Homeಮುಖಪುಟಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ : ಪಿ.ಮಹಮದ್

ಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ : ಪಿ.ಮಹಮದ್

- Advertisement -
- Advertisement -

ದಕ್ಷಿಣ ಕನ್ನಡದ ಪಿ.ಮಹಮ್ಮದ್ ಭಾರತದ ಇಂದಿನ ಪ್ರಮುಖ ಕಾರ್ಟೂನಿಸ್ಟ್‍ಗಳಲ್ಲಿ ಒಬ್ಬರು. ಜನವಾಹಿನಿಯಲ್ಲಿ ಅವರ ಕಾರ್ಟೂನ್‍ಗಳನ್ನು ನೋಡಿ ಓದುಗರು ಅಚ್ಚರಿಗೊಂಡರು. ಕಾರ್ಟೂನ್‍ಗಳಿಗೇ ವಿಶಿಷ್ಟವಾದ ಮೊನಚು ವ್ಯಂಗ್ಯ ಹಾಗೂ ಗೆರೆಗಳ ಆಟದ ಜೊತೆಗೆ ಸ್ಪಷ್ಟ ರಾಜಕೀಯ, ಸಾಮಾಜಿಕ ನಿಲುವು ಮಹಮ್ಮದ್‍ರವರ ವಿಶೇಷತೆ. ಕಲಾವಿದರಿಗೆ ಇರಬೇಕಾದ ಸ್ವಾತಂತ್ರ್ಯದ ಕುರಿತೂ ಅವರದು ಕಟು ನಿಲುವು. ಪ್ರಜಾವಾಣಿ, ವಿಜಯಕರ್ನಾಟಕಗಳಲ್ಲಿ ಕೆಲಸ ಮಾಡಿದ ನಂತರ ಈಗ ಸಂಪೂರ್ಣ ಸ್ವತಂತ್ರರು. ಆಂದೋಲನ, ವಾರ್ತಾಭಾರತಿ ಪತ್ರಿಕೆಗಳ ಜೊತೆಗೆ ಫೇಸ್‍ಬುಕ್‍ನ ಲಕ್ಷಾಂತರ ಓದುಗರು ನಿತ್ಯ ಅವರ ಕಾರ್ಟೂನ್‍ಗೆ ಕಾಯುತ್ತಾರೆ.

ನಾವು ಬದುಕುತ್ತಿರುವ ಕಾಲ ಅನೇಕ ವಿರೋಧಾಭಾಸಗಳಿಂದ ಕೂಡಿದೆ. ಈಗ ಅಭಿವ್ಯಕ್ತಿಸಲು ಮಾಧ್ಯಮಗಳ ಕೊರತೆಯಿಲ್ಲ. ಕೈಯಲ್ಲಿ ಮೊಬೈಲ್ ಇದ್ದರಾಯ್ತು – ನಮ್ಮ ಅನಿಸಿಕೆ – ಅಭಿಪ್ರಾಯಗಳನ್ನು ಜಗತ್ತಿನ ಯಾವ ಮೂಲೆಗೂ ತಲುಪಿಸಬಹುದು. ಆದರೆ ಅದೇ ಸಾಧನವನ್ನು ಟ್ರಾಲ್‍ಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಿಕ್ಕೂ ಬಳಸಲಾಗುತ್ತದೆ. ಗುಸುಗುಸು, ವದಂತಿ, ಚಾಡಿ ಮಾತುಗಳು ಇಂಟರ್ನೆಟ್ ಮಾಧ್ಯಮದ ಮೂಲಕ ಬಹುಮುಖ್ಯ ಅಭಿಪ್ರಾಯ ಎಂಬಂತೆ ಬಿತ್ತರಗೊಳ್ಳುತ್ತಿವೆ. ಬರೀ ವಾಟ್ಸಾಪ್ ಫಾರ್ವರ್ಡ್‍ಗಳನ್ನಷ್ಟೇ ನೋಡುವ ಮತ್ತು ಅವುಗಳನ್ನು ನಂಬುವ ದೊಡ್ಡದೊಂದು ಜನವರ್ಗ ಸೃಷ್ಟಿಯಾಗಿದ್ದು ಅವರು ಚುನಾವಣೆಗಳಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದಾಗಿ ಏನೆಲ್ಲಾ ಆಗಬಹುದು ಎಂಬುದನ್ನೂ ನೋಡುತ್ತಾ ಇದ್ದೇವೆ.

ಪ್ರಾಥಮಿಕ ಶಾಲೆಗಳಲ್ಲಿಯೇ ಸತ್ಯಮೇವ ಜಯತೆ ಎಂದು ಪಾಠ ಕೇಳುತ್ತಾ ಬಂದಿದ್ದೇನೆ. ಆದರೆ ಈಗ ಸತ್ಯ ಹೇಳುವುದು ಅತ್ಯಂತ ಕಠಿಣ ಕಾರ್ಯವಾಗಿ ಪರಿಣಮಿಸಿದೆ. ಮೊದಲೆಲ್ಲ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವವರನ್ನು ನೋಡಿದ್ದೆವು. ಈಗ ಸತ್ಯದ ತಲೆಯನ್ನೇ ಹಾರಿಸಿ ಸುಳ್ಳು ಹೇಳಲಾಗುತ್ತಿದೆ.

ವೃತ್ತಿಪರ ಕಾರ್ಟೂನಿಸ್ಟ್ ಆಗಿ ಕೆಲಸ ಮಾಡುತ್ತಿರುವ ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದರೆ ಏನು ಎಂದು ನನ್ನ ವೃತ್ತಿಜೀವನದ ಮೂವ್ವತ್ತು ವರ್ಷಗಳಲ್ಲಿ ಚೆನ್ನಾಗಿ ಮನದಟ್ಟಾಗಿದೆ. ಶಾ ಬಾನು ವಿವಾದ, ಬಾಬರಿ ಮಸೀದಿ ಧ್ವಂಸ ಸಂದರ್ಭಗಳಲ್ಲಿ ನಾನು ರಚಿಸಿದ ಕಾರ್ಟೂನುಗಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಎದುರಿಸಿದ್ದೇನೆ. ಆದರೆ ಅವುಗಳಿಂದ ನಾನು ಮತ್ತು ನನ್ನಂಥ ಕಾರ್ಟೂನಿಸ್ಟರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಶಕ್ತಿಗೆ ಏನೂ ತೊಂದರೆಯಾಗಿರಲಿಲ್ಲ. 2002ರ ಗುಜರಾತ್ ನರಮೇಧ ನಡೆದಾಗಲೂ ನಾವು ನಮ್ಮ ಮಾಧ್ಯಮವನ್ನು ಬಳಸಿಕೊಂಡು ಆ ಘಟನೆಗಳ ಬಗ್ಗೆ ಓದುಗರಿಗೆ ತಿಳಿಸಬೇಕಾದ್ದನ್ನು ತಿಳಿಸಿದ್ದೆವು.

ಆದರೆ 2014ರ ನಂತರದ ಸನ್ನಿವೇಶ ಸಂಪೂರ್ಣ ಭಿನ್ನವಾಗಿದೆ. ಒಂದು ನಿರ್ದಿಷ್ಟ ರಾಜಕೀಯ ನಾಯಕನ ವಿರುದ್ಧವಾದ ಕಾರ್ಟೂನ್ ರಚಿಸಿದರೆ ರಚಿಸಿದಾತನ ವಿರುದ್ಧ ‘ಟ್ರೋಲ್’ ಕಾಲಾಳುಗಳು ಮುಗಿಬೀಳುತ್ತಾರೆ. ಆತಂಕದ ವಿಷಯವೆಂದರೆ ಈ ಟ್ರೋಲ್‍ಗಳನ್ನು ದುಡ್ಡುಕೊಟ್ಟು ಈ ಉದ್ದೇಶಕ್ಕಾಗಿಯೇ ಇಟ್ಟುಕೊಳ್ಳಲಾಗುತ್ತದೆಯಂತೆ! ಇಂಥದಕ್ಕೆ ಮಣಿಯದವರ ಕುಟುಂಬ ಸದಸ್ಯರ ಮೇಲೇ ದೈಹಿಕ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತದೆ. ಇವುಗಳನ್ನೆಲ್ಲ ಎದುರಿಸಿಯೂ ತಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾರೆ ಎಂದು ಹೇಳಲು ಸಾಕಷ್ಟು ಗಟ್ಟಿಯಾದ ಗುಂಡಿಗೆಯೇ ಬೇಕು. ಆದರೆ ಇಂಥ ಗುಂಡಿಗೆಯವರಿದ್ದರೂ ಅವರಿಗೆ ಮುಕ್ತವಾದ ಕೆಲಸ ಮಾಡಲು ಅವಕಾಶ ನೀಡಬೇಕಾದ ಮಾಧ್ಯಮ ಸಂಸ್ಥೆಗಳಿಗೇ ಧೈರ್ಯದ ಕೊರತೆಯಿರುತ್ತದೆ. ಕಾರ್ಪೊರೇಟ್ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಸರಕಾರವನ್ನು ಎದುರುಹಾಕಿಕೊಳ್ಳಲು ಯಾರೂ ತಯಾರಿಲ್ಲ.

ಪರಿಸ್ಥಿತಿ ಹೀಗಿರುವಾಗ ನನ್ನಂಥ ಸ್ಥಳೀಯ ಭಾಷೆಗಳಲ್ಲಿ ಕೆಲಸ ಮಾಡುವ ಕಾರ್ಟೂನಿಸ್ಟರಿಗೆ ಜೀವನ ನಿರ್ವಹಣೆಗಾಗಿ ದುಡಿಯುವುದೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಿಕ್ಕಾಗಿ ದುಡಿಯುವುದೋ ಎನ್ನುವುದು ಅಕ್ಷರಶಃ ಜೀವನ್ಮರಣದ ಪ್ರಶ್ನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಕ್ಷರಶಃ ಜೀವನ್ಮರಣದ ಪ್ರಶ್ನೆ! ನಿಮ್ಮ ಮಾತು ನೂರರಷ್ಟು ನಿಜ. ಆದರೆ, ನಮ್ಮಂಥವರು ನಿಮ್ಮ ವಿಡಂಭನಾತ್ಮಕ ಕಾರ್ಟೂನ್ ಗಳನ್ನು ನೋಡುತ್ತಾ ಬೆಳೆದವರು. ಅನುಸರಿಸಿದವರು. ಎದೆಗುಂದುವ ಹಾಗೆ ಇಲ್ಲ. ನಿಮ್ಮೊಂದಿಗೆ ನಾವುಗಳು ಇದ್ದೇವೆ. ನೀವೇ ಹೇಳಿದ ಹಾಗೆ ಹಿಂದೆಂದಿಗಿಂತಲೂ ನಿಮ್ಮಂಥವರ ಅಗತ್ಯ ಬಹಳವಿದೆ. ಮುಂದುವರೆಸಿ ಸಾರ್…ಸತ್ಯಕ್ಕೆ ತಡವಾಗಿಯಾದರೂ ಗೆಲುವೇ ಇದ್ದೇ ಇರುತ್ತೆ..

  2. ಪಿ.ಮುಹಮ್ಮದ್ ಅವರ ಮಾತುಗಳಲ್ಲಿ ಹುರುಳಿದೆ ,ಇದೆಯಂದು ಎಲ್ಲರಿಗೂ ಗೊತ್ತು ಇದೆ. ಹಾಗೆಂದು ಮಾತು ಆರಂಭಿಸುವವರು ಯಾರು, ಎಂಬುದು ಪ್ರಶ್ನೆ. ಇದಕ್ಕೆ ವ್ಯಂಗ್ಯಚಿತ್ರಗಳೇ ಉತ್ತರಿಸುತ್ತಿದ್ದವು. ಆರ್. ಕೆ..ಲಕ್ಷ್ಮಣ್ರು ನಮ್ಮ ಸೂಪ್ತ ಉತ್ತರಗಳನ್ನು ತಮ್ಮ ವ್ಯಂಗ್ಯಚಿತ್ರಗಳಲ್ಲಿ ಕೊಟ್ಟಂತೆ ಭಾಸವಾಗುತ್ತಿತ್ತು.
    ಇಂದು ಕರ್ನಾಟಕದ ವ್ಯಂಗ್ಯಚಿತ್ರಕಾರರೊಬ್ಬರ ಉದ್ಗಾರಗಳು ಆತಂಕ ತಡಿ ಎಮ್ ನದಾಫ್ ಅಫಜಲಪುರ.

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...