ಜನಾಂಗೀಯ ತಾರತಮ್ಯದ ಘೋಷಣೆ ಕೂಗುವ ವಿಡಿಯೋ ರಿಟ್ವೀಟ್ ಮಾಡಿದ ಟ್ರಂಪ್!

ಜಾರ್ಜ್ ಫ್ಲಾಯ್ಡ್ ಹತ್ಯೆ ವಿಚಾರದಲ್ಲಿಯೂ ಟ್ರಂಪ್‌ ನಡವಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಫೇಸ್‌ಬುಕ್, ಟ್ವಿಟ್ಟರ್‌ ಸೇರಿದಂತೆ ಹಲವು ಜಾಲತಾಣಗಳು ಅಧ್ಯಕ್ಷರ ಹಲವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದವು.

0
ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಗೆ ಬರಲಿದೆ,ಟ್ರಂಪ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರೊಬ್ಬರು “ವೈಟ್‌ ಪವರ್” ಎಂದು ಜೋರಾಗಿ ಕೂಗುತ್ತಿರುವ ಜನಾಂಗೀಯ ತಾರತಮ್ಯದ ವೀಡಿಯೊವನ್ನು ರಿಟ್ವೀಟ್ ಮಾಡಿ ವಿವಾದಕ್ಕೊಳಗಾಗಿದ್ದಾರೆ.

ಫ್ಲೋರಿಡಾದ ನಿವೃತ್ತಿ ಸಂಕೀರ್ಣದಲ್ಲಿ ಟ್ರಂಪ್ ಪರ ರ್ಯಾಲಿಯಲ್ಲಿ ಭಾಗವಹಿಸುವ ಜನರ ಗುಂಪಿನಲ್ಲಿ ಈ ಘೋಷಣೆ ಕೂಗಿದ ಬೆಂಬಲಿಗನೂ ಇದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.

ಈ ವಿಡಿಯೋ ತುಣುಕಿನಲ್ಲಿ ಅಧ್ಯಕ್ಷರ ಬೆಂಬಲಿಗರು ಮತ್ತು ವಿರೋಧಿಗಳು ನಿಂದನೆ ಮತ್ತು ಪರಸ್ಪರರ ಮೇಲೆ ಟೀಕೆಗಳನ್ನು ಮಾಡುವುದನ್ನು ಗಮನಿಸಬಹುದಾಗಿದೆ. ನಂತರ ಆ ರಿಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ.

ಜನಾಂಗೀಯ ಉದ್ವಿಗ್ನತೆಯನ್ನು ಲಾಭ ಮಾಡಿಕೊಳ್ಳಲು ಟ್ರಂಪ್‌ ಪ್ರಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷ ಆರೋಪಿಸಿದೆ. ಆದರೆ ಈ ಆರೋಪವನ್ನು ಟ್ರಂಪ್ ನಿರಾಕರಿಸಿದ್ದಾರೆ. “ವೈಟ್ ಪವರ್” ಘೋಷಣೆ ಕೂಗುವುದು ಕೇಳಲಿಲ್ಲ ಎಂದು ಅವರ ವಕ್ತಾರರು ಹೇಳಿದ್ದಾರೆ.

ಟ್ವೀಟ್‌ನಲ್ಲಿ ಸೇರಿಸಲಾಗಿರುವ ವೀಡಿಯೊದಲ್ಲಿ ಟ್ರಂಪ್ ಬೆಂಬಲಿಗರು ಗಾಲ್ಫ್ ಕಾರ್ಟ್‌ನಲ್ಲಿ ಮುಷ್ಟಿಯನ್ನು ಮೇಲೆತ್ತಿ “ವೈಟ್ ಪವರ್” ಎಂದು ಕೂಗುತ್ತಿದ್ದಾರೆ. ಇತರ ಟ್ರಂಪ್ ವಿರೋಧಿ ಪ್ರತಿಭಟನಾಕಾರರು ರ್ಯಾಲಿ-ನಡೆಸುವವರ ಮೇಲೆ “ನಾಜಿ” ಎಂದು ಕರೆದಿದ್ದಾರೆ.

ಯುಎಸ್ ಸೆನೆಟ್‌ನ ಏಕೈಕ ಕಪ್ಪು ರಿಪಬ್ಲಿಕನ್ ಟಿಮ್ ಸ್ಕಾಟ್ ಭಾನುವಾರ ಸಂದರ್ಶನವೊಂದರಲ್ಲಿ ಈ ವೀಡಿಯೊ “ಆಕ್ರಮಣಕಾರಿ” ಎಂದು ಕರೆದಿದ್ದಾರೆ ಮತ್ತು ಆ ಟ್ವೀಟ್ ಅನ್ನು ಡಿಲೀಟ್ ಮಾಡುವಂತೆ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಶ್ವೇತಭವನದ ವಕ್ತಾರ nಜುಡ್ ಡೀರೆ ಪ್ರತಿಕ್ರಿಯಿಸಿ ಅಧ್ಯಕ್ಷರು “ವೀಡಿಯೊದಲ್ಲಿ ವೈಟ್ ಪವರ್ ಎಂದು ಕೂಗುವುದು ಕೇಳಿಸಲಿಲ್ಲ. ಬದಲಿಗೆ ಜನರ ಹಷೋದ್ಘಾರ ಮಾತ್ರ ಕೇಳಿಸುತ್ತಿದೆ ಎಂದಿದ್ದಾರೆ.

ಅಧ್ಯಕ್ಷ ಟ್ರಂಪ್ ಈ ಹಿಂದೆ ಸಹ ಜನಾಂಗೀಯ ವಿಷಯವನ್ನು ಹಂಚಿಕೊಳ್ಳುವ ಅಥವಾ ಪ್ರಚಾರ ಮಾಡುವ ಆರೋಪವನ್ನು ಎದುರಿಸಿದ್ದರು. 2017 ರಲ್ಲಿ ಅವರು ಬ್ರಿಟಿಷ್ ಬಲಪಂಥೀಯ ಗುಂಪಿನಿಂದ ಮೂರು ಪ್ರಚೋದನಾಕಾರಿ ವೀಡಿಯೊಗಳನ್ನು ರಿಟ್ವೀಟ್ ಮಾಡಿದ್ದರು. ಆಗಿನ ಯುಕೆ ಪ್ರಧಾನಿ ಥೆರೆಸಾ ಮೇ ಅದನ್ನು ಖಂಡಿಸಿದ್ದರು.

ಜಾರ್ಜ್ ಫ್ಲಾಯ್ಡ್ ಹತ್ಯೆ ವಿಚಾರದಲ್ಲಿಯೂ ಟ್ರಂಪ್‌ ನಡವಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಫೇಸ್‌ಬುಕ್, ಟ್ವಿಟ್ಟರ್‌ ಸೇರಿದಂತೆ ಹಲವು ಜಾಲತಾಣಗಳು ಅಧ್ಯಕ್ಷರ ಹಲವು ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದವು.

ಕೊರೋನಾ ವೈರಸ್ ಅನ್ನು ವಿವರಿಸಲು “ಕುಂಗ್-ಫ್ಲೂ” ಎಂಬ ಪದವನ್ನು ಪದೇ ಪದೇ ಬಳಸಿದ್ದಕ್ಕಾಗಿ ಟ್ರಂಪ್ ಇತ್ತೀಚಿನ ವಾರಗಳಲ್ಲಿ ವರ್ಣಭೇದ ನೀತಿಯ ಆರೋಪ ಎದುರಿಸುತ್ತಿದ್ದಾರೆ. ಅಧ್ಯಕ್ಷರು ಈ ಪದವನ್ನು ಬಳಸುವುದನ್ನು ವರ್ಣಭೇದ ನೀತಿಯೆಂದು ಶ್ವೇತಭವನ ನಿರಾಕರಿಸಿದೆ.

ಈ ಮಧ್ಯೆ ಸಿಬಿಎಸ್ ನ್ಯೂಸ್‌ನ ಸಮೀಕ್ಷೆಯು ಯುಎಸ್‌ನ ಸಾರ್ವಜನಿಕರಲ್ಲಿ ಹೆಚ್ಚಿನವರು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನವನ್ನು ಒಪ್ಪುತ್ತಾರೆ ಮತ್ತು ಪ್ರತಿಭಟನೆಗಳು ಪೊಲೀಸ್ ಸುಧಾರಣೆಗಳಿಗೆ ಕಾರಣವಾಗುತ್ತವೆ ಎಂದು ನಂಬುತ್ತಾರೆ ಎಂದು ತಿಳಿಸಿದೆ.

ಇತ್ತೀಚಿನ ಪ್ರತಿಭಟನೆಗಳನ್ನು ಅಧ್ಯಕ್ಷ ಟ್ರಂಪ್ ನಿರ್ವಹಿಸುವುದನ್ನು 10 ರಲ್ಲಿ ಆರು ಅಮೆರಿಕನ್ನರು ಒಪ್ಪುವುದಿಲ್ಲ ಎನ್ನಲಾಗಿದೆ.


ಡೋನಾಲ್ಡ್‌ ಟ್ರಂಪ್‌ ಜಾಹೀರಾತುಗಳನ್ನು ನಿಷೇಧಿಸಿದ ಫೇಸ್‌ಬುಕ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here