Homeಕರ್ನಾಟಕದಮನಿತರ ಸಿಟ್ಟಿನ ಏಕೀಕರಣ - ಅರುಣ್ ಜೋಳದಕೂಡ್ಲಿಗಿ

ದಮನಿತರ ಸಿಟ್ಟಿನ ಏಕೀಕರಣ – ಅರುಣ್ ಜೋಳದಕೂಡ್ಲಿಗಿ

- Advertisement -
- Advertisement -

`ಬಡವರ ಸಿಟ್ಟು ದವಡೆಗೆ ಮೂಲ’ ಎನ್ನುವ ಗಾದೆ, ಬಡವ ಸಿಟ್ಟಾದರೆ ಪರಿಣಾಮವನ್ನು ಆತನೆ ಎದುರಿಸಬೇಕು, ಹಾಗಾಗಿ ಬಾಯ್ಮುಚ್ಚಿರುವುದು ಲೇಸು ಎನ್ನುವಂತಿದೆ. ಅಂತೆಯೇ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎನ್ನುವ ನುಡಿಗಟ್ಟೂ ಚಾಲ್ತಿಯಲ್ಲಿದೆ. ಅಸಹಾಯಕತೆ ಕಟ್ಟೆಯೊಡೆದಾಗ, ದಬ್ಬಾಳಿಕೆ ಅತಿಯಾದಾಗ ಈ ನುಡಿಗಟ್ಟು ವಿರಳವಾಗಿ ಬಳಕೆಯಾಗುತ್ತದೆ. ಆಳುವ ಶಕ್ತಿಗಳು ಮೊದಲ ನುಡಿಗಟ್ಟನ್ನು ಕಟ್ಟಿ ಜನರಲ್ಲಿ ಆತಂಕ ಹುಟ್ಟಿಸಿದರೆ, ವಿರುದ್ಧವಾಗಿ ಜನರು ಪರ್ಯಾಯ ನುಡಿಗಟ್ಟಿನಲ್ಲಿ ನಮ್ಮ ಸಿಟ್ಟಿಗೂ ಶಕ್ತಿಯಿದೆ ಎಂದು ಆಳುವವರಲ್ಲಿ ಭಯ ಹುಟ್ಟಿಸಿದ್ದಾರೆ. ಇವೆರಡೂ ರಾಜಶಾಹಿ ಮತ್ತು ಜಮೀನ್ದಾರಿ ವ್ಯವಸ್ಥೆಯಲ್ಲಿ ಜೀವ ತಳೆದವು.

ಈ ನುಡಿಗಟ್ಟುಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೂ ಮಾರುವೇಷದಲ್ಲಿವೆ. ಇಲ್ಲಿಯೂ ಬಡವರ ಸಂಖ್ಯೆ ಇಳಿದಿಲ್ಲ. ಅಂತೆಯೇ ಪ್ರಜಾಪ್ರಭುತ್ವದಲ್ಲಿಯೂ `ಬಡವನ ಸಿಟ್ಟು ದವಡೆಗೆ ಮೂಲ’ ಎನ್ನುವ ಸ್ಥಿತಿ ಪೂರ್ಣ ಬದಲಾಗಿಲ್ಲ. ಆದರೆ `ಬಡವರ ಸಿಟ್ಟು ಬಾಳ ಕೆಟ್ಟದ್ದು’ ಎಂಬ ನುಡಿಗಟ್ಟಿಗೆ ಸಂವಿಧಾನಿಕ ಬಲ ಬಂದಿದೆ. ಜನರು ಮತ ಚಲಾಯಿಸಿ ಗೆಲ್ಲಿಸಿದ ಚುನಾಯಿತರು ಏನೊಂದು ಕೆಲಸ ಮಾಡದೆ ದರ್ಪ ನಡೆಸಿದವರನ್ನು ಅದೇ ಮತದಾರರರು ಮತ್ತೊಂದು ಚುನಾವಣೆಯಲ್ಲಿ ಮಣ್ಣು ಮುಕ್ಕಿಸಿದ್ದಾರೆ. ಇಲ್ಲಿ ಮತದಾರರ ಸಿಟ್ಟು ಮತ್ತು ಆಕ್ರೋಶ `ಮತಚಲಾವಣೆ’ರೂಪದಲ್ಲಿ ಏಕೀಕರಣಗೊಂಡಿದೆ.

ದೀರ್ಘಕಾಲದ ಆಳ್ವಿಕೆಯ ಮದವೇರಿ ಜಿಡ್ಡುಗಟ್ಟಿದ ಕಾಂಗ್ರೆಸ್ ವಿರುದ್ಧದ ಬಹುಸಂಖ್ಯಾತ ಯುವ ಸಮುದಾಯದ ಸಿಟ್ಟು ಏಕೀಕರಣಗೊಂಡ ಫಲವೆ, ಕಳೆದ 2014 ರ ಚುನಾವಣೆಯಲ್ಲಿ ಭಾಜಪ ಬಹುಮತ ಪಡೆದು ನರೇಂದ್ರ ಮೋದಿಯವರು ಪ್ರಧಾನಿಯಾದರು. ಇದೀಗ ಮತ್ತೊಂದು ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಈ 5 ವರ್ಷದ ಮೋದಿಯವರ ಆಡಳಿತದಲ್ಲಿನ ನೋಟುರದ್ಧತಿ, ಜಿಎಸ್‍ಟಿ, ಕೈಗೆಟುಕದಂತಾದ ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ, ಸಾರ್ವಜನಿಕ ಸಂಸ್ಥೆಗಳ ದಮನ, ಪರಿಶಿಷ್ಟರ ಸೌಲಭ್ಯಗಳ ಕಡೆಗಣನೆ, ಕಾರ್ಪೋರೇಟರುಗಳ ಪರವಾದ ಆಳ್ವಿಕೆ, ರೈತ ಸಮುದಾಯದ ನಿರ್ಲಕ್ಷ್ಯ, ಹೆಚ್ಚಿದ ರೈತರ ಆತ್ಮಹತ್ಯೆ, ದಲಿತ ಆದಿವಾಸಿಗಳ ದಮನ, ಸಂವಿಧಾನ ಬದಲಾಯಿಸುವ ಧೋರಣೆ, ನಿರುದ್ಯೋಗ ಹೆಚ್ಚಳ ಮೊದಲಾದ ಸಂಗತಿಗಳೂ ಜನಸಾಮಾನ್ಯರ ಆಕ್ರೋಶವನ್ನು ಹೆಚ್ಚಿಸಲಿಲ್ಲವೇ? ದೆಹಲಿಗೆ ತೆರಳಿದ ಎಡಪಕ್ಷಗಳು ಆಯೋಜಿಸಿದ ರೈತ ಸಮುದಾಯದ ಬೃಹತ್ ರ್ಯಾಲಿಗಳು ಈ ಆಕ್ರೋಶವನ್ನು ಕಾಣಿಸಿಯೂ ಇದು ಮತ ಚಲಾವಣೆಯಾಗಿ ಏಕೆ ಬದಲಾಗಲಿಲ್ಲ ಎನ್ನುವ ಪ್ರಶ್ನೆಗಳು ಸಹಜವಾಗಿ ಕಾಡುತ್ತವೆ. ಬಹುಶಃ ಈ ಬಗೆಯ ದಮನಿತರ ಸಿಟ್ಟು ಆಕ್ರೋಶಗಳು ಈ ಬಾರಿಯ ಮತಚಲಾವಣೆಯಲ್ಲಿ ಏಕೀಕರಣಗೊಳ್ಳಬೇಕಿತ್ತು, ಆದರೂ ಏಕೀಕರಣಗೊಳ್ಳಲಿಲ್ಲವೇ ? ಅಥವಾ ಇವಿಎಂ ಮಿಷನ್ನಿನ ಪವಾಡ ಈ ಪ್ರಶ್ನೆಯ ದಾರಿಯನ್ನೂ ತಪ್ಪಿಸುತ್ತಿದೆಯೇ?

ಎಲ್ಲಾ ಕಾಲಕ್ಕೂ ಪ್ರಜಾಪ್ರಭುತ್ವ ಸರಕಾರಗಳು ದಮನಿತರ ಸಿಟ್ಟು ಮತ್ತು ಆಕ್ರೋಶವನ್ನು ನಿರಸನಗೊಳಿಸಿ ಒಟ್ಟಾಗಬಹುದಾದ ದಮನಿತರನ್ನು ತುಂಡಾಗಿಸಿ ಶಕ್ತಿ ಕುಂದಿಸಿದ್ದಿದೆ. ಇಂದಿರಾಗಾಂಧಿಯ ಗರೀಬಿ ಹಟಾವೋ ಯೋಜನೆಗಳು ದಮನಿತರ ಸಿಟ್ಟನ್ನು ದೊಡ್ಡಮಟ್ಟದಲ್ಲಿ ನಿರಸನಗೊಳಿಸಿದವು. ಇಂದೂ ಕೂಡ ದಮನಿತರ ಸಿಟ್ಟು ಒಟ್ಟಾಗಿ ಸ್ಫೋಟಟಗೊಳ್ಳದಂತೆ ನಾನಾರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇಂದಿರಾ ಕಾಲಕ್ಕೂ ಈಗಿನ ಸಂದರ್ಭಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ ಕೆಲವಾದರೂ ಆಮೂಲಾಗ್ರ ಬದಲಾವಣೆಯ, ಮತ್ತೆ ಕೆಲವು ತಾತ್ಕಾಲಿಕವಾಗಿಯಾದರೂ ಸಮಸ್ಯೆಗಳನ್ನು ಬಗೆಹರಿಸಿ ಜನರ ಸಿಟ್ಟನ್ನು ಮುದುಡಿಸಲಾಗುತ್ತಿತ್ತು. ಆಗ ಬಂದ ಬಹುಪಾಲು ಯೋಜನೆಗಳು ಬೇರೆ ಬೇರೆ ಹೆಸರನ್ನು ಅಂಟಿಸಿಕೊಂಡು ಇಂದಿಗೂ ಚಾಲ್ತಿಯಲ್ಲಿವೆ. ಆದರೆ ಇಂದು ಒಟ್ಟಾಗಬಹುದಾದ ಜನರ ಸಿಟ್ಟು ಆಕ್ರೋಶವನ್ನು ತಾತ್ಕಾಲಿಕ ಯೋಜನೆಗಳೂ ಇಲ್ಲದಂತೆ ಜನರನ್ನು ವಿಭಜಿಸಿ ನಿಶಕ್ತಗೊಳಿಸಲಾಗುತ್ತಿದೆ. ಮುಖ್ಯವಾಗಿ ಜನರ ಸಿಟ್ಟನ್ನು ನಿರಸನಗೊಳಿಸಲು ಆಡಳಿತ ಸರಕಾರದ ಬಗೆಗೆ ಜನಪರವೆಂಬ ಸುಳ್ಳುಗಳ ಉತ್ಪಾದನೆ ಅವ್ಯಾಹತವಾಗಿ ನಡೆದಿದೆ. ಇದನ್ನು ವಿಶೇಷವಾಗಿ ದೃಶ್ಯಮಾಧ್ಯಮಗಳು ಜನರಲ್ಲಿ ಬಿತ್ತುತ್ತಿವೆ.

ಹಾಗಾಗಿ ಇಂದು ಜನರ ಸಿಟ್ಟನ್ನು ಕಡಿಮೆಗೊಳಿಸುವ ಲಕ್ಷಾಂತರ ಕ್ಷುಲ್ಲಕ ಸಂಗತಿಗಳ ಉತ್ಪಾದನೆ ಕ್ಷಣಕ್ಷಣವೂ ನಡೆಯುತ್ತಿದೆ. ಇದರಿಂದಾಗಿಯೇ ದೇಶಕ್ಕೆ ಮಾರಕವಾಗುವ ವಿದ್ಯಮಾನಗಳು ಘಟಿಸಿದಾಗಲೂ ಇಡೀ ದೇಶದಲ್ಲಿ ಆಕ್ರೋಶ ಭುಗಿಲೇಳುತ್ತದೆಂದು ಎದುರು ನೋಡುವಾಗಲೆ, ಏನೂ ನಡೆದೇ ಇಲ್ಲವೆಂಬಂತೆ ವಿದ್ಯಮಾನಗಳು ಕಣ್ಮರೆಯಾಗುತ್ತವೆ. ಇದೀಗ ಕೇಂದ್ರೀಕರಣವಾಗಬೇಕಾದ ಜನರ ಸಮಸ್ಯೆಗಳನ್ನು ವಿಕೇಂದ್ರೀಕರಣ ಮಾಡಲಾಗುತ್ತಿದೆ. ದೇಶದಾದ್ಯಂತ ನಿರುದ್ಯೋಗಿ ಯುವಜನರ ಸಿಟ್ಟು ಶೇಖರಣೆಗೊಳ್ಳುತ್ತಿದೆ. ಇಂತಹ ಬಹುಪಾಲು ಯುವಕರ ತಲೆಯಲ್ಲಿ ಧರ್ಮದ ಅಫೀಮು ತುಂಬಿ ಕಾಲಾಳುಗಳಂತೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಬಳಸಿಕೊಳ್ಳುತ್ತಿವೆ. ಕೋಮುವಾದಿ ಶಕ್ತಿಗಳು ಅನ್ಯ ಕೋಮಿನ ಬಗೆಗೆ ಸಿಟ್ಟನ್ನು ಉತ್ಪಾದಿಸಿ ಅಂತಹ ಉತ್ಪಾದಿತ ಸಿಟ್ಟಿನ ಏಕೀಕರಣದಿಂದ ಕೋಮುಗಲಭೆಯಂತಹ ಹಿಂಸೆಯ ನಡೆಗಳು ಸಾಧ್ಯವಾಗುತ್ತವೆ.

ಎಲ್ಲೆಲ್ಲಿ ಶೋಷಿತರ ಸಿಟ್ಟು ಆಕ್ರೋಶ ಒಟ್ಟಾಗಿ ಸ್ಫೋಟಗೊಂಡಿದೆಯೋ ಅಲ್ಲೆಲ್ಲಾ ಕ್ರಾಂತಿ ಮೊಳಗಿದೆ. ಬದಲಾವಣೆ ಸಾಧ್ಯವಾಗಿದೆ. ಜನರ ಸಿಟ್ಟನ್ನು ಏಕೀಕರಿಸುವ ಯೋಚನೆ ಇಂದು ನಿನ್ನೆಯದಲ್ಲ, ಕಾರ್ಲ್‍ಮಾರ್ಕ್ಸ್ ಒಳಗೊಂಡಂತೆ ಅಂಬೇಡ್ಕರ್ ಗಾಂಧಿ ಲೋಹಿಯಾ ಪೆರಿಯಾರ್‍ತನಕ ಭಿನ್ನ ನೆಲೆಗಳಲ್ಲಿ ದಮನಿತರ ಸಿಟ್ಟು ಆಕ್ರೋಶದ ಏಕೀಕರಣದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರ ವಿರುದ್ಧದ ಜನರ ಸಿಟ್ಟನ್ನು ಗಾಂಧಿ ಏಕೀಕರಣ ಮಾಡಿದ್ದರ ಫಲವೇ ಸ್ವಾತಂತ್ರ್ಯ ಹೋರಾಟ.

ಹೀಗೆ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರು ತಳೆಯುವ ಸಣ್ಣಪುಟ್ಟ ಸಿಟ್ಟು ಒಟ್ಟಾಗಿ ಚಳವಳಿಯ ಸಾಗರವಾಗಬೇಕಿದೆ. ಈ ಹೊತ್ತಿನ ಮಹಾಘಟಬಂಧನ್, ಜನಾಂದೋಲನಗಳ ಮಹಾಮೈತ್ರಿ, ದಲಿತ ಸಂಘಟನೆಗಳ ಒಕ್ಕೂಟದಂತಹ ಜನಚಳವಳಿಗಳನ್ನು ಒಟ್ಟಾಗಿಸುವ ಪ್ರಯತ್ನಗಳು ಈ ಕಾರಣಕ್ಕೆ ಒಂದಾಗಲೆತ್ನಿಸುತ್ತಿವೆ. ಆದರೆ ಕಾಲಕಾಲಕ್ಕೆ ಹೀಗೆ ಜನ ಸಾಮಾನ್ಯರ ಸಿಟ್ಟನ್ನು ಒಟ್ಟಾಗದಂತೆ ಮೇಲ್ಜಾತಿ ಮತ್ತು ಮೇಲ್ವರ್ಗಗಳನ್ನೊಳಗೊಂಡ ಪ್ರಭುತ್ವ ಛಿದ್ರಗೊಳಿಸುತ್ತಲೇ ಬಂದಿದೆ. ವಾಸ್ತವವಾಗಿ ವರ್ತಮಾನದ ಭಾರತದಲ್ಲಿ ಜನಸಾಮಾನ್ಯರಲ್ಲಿ ಹುಟ್ಟುತ್ತಿರುವ ಸಿಟ್ಟು ಆಕ್ರೋಶದ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಈ ಸಿಟ್ಟು ಏಕೀಕರಣಗೊಂಡು ಬದಲಾವಣೆಗೆ ಬೇಕಾಗುವ ದೊಡ್ಡ ಶಕ್ತಿಯಾಗುವ ಸಾಮಥ್ರ್ಯ ಕುಗ್ಗುತ್ತಿದೆ. ಇದೊಂದು ವೈರುಧ್ಯದ ಚಲನೆ. ಮತ್ತೊಂದೆಡೆ ಕಾರ್ಪೋರೇಟ್ ಶಕ್ತಿಗಳು ಜನರನ್ನು ಗಿರಾಕಿಗಳನ್ನಾಗಿ ಏಕೀಕರಣಗೊಳಿಸಿ ಮಾರುಕಟ್ಟೆಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಭುತ್ವವೂ ಜೊತೆಯಾಗಿದೆ. ಇದು ಸದ್ಯಕ್ಕೆ ಪ್ರತಿ ಭಾರತೀಯ ಪ್ರಜೆಯೂ ಯೋಚಿಸಬೇಕಾದ ಸಂಗತಿ.

ಆಮೂಲಾಗ್ರವಾಗಿ ಒಟ್ಟಂದದ ಬದಲಾವಣೆಗೆ ಏಕೀಕರಣಗೊಳ್ಳಬೇಕಾದ ಸಿಟ್ಟು ಆಕ್ರೋಶಗಳು ಇಂದು ಚಿಕ್ಕಪುಟ್ಟ ಆಸೆಗಳಿಗೆ ಬಲಿಯಾಗುತ್ತಿವೆ. ಅಂತೆಯೇ ದಮನಿತರ ದೊಡ್ಡ ದೊಡ್ಡ ಕನಸುಗಳು ಚೂರುಚೂರಾಗುತ್ತಿವೆ. ಜನಸಾಮಾನ್ಯರ ಸಿಟ್ಟು ಆಕ್ರೋಶವನ್ನು ಏಕೀಕರಣ ಮಾಡಬಯಸುವ ಜೀವಪರ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರನ್ನು `ನಗರನಕ್ಸಲರು’ ಎನ್ನುವ ಹಣೆಪಟ್ಟಿ ಅಂಟಿಸುವ ಮೂಲಕ ಸಿಟ್ಟಿನ ಏಕೀಕರಣವನ್ನೆ ದೇಶದ್ರೋಹದ ಸಂಗತಿಯನ್ನಾಗಿಸಲಾಗಿದೆ. ಹಾಗಿದ್ದೂ, ದಮನಿತರ ಸಿಟ್ಟು ಏಕೀಕರಣಗೊಳ್ಳದೆ ಅವರ ಬದಲಾವಣೆ ಅಸಾಧ್ಯ. ಜನಸಾಮಾನ್ಯರ ದಮನದ ಅತಿರೇಕದ ತುಟ್ಟತುದಿಯಲ್ಲಿ ಸಿಟ್ಟು ಏಕೀಕರಣಗೊಳ್ಳುವುದನ್ನು ಯಾರಿಂದಲೂ ತಪ್ಪಿಸಲಾಗದು. ಇದೀಗ ಅದೊಂದೆ ಭವಿಷ್ಯದ ಭರವಸೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಆಹಾರ ಉತ್ಪಾದನೆ ಯಿಂದ ಹಿಡಿದು ಅವರು ದರಿಸುವ ಉಡುಪುಗಳನ್ನು ಮಾತ್ರವಲ್ಲ,
    ಹಾಕುವ ಚಪ್ಪಲಿ,ಅವರ ಹೇರ್ ಕಟ್,ಅವರ ಮನೆ ಬಾತ್ ರೂಮ್ ನಿಂದ ಹಿಡಿದು ಸಪ್ಟಿಕ್ ಟ್ಯಾಂಕ್, ಅವರ ಬೀದಿ ಗುಡಿಸಲೂ ಸಹ ಅವರ ಧರ್ಮದ ವರನ್ನೇ ಆಯ್ಕೆ ಮಾಡಿಕೊಳ್ಳಬೇಕು….

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...