Homeರಾಜಕೀಯಪರಮಪಾಪಿ ಪೋಸ್ಟ್‍ಕಾರ್ಡ್ ಪೋರ್ಟಲ್

ಪರಮಪಾಪಿ ಪೋಸ್ಟ್‍ಕಾರ್ಡ್ ಪೋರ್ಟಲ್

- Advertisement -
- Advertisement -

ಮಲ್ಲಿ |

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸುಳ್ ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವುದು ಪೋಸ್ಟ್‍ಕಾರ್ಡ್ ಪೋರ್ಟಲ್. ಕುಳಿತರೆ ಸುಳ್ಳು, ನಿಂತರೆ ಸುಳ್ಳು, ಉಸಿರಾಡಿದರೆ ಸುಳ್ಳು, ಹೂಸಿದರೆ ಸುಳ್ಳು-ಇದು ಪೋಸ್ಟ್‍ಕಾರ್ಡ್ ಸಂಸ್ಥಾಪಕ ಚೆಡ್ಡಿ ಮಹೇಶ ಹೆಗಡೆಯ ಧ್ಯೇಯವಾಕ್ಯ. ಆತ ಪದವಿ ಓದಿದವರನ್ನೂ ಯಾಮಾರಿಸುವಂತೆ ಸುಳ್ ಸುದ್ದಿ ಹರಡುತ್ತಾನೆ. ಈಗಷ್ಟೇ ಕೇಂದ್ರ ಸರ್ಕಾರ ‘ಕಾಂಗ್ರೆಸ್’ನ ಪ್ರಣಬ್ ಮುಖರ್ಜಿಗೆ ಭಾರತರತ್ನ ನೀಡಿದೆ. ಅದಿರಲಿ, ಈಗ ನಾವು ಪ್ರಸ್ತಾಪಿಸುತ್ತಿರುವ ವಿಷಯ ಎಂದರೆ, ಪ್ರಣಬ್ ಮುಖರ್ಜಿ ಸೋನಿಯಾ ಗಾಂಧಿ ವಿರುದ್ಧ ತಮ್ಮ ನಾಲ್ಕನೇ ಪುಸ್ತಕದಲ್ಲಿ ಕಿಡಿ ಕಾರಿದ್ದಾರೆ ಎಂದು ಪೋಸ್ಟ್‍ಕಾರ್ಡ್ ಹೇಳುತ್ತ ಬಂದ ಸುಳ್ ಸುದ್ದಿಯ ಕುರಿತು. ಐದು ತಿಂಗಳ ಹಿಂದೆಯೇ ಈ ಕೆಲಸವನ್ನು ಅದು ಶುರು ಮಾಡಿತ್ತು.
ಇನ್ನೂ ಪುಸ್ತಕವೇ ಪ್ರಕಟವಾಗಿಲ್ಲ. ಅದರ ಒಂದು ಸಣ್ಣ ಭಾಗವನ್ನು ಸುಳ್ಳನ್ನೇ ಉಸಿರಾಡುವ ಪೋಸ್ಟ್‍ಕಾರ್ಡ್ ಡಾಟ್ ನ್ಯೂಸ್ ಪ್ರಕಟಿಸಿತ್ತು ಮತ್ತು ಅದು ಆಗಾಗ ವೈರಲ್ ಆಗುತ್ತಲೇ ಇದೆ, ಚುನಾವಣೆ ಬಂತಲ್ಲ, ಮತ್ತಷ್ಟು ಜೋರಾಗಿಯೇ ಹರಡಲಿದೆ.
ಮಿಥ್ಯ: ಪೋಸ್ಟ್‍ಕಾರ್ಡ್ ಪ್ರಕಾರ, ಮಾಜಿ ರಾಷ್ಟ್ರÀಪತಿ ಪ್ರಣಬ್ ಮುಖರ್ಜಿ ಅವರ ಪುಸ್ತಕದಿಂದ ಆಯ್ದ ಭಾಗ ಹೀಗಿದೆ:
“ನರೆಂದ್ರ ಮೋದಿಯವರ ಒಂದನೇ ವರ್ಷದ ಆಡಳಿತ ಮುಗಿದಾಗ, ಅವರು ಅಲ್ಲಿವರೆಗೆ ಮಾಡಿದ್ದ ಕೆಲಸಗಳನ್ನು ಮೆಚ್ಚಿ ನಾನು ಅವರನ್ನು ಹೊಗಳಿದ್ದೆ. ಸೋನಿಯಾ ಗಾಂಧಿಯವರಿಗೆ ಇದು ಸಿಟ್ಟು ಬರಿಸಿತು.

ರಾಷ್ಟಪತಿಯವರ ಪುಸ್ತಕದಿಂದ ಆಯ್ದ ಭಾಗ ಎಂದು ಪುಟ್ಟಾಪೂರಾ ಸುಳ್ ಬರೆದ ಪೋಸ್ಟ್‍ಕಾರ್ಡ್.

ಒಮ್ಮೆ ಸಂಸತ್ತಿನಲ್ಲಿ ಭಾಷಣ ಮುಗಿಸಿ ಹೊರಬರುವಾಗ ಸೋನಿಯಾ ನನಗೆ ಎದುರಾದರು. ಅವರ ಜೊತೆಗಿದ್ದ ಗುಲಾಮ್ ನಬಿ ಅಜಾದ್ ಮತ್ತು ಮಣಶಂಕರ್ ಅಯ್ಯರ್ ನನಗೆ ಗೌರವದಿಂದ ಹಾರೈಸಿದರು. ಆದರೆ ಸೋನಿಯಾ ಸುಮ್ಮನೆ ನಿಂತಿದ್ದರು. ನಾನೇ ಮೊದಲು ಅವರಿಗೆ ಹಾರೈಸಬೇಕೆಂದು ಅವರು ಬಯಸಿದ್ದರು. ಅವರ ಎದುರು ಈ ದೇಶದ ಪ್ರಥಮ ಪ್ರಜೆ ನಿಂತಿದ್ದಾರೆ ಎಂಬುದನ್ನೇ ಅವರು ಮರೆತಿದ್ದರು.
ಪ್ರಣಬ್ ಮುಖರ್ಜಿಯಾಗಿ ಅಲ್ಲ, ಈ ದೇಶದ ರಾಷ್ಟ್ರಪತಿ ನಾನು ಎಂಂಬುದನ್ನು ಅವರು ಒಪ್ಪಿಕೊಳ್ಳಬೇಕಿತ್ತು.
ಸೋನಿಯಾರ ಈ ವರ್ತನೆ ನನ್ನೊಳಗೆ ತೀವ್ರ ನೋವನ್ನು ಉಂಟು ಮಾಡಿತು…”
ಮೇಲಿನ ಘಟನೆ 2015ರ ಮೇನಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‍ಕಾರ್ಡ್ ಪ್ರಕಾರ ಇದು ಪ್ರಣಬ್ ಮುಖರ್ಜಿ ಅವರ ಪುಸ್ತಕದ ಒಂದು ಭಾಗ. ಇದನ್ನು ನಂಬಿದ ಅಮಾಯಕರು ಮತ್ತು ಸುಳ್ಳೆಂದು ಗೊತ್ತಿರುವ ಸಾವಿರಾರು ಕಿರಾತಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತ ಅನಗತ್ಯವಾಗಿ ಸೋನಿಯಾ ಗಾಂಧಿಯವರ ಮೇಲೆ ಆಕ್ರಮಣ ನಡೆಸುತ್ತಲೇ ಬಂದಿದ್ದಾರೆ.
ಸತ್ಯ: ಪ್ರಣಬ್ ಅವರ ಉದ್ದೇಶಿತ ಪುಸ್ತಕ 2018ರ ಡಿಸೆಂಬರ್‍ನಲ್ಲಿ ಪ್ರಕಟನೆಯಾಗಲಿದೆ ಎಂದು ಅದರ ಪ್ರಕಟಣಾ ಹಕ್ಕು ಪಡೆದಿರುವ ರೂಪಾ ಪ್ರಕಾಶನ ಸಂಸ್ಥೆ ಹೇಳಿತ್ತು. (ಈಗಲೂ ದು ಪ್ರಕಟವಾಗಿಲ್ಲ) ಅಂದರೆ ಪ್ರಣಬ್‍ರವರು ಈಗಾಗಲೇ ಕಾಗದದಲ್ಲಿ ಬರೆದಿರಬಹುದಾದ ಅಥವಾ ಕಂಪ್ಯೂಟರ್‍ನಲ್ಲಿ ಕೀ-ಇನ್ ಮಾಡಿರಬಹುದಾದ ಕಾಪಿಯನ್ನು ಪೋಸ್ಟ್‍ಕಾರ್ಡ್ ಕದ್ದಿರಬಹುದು ಅಂತಾ ಭಾವಿಸೋಕೂ ಆಸ್ಪದವಿಲ್ಲ. ಏಕೆಂದರೆ ಆಗ ಪ್ರಕಾಶಕರು ಮತ್ತು ಪ್ರಣಬ್ ಮುಖರ್ಜಿ ಕಚೇರಿ ಪ್ರಕಾರ ಅವರಿನ್ನೂ ಬರೆಯಲು ಶುರೂನೇ ಮಾಡಿರಲಿಲ್ಲ!

ಸೋನಿಯಾ ಗಾಂಧಿಯವರ ಜೊತೆ ಪ್ರಣಬ್ ಮುಖರ್ಜಿ

ಈ ಮೊದಲು ಪ್ರಣಬ್ ಬರೆದ ದ ಡೆಮಾಕ್ರಟಿಕ್ ಡಿಕೇಡ್, ದ ಟರ್ಬುಲೆಂಟ್ ಇಯರ್ಸ್ ಮತ್ತು ದ ಕೊಅಲಾಯನ್ಸ್ ಇಯರ್ಸ್- ಪುಸ್ತಕಗಳಲ್ಲಿ ಪ್ರಣಬ್ ಮೇಲಿನ ವಿಷಯ ಬರೆದಿಲ್ಲ, ಬರೆಯಲು ಸಾಧ್ಯವೂ ಇಲ್ಲ. ಏಕೆಂದರೆ ಇವು ಯಾವುವು 2004ರ ನಂತರದ ವಿಷಯ ಒಳಗೊಂಡಿಲ್ಲ. ಹಾಗಾದರೆ ಬರಲಿರುವ ನಾಲ್ಕನೇ ಪುಸ್ತಕ ‘ದ ಪ್ರೆಸಿಡೆನ್ಸಿಯಲ್ ಇಯರ್ಸ್’ ಪುಸ್ತಕದಲ್ಲಿ ಮೇಲಿನಂತೆ ಬರೆಯಬಹುದೇನೋ ಎಂದು ಗೆಸ್ ಮಾಡಲೂ ಆಗಲ್ಲ. ಏಕೆಂದರೆ ಪ್ರಣಬ್ ಎಂದೂ ಸಾರ್ವಜನಿಕವಾಗಿ ಸೋನಿಯಾರ ಬಗ್ಗೆ ಆಕ್ಷೇಪದ ಮಾತು ಆಡಿಲ್ಲ.
ಆಗ ಸ್ಪಷ್ಟೀಕರಣ ನೀಡಿದ್ದ ಪ್ರಣಬ್ ಕಚೇರಿ, ‘ಉದ್ದೇಶಿತ ಪುಸ್ತಕ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಎಂದು ಘೋಷಿಸುವಲ್ಲಿಗೆ ಮುಗಿಯುತ್ತದೆ. ರಾಷ್ಟ್ರಪತಿಯಾದ ನಂತರದ ಘಟನೆಗಳು ಇದರಲ್ಲಿ ಬರುವುದೇ ಇಲ್ಲ. ಈ ಪುಸ್ತಕವು 2004-2012ರವರೆಗಿನ ಅವಧಿಗೆ ಸಿಮೀತ. ಇನ್ನು ಮೇ, 2015ರ ವಿಷಯ (ಅಂದರೆ ಪೋಸ್ಟ್‍ಕಾರ್ಡ್‍ನ ಸುಳ್ಳು) ಇದರಲ್ಲಿ ಹೇಗೆ ಬರಲು ಸಾಧ್ಯ?’ ಎಂದು ಪ್ರಕಟಣೆ ನೀಡುವ ಮೂಲಕ ಪೋಸ್ಟ್‍ಕಾರ್ಡ್ ಕುತಂತ್ರವನ್ನು ಬಯಲು ಮಾಡಿತ್ತು.

(ಕೃಪೆ:Altnews.com)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...