ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ರೀತಿಯ ಒಂದು ಪೋಸ್ಟರ್ ಕಂಡಿದೆ. ಅದರಲ್ಲಿ ಹೀಗೆ ಹೇಳಲಾಗಿದೆ.
‘ನಾವೆಲ್ಲಾ ಕಾರ್ಯಕರ್ತರಿಗೆ ಚೆನ್ನಾಗಿ ಗೊತ್ತಿರುವುದೇನೆಂದರೆ ತೇಜಸ್ವಿನಿ ಅನಂತಕುಮಾರ್ ಅವರೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಅತ್ಯಂತ ಅರ್ಹ ಅಭ್ಯರ್ಥಿಯಾಗಿದ್ದರು. ಆದರೆ, ಭಾರತೀಯ ಜನತಾ ಪಕ್ಷದ ಕೆಲವು ಸದಸ್ಯರು ಆಡಿದ ಆಟಗಳಿಂದ, ಅವರಿಗೆ ಟಿಕೆಟ್ ತಪ್ಪಿತು ಮತ್ತು ಒಬ್ಬ ಅಪ್ರಬುದ್ಧ ಅಹಂಕಾರಿ ಹುಡುಗ ಅವರ ಸ್ಥಾನಕ್ಕೆ ಬಂದಿದ್ದಾನೆ. ನಾವೆಲ್ಲರೂ ಬಿಜೆಪಿ ಹೈಕಮ್ಯಾಂಡ್ ಜೊತೆಯಲ್ಲಿ ಇದ್ದೇವೆಂದು ತೋರಿಸಲು ದೊಡ್ಡ ಸಂಖ್ಯೆಯಲ್ಲಿ ನಾವೆಲ್ಲರೂ ನೋಟಾ ಚಲಾಯಿಸೋಣ.
ಮುಂದಿನ ಸಾರಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಸಿಕ್ಕಿ ಸಂಸತ್‌ನಲ್ಲಿ ನಮ್ಮನ್ನು ಮುನ್ನಡೆಸಲು ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಲು ಸಾಧ್ಯವಾಗುತ್ತದೆಂದು ಆಶಿಸೋಣ’
ಎಂದು ಹೇಳಲಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ನರೇಂದ್ರ ಮೋದಿಯವರು ದಿವಂಗತ ಅನಂತ್‌ಕುಮಾರ್‌ರ ಜೊತೆ ಚರ್ಚಿಸುತ್ತಿರುವ ದೊಡ್ಡ ಫೋಟೋದ ಜೊತೆಗೆ ತೇಜಸ್ವಿನಿಯವರ ಒಂದು ಪ್ರತ್ಯೇಕ ಫೋಟೋ ಇದೆ ಮತ್ತು ಅಮಿತ್ ಷಾ, ಯಡಿಯೂರಪ್ಪ ಮತ್ತು ಆರ್.ಅಶೋಕ್ ಅವರ ಫೋಟೋ ಸಹಾ ಹಾಕಲಾಗಿದೆ.
ಈ ಪೋಸ್ಟರ್‌ಅನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ನಿಜಕ್ಕೂ ತೇಜಸ್ವಿನಿಯವರ ಅಭಿಮಾನಿ ಬಿಜೆಪಿ ಕಾರ್ಯಕರ್ತರೇ ಹಚ್ಚಿದ್ದಾರಾ ಅಥವಾ ಅದರ ಹಿಂದೆ ಬೇರೆ ಏನಾದರೂ ಕೈವಾಡ ಇದೆಯಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಅಪ್‌ಡೇಟ್: 15.04.2019
ಈ ಕುರಿತು ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿರುವ ತೇಜಸ್ವಿನಿ ಅನಂತಕುಮಾರ್ ಅವರು ನಾನು ಚುನಾವಣೆಯಲ್ಲಿ ನೋಟಾ ಚಲಾಯಿಸುವಂತೆ ಕೇಳಿದ್ದೇನೆಂದು ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆಂದು ನನಗೆ ಗೊತ್ತಾಯಿತು. ಇದು ವಾಸ್ತವವಲ್ಲ ಮತ್ತು ದುರುದ್ದೇಶದಿಂದ ಕೂಡಿದೆ. ನನಗೆ ಬಿಜೆಪಿಗೆ ಮತ ನೀಡಿ, ಮೋದಿ ಮತ್ತೊಮ್ಮೆ, ದೇಶ ಮೊದಲು ಎಂದಿದ್ದಾರೆ.
It came to my knowledge that somebody is spreading rumours that I am asking people to vote for NOTA.
This is unfounded and malicious.
For me it's
VOTE BJP
Modi Again
National First @BJP4India @BJP4Karnataka— Chowkidar Tejaswini AnanthKumar (@Tej_AnanthKumar) April 14, 2019