಲಾಸ್ಮಾ ಚಿಕಿತ್ಸೆಯ ಆರಂಭಿಕ ಫಲಿತಾಂಶಗಳು ತೃಪ್ತಿದಾಯಕವಾಗಿದೆ, ಮುಂದಿನ 2-3 ದಿನಗಳಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಬೇಕಾಗಿದೆ”. ನಗರದಾದ್ಯಂತದ ಎಲ್ಲಾ ಗಂಭೀರ ಕೊರೊನಾ ರೋಗಿಗಳಿಗೆ ಇದೇ ಚಿಕಿತ್ಸೆಯನ್ನು ಮಾಡಲು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯುತ್ತದೆ ಎಂದು ಸಿಎಂ ಕೇಜ್ರಿವಾಲ್‌ ಹೇಳಿದ್ದರು.


ಇದನ್ನೂ ಓದಿ: ಕೊರೊನಾ ವೈರಾಣುವಿನ ಬಗ್ಗೆ ಜಾಗತಿಕ ಪ್ರತಿಕ್ರಿಯೆ ಅತೀಯಾದದ್ದೇ, ಅಲ್ಲವೇ? 


ಕೊರೊನಾದಿಂದ ಚೇತರಿಸಿಕೊಂಡವರು ಮುಂದೆ ಬಂದು ಗಂಭೀರ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಬೇಕೆಂದು ಸಹ ಕೇಜ್ರಿವಾಲ್ ಮನವಿ ಮಾಡಿದ್ದರು.

ಇನ್ಸ್ಟಿಟ್ಯೂಟ್ ಆಫ್ ಲಿವರ್ ಮತ್ತು ಬಿಲಿಯರಿ ಸೈನ್ಸಸ್ ಸಹಯೋಗದೊಂದಿಗೆ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು, ಪ್ಲಾಸ್ಮಾವನ್ನು ಪಡೆದು ಸಂಗ್ರಹಿತ ರಕ್ತವನ್ನು ಸಂಸ್ಕರಿಸಲಾಗುತ್ತಿದೆ.

ಈ ವಿಧಾನ ಆರಂಭಿಕವಾಗಿ ದೆಹಲಿಯಲ್ಲಿ ಉತ್ತಮ ಫಲಿತಾಂಶ ಕಂಡಿರುವುದರಿಂದ ಈ ರೀತಿಯ ಚಿಕಿತ್ಸೆ ಮತ್ತಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...