HomeUncategorizedಕುರ್ಚಿ ಹಾಕುವ ದಿನಗಳಿಂದಲೂ ಮಾಧ್ಯಮಗಳೊಂದಿಗೆ ದೀರ್ಘಕಾಲದ ಒಡನಾಟವಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

ಕುರ್ಚಿ ಹಾಕುವ ದಿನಗಳಿಂದಲೂ ಮಾಧ್ಯಮಗಳೊಂದಿಗೆ ದೀರ್ಘಕಾಲದ ಒಡನಾಟವಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ

- Advertisement -
- Advertisement -

ಪತ್ರಕರ್ತರ ಕಾರ್ಯಕ್ರಮಗಳಲ್ಲಿ ಅವರಿಗೆ ಕುರ್ಚಿ ಹಾಕುವ ಜವಾಬ್ದಾರಿ ನಿರ್ವಹಿಸುತ್ತಿದ್ದ ದಿನಗಳಿಂದಲೂ ಮಾಧ್ಯಮಗಳೊಂದಿಗೆ ತಮಗೆ ದೀರ್ಘಕಾಲದ ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ನ.12) ಹೇಳಿದ್ದಾರೆ.

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದ ಪತ್ರಿಕೋದ್ಯಮವು ಪತ್ರಿಕಾ ಪ್ರಕಟಣೆಗಳ ಕಾಲದಿಂದ ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೂ ಬದಲಾಗಿರುವುದನ್ನು ತಾವು ಕಂಡಿದ್ದೇನೆ ಎಂದರು.

“ಬಹಳ ವರ್ಷಗಳಿಂದ ನಮ್ಮೊಂದಿಗೆ ಒಡನಾಟ ಹೊಂದಿರುವವರಿಗೆ ನಿಮ್ಮೆಲ್ಲರೊಂದಿಗೆ ನನಗೆ ನಿಕಟ ಮತ್ತು ಸೌಹಾರ್ದಯುತ ಸಂಬಂಧವಿದೆ ಎಂಬುದು ತಿಳಿದಿದೆ. ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ ಮಾಧ್ಯಮ ಸಂವಹನದ ಸುದೀರ್ಘ ಪಯಣಕ್ಕೆ ನಾನು ಸಾಕ್ಷಿಯಾಗಿದ್ದೇನೆ” ಎಂದು ಪ್ರಧಾನಿ ಹೇಳಿದರು.

1990ರ ದಶಕದ ಆರಂಭದಲ್ಲಿ ಬಿಜೆಪಿ ದೇಶಾದ್ಯಂತ ಯಾತ್ರೆಗಳನ್ನು ಆಯೋಜಿಸುತ್ತಿದ್ದಾಗ ಪತ್ರಕರ್ತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಜವಾಬ್ದಾರಿ ತಮ್ಮದಾಗಿರುತ್ತಿತ್ತು ಎಂದು ಅವರು ನೆನಪಿಸಿಕೊಂಡರು.

“ನಾನು ದೆಹಲಿಗೆ ಬಂದ ನಂತರವೂ ಈ ಜವಾಬ್ದಾರಿಯನ್ನು ಮುಂದುವರಿಸಿದೆ. ಆಗಲೂ ಇಂದಿನ ದೀಪಾವಳಿ ಮಿಲನ ಕಾರ್ಯಕ್ರಮಗಳಂತೆಯೇ ನಿಮಗೆ ಕುರ್ಚಿಗಳನ್ನು ಹಾಕುವುದು ಮತ್ತು ನಿಮ್ಮನ್ನು ಸ್ವಾಗತಿಸುವುದು ನನ್ನ ಕೆಲಸವಾಗಿತ್ತು” ಎಂದು ಮೋದಿ ಹೇಳಿದರು.

“ಆ ದಿನಗಳಲ್ಲಿ ಕ್ಯಾಮೆರಾಗಳ ಸಂಖ್ಯೆ ಕಡಿಮೆಯಿತ್ತು. ಆದರೆ ಸಂಬಂಧಗಳಲ್ಲಿನ ಆತ್ಮೀಯತೆ ಮಾತ್ರ ಇಂದಿನಂತೆಯೇ ಇತ್ತು. ಆಗಲೂ ಬಹಳ ಸಂತೋಷದಾಯಕ ಮತ್ತು ಉತ್ಸಾಹಭರಿತ ವಾತಾವರಣವಿರುತ್ತಿತ್ತು” ಎಂದರು.

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ ಭಾರತದಲ್ಲಿ ಈವರೆಗೆ ಮುಕ್ತವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಏಕಾಂಗಿ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಪೂರ್ವನಿಗದಿಯಿಲ್ಲದ ಪತ್ರಕರ್ತರೊಂದಿಗಿನ ಸಂವಾದಗಳಿಂದಲೂ ಅವರು ದೂರ ಉಳಿದಿದ್ದಾರೆ.

‘ಭಾರತದ ಯಶೋಗಾಥೆಗಳ ಮೇಲೆ ಕೆಲಸ ಮಾಡಿ’

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ಯಶೋಗಾಥೆಗಳನ್ನು ಮಾಧ್ಯಮಗಳು ಜನರ ಮುಂದಿಡಬೇಕು ಎಂದು ಮನವಿ ಮಾಡಿದರು. ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂದೂ ಹೇಳಿದರು.

“ಭಾರತದ ಮಾಧ್ಯಮಗಳು ದೇಶದ ಯಶೋಗಾಥೆಗಳ ಕುರಿತು ಕೆಲಸ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ” ಎಂದು ಪ್ರಧಾನಿ ಹೇಳಿದರು.

ಸುದ್ದಿ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಬಿಕ್ಕಟ್ಟು ಮತ್ತು ವಿಪತ್ತುಗಳ ಸಂದರ್ಭಗಳಲ್ಲಿಯೂ ವರದಿಗಾರರು ಎಲ್ಲೆಡೆ ತೆರಳುತ್ತಿದ್ದಾರೆ ಎಂದು ಅವರು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಪ್ರಸ್ತಾಪಿಸಿದ ಮೋದಿ, ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

1971ರ ಚುನಾವಣಾ ಪ್ರಚಾರದಲ್ಲಿ ಇಂದಿರಾ ಗಾಂಧಿ ನೀಡಿದ್ದ ‘ಗರೀಬಿ ಹಠಾವೋ’ (ಬಡತನ ನಿರ್ಮೂಲನೆ) ಘೋಷಣೆಯನ್ನು ಉಲ್ಲೇಖಿಸಿ ಪರೋಕ್ಷವಾಗಿ ಟೀಕಿಸಿದ ಅವರು, “ಆಗ ‘ಗರೀಬಿ ಹಠಾವೋ’ ಎಂಬ ಘೋಷಣೆಗಳಿದ್ದವು. ಆದರೆ ಬಡತನವನ್ನು ನಿರ್ಮೂಲನೆ ಮಾಡಿದ್ದು ಈ ಸರ್ಕಾರ” ಎಂದು ಹೇಳಿದರು.

ವಿಶ್ವಬ್ಯಾಂಕ್‌ನ ದಾಖಲೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಳೆದ 12 ವರ್ಷಗಳಲ್ಲಿ 50 ಕೋಟಿ ನಾಗರಿಕರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲಾಗಿದೆ ಎಂದು ಪ್ರತಿಪಾದಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕಾರಣ ತಿಳಿಸುವಂತೆ ಒತ್ತಾಯಿಸಿದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ

ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಿರುವುದಕ್ಕೆ ಕಾರಣ ತಿಳಿಸುವಂತೆ ಪತ್ರಕರ್ತರ ಸಂಘ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಗುರುವಾರ (ನ.12)...

ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳ ಬಳಕೆ ಪ್ರಜಾಪ್ರಭುತ್ವಕ್ಕೆ ಕರಾಳ ದಿನ: ಬಾಂಬೆ ಹೈಕೋರ್ಟ್

ಮುಂಬೈ: ಜನರ ಮೂಲಭೂತ ಹಕ್ಕಾಗಿರುವ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳನ್ನು ಅಸ್ತ್ರವಾಗಿ ಬಳಸಿದರೆ ಅದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಲಿದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾರ್ವಜನಿಕ ಸಮಸ್ಯೆಗಳ ವಿರುದ್ಧ...

ಕಾಂಗ್ರೆಸ್ ಸರ್ಕಾರದ ನೀತಿಗಳ ವಿರುದ್ಧವೂ ಜನರು ಪ್ರತಿಭಟನೆ ನಡೆಸಬಹುದು: ಪ್ರಿಯಾಂಕಾ ಗಾಂಧಿ

ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನ ನೀಡಿರುವ ಮೂಲಭೂತ ಹಕ್ಕಾಗಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ನೀತಿಗಳ ವಿರುದ್ಧವೂ ಜನರು ಹೋರಾಟ ನಡೆಸಲು ಸ್ವತಂತ್ರರು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ...

ಎನ್‌ವಿಡಿಯಾ ಸಿಇಒ ವೈಯಕ್ತಿಕ ಸಂಬಂಧ ವಿವಾದ: ‘ಗೂಢಚಾರಿಕೆ ನಿರೂಪಣೆಗಳನ್ನು ಸೃಷ್ಟಿಸಿ ತಾಂತ್ರಿಕ ದಿಗ್ಬಂಧನ ಹೇರಬೇಡಿ’: ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಅಮೆರಿಕವು ಚೀನಾದ ತಾಂತ್ರಿಕ ಪ್ರಗತಿಗೆ ಕಡಿವಾಣ ಹಾಕಲು ಗೂಢಚಾರಿಕೆಯ ಆರೋಪಗಳನ್ನು ನೆಪವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಚೀನಾ, ಇಂತಹ ನಿರೂಪಣೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸುವಂತೆ ಅಮೆರಿಕವನ್ನು ಒತ್ತಾಯಿಸಿದೆ. ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್...

ಯುಪಿ ವಿಧಾನಸಭೆ ಚುನಾವಣೆಗೆ ಓವೈಸಿ-ಆಝಾದ್ ಮೈತ್ರಿ : ಸಿಎಂ ಅಭ್ಯರ್ಥಿ ಘೋಷಣೆ

ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಚಂದ್ರಶೇಖರ್ ಆಝಾದ್ ಅವರ ಆಝಾದ್ ಸಮಾಜ ಪಕ್ಷ...

ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದ ನಾರ್ವೆ ಪತ್ರಕರ್ತೆಯ ಭಾರತ ಭೇಟಿಗೆ ತಡೆ : ಕೊನೆ ಕ್ಷಣದಲ್ಲಿ ವೀಸಾ ರದ್ದು

ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದಾಗ, ಅವರಿಗೆ ಪ್ರಶ್ನೆ ಕೇಳಿ ಸುದ್ದಿಯಾಗಿದ್ದ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಲಾಗಿದೆ ಎಂದು...

ಸ್ಥಳೀಯರ ಹೋರಾಟಕ್ಕೆ ಸಂದ ಜಯ: ‘ನಮ್ಮ ಮೆಟ್ರೋ’ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರದಿಂದ ಅನುಮೋದನೆ!

ಬೆಂಗಳೂರು: 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದ (Pink Line) ಎಲಿವೇಟೆಡ್‌ ಕಾರಿಡಾರ್‌ನ ಮೂರು ಪ್ರಮುಖ ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ...

ಗಾಝಾದ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ : ಕನಿಷ್ಠ 6 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ದಕ್ಷಿಣ ಗಾಝಾದ ನಾಸರ್ ಆಸ್ಪತ್ರೆಯ ಕಟ್ಟಡವೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಖಾನ್ ಯೂನಿಸ್‌ನಲ್ಲಿರುವ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ದಾಳಿ...

ಮುಸ್ಲಿಂ ದಂಪತಿಗೆ ನಿಂದನೆ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಅಮಾನತು

ತಪ್ಪಾಗಿ ಬೇರೆ ಬಸ್ ಹತ್ತಿ ಇಳಿದ ಇಬ್ಬರು ಪ್ರಯಾಣಿಕರ ವಿರುದ್ಧ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಆಧರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್ ಒಬ್ಬರನ್ನು...

ನೊಂದವರ ದನಿಯಾಗಿ, ಶೋಷಿತರ ಹೋರಾಟದ ಶಕ್ತಿಯಾಗಿ ಬೆಳೆದ ಶಿವರಾಮ ಮೋಘ: ಡಾ. ಪಿ. ನಂದಕುಮಾರ್

ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೈದರಾಬಾದ್ ಕರ್ನಾಟಕ’ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ವಿಶೇಷವಾದ ಸ್ಥಾನವಿದೆ. ಹಲವು ಸಾಂಸ್ಕೃತಿಕ ವಿಶೇಷತೆಯನ್ನು ಒಳಗೊಂಡಿರುವ ಈ ಪ್ರದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಶ್ರೀವಿಜಯ...