Homeಕರ್ನಾಟಕಬಜೆಟ್ ಅಧಿ-‘ವೇಷಣ’: ಕಿತ್ತಾಟದಲ್ಲೇ ಮುಗಿದು ಹೋಯ್ತಣ್ಣ!

ಬಜೆಟ್ ಅಧಿ-‘ವೇಷಣ’: ಕಿತ್ತಾಟದಲ್ಲೇ ಮುಗಿದು ಹೋಯ್ತಣ್ಣ!

- Advertisement -
- Advertisement -

-ಮಲ್ಲಿ |

ಬಜೆಟ್ ಅಧಿವೇಶನ ನಡೆದಿದ್ದು 5 ದಿನ ಮಾತ್ರ! ಇದರಲ್ಲಿ ಕಲಾಪ ನಡೆದಿದ್ದು ಕೇವಲ 15 ಗಂಟೆ 10 ನಿಮಿಷ! ಇದನ್ನು ಅಧಿವೇಶನ ಎನ್ನುವುದೋ ಅಧಿ’ವೇಷಣ’ ಎನ್ನುವುದೋ? ಏಕೆಂದರೆ ಈ ಸಲ ಹಲವರ ‘ವೇಷಣಗಳು’ ಕಳಚಿಬಿದ್ದಿದ್ದಂತೂ ಸತ್ಯ. ಹಾಗೆಯೇ ಆಡಳಿತ ಪಕ್ಷ ಮತ್ತು ವಿಪಕ್ಷಗಳ ರಾಜಕೀಯ ಕಿತ್ತಾಟಕ್ಕೆ ಕಲಾಪ ಬಲಿಯಾಗಿದ್ದೂ ನಿಜ.
ರಾಜ್ಯ ಸರ್ಕಾರದ ಒಂದು ವರ್ಷದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಚೌಕಟ್ಟಿನ ಮುನ್ನೋಟ ನೀಡುವ ಮಹತ್ವದ ಬಜೆಟ್ ಯಾವುದೇ ಅಂಗೀಕಾರವಿಲ್ಲದೇ ಅನುಮೋದನೆ ಪಡೆದಿದೆ. ಅಂದರೆ ಪಾಸ್ ಆಗಿದೆ, ಅಲ್ಲಿಗೆ ಕಲಾಪದ ಒಟ್ಟೂ ಉದ್ದೇಶವೇ ಫೇಲ್ ಆಗಿದೆ. ಆಪರೇಷನ್ ಕಮಲ ಎಂಬ ಭೂತ ಬಜೆಟ್ ಚರ್ಚೆಯನ್ನೇ ನುಂಗಿ ಹಾಕಿ ಅಟ್ಟಹಾಸ ಮೆರೆದಿದೆ.
2 ಲಕ್ಷ 34 ಸಾವಿರ ಕೋಟಿಗಳ ಬಜೆಟ್ ಬಗ್ಗೆ ಚರ್ಚಿಸಲು ಅಲ್ಲಿ ಯಾರಿಗೂ ವ್ಯವಧಾನವೇ ಇರಲಿಲ್ಲ. ವಿಪಕ್ಷ ಬಿಜೆಪಿಗಂತೂ ತನ್ನ ಅಧಿವೇಶನದುದ್ದಕ್ಕೂ ತನ್ನ ಅಧಿನಾಯಕ ಯಡಿಯೂರಪ್ಪನವರನ್ನು ರಕ್ಷಿಸುವುದೇ ಒಂದು ಘನಂದಾರಿ ಕೆಲಸವಾಗಿತ್ತು. ಅದಕ್ಕೆ ಅದು ಆಯ್ದುಕೊಂಡ ಮಾರ್ಗ: ಇಡೀ ಕಲಾಪವನ್ನೇ ಗಬ್ಬೆಬ್ಬಿಸುವ ನೀಚ ಮಾರ್ಗ.
ಬಜೆಟ್‍ನ ಮೂರನೇ ಒಂದು ಭಾಗದಷ್ಟಿರುವ ಲೇಖಾನುಧನವನ್ನು ಯಾವುದೇ ರ್ಚೆಯಿಲ್ಲದೇ ಪಾಸು ಮಾಡಲಾಗಿತು. ಹಿಂದೆಂದೂ ಇಂತಹ ಘಟನೆ ಸಂಭವಿಸಿರಲಿಲ್ಲ. ಆದರೆ ಈ ಸದಸನದ ಯೋಗ್ಯತೆಯೇ ಅಷ್ಟಿರುವಂತಿದೆಯಲ್ಲವೇ?
ಕಲಾಪದಲ್ಲಿ ಸ್ಪೀಕರ್ ಸಾಹೇಬರು ಪದೇ ಪದೇ ತಮ್ಮ ನೋವು ತೊಡಿಕೊಳ್ಳುವ ‘ವಿಲಕ್ಷಣ’ ಸಂದರ್ಭಗಳೇ ಸೃಷಿಯಾದವು. ಕಲಾಪ ನಡೆಯುವಂತೆ ಮಾಡಲು ಅವರು ತುಂಬ ಪ್ರಯಾಸಪಟ್ಟರೂ ಉಪಯೋಗವಾಗಲಿಲ್ಲ. ಬಜೆಟ್ ಮುನ್ನ ಸ್ಪೋಟಗೊಂಡ ಆಡಿಯೋವೇ ಎಲ್ಲವನ್ನೂ ಗುಡಿಸಿ ಹಾಕಿತು- ಆಪರೇಷನ್ ಕಮಲವನ್ನೂ, ಕಲಾಪದ ಚರ್ಚೆಯನ್ನೂ….
ಅಂತಿಮವದಲ್ಲಿ ಯಾವುದೇ ರ್ಚೆಯಿಲ್ಲದೇ ಬಜೆಟ್ ಮಂಡನೆ ಆಗುತ್ತಿದ್ದಂತೆ, ಸ್ಪೀಕರ್ ಸಾಹೇಬರು ತಮ್ಮ ಹೃದಯ ಕಿತ್ತು ಬರುತ್ತಿದೆ, ಸಾರ್ವಜನಿಕರ ಹಣದ ಬಳಕೆಯ ಬಗ್ಗೆ ಚರ್ಚೆ ನಡೆಸದೇ ಘೋರ ಅಪರಾಧ ಮಾಡಿದ್ದೇವೆ ಎಂದು ಅವಲತ್ತುಕೊಳ್ಳಬೇಕಾಗಿತು. ಆಡಳಿತ ಮತ್ತು ವಿಪಕ್ಷಗಳಿಗೆ ಮಾತ್ರ ಇದೇನೂ ಘೋರ ಅಪರಾಧ ಎನಿಸಲೇ ಇಲ್ಲ!
ಎಸ್‍ಐಟಿ ತನಿಖೆ ಬೇಡ ಎಂದು ಗದ್ದಲ ಮಾಡಿ ಎರಡು ದಿನ ಕಲಾಪವನ್ನು ಬರ್ಬಾದ್ ಮಾಡಿದ ಬಿಜೆಪಿ, ಎಸ್‍ಐಟಿ ತನಿಖೆಯೇ ಫೈನಲ್ ಎಂದು ನಿರ್ಣಯವಾದ ಮೇಲಾದರೂ ಚರ್ಚೆಗೆ ಅವಕಾಶ ಮಾಡಿಕೊಡಬಹದಿತ್ತು. ಆದರೆ ಶಾಸಕ ಪ್ರೀತಂಗೌಡರಿಗೆ ರಕ್ಷಣೆ ಕೊಡಿ ಎಂದು ಮತ್ತೆ ಒಂದೂವರೆ ದಿನಗಳ ಕಲಾಪವನ್ನು ಹಳ್ಳ ಹಿಡಿಸಿತು. ಪ್ರೀತಂಗೌಡನಿಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆಯಿತ್ತಲ್ಲವೇ? ಅದನ್ನೆಲ್ಲ ಬಿಟ್ಟು ಸದಸನದ ಕಲಾಪ ಹಾಳು ಮಾಡುವ ಅಗತ್ಯವಿತ್ತೇ?
ಎಲ್ಲ ಕಲಾಪಗಳಲ್ಲೂ ಅಬ್ಬರಿಸುತ್ತಿದ್ದ ಯಡಿಯೂರಪ್ಪ ಈ ಸಲ ಎಲ್ಲ ಮುಚ್ಚಿಕೊಂಡು, ಮುಖ ಗಂಟಿಕ್ಕಿಕೊಂಡು ಕೂತದ್ದೇ ಜಾಸ್ತಿ. ಆದರೂ ಅವರಿಗೆ ಮಾನ ಮುಚ್ಚಿಕೊಳ್ಳಲಾಗಲಿಲ್ಲ. ಈ ಅಧಿವೇಶನದ ಇನ್ನೊಂದು ಅಂಶವೆಂದರೆ, ಮಾಧುಸ್ವಾಮಿಯವರಂತಹ ಹಿರಿಯ ಸಂಸದೀಯ ಪಟು ಲಜ್ಜೆ ಬಿಟ್ಟು ಯಡಿಯೂರಪ್ಪನವರ ಸಮರ್ಥನೆಗೆ ಇಳಿದಿದ್ದು!
ಈ ಅಧಿವೇಶನದ ಲಾಭವಾಗಿದ್ದು ಮೈತ್ತಿ ಪಕ್ಷಗಳಿಗೆ ಮಾತ್ರ. ಆಪರೇಷನ್ ಕಮಲವನ್ನು ಹೊಡೆದು ಹಾಕುವ ಮೂಲಕ ಮೈತ್ರಿಬಣದಲ್ಲಿ ಮೂಡಿದ್ದ ಬಿರುಕನ್ನು ಅವು ನಿವಾರಿಸಿಕೊಂಡವು.
ಹಿಂದೆ ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವಿದ್ದಾಗ, ನಂತರ ಕುಮಾರಸ್ವಾಮಿ-ಯಡಿಯೂರಪ್ಪ ಸರ್ಕಾರವಿದ್ದಾಗಲೂ ಸದನದ ಕಲಾಪಗಳು ಹೀಗೇ ಬಲಿಯಾಗಿದ್ದವು. ತಮ್ಮ ಪಕ್ಷಗಳ ನಡುವಿನ ಕಿತ್ತಾಟದ ರಾಜಕೀಯವನ್ನು ಸದನದಲ್ಲಿ ಚಚಿಚ್ಸಲು ನಾವು ಅವರನ್ನು ಅಲ್ಲಿಗೆ ಕಳಿಸಿದ್ದೇವಾ ಎಂಬ ಪ್ರಶ್ನೆ ಜನರನ್ನು ಕಾಡದೇ ಇರದು. ಯಾವುದೇ ಚರ್ಚೆಯಿಲ್ಲದೇ ಮಸೂದೆಗಳನ್ನು ಧ್ವನಿಮತದ ಮೂಲಕ ಪಾಸು ಮಾಡುವುದಾದರೆ ಈ ಶಾಸಕರು ಸದನದಲ್ಲಿ ಕಿತ್ತು ಹಾಕುವುದಾದರೂ ಏನನ್ನು ಎಂದು ಪ್ರಶ್ನಿಸುವ ಸಮಯ ಬಂದಿದೆಯಲ್ಲವೇ?
ಹಿಂದೆ ಆಗಿನ್ನೂ ಸಂಸದಿಯ ವ್ಯವಸ್ಥೆ ಬಾಲ್ಯಾವಸ್ಥೆಯಲ್ಲಿ ಇದ್ದ ಸಂದರ್ಭದಲ್ಲೇ, ಬಜೆಟ್ ಅಧಿವೇಶನ 6 ದಿನಗಳ ಅವಧಿಯನ್ನು ಹೊಂದಿರುತ್ತಿತ್ತು. ದಿವಾನರ ಭಾಷಣ, ಪ್ರಶ್ನೆಗಳು ಮತ್ತು ಸರ್ಕಾರಿ ಕಲಾಪಕ್ಕಾಗಿ 1 ದಿನ, ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗಾಗಿ ಗರಿಷ್ಠ 2 ದಿನ, ಬಜೆಟ್ ಮೇಲಿನ ನಿರ್ಣಯಗಳಿಗಾಗಿ 1 ದಿನ, ಅರಿಕೆಗಳಿಗಾಗಿ 1 ದಿನ ಮತ್ತು ಇತರ ನಿರ್ಣಯಗಳಿಗಾಗಿ 1 ದಿನವನ್ನು ನಿಗದಿಪಡಿಸಲಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಬಜೆಟ್ ರ್ಚೆಗಳು ಕೇವಲ ದೂಷಾರೋಪಣೆಯಲ್ಲೇ ಮುಗಿದು ಹೋಗುತ್ತಿವೆ. ಕಳೆದ ವಾರ ಮುಗಿದ ಬಜೆಟ್ ಅಧಿವೇಶನವಂತೂ ಚರ್ಚೆಯಿಲ್ಲದೇ ಬಜೆಟ್ ಪಾಸು ಮಾಡಿ ‘ದಾಖಲೆ’ ಬರೆದಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...