Homeಮುಖಪುಟಮೋದಿ ತನ್ನ ಆಸ್ತಿ ಕುರಿತು ಸುಳ್ಳು ಹೇಳಿದ್ದಾರೆ: ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಪಿಐಎಲ್

ಮೋದಿ ತನ್ನ ಆಸ್ತಿ ಕುರಿತು ಸುಳ್ಳು ಹೇಳಿದ್ದಾರೆ: ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಪಿಐಎಲ್

- Advertisement -
- Advertisement -

ಸಾಕೇತ್ ಗೋಖಲೆ ಎಂಬ ಮಾಜಿ ಪತ್ರಕರ್ತ ನಿನ್ನೆಯೇ ತನ್ನ ಫೇಸ್‌ಬುಕ್‌ನಲ್ಲಿ ಇಂದು ಮೋದಿಯವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಿದ್ದೇನೆಂದು ಹೇಳಿದ್ದರು. ಅದರಲ್ಲಿ ಏನಿರುತ್ತದೆಂಬುದರ ಬಗ್ಗೆ ಕುತೂಹಲ ಮೂಡಿತ್ತು. ಇಂದು ಅದನ್ನು ದಾಖಲಿಸಿ ವಿವರಗಳನ್ನು ಹಂಚಿಕೊಂಡಿದ್ದಾರೆ. ವಿವರ ಇಂತಿದೆ.

ನಾನು ಕೊನೆಗೂ ಸುಪ್ರೀಮ್ ಕೋರ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪಿಐಎಲ್ ದಾಖಲಿಸುವಲ್ಲಿ ಯಶಸ್ವಿಯಾದೆ. ಇದು ಸಾಧ್ಯವಾಗಿದ್ದು ಎರಡು ತಿಂಗಳ ಕಠಿಣ ತನಿಖೆ ಮತ್ತು ಆಳವಾಗಿ ಅಗೆಯುವಿಕೆಯ ನಂತರ.

ಇದು ಪ್ರಧಾನಿ ಮೋದಿಯವರ ಅಫಿಡವಿಟ್‌ಗೆ ಸಂಬಂಧಿಸಿದ್ದು. ಅವರ ಅಫಿಡವಿಟ್ ಅತ್ಯಂತ ಗಂಭೀರವಾದ ಲೋಪಗಳಿಂದ ಕೂಡಿದೆ. 2012ರ ನಂತರ ಅವರ ಪ್ರಕಟಣೆಯಿಂದ ಕೋಟ್ಯಾಂತರ ರೂ. ಬೆಲೆಯ ಭೂಮಿಯು ಕಾಣೆಯಾಗಿದೆ.

ಮೇಲ್ನೋಟಕ್ಕೆ ಕಾಣುವುದೇನೆಂದರೆ, ಇದೊಂದು ದೊಡ್ಡ ಭೂಹಗರಣ ಆಗಿರುವ ಸಾಧ್ಯತೆ ಇದೆ, ಅದೂ ಚೌಕಿದಾರನೇ ಎಲ್ಲವನ್ನೂ ನೋಡಿಕೊಳ್ಳುತ್ತಿರುವಾಗ.

ಇದರ ಕೆಲವು ಸಂಕ್ಷಿಪ್ತ ಸತ್ಯಾಸತ್ಯತೆಗಳು ಇಂತಿವೆ.

2002ರಲ್ಲಿ ಗುಜರಾತಿನ ಆಗಿನ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಅವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ, 1.3 ಲಕ್ಷ ರೂಪಾಯಿಗೆ ಒಂದು ಪ್ಲಾಟ್ ನೀಡಲಾಗಿತ್ತು; ಪ್ಲಾಟ್ ನಂಬರ್ 411, ಸೆಕ್ಟರ್ 1, ಗಾಂಧಿನಗರ. ಆ ಪ್ಲಾಟ್‌ನ ಅಳತೆ 330 ಚದರ ಮೀಟರ್‌ಗಳು.

2007ರಲ್ಲಿ ತಮ್ಮ ಅಫಿಡವಿಟ್‌ನಲ್ಲಿ ನರೇಂದ್ರ ಮೋದಿಯವರು ಇದನ್ನು ಪ್ರಕಟಿಸಿದರು.

ಆದರೆ 2012ರ ನಂತರ ಏನಾಯಿತೋ, ಆ ಪ್ಲಾಟ್ ಅನ್ನು ತಮ್ಮ ಅಫಿಡವಿಟ್‌ನಲ್ಲಿ ಹೆಸರಿಸುವುದನ್ನು ಕೈಬಿಟ್ಟರು. ಅದರ ಬದಲಿಗೆ, 401/ಏ, ಸೆಕ್ಟರ್ 1, ಗಾಂಧಿನಗರದ ಪ್ಲಾಟ್‌ನ ಕಾಲು ಭಾಗದಷ್ಟು ತಾವು ಹೊಂದಿರುವುದಾಗಿ ಘೋಷಿಸಿದರು.

ಪ್ರಾಸಂಗಿಕವಾಗಿ ಹೇಳಬೇಕಾದ್ದೆಂದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಕೂಡ ಅದೇ ಪ್ಲಾಟ್ 401/ಏ ನಲ್ಲಿ ಕಾಲು ಭಾಗವನ್ನು ಹೊಂದಿದ್ದಾರೆ.

ಕುತೂಹಲಕಾರಿಯಾದ ಸಂಗತಿಯೆಂದರೆ, ಭೂದಾಖಲೆಗಳಲ್ಲಿ 401/ಏ ಪ್ಲಾಟ್ ಅಸ್ತಿತ್ವದಲ್ಲಿಯೇ ಇಲ್ಲ. ದಾಖಲೆಗಳ ಪ್ರಕಾರ ಪ್ಲಾಟ್ ನಂಬರ್ 411 ಸಂಪೂರ್ಣವಾಗಿ ಪ್ರಧಾನಿ ಮೋದಿಯವರ ಆಸ್ತಿ ಎಂದು ಹೇಳುತ್ತವೆ.

ಇನ್ನೂ ಅತ್ಯಂತ ಕುತೂಹಲಕಾರಿಯಾದ ಸಂಗತಿಯೆಂದರೆ, ಆ ಸ್ಥಳಕ್ಕೆ ಭೇಟಿ ನೀಡಿದಾಗ ಕಾಣುವುದೇನೆಂದರೆ, ಆ ಸ್ಥಳದ ಅಕ್ಕಪಕ್ಕದ 8 ಪ್ಲಾಟ್‌ಗಳನ್ನು ಮತ್ತು ಒಂದು ಸರಕಾರಿ ಮೈದಾನವನ್ನು ಸೇರಿಸಿ, ಒಂದು ಬೌಂಡರಿ ಗೋಡೆಯನ್ನು ನಿರ್ಮಿಸಿ, ಪ್ಲಾಟ್ 411 ಎಂಬ ಒಂದೇ ಕಂಪೌಂಡ್ ಕಾಣಸಿಗುತ್ತದೆ.

ಮಾನ್ಯ ಸುಪ್ರೀಮ್ ಕೋರ್ಟಿಗೆ ನನ್ನ ವಿನಂತಿಯೇನೆಂದರೆ, ಸಂಶಯಕ್ಕೀಡು ಮಾಡುತ್ತಿರುವ ಒಂದು ಸಲ ಕಾಣಿಸಿಕೊಳ್ಳುವ ಇನ್ನೊಂದು ಸಲ ಕಣ್ಮರೆಯಾಗುವ ಈ ಆಸ್ತಿಯ ಬಗ್ಗೆ ಎಸ್‌ಐಟಿ ತನಿಖೆ ಆಗಬೇಕು ಮತ್ತು ಇದೊಂದು ಸಂಘಟಿತ ಭೂಹಗರಣವಾಗಿದೆಯೋ ಇಲ್ಲವೋ ಎನ್ನುವುದನ್ನು ತನಿಖೆ ಮಾಡಬೇಕು.

ಈ ರೀತಿ ವಶಪಡಿಸಿಕೊಳ್ಳಲಾದ ಪ್ಲಾಟ್‌ಗಳ ಒಟ್ಟಾರೆ ಮೊತ್ತ 15 ಕೋಟಿಗಳಿಗಿಂತಲೂ ಹೆಚ್ಚು.

ಲೋಕ್ ಪ್ರಹಾರಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸುಪ್ರೀಮ್ ಕೋರ್ಟು ಆರ್ಥಿಕ ಆಸ್ತಿಯನ್ನು ಬಚ್ಚಿಡುವುದು ಒಬ್ಬ ಅಭ್ಯರ್ಥಿಯನ್ನು ಅನರ್ಹಗೊಳಿಸಲು ಖಂಡಿತವಾಗಿಯೂ ಪರಿಗಣಿಸಬಹುದು ಎಂದು ಹೇಳಿದೆ.

ಪ್ರಧಾನ ಮಂತ್ರಿ ಮೋದಿ 411 ಪ್ಲಾಟ್‌ನ ಒಡೆತನವನ್ನು 7 ವರ್ಷಗಳ ಕಾಲ ಬಚ್ಚಿಟ್ಟಿದ್ದೇಕೆ? 401/ಏ ಪ್ಲಾಟ್‌ನ ಭೂದಾಖಲೆಗಳು ಎಲ್ಲಿವೆ? ಹಾಗೂ ಮೋದಿ ಮತ್ತು ಜೇಟ್ಲಿ ಅವರೊಂದಿಗೆ ಇನ್ಯಾರು ಆ ಪ್ಲಾಟ್‌ನ ಒಡೆತನದಲ್ಲಿದೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಆಸ್ತಿಯಲ್ಲಿ ಮತ್ತು ಗ್ರೌಂಡಿನಲ್ಲಿ ಪರಿಸ್ಥಿತಿಯ ನಡುವೆ ಇಂತಹ ವ್ಯತ್ಯಾಸ ಏಕೆ ಕಾಣುತ್ತಿದೆ?

ಇದಿಷ್ಟು ಕೇಸಿನ ಸಾರಾಂಶ. ಸುಪ್ರೀಂಕೋರ್ಟು ಈ ಕುರಿತು ಏನು ಹೇಳಲಿದೆ? ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವಾಗ ಮೋದಿಯವರು ಯಾವ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸುತ್ತಾರೆ? ಕಾದು ನೋಡಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...