Homeಅಂಕಣಗಳುಕ್ವಿಟ್ ಎನ್‍ಡಿಎ 2 0 1 9

ಕ್ವಿಟ್ ಎನ್‍ಡಿಎ 2 0 1 9

- Advertisement -
- Advertisement -

ಭಾರತೀಯ ಸಂವಿಧಾನ, ಪ್ರಜಾಸತ್ತೆ ಮತ್ತು ನಾಗರೀಕ ಸಮಾಜಗಳ ರಕ್ಷಣೆಗಾಗಿ ಸೆಪ್ಟೆಂಬರ್ 10ರಂದು ಜರುಗಿದ ಭಾರತ್ ಬಂದ್ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಪ್ರಜಾಪ್ರಭುತ್ವವು ಜಗತ್ತಿನಲ್ಲಿ ಹೊಸ ಜೀವನ ವಿಧಾನವಾಗಿ ಪ್ರಜೆಗಳ ಸಾರ್ವಭೌಮತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಉಪಯುಕ್ತವಾಗಿದೆ. ಶ್ರೇಷ್ಠ ಇತಿಹಾಸಕಾರ ಅರ್ನಾಲ್ಡ್ ಟೋಯ್ನ್‍ಬಿ ‘ಬೆದರಿಕೆಯೆಂಬುದು ಮಾನವ ಇತಿಹಾಸದಲ್ಲಿ ಹೊಸದೇನಲ್ಲ. ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಿ ನಿಂತ ಸಮಾಜ ಮತ್ತು ಸಂಸ್ಕøತಿ ಅತಿಜಯಿಸಿದೆ. ಎದುರಿಸುವಲ್ಲಿ ವಿಫಲವಾದ ಸಮಾಜ ನಾಮಾವಶೇಷವಾಗಿದೆ. ಅಂತಹ ಬೆದರಿಕೆಗಳನ್ನು ಯಶಸ್ವಿಯಾಗಿ ಎದುರಿಸುವುದರ ಹಿಂದಿರುವುದು ಆ ಸಮಾಜದ ಸೃಜನಶೀಲರಾದ ಪ್ರಬುದ್ಧ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಸಹಜೀವಿಗಳನ್ನು ಸುರಕ್ಷಿತವಾಗಿ ಪ್ರಗತಿಯತ್ತ ಮುನ್ನಡೆಸಿದ್ದಾರೆ’ ಎಂದು ಹೇಳಿರುವುದು ಭಾರತದಲ್ಲಿ ಇಂದು ಸಮಕಾಲೀನ ಮಹತ್ವ ಹೊಂದಿದೆ.
ಜಗತ್ತಿನ ಎಲ್ಲ ಧರ್ಮಗಳೂ ಒಳ್ಳೆಯದನ್ನೇ ಬಯಸು-ಒಳ್ಳೆಯದನ್ನೇ ಮಾಡು ಎಂದು ಬೋಧಿಸುತ್ತವೆ. ಯುದ್ಧ ಮತ್ತು ವಿನಾಶದೆಡೆಗೆ ಸಾಗುತ್ತಿರುವ ಜಗತ್ತನ್ನು ಪಾರು ಮಾಡುವಲ್ಲಿ ಇಂದು ಸಂಕಷ್ಟ ಅನುಭವಿಸುವವರ ವಿಮೋಚನೆಗಾಗಿ ಸಕ್ರಿಯರಾದ ಪ್ರಜ್ಞಾವಂತರು ಮತ್ತು ಮಾನವೀಯತೆಗೆ ಬದ್ಧರಾದ ಒಂದು ಪಡೆ ಕಾರ್ಯಶೀಲರಾಗಬೇಕೆಂಬುದು ಕುರ್‍ಆನ್‍ನ ಕರೆಯೂ ಆಗಿದೆ. ಬುದ್ಧ, ಬಸವ, ಸೂಫಿ ಸಂತರು ಮತ್ತು ಎಲ್ಲ ಮಾನವತಾವಾದಿಗಳು ‘ನಿಮ್ಮ ಸ್ವಾರ್ಥವನ್ನು ಕೊಂದು ಸಮಾಜವನ್ನು ಉಳಿಸಿ ಮತ್ತು ಬೆಳೆಸಿ’ ಎಂಬ ಸಂದೇಶವನ್ನು ನೀಡಿದ್ದಾರೆ. ಸತ್ತ ಮೇಲೆ ದೇವರು ಮತ್ತು ಪ್ರಕೃತಿಯ ಮಡಿಲಲ್ಲಿ ಒಂದಾಗುವ ಮನುಷ್ಯರು ಬದುಕಿರುವಾಗಲೂ ಕೂಡ ಕೂಡಿ ಬಾಳಿದರೆ ಶ್ರೇಷ್ಠ ಸಂಸ್ಕøತಿ ಮತ್ತು ನಾಗರೀಕತೆಗಳು ರೂಪುಗೊಳ್ಳುತ್ತವೆ. ಅಲ್ಲಮಪ್ರಭುವಿನ ‘ನಾನು ನಾನಲ್ಲ, ದೇವರು-ಪ್ರಕೃತಿಯೇ ಎಲ್ಲ’ ಎಂಬ ಮಾತುಗಳು ಇಂದು ನಮ್ಮನ್ನು ಆಳುತ್ತಿರುವವರಿಗೆ ಸರಿಯಾಗಿ ಅರ್ಥವಾದರೆ ಸ್ವಾರ್ಥಪರತೆ, ಮೂಲಭೂತವಾದ, ಭ್ರಷ್ಟಾಚಾರ, ಬೆದರಿಕೆ ಮೊದಲಾದ ಅನಿಷ್ಟಗಳನ್ನು ಮೀರಿ ಮಾನವೀಯತೆಯೆಡೆಗೆ ಜಗತ್ತನ್ನು ಮುನ್ನಡೆಸಲು ಸಾಧ್ಯವಾಗುತ್ತದೆ.
ಭಾರತೀಯ ಸಂಸ್ಕøತಿ ಹಲವಾರು ಸಂಕೀರ್ಣತೆಗಳು ಮತ್ತು ಸವಾಲುಗಳ ನಡುವೆಯೂ ತನ್ನ ನೈಜತೆ ಮತ್ತು ಶ್ರೇಷ್ಠತೆಗಳನ್ನು ಉಳಿಸಿಕೊಂಡು ಹೋಗಲು ಬುದ್ಧ, ಮಹಾವೀರ, ಬಸವ, ಫುಲೆ, ರಾಮಾನುಜ, ಕಬೀರ, ದಯಾನಂದ ಸರಸ್ವತಿ, ರಾಜಾರಾಮ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರ ತಿಲಕ್, ಮೋತಿಲಾಲ್ ನೆಹರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಪಂಡಿತ್ ನೆಹರು, ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಶಿಕ್ಷಣ ಸಂತ ಕುವೆಂಪು ಮೊದಲಾದ ಮಹನೀಯರು ನಡೆಸಿದ ಸಾಮಾಜಿಕ ಸುಧಾರಣೆ ಕಾರ್ಯಗಳು ಪ್ರಮುಖ ಕಾರಣವಾಗಿವೆ. ಇಂತಹ ಮಹಾ ಸಂತರು ಮತ್ತು ಸಾಧಕರು ಕಟ್ಟಿ ಬೆಳೆಸಿರುವ ಭಾರತೀಯ ಸಂಸ್ಕøತಿಯನ್ನು ನಾಶಪಡಿಸಿ ಅರಾಜಕತೆ ಸೃಷ್ಟಿ ಮಾಡುವ ಕೆಲಸವನ್ನು ಜಾಗತಿಕವಾಗಿ ಮಾರುಕಟ್ಟೆ ಶಕ್ತಿಗಳು ಮತ್ತು ಸ್ಥಳೀಯವಾಗಿ ಹಿಂದುತ್ವವಾದಿಗಳು ನಡೆಸುತ್ತಿರುವುದನ್ನು ಪ್ರಜ್ಞಾವಂತರು ತಡೆಯಲೇ ಬೇಕಿದೆ. ಮೊನ್ನೆ ನಡೆದ ಭಾರತ್ ಬಂದ್ ಕೇವಲ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಲಷ್ಟೇ ಸೀಮಿತಗೊಂಡಿಲ್ಲ. ಇದು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗೆ ಬದ್ಧವಾದ ವಿಶಾಲ ಕಾರ್ಯಸೂಚಿಯನ್ನು ಆಧರಿಸಿದೆ.
ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರ ಕಾಂಗ್ರೆಸ್ ಪಕ್ಷದೊಳಗಿನ ಕುಟುಂಬ ರಾಜಕಾರಣ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಪರತೆಯಿಂದಾಗಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ನೀಡಲು ವಿಫಲವಾಯಿತು. ದೇಶದ ಜನರಿಗೆ ಬದಲಾವಣೆ ಅನಿವಾರ್ಯವಾಗಿತ್ತು. ಕುರುಡುಗಣ್ಣಿನವನಿಗಿಂತ ಮೆಳ್ಳಗಣ್ಣಿನವನು (ಸುಮಾರಾಗಿ ನೋಡುವವನು) ಎಷ್ಟೋ ವಾಸಿಯೆಂಬ ಅರಿವಿಗೆ ಜನರು ಶರಣಾಗಿದ್ದರು. ಇಂತಹ ಮೆಳ್ಳಗಣ್ಣಿನವರ ನಾಯಕನಾಗಿ ನರೇಂದ್ರ ಮೋದಿ 2014ರಲ್ಲಿ ಹಲವಾರು ಹುಸಿ ಭರವಸೆಗಳನ್ನು ಜನರಿಗೆ ನೀಡಿ ಅಧಿಕಾರ ಚುಕ್ಕಾಣಿಯನ್ನು ಹಿಡಿದರು.
ಅಂದು ಪಂಡಿತ್ ಜವಾಹರಲಾಲ್ ನೆಹರು ಸಾರ್ವಜನಿಕ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭೂಮಿ, ಬಂಡವಾಳ, ಉದ್ಯೋಗ, ಲಾಭ ಎಲ್ಲವೂ ದೇಶದ ಸ್ವತ್ತಾಗಿ ಉಳಿಯುವಂತೆ ನೋಡಿಕೊಂಡಿದ್ದರು. ಇಂದು ಮೋದಿಜಿ ಖಾಸಗೀಕರಣವನ್ನು ಉತ್ತೇಜಿಸಿ ಶ್ರೀಮಂತರು ಮಾತ್ರ ಪ್ರಕಾಶಿಸುವಂತೆ ನೋಡಿಕೊಂಡರು. ಕೋಟ್ಯಾಂತರ ವಿದ್ಯಾವಂತ ಯುವಜನರು ಆತ್ಮಹತ್ಯೆಯೆಡೆಗೆ ಮುಖ ಮಾಡುವಂತಹ ದುಸ್ಥಿತಿಯನ್ನು ಇವರು ಸೃಷ್ಟಿಸಿದರು. ನೆಹರೂರವರ ಮಗಳು ಇಂದಿರಾಜಿ ಬ್ಯಾಂಕುಗಳ ರಾಷ್ಟ್ರೀಕರಣ, ಭೂಸುಧಾರಣೆ, 20 ಅಂಶಗಳ ಕಾರ್ಯಕ್ರಮ, ಕನಿಷ್ಟ ಅಗತ್ಯಗಳ ಪೂರೈಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೊದಲಾದವುಗಳ ಮೂಲಕ ದೇಶದ ಜನರಿಗೆ ಒಳ್ಳೆಯದನ್ನು ಮಾಡಿ ‘ಗರೀಬಿ ಹಟಾವೋ’ (ಬಡತನ ನಿರ್ಮೂಲನೆ) ದಿಕ್ಕಿನಲ್ಲಿ ದಿಟ್ಟತನದಿಂದ ಸಾಗಿದರೆ ಮೋದಿಜಿ ಖಾಸಗೀಕರಣದ ಮೂಲಕ ಮೀಸಲಾತಿ ಮತ್ತು ಉದ್ಯೋಗ ಸೌಲಭ್ಯಗಳನ್ನು ಕಿತ್ತುಕೊಂಡು ‘ಗರೀಭೋಂಕೊ ಹಟಾವೋ’ (ಬಡವರ ನಿರ್ಮೂಲನೆ) ಮಾಡುತ್ತಿರುವುದು ಸರಿಯಲ್ಲ.
ಹೆಸರಾಂತ ಇತಿಹಾಸಕಾರರಾದ ರೊಮಿಲಾ ಥಾಪರ್ ‘ಒಂದು ದೇಶದ ಅಭಿವೃದ್ಧಿ ಪ್ರಧಾನಿಯಾದವರ ವಿಶಾಲ ಎದೆ ಅಳತೆಯನ್ನು ಅವಲಂಬಿಸಿಲ್ಲ, ವಿಶಾಲ ಹೃದಯ ಮತ್ತು ಸಮಷ್ಟಿ ಪ್ರಜ್ಞೆಗಳನ್ನು ಆಧರಿಸಿದ ದೇಶ ಸೇವೆಯನ್ನು ಅವಲಂಬಿಸಿದೆ’ ಎಂದು ಹೇಳಿರುವ ಮಾತುಗಳು ಮೋದಿಯವರಿಗೆ ಆತ್ಮಾವಲೋಕನಕ್ಕೆ ಎಡೆಮಾಡಿಕೊಡಬೇಕು.
ದೇಶದ ಜನರನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿರುವ ‘ರಾಷ್ಟ್ರೀಯ ವಿದ್ವಂಸಕರ ಕೂಟ’ ಮೋದಿ ನೇತೃತ್ವದಲ್ಲಿ ಇಂದು ವಿಜೃಂಭಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಸಂವಿಧಾನದ ಹೆಸರಿನಲ್ಲಿ ಮಂತ್ರಿಯಾದ ಮತ್ತೊಬ್ಬ ಹುಂಬ ‘ಸಂವಿಧಾನವನ್ನು ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ’ ಎಂದು ಹೇಳಿ ಜನರಿಂದ ಉಗಿಸಿಕೊಂಡಿರುವ ಸಂಗತಿ ಇನ್ನೂ ನೆನಪಿನಲ್ಲಿದೆ. ಗೋಡ್ಸೆಗಿಂತ ಮೊದಲೇ ಹುಟ್ಟಿದ್ದರೆ ನಾನೇ ಗಾಂಧಿಯನ್ನು ಕೊಲ್ಲುತ್ತಿದ್ದೆ’ ಎಂದು ಇನ್ನೊಬ್ಬ ಹಿಂದುತ್ವವಾದಿ ಪುಂಡ ಹೆಂಗಸು ಹೇಳಿರುವುದನ್ನು ಖಂಡಿಸಿ ಜೈಲಿಗೆ ಹಾಕುವುದರ ಬದಲು ಮೋದಿ ಮತ್ತು ಬಳಗ ಮೌನವಾಗಿ ರಕ್ಷಿಸುತ್ತಿರುವುದು ದೇಶದ್ರೋಹಿಗಳ ಪಡೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿರುವ ಸಂಕೇತವಾಗಿದೆ.
ಮೊನ್ನೆ ನಡೆದ ಭಾರತ್ ಬಂದ್ ‘ಸರ್ಕಾರಿ ಪ್ರಾಯೋಜಿತ ಬಂದ್’ ಎಂದು ಹೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ನಿಯೋಗ ಪ್ರಧಾನಿ ಭೇಟಿ ಮಾಡಿ ಕೊಡಗಿನ ನೊಂದವರಿಗೆ ಆರ್ಥಿಕ ನೆರವು ಕೇಳಲು ಹೋದಾಗ ಬೇಕಂತಲೇ ತಪ್ಪಿಸಿಕೊಂಡ ಈ ಭಾಗದ ಸಂಸದನಿಗೆ ಹೃದಯವಂತಿಕೆಯೂ ಇಲ್ಲ, ಎದೆಗಾರಿಕೆ ಇಲ್ಲವೇ ಇಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗಿದೆ. ಈತನಿಗೆ ಮುಂದಿನ ಮಹಾಚುನಾವಣೆಯಲ್ಲಿ ಮತದಾರ ಬಂಧುಗಳು ಗೇಟ್ ಪಾಸ್ ನೀಡುವುದು ಅನಿವಾರ್ಯವಾಗಿದೆ. ‘ಕೋಮುವಾದಿ ಬಿಜೆಪಿಯಿಂದ ದೇಶವನ್ನು ರಕ್ಷಿಸಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಹೇಳಿರುವ ಮಾತುಗಳು ಇಂದು ಪ್ರಗತಿಪರರು ಮತ್ತು ಜಾತ್ಯಾತೀತರಿಗೆ ಅರ್ಥವಾಗಬೇಕಿದೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ರಾಜನೀತಿಯನ್ನು ಉಗ್ರವಾಗಿ ವಿರೋಧಿಸಿದ ಶೋಷಿತರ ಧ್ವನಿ ದೇವನೂರು ಮಹಾದೇವ ‘ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳು, ಕಮ್ಯುನಿಷ್ಟ್‍ರು, ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮೊದಲಾದ ಬಿಜೆಪಿಯೇತರ ಬಣಗಳನ್ನು ಬೆಂಬಲಿಸುವುದು ಬಹುಸಂಸ್ಕøತಿ ಮತ್ತು ಬಹುಜನರ ರಕ್ಷಣೆಗೆ ಅನಿವಾರ್ಯ’ ಎಂದು ಹೇಳಿರುವ ಮಾತುಗಳನ್ನು ನಾವು ಒಪ್ಪಲೇಬೇಕು.
ಇತ್ತೀಚೆಗೆ ಮೋದಿ ಬಳಗ ‘ನಯಿ ಭಾರತ್’ (ಹೊಸ ಭಾರತ) ನಿರ್ಮಿಸುವುದು ನಮ್ಮ ಗುರಿ ಎಂದು ಹೇಳುತ್ತಿದೆ. ಪ್ರಕೃತಿ ಮತ್ತು ಮಾನವೀಯತೆಗಳನ್ನು ನಿರ್ಲಕ್ಷಿಸಿದ ಫಲವಾಗಿ ಕೊಡಗು, ಕೇರಳ, ಉತ್ತರ ಭಾರತ, ಈಶಾನ್ಯ ಭಾರತ ಮೊದಲಾದೆಡೆ ಪ್ರವಾಹ ಉಂಟಾಗಿ ಭಾರತವೇ ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ಮೋದಿ ಬಳಗ ತನ್ನ ಸಂವಿಧಾನ ವಿರೋಧಿ, ಪ್ರಜಾಸತ್ತೆ ವಿರೋಧಿ, ಮಾನವ ವಿರೋಧಿ, ಪ್ರಕೃತಿ ವಿರೋಧಿ ಹಾಗೂ ಸಾಮಾಜಿಕ ನ್ಯಾಯ ವಿರೋಧಿ ಧೋರಣೆಗಳು ಮತ್ತು ನಡವಳಿಕೆಗಳಿಂದ ‘ನೋ ಭಾರತ್’ ದಿಕ್ಕಿನತ್ತ ದೇಶವನ್ನು ಕೊಂಡೊಯ್ಯುತ್ತಿದೆ. ಅಂದು ಗಾಂಧಿ ಬ್ರಿಟೀಷರನ್ನು ದೇಶದಿಂದ ತೊಲಗಿಸಲು ‘ಕ್ವಿಟ್ ಇಂಡಿಯಾ ಚಳುವಳಿ’ಯನ್ನು 1942ರಲ್ಲಿ ನಡೆಸಿದ ರೀತಿಯಲ್ಲೇ 2019ರಲ್ಲಿ ‘ಕ್ವಿಟ್ ಎನ್‍ಡಿಎ’ ಚಳುವಳಿಯನ್ನು ನಡೆಸಿ ಭಾರತ ಮುಳುಗುವುದನ್ನು ತಪ್ಪಿಸಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಪ್ರಗತಿಪರರು, ಜಾತ್ಯಾತೀತರು, ಮಾನವತಾವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳು ನಿರ್ವಹಿಸಲೇಬೇಕಿದೆ.

– ಡಾ.ಬಿ.ಪಿ.ಮಹೇಶ ಚಂದ್ರ ಗುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...