Homeಮುಖಪುಟಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ

ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ

- Advertisement -
- Advertisement -

ಮಾರ್ಚ್ 24  ರಂದು ಭಾರತದಾದ್ಯಂತ ಘೋಷಿಸಲ್ಪಟ್ಟ ಯಾವುದೇ ಪೂರ್ವ ನಿರ್ಧರಿತವಲ್ಲದ ಲಾಕ್‌ಡೌನ್‌ನಿಂದಾಗಿ, ವಿಶ್ವದ ಎರಡು ದೊಡ್ಡ ಮಕ್ಕಳ ಪೋಷಣೆ ಕಾರ್ಯಕ್ರಮಗಳಾದ ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್ಮೆಂಟ್ ಸ್ಕೀಮ್(ಐಸಿಡಿಎಸ್) ಮತ್ತು ವಿಡ್‌ ಡೆ ಮೀಲ್ (ಅಕ್ಷರ ದಾಸೋಹ) ದಂತಹ ಕಾರ್ಯಕ್ರಮವು ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿವೆ.

ಪ್ರಸ್ತುತ 1 ರಿಂದ 8 ತರಗತಿಗಳಲ್ಲಿ ಕಲಿಯುತ್ತಿರುವ ಅಂದಾಜು 12 ಕೋಟಿ ಮಕ್ಕಳಿಗೆ ಆಹಾರವನ್ನು ನೀಡುತ್ತಿರುವ ಮಧ್ಯಾಹ್ನದ ಊಟದ ಕಾರ್ಯಕ್ರಮದ ಆಹಾರ ಧಾನ್ಯಗಳು ಲಾಕ್‌ಡೌನ್‌ನಿಂದಾಗಿ 335 ಟನ್‌ಗಳಿಂದ ಕೇವಲ 109 ಟನ್‌ಗಳಿಗೆ ಕುಸಿದಿದೆ. ಇದು ಕಳೆದ ವರ್ಷ ಇದೇ ಅವಧಿಗಿಂತ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.

ಐಸಿಡಿಎಸ್ ಅಡಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನಡೆಸುತ್ತಿರುವ ಪೌಷ್ಠಿಕಾಂಶ ಕಾರ್ಯಕ್ರಮದ ಆಹಾರ ಧಾನ್ಯದ ಸೇವನೆಯು ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ 238,000 ಟನ್‌ಗಳಿದಿದ್ದು, ಈ ವರ್ಷ 97,000 ಟನ್‌ಗಳಿಗೆ ಇಳಿದಿದೆ. ಈ ಅಂಗನವಾಡಿ ಕೇಂದ್ರಗಳು 0-6 ವರ್ಷದೊಳಗಿನ ಸುಮಾರು 14 ಕೋಟಿ ಮಕ್ಕಳಿಗೆ ಆಹಾರವನ್ನು ನೀಡುತ್ತವೆ ಎಂದು ಅಂದಾಜಿಸಲಾಗಿದೆ.

ಅಷ್ಟೇ ಅಲ್ಲದೆ, ಮಧ್ಯಾಹ್ನ ಊಟವು ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಹಾಗೂ ಹದಿಹರೆಯದ ಹುಡುಗಿಯರಿಗೆ ಪೂರಕ ಪೌಷ್ಠಿಕಾಂಶವನ್ನು ಒದಗಿಸುತ್ತದೆ.

ಈ ಮಾಹಿತಿಯೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಮಾಸಿಕ ಬುಲೆಟಿನ್‌ ನಲ್ಲಿ ಕಾಣಬಹುದಾಗಿದೆ.

ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯಲ್ಲಿ (ಎನ್‌ಎಫ್‌ಹೆಚ್‌ಎಸ್) ವರದಿಯಾದಂತೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಕಡಿಮೆ ತೂಕ ಹೊಂದಿದ್ದಾರೆ ಮತ್ತು ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಪ್ರಸ್ತುತ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ಸಿಗುತ್ತಿಲ್ಲವಾದ್ದರಿಂದ ಭವಿಷ್ಯದಲ್ಲಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಬಹಳ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನಲಾಗಿದೆ.

ಯಾಕೆ ಹೀಗಾಯಿತು?

ಯಾವುದೆ ಪೂರ್ವನಿರ್ಧರಿವಲ್ಲದೆ ದೇಶದಾದ್ಯಂತ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಈ ಮಕ್ಕಳ ಕಾರ್ಯಕ್ರಮಗಳಿಗಾಗಿ ಯೋಜಿಸಿದ್ದ ಆಹಾರ ಧಾನ್ಯಗಳು ರೈಲ್ವೇ ಹಾಗೂ ರಸ್ತೆ ಮೂಲಕ ಗೊತ್ತು ಪಡಿಸಿದ ಸ್ಥಳಗಳಿಗೆ ಸಾಗಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಕಾರ್ಯಕ್ರಮಗಳನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರವು ಯಾವುದೇ ಸ್ಪಷ್ಟ ನಿರ್ದೇಶನಗಳನ್ನು ನೀಡಿಲ್ಲ, ಇದರಿಂದಾಗಿ ನೌಕರರು ಮತ್ತು ಲಕ್ಷಾಂತರ ಮಕ್ಕಳು ತತ್ತರಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ಎರಡು ದೊಡ್ಡ ಕಾರ್ಯಕ್ರಮಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ 25 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಮಿಕರು ಮತ್ತು ಸಹಾಯಕಿಯರು ಹಾಗೂ 29 ಲಕ್ಷಕ್ಕೂ ಹೆಚ್ಚು ಅಡುಗೆಯವರು / ಸಹಾಯಕರು ಅಕ್ಷರಶಃ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.

ಅವರಲ್ಲಿ ಹೆಚ್ಚಿನವರು ಸಾಂಕ್ರಾಮಿಕ ಸಂಬಂಧಿತ ಕಾರ್ಯಗಳಲ್ಲಿ ರಕ್ಷಣಾತ್ಮಕ ಸಾಧನಗಳಿಲ್ಲದೆ ಕೆಲಸ ಮಾಡಿದ್ದಾರೆ. ಅನೇಕರು ತಮಗೆ ಸಿಗುವ ಅಲ್ಪ ವೇತನವನ್ನು ಪಡೆದಿಲ್ಲ ಹಾಗೂ ಈ ಕಠಿಣ ಪರಿಸ್ಥಿತಿಗಳಲ್ಲಿ ಅವರ  ಬದುಕು ತುಂಬಾ ಕಷ್ಟಕರವಾಗಿದೆ.


ಓದಿ: ಹೆಸರು, ವಿಳಾಸ ಏನೂ ಇಲ್ಲದೆ 1.25 ಲಕ್ಷ ವಲಸೆ ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ ಹಂಚಿದ ಕರ್ನಾಟಕ ಸರ್ಕಾರ!: ಹೇಗೆ?


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...