Homeಕರ್ನಾಟಕ’ರೈತರೊಂದಿಗೊಂದು ದಿನ’ ಎನ್ನುತ್ತಿದ್ದಾರೆ ಕೃಷಿ ಸಚಿವ ಬಿ.ಸಿ.ಪಾಟೀಲ್!

’ರೈತರೊಂದಿಗೊಂದು ದಿನ’ ಎನ್ನುತ್ತಿದ್ದಾರೆ ಕೃಷಿ ಸಚಿವ ಬಿ.ಸಿ.ಪಾಟೀಲ್!

ಟ್ವಿಟರ್ ಖಾತೆಯಲ್ಲಿ ರೈತರೊಂದಿಗೊಂದು ದಿನದ ಕುರಿತು ಸರಣಿ ಟ್ವೀಟ್‌ಗಳನನ್ನು ಮಾಡಿರುವ ಕೃಷಿ ಸಚಿವರು, ಈ ವರ್ಷದ ನನ್ನ ಹುಟ್ಟುಹಬ್ಬ ರಾಜ್ಯದ ಅನ್ನದಾತರಿಗೆ ಮೀಸಲು ಎಂದಿದ್ದಾರೆ.

- Advertisement -
- Advertisement -

ರಾಜಕಾರಣಿಗಳು, ನಟ ನಟಿಯರು, ಕ್ರಿಕೆಟ್ ತಾರೆಗಳು ತಮ್ಮ ಹುಟುಹಬ್ಬಕ್ಕೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿರುತ್ತಾರೆ. ಅನಾಥಾಶ್ರಮದಲ್ಲಿ ಹುಟ್ಟುಹಬ್ಬ, ನಿರ್ಗತಿಕರಿಗೆ ವಸತಿ, ಊಟ ಇಂತಹ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಆದ್ರೆ ಈ ಬಾರಿ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರೊಂದಿಗೆ ಬೆರೆಯುವ ’ರೈತರೊಂದಿಗೊಂದು ದಿನ’ ಕಾರ್ಯಕ್ರಮಕ್ಕೆ ಹುಟ್ಟುಹಬ್ಬದಂದು ಚಾಲನೆ ನೀಡಲು ನಿರ್ಧರಿದ್ದಾರೆ.

ಪ್ರತಿ ತಿಂಗಳು ಎರಡು ಜಿಲ್ಲೆಯಲ್ಲಿ‘ರೈತರೊಂದಿಗೊಂದು ದಿನ’ ಕಾರ್ಯಕ್ರಮದೊಂದಿಗೆ ರಾಜ್ಯದ ರೈತರಿಗೆ ತಾತ್ಕಾಲಿಕ ಪರಿಹಾರದ ಬದಲು, ಶಾಶ್ವತ ಪರಿಹಾರ ಹುಡುಕುವ ಸಂಕಲ್ಪಕ್ಕೆ ಚಾಲನೆ ನೀಡಲಿದ್ದೇನೆ. ನಾಳೆ (ನವೆಂಬರ್‌.14) ರಂದು ನನ್ನ ಹುಟ್ಟುಹಬ್ಬದಂದು ಮಂಡ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಸರಣಿ ಟ್ವೀಟ್‌ಗಳನನ್ನು ಮಾಡಿರುವ ಸಚಿವರು, ’ಈ ವರ್ಷದ ನನ್ನ ಹುಟ್ಟುಹಬ್ಬ ರಾಜ್ಯದ ಅನ್ನದಾತರಿಗೆ ಮೀಸಲು’ ಎಂದಿದ್ದಾರೆ.

ಇದನ್ನೂ ಓದಿ: ಮುಂದಿನ ವರ್ಷದಿಂದ ‘ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್’ ಕಡ್ಡಾಯ-ಸಚಿವ ಬಿ.ಸಿ.ಪಾಟೀಲ್‌‌

ಪ್ರತಿ ತಿಂಗಳು ಎರಡು ಜಿಲ್ಲೆಗಳಲ್ಲಿ ’ಬೆಳಗ್ಗೆಯಿಂದ ಸಂಜೆವರೆಗೆ ರೈತರೊಂದಿಗೆ ಬೆರೆತು ಸಂವಾದ ನಡೆಸಿ, ಅವರ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ರಾಜ್ಯಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ.

“ಈ ಸದುದ್ದೇಶದಿಂದ “ರೈತರೊಂದಿಗೊಂದು ದಿನ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಎರಡು ಜಿಲ್ಲೆಯಂತೆ, ಸಂಪೂರ್ಣ ಒಂದು ದಿನ ರೈತರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಆಶಯವಾಗಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಲು ಇಚ್ಛಿಸಿರುತ್ತೇನೆ” ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ “ರಾಜ್ಯದ ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ, ಕೃಷಿ ರೈತೋದ್ಯಮ, ಉತ್ಪಾದನಾ ವೆಚ್ಚ ಕುರಿತು ಮಾಹಿತಿ ನೀಡಿ ಹುರಿದುಂಬಿಸುವುದು ಹಾಗೂ ರೈತರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಮೂಲದಿಂದ ಅರಿಯುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.


ಇದನ್ನೂ ಓದಿ: ಬಿಹಾರ ಫಲಿತಾಂಶ: ಜನ ಕೆಲವೊಮ್ಮೆ ಎರಡನೇ ಅವಕಾಶ ನೀಡುತ್ತಾರೆ- ಸೋನು ಸೂದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ತಾನು ಜೈವಿಕ ಅಲ್ಲ, ನನ್ನನ್ನು ದೇವರು ಕಳುಹಿಸಿದ್ದಾನೆ’ ಎಂದು ಹೇಳಿ ಅಪಹಾಸ್ಯಕ್ಕೀಡಾದ ಪ್ರಧಾನಿ ಮೋದಿ

0
'ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ಈ ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂತಹ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ನೀಡಿದ್ದು,...