HomeಮುಖಪುಟPM CARES ಗೆ ಚೀನಾ ಕಂಪನಿಗಳಿಂದ ದೇಣಿಗೆ ಏಕೆ?: ಕಾಂಗ್ರೆಸ್ ಪ್ರಶ್ನೆ

PM CARES ಗೆ ಚೀನಾ ಕಂಪನಿಗಳಿಂದ ದೇಣಿಗೆ ಏಕೆ?: ಕಾಂಗ್ರೆಸ್ ಪ್ರಶ್ನೆ

ಶಿಯೋಮಿ, ಒಪ್ಪೊ ಮತ್ತು ಹುವಾವೇ ಸೇರಿದಂತೆ ಪ್ರಸಿದ್ಧ ಚೀನಾದ ಸಂಸ್ಥೆಗಳಿಂದ ನೂರಾರು ಕೋಟಿಗಳನ್ನು ಪಿಎಂ ಕೇರ್ಸ್‌ ದೇಣಿಗೆಯಾಗಿ ಪಡೆದಿದೆ. ಇದು ಹೆಚ್ಚು ಚಿಂತಾಜನಕವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಗೆ ಆತಂಕಕಾರಿ ಎಂದು ಕಾಂಗ್ರೆಸ್ ಹೇಳಿದೆ.

- Advertisement -
- Advertisement -

ಚೀನಾ ದೇಶವು ಭಾರತ ಭೂಪ್ರದೇಶ ವಶಪಡಿಸಿಕೊಳ್ಳುತ್ತಿರುವಾಗಲೂ ಪ್ರಧಾನಿಗಳು ಚೀನಾದ ಕಂಪನಿಗಳಿಂದ ನೂರಾರು ಕೋಟಿ ದೇಣಿಗೆ ಸ್ವೀಕರಿಸುವುದು ಸರಿಯೇ ಎಂದು ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿದೆ.

ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಗ್ವಿ “2020 ರ ಮೇ 20 ರ ವೇಳೆಗೆ ಪಿಎಂ ಮೋದಿಯವರು ವಿವಾದಾತ್ಮಕ PM CARES ನಿಧಿಯ ಮೂಲಕ 9,678 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಆಘಾತಕಾರಿ ಅಂಶವೆಂದರೆ ಚೀನಾದ ಪಡೆಗಳು ನಮ್ಮ ಭೂಪ್ರದೇಶಕ್ಕೆ ಅತಿಕ್ರಮಣ ಮಾಡಿದ್ದರೂ, ಪ್ರಧಾನ ಮಂತ್ರಿಗಳು ಚೀನೀ ಕಂಪನಿಗಳಿಂದ ಹಣ ಸ್ವೀಕರಿಸಿದ್ದಾರೆ” ಎಂದು ದೂರಿದ್ದಾರೆ.

ರಾಜೀವ್ ಗಾಂಧಿ ಫೌಂಡೇಶನ್‌ಗಾಗಿ ಚೀನಾದ ಹಣವನ್ನು ಸ್ವೀಕರಿಸಿದ ಆರೋಪ ಹೊತ್ತಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಪ್ರತಿದಾಳಿ ಆರಂಭಿಸಿದೆ. ಚೀನಾದ ಸಂಸ್ಥೆಗಳಿಂದ ದೇಣಿಗೆಗಳು ಪಿಎಂ ಕೇರ್ಸ್ ನಿಧಿಯಲ್ಲೂ ಸುರಿಯಲ್ಪಟ್ಟಿದೆ, ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದೆ.

ಶಿಯೋಮಿ, ಒಪ್ಪೊ ಮತ್ತು ಹುವಾವೇ ಸೇರಿದಂತೆ ಪ್ರಸಿದ್ಧ ಚೀನಾದ ಸಂಸ್ಥೆಗಳಿಂದ ನೂರಾರು ಕೋಟಿಗಳನ್ನು ಪಿಎಂ ಕೇರ್ಸ್‌ ದೇಣಿಗೆಯಾಗಿ ಪಡೆದಿದೆ. ಇದು ಹೆಚ್ಚು ಚಿಂತಾಜನಕವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಗೆ ಆತಂಕಕಾರಿ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಕಾಂಗ್ರೆಸ್ ಏಳು ಪ್ರಶ್ನೆಗಳನ್ನು ಕೇಳಿದೆ.

“ವಿವಾದಾತ್ಮಕ ಕಂಪನಿಯಾದ ಹುವಾವೇಯಿಂದ ಪ್ರಧಾನಿ 7 ಕೋಟಿ ರೂಗಳನ್ನು ಪಡೆದಿದ್ದಾರೆಯೇ? ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಜೊತೆ ಹುವಾವೇಗೆ ನೇರ ಸಂಪರ್ಕವಿದೆಯೇ? ಟಿಕ್ ಟಾಕ್‌ ಎಂಬ ಚೀನೀ ಕಂಪನಿಯು ವಿವಾದಾತ್ಮಕ ಪಿಎಂ ಕೇರ್ಸ್ ಫಂಡ್‌ಗೆ 30 ಕೋಟಿ ರೂ. ದೇಣಿಗೆ ನೀಡಿದೆ. 38% ಚೀನೀ ಮಾಲೀಕತ್ವವನ್ನು ಹೊಂದಿರುವ ಪೇಟಿಯಂ ಪಿಎಂ ಕೇರ್ಸ್‌ ನಿಧಿಗೆ 100 ಕೋಟಿ ನೀಡಿದೆ? ಚೀನಾದ ಕಂಪನಿಯಾದ XIAOMI ವಿವಾದಾತ್ಮಕ ನಿಧಿಗೆ 15 ಕೋಟಿ ರೂ. ನೀಡಿದೆ? ಚೀನಾದ ಕಂಪನಿ ಒಪ್ಪೋ ಈ ವಿವಾದಾತ್ಮಕ ನಿಧಿಗೆ 1 ಕೋಟಿ ರೂ. ನೀಡಿದೆ ಅಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇತ್ತೀಚಿನ ಹೇಳಿಕೆಯಲ್ಲಿ, ಶಿಯೋಮಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 10 ಕೋಟಿ ಮತ್ತು ರಾಜ್ಯಗಳಾದ್ಯಂತ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಘೋಷಿಸಿದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯವರ ಪರಿಹಾರ ಪರಿಹಾರ ನಿಧಿಗೆ ಒಟ್ಟಾರೆಯಾಗಿ 1 ಕೋಟಿ ರೂ. ಕೊಡುಗೆ ನೀಡುತ್ತಿದೆ ಎಂದು ಒಪ್ಪೋ ಹೇಳಿದರು. ಒನ್‌ಪ್ಲಸ್ ಸಹ 1 ಕೋಟಿ ರೂ ದೇಣಿಗೆ ನೀಡುವುದಾಗಿ ಘೋಷಿಸಿದೆ.

ಪಿಎಂ ಕೇರ್ಸ್ ನಿಧಿಯನ್ನು ಪ್ರಧಾನಮಂತ್ರಿಯ “ತೋರಿಕೆಯ ವೈಯಕ್ತಿಕ” ನಿಧಿಯಂತೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದು ಯಾವುದೇ ಸಾರ್ವಜನಿಕ ಪ್ರಾಧಿಕಾರ ಅಥವಾ ಮಾಹಿತಿ ಹಕ್ಕು ಕಾಯ್ದೆಯಿಂದ ಲೆಕ್ಕಪರಿಶೋಧನೆಗೆ ಒಳಪಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

“ಒಟ್ಟಾರೆಯಾಗಿ ಈ ನಿಧಿಯನ್ನು ಕೇವಲ ಪ್ರಧಾನಮಂತ್ರಿಯು ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಹೊಣೆಗಾರಿಕೆಯೊಂದಿಗೆ ಅಪಾರದರ್ಶಕ ಮತ್ತು ರಹಸ್ಯ ಶೈಲಿಯಲ್ಲಿ ನಡೆಸುತ್ತಿರುವಂತೆ ತೋರುತ್ತಿದೆ” ಎಂದು ಕಾಂಗ್ರೆಸ್‌ ಆರೋಪಿಸಿದೆ.


ಬಿಜೆಪಿಗೂ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೂ ಸಂಬಂಧವೇನು? : ಕಾಂಗ್ರೆಸ್‌ನಿಂದ ಹತ್ತು ಪ್ರಶ್ನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0
ಲೋಕಸಭೆ ಚುನಾವಣೆಗೆ "ದೇವರು ಮತ್ತು ಪೂಜಾ ಸ್ಥಳಗಳ" ಹೆಸರಿನಲ್ಲಿ ಮತ ಕೇಳುವ ಮೂಲಕ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ...