Homeಮುಖಪುಟಭಾರತ್ ಸಮ್ಮಿಟ್‌ನ 115 ಭಾಷಣಕಾರರಿಗೆ ಭಾರತ ಪ್ರವೇಶ ನಿರಾಕರಣೆ : ವೀಸಾ ವಿಚಾರ ‘ಸಾರ್ವಭೌಮ ಅಧಿಕಾರ’...

ಭಾರತ್ ಸಮ್ಮಿಟ್‌ನ 115 ಭಾಷಣಕಾರರಿಗೆ ಭಾರತ ಪ್ರವೇಶ ನಿರಾಕರಣೆ : ವೀಸಾ ವಿಚಾರ ‘ಸಾರ್ವಭೌಮ ಅಧಿಕಾರ’ ಎಂದ ವಿದೇಶಾಂಗ ಸಚಿವಾಲಯ

- Advertisement -
- Advertisement -

ಆರಂಭದಲ್ಲಿ ಅನುಮತಿ ನೀಡಿದ ನೀಡಿದ್ದರೂ, ಕಾಂಗ್ರೆಸ್ ಪಕ್ಷದ ‘ಭಾರತ್ ಸಮ್ಮಿಟ್’ನಲ್ಲಿ ಭಾಗವಹಿಸಬೇಕಿದ್ದ ಮೂರನೇ ಒಂದಕ್ಕಿಂತ ಹೆಚ್ಚು ವಿದೇಶಿ ಭಾಷಣಕಾರರ ಭಾರತ ಪ್ರವೇಶಿಸಕ್ಕೆ ತಡೆಯೊಡ್ಡಲಾಗಿದೆ. ಈ ಕುರಿತು ತನ್ನ ಮೊದಲ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ (ಎಂಇಎ), ವೀಸಾ ವಿಚಾರ ಒಂದು ರಾಷ್ಟ್ರದ ‘ಸಾರ್ವಭೌಮ ಕಾರ್ಯ’ ಎಂದು ಕೇವಲ ಒಂದೇ ಮಾತಿನಲ್ಲಿ ಸಮರ್ಥಿಸಿಕೊಂಡಿದೆ.

ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಲೋಕಸಭಾ ಸಂಸದ ಶಶಿ ತರೂರ್ ಅವರು ಶುಕ್ರವಾರ (ನ.13) ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ವಿದೇಶಾಂಗ ಸಚಿವಾಲಯ ಅನುಮತಿ ನೀಡಿದ್ದ 315 ಭಾಷಣಕಾರರ ಪೈಕಿ ಸುಮಾರು 115 ಮಂದಿಗೆ ಪ್ರವೇಶ ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಗೃಹ ಸಚಿವಾಲಯದ (ಎಂಹೆಚ್‌ಎ) ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ಹೇಳಿದ್ದಾರೆ.

ವೀಸಾ ರದ್ದತಿ ಕುರಿತ ಪ್ರಶ್ನೆಗೆ ಮಾಧ್ಯಮಗೋಷ್ಠಿಯಲ್ಲಿ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ವೀಸಾ ವಿಚಾರಗಳು ಯಾವುದೇ ದೇಶ ಅಥವಾ ಸರ್ಕಾರದ ಸಾರ್ವಭೌಮ ಕಾರ್ಯಗಳಾಗಿವೆ ಎಂಬುದನ್ನು ನಾನು ಹೇಳಲು ಬಯಸುತ್ತೇನೆ ಮತ್ತು ಇದು ನಿಮ್ಮೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸದ್ಯಕ್ಕೆ ನಾನು ಹೇಳಬೇಕಿರುವುದು ಇಷ್ಟೇ” ಎಂದು ಪ್ರತಿಕ್ರಿಯಿಸಿದ್ದಾರೆ.

ವಿದೇಶಿ ಪ್ರತಿನಿಧಿಗಳ ಪಟ್ಟಿಗೆ ಆರಂಭದಲ್ಲಿ ವಿದೇಶಾಂಗ ಸಚಿವಾಲಯ ಅನುಮತಿ ನೀಡಿ ವೀಸಾಗಳನ್ನು ಮಂಜೂರು ಮಾಡಿದ ನಂತರ, ಗೃಹ ಸಚಿವಾಲಯ ಅವುಗಳಲ್ಲಿ ಕೆಲವು ಅನುಮತಿಗಳನ್ನು ಏಕೆ ಹಿಂಪಡೆಯಿತು ಎಂಬ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ.

ಭಾರತ್ ಸಮ್ಮಿಟ್‌ನಲ್ಲಿ ಭಾಗವಹಿಸಲು ಆಗಮಿಸಬೇಕಿದ್ದ ಹೆಚ್ಚಿನ ಸಂಖ್ಯೆಯ ವಿದೇಶಿ ಆಹ್ವಾನಿತರಿಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆ ಎಂಬ ಸುದ್ದಿ ಮೊದಲು ಹೊರಬಿದ್ದ ಒಂದು ದಿನದ ನಂತರ ವಿದೇಶಾಂಗ ಸಚಿವಾಲಯದ ಈ ಪ್ರತಿಕ್ರಿಯೆ ಬಂದಿದೆ.

ಪ್ರವೇಶ ನಿರಾಕರಿಸಲ್ಪಟ್ಟವರಲ್ಲಿ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಕೂಡ ಸೇರಿದ್ದಾರೆ. ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓಸ್ಲೋಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, “ವಿಶ್ವದ ಅತ್ಯಂತ ಮುಕ್ತ ಪತ್ರಿಕೋದ್ಯಮದ ಪ್ರಶ್ನೆಗಳಿಗೆ ನೀವು ಉತ್ತರಿಸುತ್ತೀರಾ?” ಎಂದು ಮೋದಿಯವರನ್ನು ಕೇಳುವ ಮೂಲಕ ಲಿಂಗ್ ಜಗತ್ತಿನಾದ್ಯಂತ ಸುದ್ದಿಯಾಗಿದ್ದರು.

‘ದಿ ವೈರ್’ ವರದಿ ಮಾಡಿರುವಂತೆ, ಲಿಂಗ್ ಸೇರಿದಂತೆ ವಿದೇಶಿ ಪ್ರಜೆಗಳ ಪಟ್ಟಿಗೆ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತ್ತು ಮತ್ತು ಅವರಿಗೆ ವೀಸಾಗಳನ್ನೂ ನೀಡಲಾಗಿತ್ತು. ಆದರೆ, ಅವರು ಭಾರತಕ್ಕೆ ಪ್ರಯಾಣಿಸಲು ಹೊರಡುವ ವೇಳೆಗೆ ಅವರ ವೀಸಾವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.

ಇಂತಹ ಕಾರ್ಯಕ್ರಮಗಳಿಗಾಗಿ ಸರ್ಕಾರ ಸಿದ್ಧಪಡಿಸಿರುವ ‘ಪದೇ ಪದೇ ಕೇಳಲಾಗುವ ಪ್ರಶ್ನೆಗಳ’ (FAQs) ಮಾರ್ಗಸೂಚಿಯ ಪ್ರಕಾರ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಭಾರತೀಯ ರಾಯಭಾರ ಕಚೇರಿಗಳು ವೀಸಾ ಅರ್ಜಿಗಳನ್ನು ವಿದೇಶಾಂಗ ಸಚಿವಾಲಯ ಅಥವಾ ಗೃಹ ಸಚಿವಾಲಯಕ್ಕೆ ಕಳುಹಿಸಬೇಕಾಗುತ್ತದೆ ಎಂದು ಮೂಲಗಳು ಗುರುವಾರ (ನ.12) ಹೇಳಿರುವುದಾಗಿ ‘ದಿ ವೈರ್’ಗೆ ವರದಿ ಮಾಡಿದೆ.

ತಮ್ಮ ಪೋಸ್ಟ್‌ನಲ್ಲಿ, “ಹೈದರಾಬಾದ್‌ಗೆ ತಲುಪಿದಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಕಾರ್ಯಕ್ರಮಕ್ಕಾಗಿ ಅನುಮೋದನೆ ನೀಡಿದ್ದ 315 ಭಾಷಣಕಾರರ ಪೈಕಿ 115 ಮಂದಿಗೆ ಭಾರತ ಪ್ರವೇಶವನ್ನು ನಿರಾಕರಿಸಲಾಗಿದೆ ಅಥವಾ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ – ಬಹುಶಃ ಗೃಹ ಸಚಿವಾಲಯದ ಸೂಚನೆಯ ಮೇರೆಗೆ” ಎಂಬ ವಿಷಯ ತಿಳಿಯುವುದು ‘ನಿರಾಶಾದಾಯಕ ಸಂಗತಿಯಾಗಿತ್ತು’ ಎಂದು ಶಶಿ ತರೂರ್ ತಿಳಿಸಿದ್ದಾರೆ.

“ಸರ್ಕಾರ ಯಾವ ಕಾನೂನಿನ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ ಎಂಬುದು ‘ಸಂಪೂರ್ಣವಾಗಿ ಅಸ್ಪಷ್ಟವಾಗಿದೆ’. ಅಲ್ಲದೆ, ಈ ಕ್ರಮವನ್ನು ಅತ್ಯಂತ ಕಡಿಮೆ ಅವಧಿಯ ಮುನ್ಸೂಚನೆಯೊಂದಿಗೆ ತೆಗೆದುಕೊಳ್ಳಲಾಗಿದ್ದು, ಶನಿವಾರ ಸಮ್ಮೇಳನ ಮುಕ್ತಾಯಗೊಳ್ಳುವ ಮೊದಲು ಯಾವುದೇ ಬದಲಾವಣೆಗಳನ್ನು ಮಾಡಲು ಅವಕಾಶವೇ ಇಲ್ಲದಂತಾಗಿದೆ” ಎಂದು ಹೇಳಿದ್ದಾರೆ.

“ಒಂದು ಹೆಮ್ಮೆಯ ಪ್ರಜಾಪ್ರಭುತ್ವವು ಎಷ್ಟು ಅಸುರಕ್ಷಿತವಾಗಿದೆ ಎಂದರೆ, ತನಗೆ ಟೀಕೆ ಎದುರಾಗಬಹುದು ಎಂದು ಭಯಪಡುವ ಯಾವುದೇ ಧ್ವನಿಯನ್ನು ಅದು ಹತ್ತಿಕ್ಕಲೇಬೇಕಾದ ಸ್ಥಿತಿಗೆ ತಲುಪಿದೆ; ಇದು ಎಂತಹ ನಾಚಿಕೆಗೇಡಿನ ಸಂಗತಿ!” ಎಂದು ತರೂರ್ ಬರೆದುಕೊಂಡಿದ್ದಾರೆ.

ಏನಿದು ಭಾರತ್ ಸಮ್ಮಿಟ್?

ಭಾರತ್ ಸಮ್ಮಿಟ್ (Bharat Summit) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜಂಟಿಯಾಗಿ ಆಯೋಜಿಸಿರುವ ಒಂದು ಅಂತಾರಾಷ್ಟ್ರೀಯ ಸಮ್ಮೇಳನವಾಗಿದೆ.

ಜಾಗತಿಕ ರಾಜಕೀಯ, ಪ್ರಜಾಪ್ರಭುತ್ವ, ಆರ್ಥಿಕ ನ್ಯಾಯ ಮತ್ತು ಹೊಸ ವಿಶ್ವ ಕ್ರಮದ (New World Order) ಬಗ್ಗೆ ಚರ್ಚಿಸಲು ಪ್ರಪಂಚದಾದ್ಯಂತದ ಪ್ರಗತಿಪರ (Progressive) ರಾಜಕೀಯ ನಾಯಕರು, ನೀತಿ ನಿರೂಪಕರು ಮತ್ತು ಚಿಂತಕರನ್ನು ಒಂದೇ ವೇದಿಕೆಗೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ. 

ಅಲಿಪ್ತ ಚಳವಳಿಗೆ (Non-Aligned Movement) ಅಡಿಪಾಯ ಹಾಕಿದ ಐತಿಹಾಸಿಕ ‘ಬಂಡುಂಗ್ ಸಮ್ಮೇಳನ’ದ 70ನೇ ವಾರ್ಷಿಕೋತ್ಸವದ ಸ್ಮರಣಾರ್ಥ 2025ರ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಮೊದಲ ಭಾರತ್ ಸಮ್ಮಿಟ್ ನಡೆದಿತ್ತು.

ಭಾರತದ ಸ್ವಾತಂತ್ರ್ಯದ 80ನೇ ವರ್ಷ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 137ನೇ ಜನ್ಮದಿನದ ಅಂಗವಾಗಿ 2026ರ ನವೆಂಬರ್ 13 ಮತ್ತು 14 ರಂದು ಹೈದರಾಬಾದ್‌ನಲ್ಲಿ ಎರಡನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಇದರಲ್ಲಿ 70ಕ್ಕೂ ಹೆಚ್ಚು ದೇಶಗಳ ಸುಮಾರು 1,000 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. 






ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರಾಮ ದೇವತೆ, ದೇವಸ್ಥಾನದ ಜಾಗ, ಸಾರ್ವಜನಿಕ ರಸ್ತೆ ಕಬಳಿಕೆ ಆರೋಪ; ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಕುಟುಂಬದ ಒತ್ತುವರಿ ಜಾಗ ತೆರವುಗೊಳಿಸಿದ ಅಧಿಕಾರಿಗಳು!

ಜಾನಪದ ಗಾಯಕಿ ಹಾಗೂ ಬಿಹಾರದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಅವರ ಕುಟುಂಬವು ದರ್ಭಂಗಾ ಜಿಲ್ಲೆಯಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಸ್ಥಳೀಯ ಆಡಳಿತವು ಗುರುವಾರ ತೆರವುಗೊಳಿಸಿದೆ. 'ದಿ...

ಜಿಬಿಎ ಚುನಾವಣೆ ಗಡುವು ವಿಸ್ತರಣೆಗೆ ಸುಪ್ರೀಂ ಕೋರ್ಟ್ ಅನುಮತಿ ಕೋರಿದ ಕರ್ನಾಟಕ ಚುನಾವಣಾ ಆಯೋಗ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ವಿಧಿಸಿರುವ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ....

ಮುಸ್ಲಿಮರ ಮನೆ ಕೆಡವಿದ ಬುಲ್ಡೋಜರ್‌ಗಳೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದ ಯೋಗಿ ಆದಿತ್ಯನಾಥ್; ಹೆಚ್ಚಿನ ಉತ್ಪಾದನೆ, ರಫ್ತಿಗೆ ಕರೆ 

ಲಖನೌ: ಮುಸ್ಲಿಮರು, ದಲಿತರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ನಡೆದಿರುವ ಮನೆ, ಕಟ್ಟಡಗಳ ಧ್ವಂಸ ಕಾರ್ಯಾಚರಣೆಗಳ ಮೂಲಕ ವಿವಾದದ ಕೇಂದ್ರವಾಗಿರುವ ಬುಲ್ಡೋಜರ್‌ಗಳನ್ನೇ ಉತ್ತರ ಪ್ರದೇಶದ ಬ್ರ್ಯಾಂಡ್ ಎಂದು...

ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗೀಕಾರಕ್ಕೆ ವಿಶೇಷ ಅಧಿವೇಶನ: ‘ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದ ಪ್ರಿಯಾಂಕಾ

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಉದ್ದೇಶದಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ...

ನನ್ನ ಫೋನ್ ಟ್ಯಾಪ್ ಮಾಡುತ್ತಿರುವ ಪ್ರಧಾನಿ, ಅವರ ವಿರುದ್ಧದ ಸಾಕ್ಷ್ಯಗಳೇನು ಎಂಬುದು ಅವರಿಗೆ ಗೊತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲಿವೆ. ಅದನ್ನು ಪ್ರಧಾನಿ ಟ್ಯಾಪ್ ಮಾಡುತ್ತಿದ್ದಾರೆ ಎಂದು...

ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸಿದೆ; ವ್ಯವಸ್ಥಿತ ಹತ್ಯೆ, ವಿನಾಶವನ್ನು ಪುನರುಚ್ಚರಿಸಿದ ನೊಬೆಲ್ ಪುರಸ್ಕೃತೆ ನವಿ ಪಿಳ್ಳೈ 

ಗಾಜಾ/ಡರ್ಬನ್: ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲ್ ನಡೆಸಿರುವುದು ಕೇವಲ ಯುದ್ಧದ ಭಾಗವಾಗಿ ನಡೆದ ದಾಳಿಗಳಲ್ಲ, ಬದಲಿಗೆ ಒಂದು ಜನಸಮುದಾಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಉದ್ದೇಶದಿಂದ ನಡೆಸಿದ ವ್ಯವಸ್ಥಿತ ನರಮೇಧ ಎಂಬ ತಮ್ಮ ಹಿಂದಿನ...

‘ನನ್ನ ಜೊತೆ ನೇರ ಚರ್ಚೆ ನಡೆಸಿದ ನಂತರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮುಖಾಮುಖಿ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮೊಂದಿಗೆ ನಡೆಯುವ ನೇರ ಚರ್ಚೆಯ ಬಳಿಕ ನರೇಂದ್ರ...

ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕಾರಣ ತಿಳಿಸುವಂತೆ ಒತ್ತಾಯಿಸಿದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ

ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಿರುವುದಕ್ಕೆ ಕಾರಣ ತಿಳಿಸುವಂತೆ ಪತ್ರಕರ್ತರ ಸಂಘ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಗುರುವಾರ (ನ.12)...

ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳ ಬಳಕೆ ಪ್ರಜಾಪ್ರಭುತ್ವಕ್ಕೆ ಕರಾಳ ದಿನ: ಬಾಂಬೆ ಹೈಕೋರ್ಟ್

ಮುಂಬೈ: ಜನರ ಮೂಲಭೂತ ಹಕ್ಕಾಗಿರುವ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳನ್ನು ಅಸ್ತ್ರವಾಗಿ ಬಳಸಿದರೆ ಅದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಲಿದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾರ್ವಜನಿಕ ಸಮಸ್ಯೆಗಳ ವಿರುದ್ಧ...

ಕುರ್ಚಿ ಹಾಕುವ ದಿನಗಳಿಂದಲೂ ಮಾಧ್ಯಮಗಳೊಂದಿಗೆ ದೀರ್ಘಕಾಲದ ಒಡನಾಟವಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪತ್ರಕರ್ತರ ಕಾರ್ಯಕ್ರಮಗಳಲ್ಲಿ ಅವರಿಗೆ ಕುರ್ಚಿ ಹಾಕುವ ಜವಾಬ್ದಾರಿ ನಿರ್ವಹಿಸುತ್ತಿದ್ದ ದಿನಗಳಿಂದಲೂ ಮಾಧ್ಯಮಗಳೊಂದಿಗೆ ತಮಗೆ ದೀರ್ಘಕಾಲದ ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ನ.12) ಹೇಳಿದ್ದಾರೆ. ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ...